udayanews

ಬುಧವಾರ, ಜನವರಿ 20, 2021

ಜ ೨೬ ರಂದು ಐತಿಹಾಸಿಕ ಹೋರಾಟ :ಕೆ ಎಲ್. ಅಶೋಕ್


 ಚಿಕ್ಕಮಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನವಿರೋಧಿ ಕಾಯಿದೆಗಳನ್ನು ವಿರೋಧಿಸಿ  ಜ.೨೬ ರಂದು ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ ಎಂದು ಸಂಯುಕ್ತ ಹೋರಾಟ ಸಮಿತಿ ಕಾರ್ಯದರ್ಶಿ ಕೆ. ಎಲ್ ಅಶೋಕ್ ತಿಳಿಸಿದ್ದಾರೆ .

ಸುದ್ದಿಗಾರರ ಜೂತೆ ಮಾತನಾಡಿದ ಅವರು ಎಲ್ಲಾ ರೀತಿಯ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲ ಸಂಘಟನೆಗಳು ಒಂದಾಗಿ ಈ ಹೋರಾಟವನ್ನು  ನಡೆಸುತ್ತಿದ್ದು ಎರಡನೆ ಸ್ವಾತಂತ್ರ ಸಂಗ್ರಾಮಕ್ಕೆ ಮುನ್ನುಡಿ ಆಗಲಿದೆ ಎಂದು ಹೇಳಿದರು .

ದೆಹಲಿಯಲ್ಲಿ ನಡೆಯುತ್ತಿರುವ ಚಳವಳಿ ಹೊಸ ಭಾಷ್ಯವನ್ನು ಬರೆದಿದೆ .ದಿಕ್ಕನ್ನು ತೋರಿಸಿದೆ.ಸುಗ್ರೀವಾಜ್ಞೆಗಳ ಮೂಲಕ ಕಾಯಿದೆಗಳನ್ನು ತಂದು ಸರ್ಕಾರ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು . ಗೌಸ್ ಮೊಯಿದಿನ್ ಇತರರು ಪಾಲ್ಗೊಂಡಿದ್ದರು .

ಮಂಗಳವಾರ, ಜನವರಿ 19, 2021

ಬಣಕಲ್ ಬಂದ್ ಯಶಸ್ವಿ : ಪಕ್ಕಾ ಪೋಡಿ ಭರವಸೆ


 ಚಿಕ್ಕಮಗಳೂರು :ಕೊಟ್ಟಿಗೆಹಾರ: ಬಣಕಲ್ ಗ್ರಾಮದ ಸರ್ವೇ ನಂ 353 ಆಟದ ಮೈದಾನವನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಕ್ಕಾ ಪೋಡಿ ಬದಲಾಯಿಸುವಂತೆ ಒತ್ತಾಯಿಸಿ ಕರೆ ನೀಡಿದ್ದ ಬಣಕಲ್ ಪಟ್ಟಣ ಯಶಸ್ವಿಯಾಗಿದೆ.

 ಅಂಗಡಿ ಮುಂಗಟ್ಟುಗಳ ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ನೀಡಿದ್ದರು.

 ಬಣಕಲ್‌ನ ಪೆಟ್ರೋಲ್ ಬಂಕ್‌ನಿಂದ ಪ್ರತಿಭಟನಾ ಮೆರವಣಿಗೆ ಹೊರಟು ಬಣಕಲ್‌ನ ಮುಖ್ಯ ಬೀದಿಗಳಲ್ಲಿ ಸಾಗಿ ಆಟದ ಮೈದಾನದಲ್ಲಿ ಧರಣಿ ನಡೆಸಲಾಯಿತು.

 ಸ್ಥಳಕ್ಕೆ ಶಾಸಕ ಎಂ.ಪಿ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಎಂ ಅಕ್ಷಯ್ ಬೇಟಿ ನೀಡಿ ಧರಣಿ ನಿರತದ ಬಳಿ ಮಾತುಕತೆ ನಡೆಸಿದರು. ನಂತರ ಪೊಲೀಸ್ ವರಿಷ್ಠಾಧಿಕಾರಿ ಪಕ್ಕಾ ಪೋಡಿ ಮಾಡುವ ಕುರಿತು‌ ಭರವಸೆ ನೀಡಿದರು.


ಆಟದ ಮೈದಾನದ ಪಕ್ಕಾ ಪೋಡ್ ಬದಲಾವಣೆಯ ಭರವಸೆ ನೀಡಿದ್ದರಿಂದ ಧರಣಿಯನ್ನು ಹಿಂಪಡೆದುಕೊಂಡಿದ್ದು ಪಕ್ಕಾ ಪೋಡಿ ಬದಲಾವಣೆ ಆಗದಿದ್ದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಅನಿರ್ದಿಷ್ಟಾವಧಿ ಧರಣಿ ನಡೆಡಲಾಗುವುದು ಎಂದರು.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಝಣ ಝಣ ಕಾಂಚಾಣ


 ಸಿಐಎಸ್ ಎಫ್ ಪೊಲೀಸರು ನಡೆಸಿದ  ಭರ್ಜರಿ ಕಾರ್ಯಾಚರಣೆಯಲ್ಲಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 

 ಕಂತೆ ಕಂತೆ ಹಣ ಸಿಕ್ಕಿದೆ .

ಚೆನ್ನೈನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಸ್ಟಮ್ಸ್ ಅಧಿಕಾರಿ ಇರ್ಫಾನ್ ಅಹಮ್ಮದ್  ಮೊಹಮ್ಮದ್ ಲಕ್ನೋಗೆ ತೆರಳಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ  ಪ್ರಕರಣ ಪತ್ತೆಯಾಗಿದೆ .

 ಕೇಂದ್ರ ಸರ್ಕಾರದ ಅಧಿಕಾರಿ ದಂಪತಿ ಬಳಿ ಇತ್ತು ಲಕ್ಷ ಲಕ್ಷ ಹಣ ಇದ್ದು, ಸಿಐಎಸ್ ಎಫ್ ಅಧಿಕಾರಿಗಳ ಪರಿಶೀಲನೆ ವೇಳೆ ಬಾತ್ ರೂಂ ನಲ್ಲಿ ಬಿಸಾಡಿರುವುದು ಬೆಳಕಿಗೆ ಬಂದಿದೆ  .

ಅಧಿಕಾರಿಯ ಪತ್ನಿ ಬಾತ್ ರೂಂ ನಲ್ಲಿ 10 ಲಕ್ಷ ರೂ ಬಿಸಾಡಿದ್ದರೆ ,ಎರಡು ಕಾಸ್ಟ್ಲಿ ಮೊಬೈಲ್, ಆಫಲ್ ವಾಚ್ ಒಂದು ಸೂಟ್ ಕೇಸ್, ಬ್ಯಾಗ್ ನಲ್ಲಿ 74 ಲಕ್ಷ ರೂ ಪತ್ತೆಯಾಗಿದೆ .

ಒಟ್ಟು 74 ಲಕ್ಷದ 81 ಸಾವಿರದ 500 ರೂ ಹಣ ಜಪ್ತಿ ಮಾಡಿದ್ದು ಪ್ರಕರಣವನ್ನು ಸಿಐಎಸ್ ಎಫ್ ಪೊಲೀಸರು ಕೇಸ್ ನ್ನು ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.


ಸೋಮವಾರ, ಜನವರಿ 18, 2021

*ಕಾಫಿಗೆ ಬೆಂಬಲ ಬೆಲೆ ಘೋಷಿಸಿದ ಕೇರಳ ಸರ್ಕಾರ*


 ಕಾಫಿಗೆ ಬೆಂಬಲ ಬೆಲೆ ಘೋಷಿಸುವ ಮೂಲಕ   ಕೇರಳ ಸರ್ಕಾರ ಬೆಳೆಗಾರರ ಮನಗೆದ್ದಿದೆ .ಕೇರಳದ ವೈನಾಡಿನಲ್ಲಿ  ರೋಬಸ್ಟಾ ಕಾಫಿ ಬೆಳೆಯುತ್ತಿದ್ದು ಸರ್ಕಾರದ ಕ್ರಮವನ್ನು ಬೆಳೆಗಾರರು ಸ್ವಾಗತಿಸಿದ್ದಾರೆ 

 ಏರುತ್ತಿರುವ ಉತ್ಪಾದನಾ ವೆಚ್ಚ, ಕಾಫಿ, ಕಾಳು ಮೆಣಸಿನ ಬೆಲೆ ಕುಸಿತ ಮತ್ತು ಪ್ರಾಕೃತಿಕ ವಿಕೋಪಗಳ ಕಾರಣದಿಂದ ದೇಶದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. 

ಬೆಳೆಗಾರರ ಒತ್ತಾಯದ ನಡುವೆಯೂ ವಾಣಿಜ್ಯ ಬೆಳೆಯಾದ ಕಾಫಿಗೆ ಈವರೆಗೂ ಕೇಂದ್ರ ಅಥವಾ ರಾಜ್ಯ ಸರ್ಕಾರವು ಕನಿಷ್ಟ ಬೆಂಬಲ ಬೆಲೆಯನ್ನು ಘೋಷಿಸಿಲ್ಲ.  ಪಕ್ಕದ  ಕೇರಳ ರಾಜ್ಯವು ಕಾಫಿಗೆ ಬೆಂಬಲ ಬೆಲೆಯನ್ನು ಘೋಷಿಸಿದೆ.

ಕೇರಳ ಹಣಕಾಸು ಸಚಿವ ಟಿ.ಎಂ. ಥಾಮಸ್ ಐಸಾಕ್ ಶುಕ್ರವಾರ ತಮ್ಮ ಬಜೆಟ್ ಭಾಷಣದಲ್ಲಿ ಒಂದು ಕೆಜಿ ರೋಬಸ್ಟಾ ಚೆರಿ ಕಾಫಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) 90 ರೂಪಾಯಿಗೆ ಹೆಚ್ಚಿಸಿದ್ದಾರೆ. ಸರ್ಕಾರದ ನಿರ್ಧಾರವನ್ನು  ಕಾಫಿ ಬೆಳೆಗಾರ ಸಂಘಟನೆಗಳು ಸ್ವಾಗತಿಸಿವೆ. 

 ಉತ್ಪಾದನಾ ವೆಚ್ಚ ಏರಿಕೆ ಆಗಿ ಜಿಲ್ಲೆಯ ಕಾಫಿ ಬೆಳೆಗಾರರು ತೀವ್ರ ಬಿಕ್ಕಟ್ಟಿನಲ್ಲಿರುವ ಈ ಸಮಯದಲ್ಲಿ, ನಾವು ಈ ಘೋಷಣೆಯನ್ನು ಸ್ವಾಗತಿಸುತ್ತೇವೆ ಎಂದು ವಯನಾಡ್ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಪ್ರಶಾಂತ್ ರಾಜೇಶ್ ತಿಳಿಸಿದ್ದಾರೆ.

ವಯನಾಡಿನಲ್ಲಿ ಶುಕ್ರವಾರ ರೊಬಸ್ಟಾ ಚೆರಿ ಬೆಲೆ ಕೆಜಿಗೆ 64 ರೂ ಆಗಿದ್ದು, ಕಳೆದ ವರ್ಷ ಕೆಜಿಗೆ ಇದೇ ಅವಧಿಯಲ್ಲಿ 72 ರೂಪಾಯಿಗಳಷ್ಟಿತ್ತು. ಎಂ ಎಸ್ ಸ್ವಾಮಿನಾಥನ್ ಆಯೋಗವೂ ಎಂಎಸ್ಪಿಯನ್ನು ಶಿಫಾರಸು ಮಾಡಿರಲಿಲ್ಲ.  ವಯನಾಡ್ ನಲ್ಲಿ ವರ್ಷಕ್ಕೆ 90,000 ಟನ್ಗಿಂತಲೂ ಹೆಚ್ಚು ರೋಬಸ್ಟಾ ಚೆರ್ರಿ ಉತ್ಪಾದಿಸುತ್ತಿದೆ.  ಇದರ  ಜೊತೆಗೆ  ಕೇರಳ ಸರ್ಕಾರ ಬ್ರಹ್ಮಗಿರಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಮೂಲಕ ಬೆಳೆಗಾರರಿಗೆ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಹಣಕಾಸಿನ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ 

 ವಯನಾಡ್ ಕಾಫಿ ಬ್ರಾಂಡ್ ಹೆಸರಿನಲ್ಲಿ ಮೌಲ್ಯವರ್ಧಿತ ಕಾಫಿ ಉತ್ಪನ್ನಗಳನ್ನು ಮಾರಾಟ ಮಾಡಲು ಕುಡುಂಬಶ್ರೀ ಘಟಕಗಳ ಅಡಿಯಲ್ಲಿ ನೂರು ಕಿಯೋಸ್ಕ್ ಗಳನ್ನು ಮತ್ತು 500 ಕಾಫಿ ವೆಂಡಿಂಗ್ ಮೆಷೀನ್ ಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದ್ದು ವಯನಾಡಿನಲ್ಲಿ ಕಾಫಿ ಪಾರ್ಕ್ ಕೂಡ ಸ್ಥಾಪಿಸಲಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿ ಮಾಜಿ ಸದಸ್ಯ ಡಾ ಸಣ್ಣುವಂಡ ಕಾವೇರಪ್ಪ  ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಧಾವಿಸಬೇಕಿದೆ.  ಕಾಫಿಯಿಂದ ಸರ್ಕಾರ ಕೋಟಿಗಟ್ಟಲೆ ರೂ. ತೆರಿಗೆ ಸಂಗ್ರಹ ಮಾಡುತ್ತಿದ್ದರೂ ಆ ಬೆಳೆಗಾರರನ್ನು ಸಂಪೂರ್ಣ ನಿರ್ಲಕ್ಷಿಸಿವೆ ಎಂದು ದೂರಿದರು. 

ಇಂದು ದೇಶದಲ್ಲಿ ಎಲ್ಲ ಬೆಳೆಗಳಿಗೂ ವಿಮೆ ಸೌಲಭ್ಯ ಇದೆ.  ಕಾಫಿಗೆ ಮೂರು ವರ್ಷ ಮಾತ್ರ ಅಲ್ಪ ಸಮಯ ಬೆಳೆ ವಿಮೆ ಸೌಲಭ್ಯ ನೀಡಿ ನಂತರ ನಿಲ್ಲಿಸಲಾಗಿದೆ . ಸರ್ಕಾರ ಕಮಾಡಿಟಿ ಬೋರ್ಡ್ ಸ್ಥಾಪಿಸಿ ಬೆಳೆಗಾರರ ನೆರವಿಗೆ ಮುಂದಾಗಲಿ ಎಂದು ಒತ್ತಾಯಿಸಿದ್ದಾರೆ.ಆದರೆ ಏನೇ ಆದರೂ ಯಾವುದೇ ಸರ್ಕಾರವೂ ಈ ರೀತಿ ಬೆಳೆಗಾರನಿಗೆ ನೆರವಿನ ಹಸ್ತ ಚಾಚಿಲ್ಲ.

ಕೇರಳ ಸರ್ಕಾರದ ವ್ಯತ್ಯಾಸ ಸ್ವಾಗತಿಸಿರುವ  ಬಿಳಿಗೇರಿಯ ಕಾಫಿ ಬೆಳೆಗಾರ ಎಂ ಏ ಶ್ಯಾಮ್ ಪ್ರಸಾದ್    ಕರ್ನಾಟಕ ಸರ್ಕಾರವೂ ಇದೇ ಮಾದರಿ ಅನುಸರಿಸಲಿ ಎಂದು ಒತ್ತಾಯಿಸಿದ್ದಾರೆ .  

ಈ ಮಧ್ಯೆ  ಕೇರಳದಲ್ಲಿ ಮುಂದಿನ ಮೇ ತಿಂಗಳಿನಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದ್ದು ಆ ಹಿನ್ನೆಲೆಯಲ್ಲಿ ಸರ್ಕಾರ ಎಂಎಸ್ಪಿ ಘೋಷಿಸಿದೆ ಎನ್ನಲಾಗಿದ್ದು ಎಂಎಸ್ಪಿ ಅಡಿಯಲ್ಲಿ ಬೆಳೆಗಾರನ ಪೂರ್ಣ ಉತ್ಪನ್ನವನ್ನೂ ಖರೀದಿಸುವುದಿಲ್ಲ. ಬದಲಿಗೆ ಪ್ರತಿಯೊಬ್ಬ ಬೆಳೆಗಾರನಿಂದಲೂ ಸೀಮಿತ ಪ್ರಮಾಣದ ಕಾಫಿ ಖರೀದಿಸಲಿದೆ ಎಂದೂ ಹೇಳಲಾಗುತ್ತಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ.

##ಕರ್ನಾಟಕ ಸರ್ಕಾರ

 #ಕರ್ನಾಟಕ ಬೆಳೆಗಾರರ ಒಕ್ಕೂಟ

 ##ಕಾಫಿ ಮಂಡಳಿ ##ಶೋಭಾ ಕರಂದ್ಲಾಜೆ 

ಕಾಂಗ್ರೆಸ್ ಹೆಗಲ ಮೇಲಿನಿಂದ ಠಾಕ್ರೆ ಕೆಳಗಿಳಿಯಲಿ :ಮಾಜಿ ಸಚಿವ ರವಿ ಸವಾಲು


 ಚಿಕ್ಕಮಗಳೂರು : ಕಾಂಗ್ರೆಸ್ ಹೆಗಲ ಮೇಲೆ ಕುಳಿತು ಬಾಳಾ ಠಾಕ್ರೆ  ಹೇಗೆ ಮಾತನಾಡ್ತಾರೆ ಎಂದು ಪ್ರಶ್ನಿಸಿರುವ ಮಾಜಿ ಸಚಿವ ಸಿ ಟಿ ರವಿ 

ನೈತಿಕತೆ ಇದ್ದರೆ ಅವರಿಗೆ  ಅನ್ಯಾಯ ಮಾಡಿದ ಹೆಗಲಿನಿಂದ ಕೆಳಗಿಳಯಲಿ ಎಂದು ಸವಾಲು ಹಾಕಿದ್ದಾರೆ 

ಮಹಾರಾಷ್ಟ್ರ ಸಿ.ಎಂ. ಉದ್ಧವ್ ಠಾಕ್ರೆ ಗಡಿ ವಿವಾದ ಕುರಿತು ತೆಗೆದಿರುವ ಖ್ಯಾತೆಗೆ ಪ್ರತಿಕ್ರಿಯಿಸಿರುವ ಅವರು

ಗಡಿ ವಿಚಾರವನ್ನು ರಾಜಕೀಯ ಬೆಳೆ ಬೆಯಿಸಿಕೊಳ್ಳುವುದು ಬಹಳ ಹಿಂದಿನಿಂದ ಬಂದಿದೆ ಎಂದು ವಿಷಾದಿಸಿದರು 

ಕನ್ನಡ ಮಾತನಾಡುವವರು ಮಹಾರಾಷ್ಟ್ರ ಗಡಿಯೊಳಗೆ ಇದ್ದಾರೆ.ಮಠಾಠಿ ಮಾತನಾಡುವವರು ಕರ್ನಾಟಕ ದಲ್ಲಿದ್ದಾರೆ.ಇದಕ್ಕೆ ಸಂಬಂಧಿಸಿದ್ದಂತೆ ಹಲವು ಅಯೋಗಗಳು ಬಂದಿದೆ ಎಂದು ಹೇಳಿದರು 

ಭಾಷಾವಾರು ಪ್ರಾಂತ್ಯವಾಗುವಾಗ ಕ್ಷೇತ್ರ ವಿಂಗಡಣೆಯಾಗಿದೆ..ಅವರ ಸಾಂಪ್ರದಾಯಿಕ ಅಸ್ಮಿತೆಯನ್ನು ಉಳಿಸುವ ಕೆಲಸ ಭಾರತೀಯರು ಮಾಡಿಕೊಂಡು ಬಂದಿದ್ದಾರೆ.ಸಾಂಸ್ಕೃತಿಕ ಅಸ್ಮಿತೆಗೆ ಧಕ್ಕೆ ತರುವ ಕೆಲಸ ನಡೆದಿಲ್ಲ ಎಂದರು.

ಭಾಷಾವಾರು ಪ್ರಾಂತ್ಯ ರಚನೆಯಾಗಬೇಕಾದ್ರೆ ಬಿಜೆಪಿ ಅಸ್ಥಿತ್ವದಲ್ಲಿರಲಿಲ್ಲ.

ಅಂದು ದೇಶಾದ್ಯಂತ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಉದ್ಧವ್ ಠಾಕ್ರೆ ಯಾರ ಬೆಂಬಲಿತದಿಂದ ಅಧಿಕಾರ ನಡೆಸುತ್ತಿದ್ದಾರೂ ಅವರ ವಿರುದ್ದ ಪ್ರಶ್ನೆ ಮಾಡಬೇಕು ಎಂದು ಮಾರ್ಮಿಕವಾಗಿ ನುಡಿದರು .


ಮಹಾಜನ್ ವರದಿಯೇ ಅಂತಿಮ: ಸಚಿವ ಮಾಧುಸ್ವಾಮಿ


 

ಚಿಕ್ಕಮಗಳೂರು : ಮಹಾಜನ್ ವರದಿಯೇ  ಅಂತಿಮ ಇದರಿಂದ ರಾಜಿಯಾಗುವ ಪ್ರಶ್ನೆ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮಾಧುಸ್ವಾಮಿ ಸ್ಪಷ್ಟ ಪಡಿಸಿದ್ದಾರೆ 

ಯಾವುದೇ ಕಾನೂನು ರಾಜ್ಯಗಳನ್ನ ಭಾಷಾವಾರು ಮರು ವಿಂಗಡನೆ ಬಗ್ಗೆ ಹೇಳಿಲ್ಲ.ಎರಡೆರಡು ಬಾರಿ ದೇಶವನ್ನು ವಿಂಗಡನೆ ಮಾಡಲು ಸಾಧ್ಯವಿಲ್ಲ ಇದು ಮುಗಿದ ಅಧ್ಯಾಯ  ಎಂದು ಖಂಡತುಂಡವಾಗಿ ಹೇಳಿದ್ದಾರೆ .

ಮಹಾಜನ್ ವರದಿಯನ್ನ ಎಲ್ಲರೂ ಒಪ್ಪಿಯಾಗಿದೆ .ರಾಜಕೀಯ ಅಸ್ಥಿತಕ್ಕಾಗಿ ಬದುಕಲು ಈ ರೀತಿ ಉದ್ಧವ್ ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವರು 

ಚಿಕ್ಕಮಗಳೂರಿನಲ್ಲಿ ಕಿಡಿಕಾರಿದ್ದಾರೆ .

ಭಾನುವಾರ, ಜನವರಿ 17, 2021

ಕನ್ನಡದ ನಿರ್ಲಕ್ಷ್ಯ: ವ್ಯಾಪಕ ಅಸಮಾಧಾನ


 ಭದ್ರಾವತಿಯಲ್ಲಿ ನಡೆದ ಕ್ಷಿಪ್ರ ಕಾರ್ಯಾಚರಣೆ ಪಡೆಯ ಬೆಟಾಲಿಯನ್ ಭೂಮಿಪೂಜೆ ಕಾರ್ಯಕ್ರಮದಲ್ಲಿ ಕನ್ನಡವನ್ನು ನಿರ್ಲಕ್ಷಿಸಿದ ಕ್ರಮ ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ .

ತ್ರಿಭಾಷಾ ಸೂತ್ರದ ಅನ್ವಯ ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕಾದ ಸರ್ಕಾರ ಕನ್ನಡವನ್ನು ಸಂಪೂರ್ಣ ಕಡೆಗಣಿಸಿ ಹಿಂದಿ ಮಯ ಮಾಡಿರುವುದು ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ .

ಕೇಂದ್ರ ಗ್ರಹ  ಸಚಿವ ಅಮಿತ್ ಶಾ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅನೇಕ ಪ್ರಮುಖರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .

ಶಿಲಾನ್ಯಾಸ ಫಲಕದಲ್ಲಿ ಕನ್ನಡ  ಮಾಯವಾಗಿದ್ದರು ಈ ನಾಯಕರು ತುಟಿ ಬಿಚ್ಚದಿರುವುದು ಕನ್ನಡಿಗರನ್ನು ಕೆರಳಿಸಿದೆ . ಹಿಂದಿ ಹೇರಿಕೆಯ ವ್ಯವಸ್ಥಿತ ಹುನ್ನಾರ ಇದಾಗಿತ್ತು ಮುಂದೊಂದು ದಿನ ಕನ್ನಡವೇ ಮಾಯ ವಾಗುವ ಅಪಾಯ ಎದುರಾಗಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ಟೀಕೆಗಳು ಹರಿದಾಡುತ್ತಿವೆ .

ಮುಖ್ಯಮಂತ್ರಿಗಳು ಕ್ಷಮೆ ಕೇಳಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿವೆ . ಸರ್ಕಾರದ ಈ ನಿರ್ಧಾರಕ್ಕೆ ಕನ್ನಡಪರ ಸಂಘಟನೆಗಳು ಆಕ್ಷೇಪ ಹೊರಹಾಕಿವೆ .