udayanews

ಶನಿವಾರ, ಜನವರಿ 16, 2021

ಕೋವಿಡ್ ಲಸಿಕೆ :ಮೊದಲ ದಿನ ಉತ್ತಮ ಪ್ರತಿಕ್ರಿಯೆ


 ಚಿಕ್ಕಮಗಳೂರು: ಜಿಲ್ಲಾ ಕೇಂದ್ರದ 2ಕಡೆ ಸೇರಿದಂತೆ ಜಿಲ್ಲೆಯ 9ಕಡೆಗಳಲ್ಲಿ ಇಂದು ಕೋವಿಡ್ ಲಸಿಕೆ ನೀಡಲಾಯಿತು .

ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸೋಮಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು .

ಪೌರಕಾರ್ಮಿಕ ಗುರಮ್ಮ ಮೊದಲ ಪ್ರಶಸ್ತಿಯನ್ನು ಪಡೆದರು . ಆರಂಭದಿಂದ ೮೦೦ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು 4 ಗಂಟೆ ವೇಳೆಗೆ ಶೇಕಡಾ ೫೦ ರಷ್ಟು  ಸಾಧನೆಯಾಗಿತ್ತು .

ಜಿಲ್ಲೆಯಲ್ಲಿ ಈವರೆಗೆ ೧೦೫೭೯ ಜನ ಲಸಿಕೆ ಪಡೆಯಲು ನೋಂದಣಿ ಮಾಡಿಸಿದ್ದಾರೆ ಇದರಲ್ಲಿ ೭೫೦೦ ಸರ್ಕಾರಿ '೩೦೭೭ ಜನ ಖಾಸಗಿ ಆಸ್ಪತ್ರೆಗಳಲ್ಲಿ ಹೆಸರು ನೋಂದಾಯಿಸಿದ್ದಾರೆ .

ಲಸಿಕೆ ಪಡೆದವರ ಮೇಲೆ  ೩೦ ನಿಮಿಷಗಳ ಕಾಲ ನಿಗಾ ವಹಿಸಲಾಯಿತು .ಆರಂಭದಲ್ಲಿ ಸದ್ಯಕ್ಕೆ ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ .


ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗರ ಒತ್ತಾಯ


 ಚಿಕ್ಕಮಗಳೂರು :ಶೇಕಡಾವಾರು ಜನಸಂಖ್ಯೆಗೆ ಅನುಗುಣವಾಗಿ ಒಕ್ಕಲಿಗ ಜನಾಂಗಕ್ಕೆ ಶೇಕಡ ೧೭ ರಷ್ಟು ಮೀಸಲಾತಿ ನೀಡುವಂತೆ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿದೆ .

ಸುದ್ದಿಗಾರರ ಜೊತೆ  ಮಾತನಾಡಿದ ಸಮಿತಿಯ ಪ್ರಧಾನ ಸಂಚಾಲಕ ನಾಗರಾಜ್  ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು, ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಮನ ಹರಿಸುವಂತೆ ಒತ್ತಾಯಿಸಿದರು .

ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ರೂಪಿಸುವುದಾಗಿ ತಿಳಿಸಿದ ಅವರು ಜನಸಂಖ್ಯೆಗೆ ಅನುಗುಣವಾಗಿ ಎಲ್ಲಾ ಜನಾಂಗದವರಿಗೆ  ಮೀಸಲಾತಿ ನೀಡುವಂತೆ ಮನವಿ ಮಾಡಿದರು . 

ಪದಾಧಿಕಾರಿಗಳಾದ ರಾಜೇಗೌಡ ,ಧರ್ಮರಾಜ್, ಮುಕುಂದ ರಾಜ್ ಉಪಸ್ಥಿತರಿದ್ದರು 

ಶುಕ್ರವಾರ, ಜನವರಿ 15, 2021

ಚಿಕ್ಕಮಗಳೂರು: ಹಲವೆಡೆ ಸಂಭ್ರಮದ ಸಂಕ್ರಾಂತಿ


 ಚಿಕ್ಕಮಗಳೂರು: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು .

ಜಿಲ್ಲಾ ಕೇಂದ್ರದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಂಘದ ವತಿಯಿಂದ  ರಾಮ ದೇವಾಲಯದಲ್ಲಿ ಮಹಿಳೆಯರು ರಂಗೋಲಿ ಹಾಕಿ ಪೂಜೆ ಸಲ್ಲಿಸಿ ಪೊಂಗಲ್ ಮಾಡಿ ವಿತರಿಸಿದರು . 

ಕೃಷಿಕರು ಜಮೀನಿಗೆ ತೆರಳಿ ,ಬೆಳೆದ ಫಸಲನ್ನು ಕತ್ತರಿಸಿ ಮನೆಗೆ ತಂದು ರಾಶಿ ಹಾಕಿ ಪೂಜೆ ನೆರವೇರಿಸಿ ಸಿಹಿ ಹಂಚಿದರು ಗೋ ಪೂಜೆಯನ್ನು ನೆರವೇರಿಸಿದರು 


.


ಬುಧವಾರ, ಜನವರಿ 13, 2021

ಯತ್ನಾಳ್ ಆರೋಪ: ಪ್ರತಿಕ್ರಿಯೆಗೆ ಸಿಟಿರವಿ ನಕಾರ


 ಚಿಕ್ಕಮಗಳೂರು : ಸಿಎಂ ಸಿಡಿ ಇಟ್ಕೊಂಡು ಬ್ಲಾಕ್ಮೇಲ್ ಮಾಡಿ ಸಚಿವರಾಗಿದ್ದಾರೆ ಎನ್ನುವ ಶಾಸಕ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ನಿರಾಕರಿಸಿದ್ದಾರೆ .

ಯೋಗ ಇರುವವರಿಗೆ ಸಚಿವ ಸ್ಥಾನ ಸಿಕ್ಕಿದೆ.ಯೋಗ್ಯತೆ ಇರೋರು ಬಹಳಷ್ಟು ಮಂದಿ ಇದ್ದಾರೆ .ಅವರಿಗೆಲ್ಲ ಮುಂದಿನ ಬಾರಿ ಅವಕಾಶಗಳು ಸಿಗಲಿವೆ ಎಂದಿದ್ದಾರೆ .

ಸಿಡಿನೂ ಇಲ್ಲ, ಪಾಡಿನೂ ಇಲ್ಲ, ಸುಮ್ನೆ ಹೇಳ್ತಾರೆ ಅಷ್ಟೇ : ಈಶ್ವರಪ್ಪ ಸ್ಪಷ್ಟನೆ


 ಚಿಕ್ಕಮಗಳೂರು: ಸಿಡಿನೂ' ಇಲ್ಲ ಏನೂ ಇಲ್ಲ ಸುಮ್ನೆ ಹೇಳ್ತಾರೆ ಅಷ್ಟೆ ಎಂದು ಸಚಿವ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು

ಯತ್ನಾಳ್ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ರೆ ಈ ರೀತಿ ಮಾತನಾಡುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು .

ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ, ನೋವಿನಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದರು 

ಕಾಂಗ್ರೆಸ್, ಜೆಡಿಎಸ್ ನಿಂದ ಬಂದ ಅರ್ಹತೆ ಇದ್ದವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ ,ಮುನಿರತ್ನ, ಹೆಚ್ ವಿಶ್ವನಾಥ್ ಅವರನ್ನು ಹೊರತುಪಡಿಸಿ ಎಲ್ಲರಿಗೂ ಸಚಿವ ಸ್ಥಾನ ಸಿಕ್ಕಿದೆ ಎಂದು ತಿಳಿಸಿದರು .

ಸಚಿವ ಸ್ಥಾನ ಸಿಗಲಿಲ್ಲ ಎಂದು ಏನೋ ಪದವನ್ನ ಬಳಸಬಹುದು.ಆದರೆ ಇದು ನಿಮ್ಮ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದು ಎಚ್ಚರಿಕೆ ನೀಡಿದರು .

ಎಲ್ಲ ಶಾಸಕರು ಕಲ್ಲುಬಂಡೆಯಂತೆ ಪಕ್ಷದಲ್ಲಿ ಇದ್ದಾರೆ 'ಸರ್ಕಾರ ಬಿಲ್ ಕುಲ್ ಪತನವಾಗಲ್ಲ ಎಂದು ಹೇಳಿದರು 

ಉಡ ಬೇಟೆಗಾರನ ಬಂಧನ

 ಚಿಕ್ಕಮಗಳೂರು :


ಕಡೂರು ವಲಯದ ಯಗಟಿ ಪುರ ಗ್ರಾಮದ ವ್ಯಾಪ್ತಿಯಲ್ಲಿ "ಉಡ" ಬೇಟೆಯಾಡಿದ್ದ  ಪರಮೇಶ್ವರನ್  ಎಂಬಾತನನ್ನು   ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. 

ಎ ಸಿ ಎಫ್ ಮುದ್ದಣ್ಣ ಮಾರ್ಗದರ್ಶನದಲ್ಲಿ ಆರ್ ಎಫ್ ಒ ತನುಜ್ ಕುಮಾರ್  ತಂಡ, ಅಕ್ರಮವಾಗಿ ಬೇಟೆಯಾಡಿದ್ದ ಉಡವನ್ನು ಆರೋಪಿಯಿಂದ ವಶಪಡಿಸಿಕೊಂಡು ವನ್ಯಜೀವಿ ಕಾಯ್ದೆ 1972 ರನ್ವಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪಿಸಿದ್ದಾರೆ.   


ಮಂಗಳವಾರ, ಜನವರಿ 12, 2021

ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು: ಪ್ರಕರಣ ಮುಚ್ಚಿ ಹಾಕಲು ಯತ್ನ


 ಚಿಕ್ಕಮಗಳೂರು: ಜಿಲ್ಲೆಯ  ಕಳಸ ಸಮೀಪದ ಮಾವಿನಕೆರೆಯಲ್ಲಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಸುರೇಂದ್ರ ಎನ್ನುವರು ಮೃತಪಟ್ಟಿದ್ದು ಮೃತರ ಸಂಬಂಧಿಕರಿಗೆ ಹಣ ನೀಡಿ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ .

ಕಾಫಿ ತೋಟದ ವ್ಯವಸ್ಥಾಪಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ .