udayanews
ಗುರುವಾರ, ಡಿಸೆಂಬರ್ 25, 2025
ಸ್ವಂತ ಕಾರಿನಲ್ಲಿ ಅಕ್ರಮ ‘ಪೊಲೀಸ್’ ನಾಮಫಲಕ: ಫ್ಯಾಮಿಲಿ ಜಾಲಿ ಟ್ರಿಪ್ಚಿಕ್ಕಮಗಳೂರು:ಸ್ವಂತ ಕಾರಿನಲ್ಲಿ ಅಕ್ರಮವಾಗಿ ‘ಪೊಲೀಸ್’ ನಾಮಫಲಕ ಅಳವಡಿಸಿಕೊಂಡು ಕುಟುಂಬ ಸಮೇತ ಪ್ರವಾಸಕ್ಕೆ ತೆರಳುತ್ತಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಮುಲಾಜಿಲ್ಲದೆ ಈ ಕ್ರಮ ಕೈಗೊಂಡ ಪಿಎಸ್ಐ ರೇಣುಕಾ ಅವರ ಕಾರ್ಯಾಚರಣೆ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಚೆಕ್ಪೋಸ್ಟ್ನಲ್ಲಿ
ಶನಿವಾರ, ನವೆಂಬರ್ 29, 2025
ಶನಿವಾರ, ನವೆಂಬರ್ 1, 2025
ವಿಷ ಸೇವಿಸಿ ಕೆರೆಗೆ ಬಿದ್ದು ಯುವಕ ಆತ್ಮಹತ್ಯೆ
ಚಿಕ್ಕಮಗಳೂರು: ವಿಷ ಸೇವಿಸಿದ ಬಳಿಕ ಕೆರೆಗೆ ಬಿದ್ದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ಕನ್ಗೆರೆ ಗ್ರಾಮದ ಜೀವಿತ್ (32) ವಿಷ ಸೇವಿಸಿ ಬಳಿಕ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಯುವಕ.
ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು
ಶವವನ್ನು ಮೇಲೆತ್ತುವ ಕಾರ್ಯದಲ್ಲಿ ಭಾಗವಹಿಸಿದ್ದರು.
ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.
ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ, ಡಿಸೆಂಬರ್ 6, 2022
ditiyotyods9y
ಚಿಕ್ಕಮಗಳೂರು :ಇಂದಿನಿಂದ ಮೂರು ದಿನ ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ.
ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ ಬೋಳರಾಮೇಶ್ವರ ದೇವಾಲಯದ ಆವರಣದಿಂದ ಭಜನೆ ,ಮಹಿಳೆಯರ ಚಂಡೇವಾದನ , ದತ್ತ ವಿಗ್ರಹಗಳೊಂದಿಗೆ ಹೊರಟ ಮಹಿಳೆಯರ ಸಂಕೀರ್ತನ ಯಾತ್ರೆ ಪಾಲಿ ಟೆಕ್ನಿಕ್ ವರೆಗೆ ತಲುಪಿತು.
ಅಲ್ಲಿಂದ ಪೀಠಕ್ಕೆ ತೆರಳಿದ ಮಹಿಳೆಯರು ಗುಹೆಯೊಳಗೆ ತೆರಳಿ ದತ್ತ ಪಾದುಕೆ ದರ್ಶನ ಪಡೆದು ಅನುಸೂಯ ದೇವಿ ಪೂಜೆ ಸಲ್ಲಿಸಿದರು. ಹೋಮ ಇತರೆ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.
ಶೋಭಾಯಾತ್ರೆ: ದತ್ತಜಯಂತಿ ಅಂಗವಾಗಿ ನಾಳೆ ಚಿಕ್ಕಮಗಳೂರು ನಗರದಲ್ಲಿ ಮಧ್ಯಾಹ್ನದ ಬಳಿಕ ವಿವಿಧ ಜಾನಪದ ತಂಡಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಜರುಗಲಿದೆ.
ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಶಾಸಕ ಸಿಟಿ ರವಿ ಆರೋಪ: ದತ್ತ ಜಯಂತಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಬೇಕು ಎನ್ನುವ ಉದ್ದೇಶದಿಂದ ಕೆಲವು ದುಷ್ಕರ್ಮಿಗಳು ಗಿರಿ ರಸ್ತೆಯ ತಿರುವುಗಳಲ್ಲಿ ಮಳೆಗಳನ್ನು ಹೊಡೆದಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಲಾಗಿದೆ ಎಂದಿದ್ದಾರೆ.
ಚಿತ್ರಗಳು: ತಾರಾನಾಥ್ ಕಾಮತ್
ಕಾಫೀ ಕಣಿವೆ ಮೂಡಿಗೆರೆಯ 'ಏಕಲವ್ಯ' ಸಾಕ್ಷತ್ ಗೌಡ
BIG NEWS
ಸಾಧನೆಗಳನ್ನು ಸಾಧಿಸುವವನು ಸಾಧಕ, ಅಂತಹ ಸಾಧಕರ ಸಾಲಿನಲ್ಲಿ ಮೊದಲ ಬಾರಿಗೆ ಕಾಫೀ ಕಣಿವೆ ಮೂಡಿಗೆರೆಯ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಮಲೆನಾಡ ಉದಯೋನ್ಮುಖ ಪ್ರತಿಭೆಯೊಂದು ಇಂದು ದೇಶದಾದ್ಯಂತ ಪ್ರಜ್ವಲಿಸುತ್ತಿದೆ,
ಅವರೇ ಸಾಕ್ಷತ್ ಗೌಡ ಹೆಚ್.ಎಸ್.
ನೆಟ್ ಬಾಲ್ ಕ್ರೀಡೆಯ ಬಗ್ಗೆ ಹೆಚ್ಚು ಪರಿಚಿತವಲ್ಲದ ಊರಿನಿಂದ ಬೆಳೆದ ಈ ಸಾಕ್ಷತ್ ಇಂದು ರಾಷ್ಟ್ರದ ನೆಟ್ ಬಾಲ್ ತಂಡವನ್ನು ಪ್ರತಿನಿಧಿಸುತ್ತಿರುವುದು ನಮ್ಮ ಮಲೆನಾಡಿಗೆ ಹೆಮ್ಮೆಯ ಸಂಗತಿ.
ಕ್ರೀಡಾ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಅನೂಕೂಲಗಳನ್ನು ಹೊಂದಿರದ ಮಲೆನಾಡಿನಲ್ಲಿ ಇಂದು ರಾಷ್ಟ್ರವನ್ನು ಪ್ರತಿನಿಧಿಸುವ ಕ್ರೀಡಾ ಪ್ರತಿಭೆಗೆ ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ಕ್ರೀಡಾ ಗೌರವ ಏಕಲವ್ಯ ಪ್ರಶಸ್ತಿಯನ್ನು ತಮ್ಮ ಮುಡೀಗೇರಿಸಿಕೊಂಡ ಯುವಕ ಈ ಸಾಕ್ಷತ್ ಗೌಡ. ಮೂಲತಃ ಮೂಡಿಗೆರೆಯ ಬಣಕಲ್ ಹೋಬಳಿ ಹೊಸಳ್ಳಿ ಗ್ರಾಮದ ಹೆಚ್.ಟಿ. ಶಂಕರ್ ಮತ್ತು ಸೀಮಾ ದಂಪತಿಯ ಪುತ್ರ .
ಶಂಕರ್ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರಾಗಿ ಚಿಕ್ಕಮಗಳೂರು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದು ಚಿಕ್ಕಮಗಳೂರು ಮಾರುತಿ ನಗರದಲ್ಲಿ ವಾಸ. ನಗರದ ಸೇಂಟ್ ಮೇರೀಸ್ ನಲ್ಲಿ ಪ್ರೌಢ ಶಿಕ್ಷಣ ಮುಗಿಸಿ ನಂತರದ ವಿದ್ಯಾಭ್ಯಾಸ ಉಜಿರೆಯ ಎಸ್.ಡಿ.ಎಂ ನಲ್ಲಿ ಪಡೆದಿದ್ದು ಸದ್ಯಕ್ಕೆ ಕ್ರೀಡೆಯ ಜೊತೆ ಎಂ.ಎಸ್.ಡಬ್ಲ್ಯೂ ವ್ಯಾಸಂಗದಲ್ಲಿ ಮುಂದುವರೆಸಲಿದ್ದಾರೆ.
ಸೋಮವಾರ, ಡಿಸೆಂಬರ್ 5, 2022
ಇಂದಿನಿಂದ ದತ್ತ ಜಯಂತಿಗೆ ಚಾಲನೆ : ಪೊಲೀಸ್ ಕಟ್ಟೆಚ್ಚರ ; ಪಥಸಂಚಲನ
BIG NEWS : ಚಿಕ್ಕಮಗಳೂರು :ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಮೂರು ದಿನಗಳ ಕಾಲ ನಡೆಯುವ ವಾರ್ಷಿಕ ದತ್ತ ಜಯಂತಿಗೆ ಇಂದಿನಿಂದ ಚಾಲನೆ ಸಿಗಲಿದೆ.
ಡಿಸೆಂಬರ್ 6ರಂದು ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಲ್ಲಿ ಅನುಸೂಯ ಅಂಗವಾಗಿ ಜಯಂತಿ ಬೋಳ ರಾಮೇಶ್ವರ ದೇವಾಲಯದ ಆವರಣದಿಂದ ಪಾಲಿಟೆಕ್ನಿಕ್ ವರೆಗೆ ಮೆರವಣಿಗೆ ನಡೆಯಲಿದೆ.
ಬಳಿಕ ಮಹಿಳೆಯರು ಬಾಬಾಬುಡನ್ ಗಿರಿಗೆ ತೆರಳಿ ಗುಹೆಯೊಳಗೆ ದತ್ತ ಪಾದುಕೆಗಳ ದರ್ಶನ ಮಾಡಿ ಅನುಸೂಯ ಜಯಂತಿಯಲ್ಲಿ ಭಾಗವಹಿಸಿ ಹಿಂದಿರುಗಲಿದ್ದಾರೆ.
ಡಿಸೆಂಬರ್ 7 ರಂದು ಚಿಕ್ಕಮಗಳೂರಿನಲ್ಲಿ ಮಧ್ಯಾಹ್ನದ ಬಳಿಕ ಆಕರ್ಷಕ ಶೋಭ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಧಾರ್ಮಿಕ ಸಭೆಯು ನಡೆಯಲಿದೆ.
7 ರಂದು ನಡೆಯಲಿರುವ ಶೋಭ ಯಾತ್ರೆ ಹಾಗೂ ಮರುದಿನದ ಜಯಂತಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಡಿಸೆಂಬರ್ 8 ರಂದು ಬೆಳಿಗ್ಗೆ ದತ್ತ ಮಾಲಾಧಾರಿಗಳು ಪೀಠಕ್ಕೆ ತೆರಳಿ ಸರದಿ ಸಾಲಿನಲ್ಲಿ ಹೋಗಿ ದತ್ತ ಪಾದುಕೆಗಳ ದರ್ಶನ ಪಡೆದು ದತ್ತ ಹೋಮ ಇನ್ನಿತರೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಹಿಂದಿರುಗಲಿದ್ದಾರೆ.
ವ್ಯವಸ್ಥಾಪನಾ ಸಮಿತಿ ರಚಿಸಿರುವುದರ ಜೊತೆಗೆ ಈ ಬಾರಿ ಇಬ್ಬರು ಅರ್ಚಕರನ್ನು ತಾತ್ಕಾಲಿಕವಾಗಿ ನೇಮಿಸಿರುವುದು ವಿಶೇಷ. ಮೂರು ದಿನಗಳ ದತ್ತ ಜಯಂತಿ ಹಿನ್ನೆಲೆಯಲ್ಲಿ ಪ್ರಮುಖ ವೃತ್ತ ಸೇರಿದಂತೆ ಎಲ್ಲಡೆ ಕೇಸರಿ ಬ್ಯಾನರ್ ಬಂಟಿಂಗ್ಸ್ ಗಳು ರಾರಾಜಿಸುತ್ತಿವೆ.
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ 15 ರಾಜ್ಯ ಸಶಸ್ತ್ರ ಮೀಸಲು ಪಡೆ ಪೊಲೀಸರು ಸೇರಿದಂತೆ 4500 ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿದ್ದು ಗಡಿಪ್ರವೇಶದಲ್ಲಿ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ.
51 ಸಿಸಿಟಿವಿಗಳನ್ನು ಅಳವಡಿಸಿರುವುದರ ಜೊತೆಗೆ 20 ವಿಡಿಯೋ ಕ್ಯಾಮರಾ ಹಾಗೂ ಡ್ರೋನ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ.7 ರಂದು ನಡೆಯಬೇಕಿದ್ದ ವಾರದ ಸಂತೆಯನ್ನು ರದ್ದುಪಡಿಸಲಾಗಿದೆ. ಜನರಲ್ಲಿ ಧೈರ್ಯ ತುಂಬುವ ಸಲವಾಗಿ ಪೊಲೀಸ್ ಪಥ ಸಂಚಲನವನ್ನು ನಡೆಸಲಾಗಿದೆ
"ತಾತ್ಕಾಲಿಕವಾಗಿ ನೇಮಕಗೊಂಡ ಅರ್ಚಕರು"
ಚುನಾವಣೆ ವರ್ಷವಾಗಿರುವುದರಿಂದ ಸಹಜವಾಗಿಯೇ ದತ್ತ ಜಯಂತಿ ರಂಗೇರಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಶನಿವಾರ, ಡಿಸೆಂಬರ್ 3, 2022
ಮೂಡಿಗೆರೆ ತಾಲೂಕಿನಲ್ಲಿ ಮತ್ತೊಂದು ಪುಂಡಾನೇ ಸೆರೆ : ನೆಮ್ಮದಿಯ ನಿಟ್ಟುಸಿರು ಬಿಟ್ಟ ಕೃಷಿಕರು
BIG NEWS ಚಿಕ್ಕಮಗಳೂರು: ಜಿಲ್ಲೆಯಮೂಡಿಗೆರೆ ತಾಲೂಕಿನ ತಳವಾರ ಗ್ರಾಮದಲ್ಲಿ ಮತ್ತೊಂದು ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ.
ಕಳೆದ ಮೂರು ತಿಂಗಳಲ್ಲಿ ಮೂವರನ್ನು ಬಲಿ ತೆಗೆದುಕೊಂಡಿದ್ದ ಕಾಡಾನೆಗಳಲ್ಲಿ ಒಂದನ್ನು ಮೊದಲ ದಿನವೇ ಸೆರೆ ಹಿಡಿಯಲಾಗಿತ್ತು
ಉಪಟಳ ನೀಡುತ್ತಿದ್ದ ಮೂರು ಕಾಡಾನೆಗಳನ್ನು ಸೆರೆಹಿಡಿಯಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತುಐದು ದಿನಗಳ ಹಿಂದೆ ಮೊದಲ ಯಶ ಕಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕುಂಡ್ರ ಗ್ರಾಮದಲ್ಲಿ ಪುಂಡಾನೆ ಸೆರೆ ಹಿಡಿದಿದ್ದರು.
ಇದೀಗ 2ನೇ ಕಾರ್ಯಾಚರಣೆಯಲ್ಲಿ ಮತ್ತೊಂದು ಪುಂಡಾನೆ ಸೆರೆ .5 ಸಾಕಾನೆಗಳಿಂದ ಸತತ ಕಾರ್ಯಾಚರಣೆ ನಡೆದಿದೆ. ಆನೆಗಳ ಜಾಡು ಪತ್ತೆ ಹಚ್ಚಲು ಡ್ರೋನ್ ಕ್ಯಾಮೆರಾ ಕೂಡ ಬಳಸಲಾಗಿತ್ತು
ಮತ್ತೊಂದು ಪುಂಡಾನೆ ಸೆರೆಗೆ ಕಾರ್ಯಾಚರಣೆ ಮುಂದುವರೆಯಲಿದ್ದುಸದ್ಯ ಎರಡು ಪುಂಡಾನೆ ಸೆರೆಯಿಂದ ಕೃಷಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಶಾಸಕ ಸಿಟಿ ರವಿ ಮನೆಗೆ ಕಾಂಗ್ರೆಸ್ ಕಾರ್ಯಕರ್ತರ ಲಗ್ಗೆ ಯತ್ನ : ಮಾರ್ಗ ಮಧ್ಯದಲ್ಲಿ ತಡೆದ ಪೊಲೀಸರು-ಇನ್ನೊಂದೆಡೆ ಬಿಜೆಪಿ ಪ್ರತಿ ದಾಳಿ
ಚಿಕ್ಕಮಗಳೂರು : ಮಾಜಿ ಮುಖ್ಯಮಂತ್ರಿಗಳು ಆದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆ ಖಂಡಿಸಿ ಶಾಸಕ ಸಿ.ಟಿ .ಮನೆಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ರೂಪಿಸಿದ್ದ ತಂತ್ರವನ್ನು ಪೊಲೀಸರು ವಿಫಲಗೊಳಿಸಿದ್ದಾರೆ.
ತಾಲೂಕು ಕಚೇರಿಯಿಂದ ಮೆರವಣಿಗೆ ಹೋಗಿ ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಸಿ.ಟಿ.ರವಿ ಮನೆಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ ಹಾಕುವ ಕಾರ್ಯಕ್ರಮ ರೂಪಿಸಲಾಗಿತ್ತು.
ಪ್ರತಿಭಟನಾಕಾರರನ್ನ ರಸ್ತೆ ಮಧ್ಯೆಯೇ ಪೊಲೀಸರು ತಡೆದರಲ್ಲದೆ ಇನ್ನೊಂದೆಡೆ ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿ ಮನೆ ರಸ್ತೆ ಮಧ್ಯೆಯೇ ಅಡ್ಡ ಹಾಕಿ ಕಾಂಗ್ರೆಸ್ ಕಾರ್ಯಕರ್ತರಿಗೆ ಬರುವಂತೆ ಸವಾಲು ಹಾಕಿದರು
ಹಂತದಲ್ಲಿ ಮುಲ್ಲಾ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರ ಬಂಧನಕ್ಕೆ ಪೊಲೀಸರು ಮುಂದಾಗುತ್ತಿದ್ದಂತೆ ಮಾತಿನ ವಾಕ್ ಸಮರ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಗೊಂಡಿತ್ತು.
ಪೊಲೀಸ್-ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತಲ್ಲದೆ. ಶಾಸಕ ಸಿಟಿ ರವಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರೆ ರವಿ ಪರ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು.
ಒಂದೆಡೆ ಕಾಂಗ್ರೆಸ್ ಮುಖಂಡರುಭಾಷಣ ಮಾಡಿದರೆ ಮತ್ತೊಂದೆಡೆ ಬಿಜೆಪಿ ಪ್ರತಿಭಟನೆ ಕೂಗು ಮೊಳಗಿ ಗೊಂದಲದ ವಾತಾವರಣ ಉಂಟಾಗಿತ್ತು
ರಸ್ತೆಯ ಎರಡು ಬದಿ ಇಬ್ಬರನ್ನೂ ಬಿಟ್ಟು ಮಧ್ಯೆ ಪೊಲೀಸರು ನಿಂತು ತಮಾಷೆ ವೀಕ್ಷಿಸಿದರು. ಶಾಸಕರ ಮನೆಗೆ ಪೊಲೀಸ್ ಹೆಚ್ಚಿನ ಕಾವಲು ಹಾಕಿದ್ದು ಎಚ್ಚರಿಕೆ ವಹಿಸಲಾಗಿದೆ.
ಶುಕ್ರವಾರ, ಡಿಸೆಂಬರ್ 2, 2022
ವ್ಯವಸ್ಥಾಪನ ಸಮಿತಿ ರದ್ದುಪಡಿಸಲು ಒತ್ತಾಯಿಸಿ SDPI ಆಶ್ರಯದಲ್ಲಿ ಪ್ರತಿಭಟನೆ
ಚಿಕ್ಕಮಗಳೂರು :ತಾಲೂಕಿನ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕೆ ನೇಮಿಸಿರುವ ವ್ಯವಸ್ಥಾಪನಾ ಸಮಿತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಎಸ್‌ಡಿಪಿಐ ಆಶ್ರಯದಲ್ಲಿ ಪ್ರತಿಭಟನೆ ನಡೆದಿದೆ.
ಕೋಮು ಸಾಮರಸ್ಯದ ಕೇಂದ್ರವಾಗಿರುವ ಪೀಠಕ್ಕೆ ರಚಿಸಿರುವ 8 ಎಂಟು ಸದಸ್ಯರಿರುವ ಸಮಿತಿಯಲ್ಲಿ 7 ಸದಸ್ಯರು ಒಂದೇ ಸಮುದಾಯಕ್ಕೆ ಸೇರಿದ್ದು ಇದು ನ್ಯಾಯಾಲಯದ ಆದೇಶದ ಉಲ್ಲಂಘನೆ ಆಗಿದೆ ಎಂದು ಆರೋಪಿಸಿದ್ದಾರೆ.
ನಾಮಕಾವಸ್ತೆಗೆ ಮುಸ್ಲಿಂ ಸಮುದಾಯದ ಒಬ್ಬ ಸದಸ್ಯರನ್ನು ಮಾತ್ರ ನೇಮಕ ಮಾಡಿದ್ದು , ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರಿಗೂ ಅವಕಾಶ ಕಲ್ಪಿಸಿಲ್ಲ ಎಂದು ಟೀಕಿಸಿದ್ದಾರೆ.
ಹಿಂದೂ ಮತ್ತು ಮುಸ್ಲಿಂ ಎರಡು ಸಮುದಾಯದ ಸಮಾನ ಸದಸ್ಯರು ಇಲ್ಲದ ಈ ಸಮಿತಿಯನ್ನು ತಕ್ಷಣ ವಿಸರ್ಜಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರ ತಪ್ಪು ಸಂದೇಶಗಳನ್ನು ನೀಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಶಾಸಕರ ತಾಳಕ್ಕೆ ತಕ್ಕ ಕುಣಿದ ಅಧಿಕಾರಿ : ಚುನಾವಣೆ ಮುಂದೂಡಿಕೆ : ಮಾಜಿ ಶಾಸಕ ಶ್ರೀನಿವಾಸ ಅಕ್ಷೇಪ
ಚಿಕ್ಕಮಗಳೂರು: ಶಾಸಕರ ಅಣತಿಯಂತೆ ಚುನಾವಣಾ ಅಧಿಕಾರಿ ಚುನಾವಣೆ ನಡೆಸದ ಘಟನೆ ನಡೆದಿದ್ದು ಈ ಬಗ್ಗೆ ಕಾಂಗ್ರೆಸ್ ಪಕ್ಷ ಆಕ್ರೋಶ ಹೊರ ಹಾಕಿದೆ
ಚುನಾವಣೆ ನೋಟಿಫಿಕೇಶನ್ ಹೊರಡಿಸಿದ ಅಧಿಕಾರಿ ಆರೋಗ್ಯ ಸರಿಯಿಲ್ಲ ಎಂದು ಪಟ್ಟಣದಲ್ಲಿ ಓಡಾಡುವ ಮೂಲಕ ಶಾಸಕರ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ
ತರೀಕೆರೆ ತಾಲೂಕಿನ ಬೆಟ್ಟದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೆಟ್ಟದಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಚುನಾವಣೆ ನಡೆಯಬೇಕಿತ್ತು.
ಲೋಕೋಪಯೋಗಿ ಇಲಾಖೆ ಅಧಿಕಾರಿ ವಾಗೀಶ್ ಚುನಾವಣೆ ಅಧಿಕಾರಿಯಾಗಿ ನೋಟಿಫಿಕೇಶನ್ ಹೊರಡಿಸಿದ್ದರು.
ನೋಟಿಫಿಕೇಶನ್ ಹೊರಡಿಸಿ ಹುಷಾರಿಲ್ಲ ಎಂದು ತರೀಕೆರೆ ಪಟ್ಟಣದಲ್ಲಿ ಓಡಾಟ ನಡೆಸಿದ್ದು ಉಪವಿಭಾಗಾಧಿಕಾರಿಗಳೇ ಕಾರಲ್ಲಿ ತಂದು ಚುನಾವಣೆ ನಡೆಸುವಂತೆ ಸೂಚಿಸಿ ಬಿಟ್ಟು ಹೋಗಿದ್ದಾರೆ.
11 ಗಂಟೆಯಿಂದ 3 ಗಂಟೆವರೆಗೆ ಪಂಚಾಯಿತಿಯಲ್ಲೇ ಇದ್ದರೂ ಚುನಾವಣೆ ನಡೆಸಲಿಲ್ಲ ಎಂದು ಆರೋಪ ವ್ಯಕ್ತವಾಗಿದೆ.
ಶಾಸಕರು, ವೈದ್ಯರು ಹಾಗೂ ಆಂಬುಲೆನ್ಸ್ ಗೆ ಫೋನ್ ಮಾಡಿಕೊಂಡು 3 ಗಂಟೆಗೆ ಪೊಲೀಸ್ ಪ್ರೊಟಕ್ಷನ್ ನಲ್ಲಿ ಚುನಾವಣಾ ಅಧಿಕಾರಿ ತೆರಳಿದ್ದಾರೆ.
ಈ ಹಂತದಲ್ಲಿ ತೀವ್ರ ಮಾತಿನ ಚಕಮಕಿ ಪ್ರತಿಭಟನೆಯು ನಡೆದಿದೆ .ಚುನಾವಣೆ ನಡೆಸದ ತೀವ್ರ ಅಸಮಧಾನ ಹೊರ ಹಾಕಿರುವ ಕಾಂಗ್ರೆಸ್ ಮಾಜಿ ಶಾಸಕ ಶ್ರೀನಿವಾಸ್ ಮತ್ತು ಕಾರ್ಯಕರ್ತರು ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಡಿ.ಸಿ.ಗೆ ಮನವಿ ಸಲ್ಲಿಸಿದ್ದಾರೆ
ಗುರುವಾರ, ಡಿಸೆಂಬರ್ 1, 2022
ನಂದಿ ಬಟ್ಟಲು ಸಮೀಪ ವಿದ್ಯುತ್ ಸ್ಪರ್ಶಿಸಿ ಗಂಡಾನೆ ಬಲಿ
ಚಿಕ್ಕಮಗಳೂರು :ಮುಸುಕಿನ ಜೋಳ ತಿನ್ನಲು ಬಂದಿದ್ದ ಕಾಡಾನೆ ಎಂದು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಘಟನೆ ನಡೆದಿದೆ.
ತಣಿಗೆಬೈಲು ವನ್ಯಜೀವಿ ವಲಯದ ನಂದಿ ಬೆಟ್ಟದ ಸಮೀಪ ಈ ದುರ್ಘಟನೆ ಸಂಭವಿಸಿದೆ.
ಈ ಭಾಗದಲ್ಲಿ ಕಾಡುಪ್ರಾಣಿಗಳನ್ನು ನಿಯಂತ್ರಿಸಲು ಅಕ್ರಮವಾಗಿ ವಿದ್ಯುತ್ ಬೇಲಿಗಳನ್ನು ರೈತರು ನಿರ್ಮಿಸಿಕೊಳ್ಳುತ್ತಿದ್ದು ಇದರಿಂದ ಪದೇ ಪದೇ ವನ್ಯಜೀವಿಗಳು ಮೃತ ಪಡುತ್ತಿವೆ ಎಂದು ಪರಿಸರ ಪ್ರೇಮಿಗಳು ಕಡವಳ ವ್ಯಕ್ತಪಡಿಸಿದ್ದಾರೆ.
ಕೊಲೆ ಆರೋಪಿಗಳ ಸೆರೆ ಅಜ್ಜಂಪುರ ತಾಲೂಕು ಶಿವನಿ ಗ್ರಾಮದ ನಿವೃತ್ತ ಶಿಕ್ಷಕ ಶೇಖರಪ್ಪ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ಉಮೇಶ್ ಮತ್ತು ಆತನ ಮಗ ಮಲ್ಲಿಕಾರ್ಜುನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಗೆ ಆಶ್ರಯ ನೀಡಿದ ಕಡೂರಿನ ಹೇಮಂತ್ ಕುಮಾರ್ ಆಲಘಟ್ಟದ ಶಾಂತಕುಮಾರ್ ಹಾಗೂ ದೊಡ್ಡಬಳ್ಳಾಪುರ ದರ್ಶಣ್ಮುಖಪ್ಪನವರ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ, ನವೆಂಬರ್ 30, 2022
ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಮತ್ತೆ ಲೋಕಾಯುಕ್ತಕ್ಕೆ ದೂರು
ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಶಾಸಕರಾಜೇಗೌಡ ವಿರುದ್ಧ ಮತ್ತೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ
ಕೊಪ್ಪ ಮೂಲದ ದಿನೇಶ್ ಹೊಸೂರು ದೂರು ಸಲ್ಲಿಸುವ ಮೂಲಕ ಕಾಂಗ್ರೆಸ್ ಶಾಸಕರಿಗೆ ಕಂಟಕವಾಗುತ್ತಾ ಶಬಾನಾ ರಂಜಾನ್ ಸಂಸ್ಥೆ ಎನ್ನುವ ಅನುಮಾನ ಕಾಡುತ್ತಿದೆ
ಟಿ.ಡಿ.ರಾಜೇಗೌಡ 123 ಕೋಟಿಯಷ್ಟು ಅಕ್ರಮ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಇದೇ ತಿಂಗಳ 18ರಂದು ಕೊಪ್ಪ ಮೂಲದ ವಿಜಯಾನಂದ ದೂರು ನೀಡಿದ್ದು
ದೂರು ದಾಖಲಾದ 4-5 ದಿನದಲ್ಲಿ ಕೇಸ್ ಹಿಂಪಡೆದಿದ್ದರು.
ವಾರ್ಷಿಕ 35 ಲಕ್ಷ ಆದಾಯ ತೋರಿಸಿದ್ದ ರಾಜೇಗೌಡ, 123 ಕೋಟಿ ಆಸ್ತಿ ಖರೀದಿ ಹೇಗೆ ಎಂದು ದೂರಿನಲ್ಲಿ ಪ್ರಶ್ನಿಸಿ ತನಿಖೆಗೆ ಒತ್ತಾಯಿಸಿದ್ದಾರೆ
ಮಂಗಳವಾರ, ನವೆಂಬರ್ 29, 2022
ಕಡೂರು ತಹಸಿಲ್ದಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ -ಗುರು ಶಾಂತಪ್ಪ
ಚಿಕ್ಕಮಗಳೂರು: ಮೃತ ವ್ಯಕ್ತಿಯ ಹೆಸರಿಗೆ ಖಾತೆ ಮಾಡಿ ಕೊಟ್ಟಿರುವುದು ಸೇರಿದಂತೆ ಅನೇಕ ಆರೋಪಗಳನ್ನು ಎದುರಿಸುತ್ತಿರುವ ಕಡೂರು ತಹಸೀಲ್ದಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರೈತ ಸಂಘ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಗುರು ಶಾಂತಪ್ಪ ಕಡೂರು ತಹಸಿಲ್ದಾರ್ ಉಮೇಶ್ ಬೇರೆಯವರ ಲಾಗಿನ್ ಬಳಸಿ ಭಾರಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘದ ನಿರಂತರ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದರು ಉಪವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಲ್ಲಿ ಮೀನಮೇಶ ಎಣಿಸುತ್ತಿದ್ದಾರೆ ಎಂದು ಟೀಕಿಸಿದರು.
ಈ ಅಧಿಕಾರಿ ವಿರುದ್ಧ ಶಿಸ್ತು ಕ್ರಮಕ್ಕೆ ತುರ್ತಾಗಿ ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರು ಸೂಚಿಸಿದರು ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳದೆ ಇರುವುದು ಅನುಮಾನಕ್ಕೆ ಎಡೆ ಮಾಡಿದೆ ಎಂದು ಆರೋಪಿಸಿದರು.
8 ದಿನದ ಒಳಗೆ ಶಿಸ್ತುಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಅನಿರ್ದಿಷ್ಟ ಅವಧಿ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿದರು
ಕೊಪ್ಪ ಸರ್ವೆ ಇಲಾಖೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರ -ಸಹನೆ ಕಳೆದುಕೊಂಡ ಜನರಿಂದ ಪ್ರತಿಭಟನೆ
ಕೊಪ್ಪ :ಇಲ್ಲಿನ ಭೂ ದಾಖಲೆಗಳ ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ ಎಂದು ಆರೋಪಿಸಿ ನೊಂದವರು ಪ್ರತಿಭಟನೆ ನಡೆಸಿದ್ದಾರೆ.
ಸಹಾಯಕ ನಿರ್ದೇಶಕರ ಕಚೇರಿ ಬಾಗಿಲ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದೆ ಅಲ್ಲದೆ ಒಂದು ಹಂತದಲ್ಲಿ ಬೀಗ ಹಾಕಲು ಹೊರಟಿದ್ದರು.
ದಾಖಲೆಗಳನ್ನು ಪಡೆಯಲು ತಿಂಗಳಗಟ್ಟಲೆ ಅಲೆಯಬೇಕಾಗಿದೆ. ಹಣವಿಲ್ಲದೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಅಧಿಕಾರಿ ಸಿಬ್ಬಂದಿ ವಿರುದ್ಧ ಕಿಡಿಕಾರಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸಮಾಧಾನ ಪಡಿಸಲು ಮಾಡಿದ ಯತ್ನ ಫಲಿಸದೆ ಅವರ ಎದುರಿನಲ್ಲಿ ಪ್ರತಿಭಟನೆ ನಿರತರು ಇಲಾಖೆ ವಿರುದ್ಧ ಕೂಗಾಡಿದರು.
ಭ್ರಷ್ಟಾಚಾರ -ಪರ್ಸೆಂಟೇಜ್ ವ್ಯವಹಾರ ಬಿಜೆಪಿ ಸರ್ಕಾರದ ಸಾಧನೆ:ಡಿ.ಕೆ.ಶಿವಕುಮಾರ್
ಮೂಡಿಗೆರೆ:ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಪರ್ಸಂಟೇಜ್ ವ್ಯವಹಾರ ಹೊರತುಪಡಿಸಿ ಜನಪರವಾಗಿ ಕೆಲಸ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಬಿಜೆಪಿ ೩ ಬಾರಿ ನಡೆಸಿದ ಆಡಳಿತದಲ್ಲಿ ಜನರ ಬದುಕು ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ ಎಂದರು.
ಇಲ್ಲಿಯವರೆಗೆ ಅಧಿಕಾರವಿದ್ದಾಗಲೇ ಜನರ ಬದುಕು ಹಸನು ಮಾಡಲು ಸಾಧ್ಯವಾಗಿಲ್ಲ. ಇನ್ನು ಅಧಿಕಾರ ಕಳೆದುಕೊಳ್ಳುವ ಸಮಯದಲ್ಲಿ ಸಾಧ್ಯವೇ ಎಂದು ಪ್ರಶ್ನಿಸಿದರು.
ಬಿಜೆಪಿ ಕೇವಲ ಭಾವನೆ, ಕೋಮು ಗಲಭೆಯಲ್ಲೇ ಕಾಲ ಕಳೆದಿದ್ದಾರೆ. ಜನರ ಬದುಕು ಹಸನಾಗಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ನ ಯಾವುದೇ ಅಭ್ಯರ್ಥಿ ನಿಲ್ಲಿಸಿದರೂ ಅವರನ್ನು ಗೆಲ್ಲಿಸಿಕೊಡುವ ಕರ್ತವ್ಯ ನಿಮ್ಮದು ಎಂದು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ ಫ್ಲೆಕ್ಸ್ ಹಾಕುವ ಬದಲು ಜನ ಸಂಪರ್ಕ ಮಾಡುವುದು ಒಳಿತು ಎಂದು ಕಿವಿ ಮಾತು ಹೇಳಿದರು
ಮಾಜಿ ಸಚಿವರಾದ ಮೋಟಮ್ಮ, ಬಿ.ಶಿವರಾಂ, ಕಾರ್ಯಧ್ಯಕ್ಷ ದೃವ ನಾರಾಯಣ್, ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶು ಮಂತ್ ಇತರರು ಉಪಸ್ಥಿತರಿದ್ದರು.
ನಾಗರತ್ನ ಮತ್ತು ನಯನ ಮೋಟಮ್ಮ ಪರ ಪ್ರತ್ಯೇಕವಾಗಿ ಭಾರಿ ಗಾತ್ರದ ಸೇಬಿನ ಹಾರ ಹಾಕುವ ಮೂಲಕ ಗುಂಪುಗಾರಿಕೆ ಬಿಂಬಿತಗೊಂಡಿತು.
ಸೋಮವಾರ, ನವೆಂಬರ್ 28, 2022
ಖಾಸಗಿ ಬಸ್ -ಟಿಪ್ಪರ್ ನಡುವೆ ಮುಖಾಮುಖಿ. ಓರ್ವ ಮಹಿಳೆ ಮೃತಪಟ್ಟು15 ಮಂದಿಗೆ ಗಾಯ
ಚಿಕ್ಕಮಗಳೂರು : ಖಾಸಗಿ ಬಸ್ -ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ
ಓರ್ವ ಮಹಿಳೆ ಮೃತಪಟ್ಟು15 ಮಂದಿಗೆ ಗಾಯವಾಗಿದೆ
ಎನ್.ಆರ್.ಪುರ ತಾಲೂಕಿನ ಮುತ್ತಿನ ಕೊಪ್ಪದಲ್ಲಿ ಘಟನೆ ನಡೆದಿದ್ದು ,ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ರತ್ನಮ್ಮ ಸಾವಪ್ಪಿದ್ದಾರೆ
ಗಾಯಾಳುಗಳನ್ನುಎನ್.ಆರ್ ಪುರ ಹಾಗೂ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
250 ಕೋಟಿ ಬೆಲೆಗೆ ಜೀವರಾಜ್ ರವರೇ ಜಮೀನು ಖರೀದಿಸಲಿ :ಶಾಸಕ ರಾಜೇಗೌಡ ಸವಾಲು -ತನಿಖೆಗೆ ಸಿದ್ದ ಇರುವುದಾಗಿ ಘೋಷಣೆ
ಚಿಕ್ಕಮಗಳೂರು: ತಾವು ಬಾಳೆಹೊನ್ನೂರು ಬಳಿ ಖರೀದಿಸಿರುವ ಜಮೀನನ್ನು 250 ಕೋಟಿಗೆ ಜೀವರಾಜ್ ರವರು ಖರೀದಿಸುವುದಾದರೆ ಸಂತೋಷದಿಂದ ಕೊಡುವುದಾಗಿ ಶೃಂಗೇರಿ ಶಾಸಕ ಟಿ.ಡಿ .ರಾಜೇಗೌಡ ಸವಾಲು ಹಾಕಿದ್ದಾರೆ.
ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಸರಿಸುಮಾರು 20 ಕೋಟಿ ರೂ.ಗಳಿಗೆ ಜಮೀನನ್ನು ಖರೀದಿಸಿದ್ದು ಯಾವುದೇ ರೀತಿಯ ಅವ್ಯವಹಾರ ಕಾನೂನು ಬಾಹಿರ ಕೃತ್ಯ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಮೀನು ಖರೀದಿ ನಮ್ಮ ಮತ್ತು ಸಿದ್ಧಾರ್ಥ ಕುಟುಂಬದ ನಡುವಿನ ವ್ಯವಹಾರ. ಅದು ಕಾಯ್ದೆ ಮತ್ತು ಕಾನೂನು ಚೌಕಟ್ಟಿನಲ್ಲಿ ಅಡಿಯಲ್ಲಿಯೇ ನಡೆದಿದೆ.ಈಗಾಗಲೇ ಸಿದ್ದಾರ್ಥ ಅವರ ಪತ್ನಿ ಮಾಳವಿಕಾರವರು ಕೂಡ ಸ್ಪಷ್ಟನೆ ನೀಡಿದ್ದಾರೆ ಎಂದರು.
ಲೋಕಾಯುಕ್ತಕ್ಕೆ ತಮ್ಮ ವಿರುದ್ಧ ದೂರು ನೀಡಿದ ಬಗ್ಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಹೀಗಾಗಿ ಸ್ಪಷ್ಟನೆಯನ್ನು ಕೊಟ್ಟಿರಲಿಲ್ಲ. ಆದರೆ ಕೊಪ್ಪಕ್ಕೆ ಬಂದ ಮುಖ್ಯಮಂತ್ರಿಗಳಾಗಿ ಎಲ್ಲರೂ ಈ ವಿಷಯವನ್ನು ಚರ್ಚಿಸುತ್ತಿರುವುದರಿಂದ ಸ್ಪಷ್ಟನೆ ನೀಡುತ್ತಿರುವುದಾಗಿ ಹೇಳಿದರು.
ಲೋಕಾಯುಕ್ತ ಸೇರಿದಂತೆ ಯಾವುದೇ ರೀತಿಯ ತನಿಖಾ ಸಂಸ್ಥೆಯಿಂದ ತನಿಖೆ ನಡೆದರು ತಾವು ಎದುರಿಸಲು ಸಿದ್ಧ . ಈ ಹಿಂದೆಯೂ ತಮ್ಮ ಹಾಗೂ ತಮ್ಮ ಬೆಂಬಲಿಗರ ವಿರುದ್ಧ ಹಲವು ರೀತಿಯ ತನಿಖೆಗಳು ಆಗಿವೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಸೋತು ಹತಾಶರಾಗಿರುವ ಡಿ .ಎನ್ ಜೀವರಾಜ್ ಗೆ ಒಂದೊಮ್ಮೆ ರಾಜಕೀಯ ಕಾರ್ಯದರ್ಶಿ ಸ್ಥಾನ ಸಿಗದೇ ಹೋಗಿದ್ದರೆ ಮಾನಸಿಕವಾಗಿ ಅಸ್ವಸ್ಥರಾಗುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಜೀವರಾಜ್ ಮೇಲೆ ಇರುವಂತೆ ತಮ್ಮ ವಿರುದ್ಧ ಯಾವುದೇ ಆಪಾದನೆಗಳು ಇಲ್ಲ .ತನಿಖೆಗಳು ನಡೆಯುತ್ತಿಲ್ಲ ಪತ್ರಿಕೆಗಳಲ್ಲಿ ಸುದ್ದಿ ಬಾರದಂತೆ ತಡೆ ಆಜ್ಞೆಯನ್ನು ತಂದಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ತಮ್ಮ ವಿರುದ್ಧ ಭ್ರಷ್ಟಾಚಾರ ಸುಳ್ಳುಆಪಾದನೆ ಹೊರಿಸುತ್ತಿರುವ ಜೀವರಾಜ್ ಬಹುಶಃ ಅವರ ಅಧಿಕಾರ ಅವಧಿಯಲ್ಲಿ ಅದನ್ನೇ ಮಾಡಿದ್ದಾರೆ ಎಂದು ಟೀಕಿಸಿದರು.
ಕಾಡಾನೆ ಸೆರೆ ಕಾರ್ಯಾಚರಣೆ ; ಆರಂಭಿಕ ಗೆಲುವು- ಒಂದು ಆನೆ ಸೆರೆ
ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಇತ್ತೀಚಿಗೆ ಮಹಿಳೆಯೊಬ್ಬರನ್ನು ಬಲಿ ತೆಗೆದುಕೊಂಡಿದ್ದ ಆನೆ ಕೊನೆಗೂ ಸೆರೆಯಾಗಿದೆ
ಕಾಡಾನೆ ಸೆರೆ ಹಿಡಿಯುವಂತೆ ಸ್ಥಳೀಯರು ಮತ್ತು ಜನಪ್ರತಿನಿಧಿಗಳ ನಿರಂತರ ಒತ್ತಡದ ಹಿನ್ನೆಲೆಯಲ್ಲಿ ಸರ್ಕಾರ ಕಾಡಾನೆ ಸೆರೆಗೆ ಆದೇಶ ಹೊರಡಿಸಿತ್ತು.
6 ಆನೆಗಳೊಂದಿಗೆ ಕಾರ್ಯಾಚರಣೆಗೆ ಇಳಿದ ಅರಣ್ಯ ಸಿಬ್ಬಂದಿ ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದು ಬೆಳಗೋಡಿನ ಕುಂಡರ ಕಾಡು ಎಂಬಲ್ಲಿ ಆನೆಯೊಂದನ್ನು ಸೆರೆ ಹಿಡಿಯಲಾಗಿದೆ.
ಆನೆ ಸೆರೆಹಿಡಿದಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸ್ಥಳೀಯರು ಈ ಭಾಗದಲ್ಲಿ ಇನ್ನಷ್ಟು ಆನೆಗಳು ಇದ್ದು ಅವುಗಳನ್ನು ಸೆರೆ ಹಿಡಿಯಬೇಕೆಂಬ ಒತ್ತಾಯ ವ್ಯಕ್ತಪಡಿಸಿದ್ದಾರೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆನೆ ಸೆರೆ ಕಾರ್ಯಾಚರಣೆ ಮುಂದುವರೆದಿದೆ. ಹಿಡಿದಿರುವ ಆನೆಯನ್ನು ಎಲ್ಲಿಗೆ ಸಾಗಿಸುವುದು ಎನ್ನುವ ಸಮಾಲೋಚನೆಯು ನಡೆದಿದೆ
ಡಿ.6ರಿಂದ 8ರ ವರೆಗೆ ದತ್ತ ಜಯಂತಿ ; ದತ್ತ ಭಕ್ತರಿಂದ ದತ್ತ ಮಾಲಾ ಧಾರಣೆ-ಪ್ರವಾಸಿಗರಿಗೆ ನಿರ್ಬಂಧ
ಚಿಕ್ಕಮಗಳೂರು : ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ನಡೆಯಲಿರುವ ದತ್ತಜಯಂತಿ ಹಿನ್ನೆಲೆಯಲ್ಲಿ ಇಂದು ಮಾಲಾ ಧಾರಣೆ ಮಾಡಲಾಯಿತು
ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಶಾಸಕ ಸಿ.ಟಿ.ರವಿ ಸೇರಿ ಹಲವರಿಂದ ಮಾಲಾಧಾರಣೆ ನಡೆಯಿತು.
ನಗರದಲ್ಲಿ 100 ಕ್ಕೂ ಹೆಚ್ಚು ಭಕ್ತರು ಮಾಲಾ ಧಾರಣೆ ಮಾಡಿದ್ದು ಮುಂದಿನ ತಿಂಗಳ 6ರಂದು ಅನುಸೂಯ ಜಯಂತಿ 7 ರಂದು ಜಿಲ್ಲಾ ಕೇಂದ್ರದಲ್ಲಿ ಶೋಭ ಯಾತ್ರೆ 8 ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಪಾದುಕೆ ದರ್ಶನ' ಮಾಲಾ ವಿಸರ್ಜನೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಪ್ರವಾಸಿಗರಿಗೆ ನಿರ್ಬಂಧ: ದತ್ತ ಜಯಂತಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಡಿ. 6 ಬೆಳಿಗ್ಗೆ 6 ರಿಂದ ಡಿ.9 ರ ಬೆಳಿಗ್ಗೆ 10 ಗಂಟೆಯವರೆಗೆ ಮುಳ್ಳಯ್ಯನಗಿರಿ ಬಾಬಾ ಬುಡನ್ ಗಿರಿ ಶ್ರೇಣಿಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ಮಾಡಲಾಗಿದೆ
ಭಾನುವಾರ, ನವೆಂಬರ್ 27, 2022
ಪಕ್ಷದ ನಿಷ್ಠಾವಂತನಾದ ತನಗೆ ಕಾಂಗ್ರೆಸಿಗ ಎಂಬ ಪಟ್ಟ ಕಟ್ಟಿದರು :ವಿಶ್ವಾಸದ್ರೋಹ ಮಾಡಿದರು- ವಿಜಯಾನಂದ ಪಶ್ಚಾತಾಪ
ಚಿಕ್ಕಮಗಳೂರು ಶೃಂಗೇರಿ ಕ್ಷೇತ್ರ ಶಾಸಕ ಟಿಡಿ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ನೀಡಿದ ದೂರು ಪ್ರಕರಣ ಈಗ ಹೊಸ ಆಯಾಮ ಪಡೆಯುತ್ತಿದೆ.
ದೂರುದಾರ ಡಿ ಎನ್ ಜೀವರಾಜ್ ಗೆ ಚಾಲಕನಾಗಿದ್ದ ವಿಜಯಾನಂದ ಬಿಡುಗಡೆ ಮಾಡಿರುವ ವಿಡಿಯೋ ಮತ್ತು ವಿಜಯಾನಂದ ಹಾಗೂ ಜೀವರಾಜ್ ಪರಮಾಪ್ತ ದಿನೇಶ್ ಮಧ್ಯ ನಡೆದಿರುವ ಆಡಿಯೋ ಸಂಭಾಷಣೆ ಭಾರಿ ಸದ್ದು ಮಾಡುತ್ತಿವೆ.
ನಿನ್ನೆ ಮತ್ತೆ ರಾತ್ರಿ ಬಿಟ್ಟಿರುವ ವಿಡಿಯೋದಲ್ಲಿ ವಿಜಯಾನಂದ ಪಶ್ಚಾತಾಪದ ಮಾತುಗಳನ್ನು ಆಡಿದ್ದಾರೆ.
ಪಕ್ಷದ ಸಿದ್ಧಾಂತ ನಂಬಿ ಪ್ರಾಮಾಣಿಕವಾಗಿ ದುಡಿದಿದ್ದ ತನಗೆ ಕಾಂಗ್ರೆಸ್ಸಿಗ ಎನ್ನುವ ಪಟ್ಟವನ್ನು ಕಟ್ಟಿದ್ದಾರೆ. ಸ್ನೇಹಿತರ ಎದುರು ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೂರಿನ ಸತ್ಯ ಸಂಗತಿ ತಿಳಿಯುತ್ತಿದ್ದಂತೆ ತನ್ನ ಕುಟುಂಬದಲ್ಲಿ ತಳಮಳ ಆರಂಭಗೊಂಡಿದೆ. ದೂರನ್ನು ಹಿಂದೆ ಪಡೆಯುವಂತೆ ತಾನೆ ಅನೇಕ ಬಾರಿ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಆನೆಯ ಜೊತೆ ಆನೆಯ ಗುದ್ದಾಟ ಮಾಡಬೇಕು ಎಂದು ಹೇಳುವ ಮೂಲಕ ಸತಕ ರಾಜೇಗೌಡರು ವಿರುದ್ಧ ಜೀವರಾಜ್ ದೂರನ್ನು ಸಲ್ಲಿಸಬೇಕಿತ್ತು ಎಂದು ಮಾರ್ವಿಕವಾಗಿ ತಿವಿದಿದ್ದಾರೆ.
ಆನೆ ಎದುರು ಆನೆಯ ತಾಕಬೇಕು ಇರುವೆಯನ್ನು ಹೊಸಕಿ ಹಾಕುತ್ತಾರೆ. ತನ್ನನ್ನು ನಡು ನೀರಿನಲ್ಲಿ ಕೈಬಿಟ್ಟರು ಎಂದು ಕಿಡಿ ಕಾರಿದ್ದಾರೆ. ತಾನು ದೂರನ್ನು ಹಿಂದೆ ಪಡೆದ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳು ನಡೆಯುತ್ತಿವೆ. ಆ ಕುರಿತು ತನಗೆ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ವಿಜಯಾನಂದ ಮತ್ತು ಜೀವರಾಜ್ ಆಪ್ತ ದಿನೇಶ್ ಮಧ್ಯೆ ನಡೆದ ಸಂಭಾಷಣೆ ಮತ್ತಷ್ಟು ರೋಚಕವಾಗಿದೆ.
ನಿನ್ನನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಒಂದೊಮ್ಮೆ ಜೀವರಾಜ್ ಸಹಾಯ ಮಾಡದಿದ್ದರೂ ತಾನು ಸಹಾಯ ಮಾಡುತ್ತೇನೆ ಎಂದು ದಿನೇಶ್ ಭರವಸೆ ಕೊಟ್ಟಿದ್ದಾರೆ. ಇನ್ನಿಬ್ಬರಿಂದ ದೂರನ್ನು ಕೊಡಿಸುತ್ತೇನೆ ಎಂದು ಧೈರ್ಯ ತುಂಬುವ ಕೆಲಸ ಮಾಡಿ ಯಾವುದಕ್ಕೂ ಧೈರ್ಯ ಕಳೆದುಕೊಳ್ಳಬೇಡ ಎಂದು ಹೇಳಿರುವ ದಿನೇಶ್ ದೂರು ಕೊಡಿಸುವಲ್ಲಿ ತನ್ನ ಪಾತ್ರವು ಮುಖ್ಯ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
-
ಚಿಕ್ಕಮಗಳೂರು :ಇಂದಿನಿಂದ ಮೂರು ದಿನ ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ ಬೋಳರಾಮೇಶ್ವರ ದೇವಾಲಯದ ...
-
BIG NEWS ಸಾಧನೆಗಳನ್ನು ಸಾಧಿಸುವವನು ಸಾಧಕ, ಅಂತಹ ಸಾಧಕರ ಸಾಲಿನಲ್ಲಿ ಮೊದಲ ಬಾರಿಗೆ ಕಾಫೀ ಕಣಿವೆ ಮೂಡಿಗೆರೆಯ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಮಲೆನಾಡ ಉದಯೋನ್ಮು...
-
ಚಿಕ್ಕಮಗಳೂರು : ಇಂದು ಸಂಜೆ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಬ್ಬರು ಮೃತಪಟ್ಟು ಹಲವರಿಗೆ ಗಾಯಗಳುಆಗಿವೆ. ಕಳಸ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ ನಿಯ...
-
ಚಿಕ್ಕಮಗಳೂರು ಶೃಂಗೇರಿ ಕ್ಷೇತ್ರ ಶಾಸಕ ಟಿಡಿ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ನೀಡಿದ ದೂರು ಪ್ರಕರಣ ಈಗ ಹೊಸ ಆಯಾಮ ಪಡೆಯುತ್ತಿದೆ. ದೂರುದಾರ ಡಿ ಎನ್ ಜೀವರಾಜ್ ಗೆ ಚ...
-
ಚಿಕ್ಕಮಗಳೂರು: ವಿಷ ಸೇವಿಸಿದ ಬಳಿಕ ಕೆರೆಗೆ ಬಿದ್ದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ಕನ್ಗೆರೆ ಗ್ರಾಮದ ಜೀವಿತ್ (32...
-
ಚಿಕ್ಕಮಗಳೂರು :ರಾಜ್ಯ ಸರ್ಕಾರ ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಸಂಘ ಸಂಸ್ಥೆಗಳನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು ,ಜಿಲ್ಲೆಯ ಚಂದ್ರಶೇಖರ ನಾರಾ...
-
BIG NEWS ಚಿಕ್ಕಮಗಳೂರು: ಜಿಲ್ಲೆಯಮೂಡಿಗೆರೆ ತಾಲೂಕಿನ ತಳವಾರ ಗ್ರಾಮದಲ್ಲಿ ಮತ್ತೊಂದು ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ. ಕಳೆದ ಮೂರು ತಿಂಗಳಲ್ಲಿ ಮೂವರನ್ನು ಬಲಿ ...
-
ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಶಾಸಕರಾಜೇಗೌಡ ವಿರುದ್ಧ ಮತ್ತೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ ಕೊಪ್ಪ ಮೂಲದ ದಿನೇಶ್ ಹೊಸೂರು ದೂರು ಸಲ್ಲಿಸುವ ಮೂಲಕ ಕಾಂಗ್ರೆ...




















