udayanews

ಗುರುವಾರ, ಜನವರಿ 28, 2021

ಪೊಲೀಸ್ ಸುಲಿಗೆ -ದಬ್ಬಾಳಿಕೆ :ವೀಡಿಯೋ ವೈರಲ್


 

ಚಿಕ್ಕಮಗಳೂರು :ಜಿಲ್ಲಾ ಕೇಂದ್ರದಲ್ಲಿ  ಸಂಚಾರಿ ಪೊಲೀಸರು ಮಾಡಬೇಕಾದ ಕೆಲಸಗಳನ್ನೆಲ್ಲ ಬಿಟ್ಟು ಕೇವಲ ವಸೂಲಿಗೆ ಇಳಿದಂತೆ ಕಾಣುತ್ತಿದೆ .

ಇದು ಮೇಲಿನ ಅಧಿಕಾರಿಗಳ ಆದೇಶದ ಫಲ . ಕೆಲ ನಿರ್ದಿಷ್ಟ ಸ್ಥಳಗಳಲ್ಲಿ ಬಕ ಪಕ್ಷಿಗಳಂತೆ  ನಿಲ್ಲುವ ಪೊಲೀಸರು , ದಾಖಲಾತಿ ಕೇಳುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದಾರೆ ಎನ್ನುವ  ಆರೋಪ ಸಾಮಾನ್ಯವಾಗಿದೆ.

ಪ್ರತಿದಿನ ಇಂತಿಷ್ಟು ಪ್ರಕರಣ ದಾಖಲಿಸಿ ಹಣ ಸಂದಾಯ ಮಾಡುವಂತೆ ಗುರಿ ನಿಗದಿಪಡಿಸಿರಿವುದೇ ಇದಕ್ಕೆಲ್ಲ ಕಾರಣ.  ಸಿಕ್ಕ ಸಿಕ್ಕಲ್ಲಿ ವಾಹನ ನಿಲ್ಲಿಸಿ ಬರೆಹಾಕುವ ಪೊಲೀಸರು ಗುರಿಯನ್ನು ದಂಧೆಯಾಗಿ ಮಾಡಿಕೊಂಡಿರುವುದು ಸಾರ್ವಜನಿಕರ ಅಸಮಾಧಾನ 'ಟೀಕೆಗೂ ಗುರಿಯಾಗಿದೆ.

ಸಂಚಾರಿ ಪೊಲೀಸರು ಮುಖ ನೋಡಿ ಮಣೆ ಹಾಕುವ ಪ್ರವೃತ್ತಿಯನ್ನು ಮಾಡಿಕೊಂಡಿದ್ದಾರೆ . ಇಷ್ಟೆಲ್ಲ ನಡೆಯುತ್ತಿದ್ದರು  ಮೇಲಧಿಕಾರಿಗಳು ಜಾಣ ಮೌನಕ್ಕೆ ಜಾರಿದ್ದಾರೆ  

ಕಾಫಿ ಉದ್ಯಮದ ಸಂಕಷ್ಟ :ಮನವಿ ಸಲ್ಲಿಕೆ


 ಚಿಕ್ಕಮಗಳೂರು :ಕಾಫಿ ಉದ್ಯಮ ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಆಲ್ದೂರು ಬೆಳೆಗಾರರ ಸಂಘದ ಆಶ್ರಯದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು

ಉತ್ಪಾದನಾ ವೆಚ್ಚ ಹೆಚ್ಚಳ, ಬೆಲೆಯಲ್ಲಿ ಏರಿಳಿಕೆ ,ಕಾಡುಪ್ರಾಣಿಗಳ ಹಾವಳಿ ,ಅಕಾಲಿಕ ಮಳೆಯಿಂದ ಆಗಿರುವ ಹಾನಿ ಇನ್ನಿತರೆ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲಾಯಿತು .

ಉದ್ಯಮದ ಸಮಸ್ಯೆಯ ಅರಿವಿದ್ದು ಎಲ್ಲಾ ವಿವರಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ .ಸದ್ಯವೇ ಇದಕ್ಕೆ ಪರಿಹಾರ ಸಿಗಲಿದೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಭರವಸೆ ನೀಡಿದರು . ಬೆಳೆಗಾರರ ಸಂಘದ ಡಿ ಎಂ ವಿಜಯ್ ,ಸುರೇಶ್ ಇತರರು ಇದ್ದರು .

ಬುಧವಾರ, ಜನವರಿ 27, 2021

ಎಂ ಕೆ ಪ್ರಾಣೇಶ್ ಗೆ ಒಲಿದ ಉಪಸಭಾಪತಿ ಸ್ಥಾನ


 ಚಿಕ್ಕಮಗಳೂರು: ವಿಧಾನಪರಿಷತ್ ಉಪ ಸಭಾಪತಿ ಸ್ಥಾನ ಮತ್ತೆ ಕಾಫಿನಾಡು ಚಿಕ್ಕಮಗಳೂರಿಗೆ ಒಲಿದಿದೆ .

ಎಸ್. ಎಲ್. ಧರ್ಮೇಗೌಡ ಆತ್ಮಹತ್ಯೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು ನಾಳೆ ಎಂ.ಕೆ.ಪ್ರಾಣೇಶ್ ನಾಮಪತ್ರ ಸಲ್ಲಿಸಲಿದ್ದಾರೆ .

ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ ಪ್ರತಿನಿಧಿಸುತ್ತಿರುವ ಎಂ .ಕೆ .ಪ್ರಾಣೇಶ್  ಮೂಡಿಗೆರೆಯವರು .ಬಿಜೆಪಿ ಜಿಲ್ಲಾ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಸಭಾಪತಿ ಸ್ಥಾನ ಜೆಡಿಎಸ್ ನ ಬಸವರಾಜ್ ಹೊರಟ್ಟಿಗೆ ಲಭಿಸಲಿದ್ದು ಮತ್ತೆ  ಬಿಜೆಪಿ ಜೆಡಿಎಸ್ ಭಾಯಿ ಭಾಯಿ ಆಗಿದೆ 

ದೆಹಲಿ ಘಟನೆ ಹಿಂದೆ ಖಲಿಸ್ಥಾನವಾದಿಗಳ ಕೈವಾಡ: ಸಂಸದೆ ಶೋಭಾ ಕರಂದ್ಲಾಜೆ ಆರೋಪ


 ಚಿಕ್ಕಮಗಳೂರು: ನಿನ್ನೆ ದೆಹಲಿಯಲ್ಲಿ ನಡೆದ ಘಟನೆ ಹಿಂದೆ ಖಾಲಿಸ್ತಾನ್ ಚಳವಳಿ ಹಾಗೂ ಉಮರ್ ಖಾಲಿದ್ ಬೆಂಬಲಿಗರ ಕೈವಾಡವಿದ್ದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಸಂಸತ್ ಸದಸ್ಯ ಶೋಭಾ ಕರಂದ್ಲಾಜೆ ಹೇಳಿದ್ದಾರೆ .

ಸುದ್ದಿಗಾರರ ಜೊತೆ ಮಾತನಾಡಿದ ಅವರು  ನಿಜವಾದ ರೈತರು ಚಳವಳಿಯ ನಾಯಕತ್ವವನ್ನು ವಹಿಸಿಕೊಂಡಿಲ್ಲ.ಕೆಂಪುಕೋಟೆ ಹತ್ತಿದವರು ರೈತರಲ್ಲ. ತಾವು ಈ ಹಿಂದೆಯೇ ಇದರ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಾಗಿ ತಿಳಿಸಿದರು .

ರೈತರ ಹೆಸರಲ್ಲಿ ಹೋರಾಟವನ್ನು ದಿಕ್ಕು ತಪ್ಪಿಸುವ ವ್ಯವಸ್ಥಿತ ಯತ್ನ ನಡೆದಿದೆ. ಇದಕ್ಕೆ ರೈತರು ಬಲಿಯಾಗಬಾರದು ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು .

ಕಾಯ್ದೆಯಲ್ಲಿ ರೈತ ವಿರೋಧಿ ಅಂಶಗಳು ಇದ್ದರೆ ಚರ್ಚೆ ಮೂಲಕ ಬಗೆಹರಿಸಿಕೊಳ್ಳಲು, ತಿದ್ದುಪಡಿ ಮಾಡಲು ಸಾಧ್ಯವಿದೆ .ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ರೈತರು ಮಾತುಕತೆಗೆ ಬರುವಂತೆ ಮನವಿ ಮಾಡಿದ್ದಾರೆ .

ತೇಲಿ ಘಟನೆಗೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯ ವೈಫಲ್ಯವಿಲ್ಲ ಪೊಲೀಸರು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿದ್ದಾರೆ .ಘಟನೆ ಎಲ್ಲ ಮಗ್ಗಲುಗಳನ್ನೂ ಪರಿಶೀಲಿಸಿ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು .

ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ್ದು ಬಿಜೆಪಿಗರು ಎಂಬುದು ಸುಳ್ಳು ಆರೋಪ ಸರಿಯಲ್ಲ .ಇದೊಂದು ಅಪಪ್ರಚಾರ, ವ್ಯವಸ್ಥಿತ ಷಡ್ಯಂತ್ರ     ಇದೆ ಎಂದು ಆರೋಪಿಸಿದರು .

ಮಂಗಳವಾರ, ಜನವರಿ 26, 2021

ಮಲೆನಾಡ ಭಾಗದಲ್ಲಿ ಹಾರುವ ಕಪ್ಪೆ ಗೋಚರ


 ಚಿಕ್ಕಮಗಳೂರು: ಜಲ ಪಾದಗಳ ಸಹಾಯದಿಂದ ಎತ್ತರದ ಜಾಗದಿಂದ ತಗ್ಗು ಪ್ರದೇಶದ ಕಡೆಗೆ ಹಾರುವ ಕಪ್ಪೆಯೊಂದು ಕಾಣಿಸಿಕೊಂಡಿದೆ .

ಕೊಪ್ಪ ತಾಲೂಕಿನ ಗುಣವಂತೆಯ ಕೂಸು ವಳ್ಳಿಯ ಕಾರ್ತಿಕ್ ಅವರ ಮನೆಯ ಬಳಿ ಈ ಕಪ್ಪೆ ಗೋಚರಿಸಿದೆ .

ಮರದಿಂದ ನೆಲಕ್ಕೆ ಜಿಗಿದ ಕಪ್ಪೆಯು ಸ್ವಲ್ಪ ದೂರದವರೆಗೆ ಹಾರಿದೆ .ಪಕ್ಷಿಯೊಂದು ಅಟ್ಟಿಸಿಕೊಂಡು ಬಂದಾಗ ಕಪ್ಪೆ ಈ ರೀತಿ ಹಾರುವ ಮೂಲಕ ತನ್ನನ್ನು ರಚಿಸಿಕೊಂಡಿದೆ .

ಒಳ ಏಟುಗಳನ್ನು ಹತ್ತಿಕ್ಕಲು ಸಚಿವರ ಕರೆ


 ಚಿಕ್ಕಮಗಳೂರು: ದೇಶದ ಸಾರ್ವಭೌಮತೆಗೆ ಧಕ್ಕೆ ತರುತ್ತಿರುವ ಒಳ ಏಟುಗಳನ್ನು ನಾವೆಲ್ಲರೂ ಒಗ್ಗಟ್ಟಾಗಿ ಹತ್ತಿಕ್ಕಬೇಕಾಗಿದೆ ಎಂದು ಅರಣ್ಯ ಸಚಿವ ಲಿಂಬಾವಳಿ ಕರೆ ನೀಡಿದ್ದಾರೆ .

ಜಿಲ್ಲಾ ಆಟದ ಮೈದಾನದಲ್ಲಿ ಗಣರಾಜ್ಯೋತ್ಸವ ಸಂದೇಶ ನೀಡಿದ ಅವರು ಭಯೋತ್ಪಾದನೆ 'ಕೋಮು ದಳ್ಳುರಿ ಇನ್ನಿತರ ಅನೇಕ ಸಂಗತಿಗಳು ದೇಶದ ಸಾರ್ವಭೌಮತೆಗೆ ಅಪಾಯವನ್ನು ತಂದೊಡ್ಡುತ್ತವೆ ಎಂದು ಕಳವಳ ಹೊರಹಾಕಿದರು .

ಶಾಸಕ ಸಿ ಟಿ ರವಿ ,ವಿಧಾನ ಪರಿಷತ್ ಸದಸ್ಯ ಭೋಜೇಗೌಡ , ಜಿಲ್ಲಾ ಪರಿಷತ್ ಅಧ್ಯಕ್ಷೆ ಸುಜಾತಕೃಷ್ಣಪ್ಪ,ಉಪಾಧ್ಯಕ್ಷ ಸೋಮಶೇಖರ್  ಪಾಲ್ಗೊಂಡಿದ್ದರು .ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಆಧುನಿಕ ಬೈಕ್ ಗಳನ್ನು ವಿತರಿಸಲಾಯಿತು .



ಲಂಚ ಪ್ರಕರಣ : ಸಬ್ ರಿಜಿಸ್ಟಾರ್ ಗಂಗಾಧರ ಹೇಳಿದ್ದು ಏನು?


 ಚಿಕ್ಕಮಗಳೂರು :ಲಂಚ ಕೇಳದ ಬಗ್ಗೆ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್  ಹೇಳಿಕೆ

20ನೇ ತಾರೀಖು ವಾಟ್ಸಾಪ್ ಮೂಲಕ ಒಂದು ಕರೆ ಬಂದಿತ್ತು.24ನೇ ತಾರೀಖು ಸಚಿವರು ಬರ್ತಾರೆ ಸಿಗಿ ಎಂದರು

24 ನೇ ತಾರೀಖು ಬೆಳಗ್ಗೆ 10.30ಕ್ಕೆ ಫೋನ್ ಸಂಜೆ  ಸಿಗಲು ಹೇಳಿದ್ರು
ನಾನು ಸಂಜೆ 6 ಗಂಟೆಗೆ ಶೃಂಗೇರಿಯ ಆದಿಚುಂಚನಗಿರಿ ಸಭಾ ಭವನಕ್ಕೆ ಹೋದೆ 

ಅವರು 7.30ಕ್ಕೆ ಬಂದ್ರು ಅಲ್ಲೇ ಇದ್ದ ರೂಮಿಗೆ ಹೋದೆವು.
ಅವರು ಯಾರೆಂದು ಗೊತ್ತಿರಲಿಲ್ಲ ನಾನು ಮೊದಲೇ ಪೊಲೀಸರಿಗೆ ಅವರನ್ನ ತೋರಿಸಲು ಕೇಳಿದ್ದೆ

ಪೊಲೀಸರು ಇವರೇ ಕಂದಾಯ ಸಚಿವರ ಪಿಎ ಎಂದು ಹೇಳಿದ್ರು
ಪಕ್ಕದ ರೂಮಿಗೆ ಹೋದ ಕೂಡಲೇ ಏನಿದೆ ಕೊಡಿ ಎಂದರು

ನಾನು ನೇರವಾಗಿ ಹೇಳಿದೆ, ನಾನು ಕೊಡೋದಿಲ್ಲ, ತಗಳೋದು ಇಲ್ಲ ಎಂದು ನೇರವಾಗಿ ಹೇಳಿದೆ
ಆಮೇಲೆ ಆಯ್ತು ಹೋಗಿ ಎಂದರು 

ಕೈಯಲ್ಲಿದ್ದ ಪೇಪರ್ ನೋಡಿ ಏನದು ಎಂದು ಕೇಳಿದ್ರು.ಕರ್ನಾಟಕ ಸೆಕ್ರಟರಿಗೆ ಕಂಪ್ಲೇಟ್ ಮಾಡಿದ್ದೇನೆ ಈ ಲೆಟರ್ ಸಚಿವರಿಗೆ ಕೊಡಿ ಎಂದೇ

ಅದನ್ನ ನೀವೇ ಕೊಟ್ಟಿಕೊಳ್ಳಿ ಎಂದು ಹೇಳಿ ಹೋದರು.ನಿನ್ನೆ ರಾತ್ರಿ ವಾಟ್ಸಾಪ್ ಕಾಲ್ ಬಂದಿತ್ತು, ನಾನು ನೋಡಿರಲಿಲ್ಲ

ಇವತ್ತು ಬೆಳಗ್ಗೆ ಮತ್ತೆ ಕಾಲ್ ಮಾಡಿದ್ದೆ
ಫೈಲ್ ಕೊಡಲಿಲ್ಲ ಎಂದರು, ಯಾವ ಫೈಲ್ ಇಲ್ಲ. ನೀವು ಲಂಚ ಕೇಳಿದ್ರು ನಾನು ಕೊಡಲಿಲ್ಲ ಎಂದೆ

ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ, ಡ್ರಾಫ್ಟ್ ರೆಡಿ ಮಾಡುತ್ತಿದ್ದೇನೆ