udayanews

ಭಾನುವಾರ, ಜನವರಿ 31, 2021

ಗುಪ್ತಶೆಟ್ಟಿಹಳ್ಳಿ ಜನರಿಂದ ಪ್ರತಿಭಟನೆ


 ಚಿಕ್ಕಮಗಳೂರು:. ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಆಲ್ದೂರು ಸಮೀಪದ ಗುಪ್ತಶೆಟ್ಟಿ ಜನರು ಜಿಲ್ಲಾ ಕೇಂದ್ರದಲ್ಲಿ ದಿಢೀರ್ ಮುಷ್ಕರ ಆರಂಭಿಸಿದ್ದಾರೆ .

ತಮ್ಮ ಸ್ವಗ್ರಾಮದಲ್ಲಿ 2ದಿನ ಮುಷ್ಕರ ನಡೆಸಿದ ಹಳ್ಳಿಗರು ಬೇಡಿಕೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸದೇ ಇರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿಗೆ ಆಗಮಿಸಿ ಆಜಾದ್ ಮೈದಾನದಲ್ಲಿ ಮುಷ್ಕರ ಮುನ್ನಡೆಸಿದ್ದಾರೆ .

ಜಿಲ್ಲಾಧಿಕಾರಿ ಹರ್ಷಗುಪ್ತ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಮಧುಕರಶೆಟ್ಟಿ ಇದ್ದ ದಿನಗಳಲ್ಲಿ ಶ್ರೀಮಂತರ ಒತ್ತುವರಿಯನ್ನು ತೆರವುಗೊಳಿಸಿ ಮೃತರ ಕುಟುಂಬಗಳಿಗೆ ತಲಾ 2ಎಕರೆ ಜಮೀನನ್ನು ನೀಡಲಾಗಿತ್ತು.

ಅಂದು ಕೆಲವು ಸೌಲಭ್ಯಗಳನ್ನು ನೀಡಲು ಜಿಲ್ಲಾಡಳಿತ ಮುಂದಾಗಿದ್ದರು ನಂತರದ ದಿನಗಳಲ್ಲಿ ಸಂಪೂರ್ಣ ಕಡೆಗಣಿಸಲಾಗಿದೆ ಎನ್ನುವುದು ಮುಖ್ಯ ಆರೋಪ  .

ಕಳೆದ ಹಲವಾರು ವರ್ಷಗಳಿಂದ ಸೌಲಭ್ಯವಂಚಿತ ಈ ಜನರು ಅನೇಕ ಬಾರಿ ಪ್ರತಿಭಟನೆ ಮಾಡಿದ್ದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ನೀಡಿ ಕಾಲಹರಣ ಮಾಡುತ್ತಿದ್ದಾರೆ ಎನ್ನುವ ಆರೋಪ ಮುಷ್ಕರ ನಿರತರದು .

ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ದಿಢೀರ್ ಮುಷ್ಕರ ಹೂಡಿರುವುದು ಅಧಿಕಾರಿಗಳನ್ನು ಕಸಿವಿಸಿ ಗೊಳಿಸಿದ್ದು, ಮುಷ್ಕರ ಕೈ ಬಿಡುವಂತೆ ಮಾಡಿದ ಮನವಿಗೆ ಸ್ಪಂದಿಸಿಲ್ಲ .

ಶನಿವಾರ, ಜನವರಿ 30, 2021

ಗೋರಕ್ಷಕರಿಗೆ ಜಾಮೀನು: ಭವ್ಯ ಸ್ವಾಗತ


 ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತನಿಕೋಡು ಮತ್ತು ಆಗುಂಬೆ ಚೆಕ್ ಪೋಸ್ಟ್ ಬಳಿ ಅಕ್ರಮ ಗೋ ಸಾಗಣೆ ತಡೆದ ಪ್ರಕರಣ ಸಂಬಂಧ ನಾಲ್ವರು ಬಂಧನಕ್ಕೆ ಒಳಗಾಗಿದ್ದರು .

ಬಂಧಿತರಿಗೆ ಜಾಮೀನು ದೊರೆತು ಜೈಲಿನಿಂದ ಬಿಡುಗಡೆಯಾಗುವ ಸಂದರ್ಭದಲ್ಲಿ ಅವರನ್ನು ಬಜರಂಗದಳ ಕಾರ್ಯಕರ್ತರು ಸ್ವಾಗತಿಸಿದರು .

ರವಿ, ನಾಗೇಶ್, ಸಂಜಯ್, ಆದರ್ಶ್ ರವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು .

ಗೋಹತ್ಯೆ ನಿಷೇಧ ಕಾಯ್ದೆ:ಅರಿವು ಮೂಡಿಸಿ -ಸಚಿವ ಪ್ರಭು ಚವ್ಹಾಣ್


 ಚಿಕ್ಕಮಗಳೂರು ಜ 30 : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಯಾಗಿದ್ದು ಕಾಯ್ದೆಯ ಬಗ್ಗೆ ಜನಸಾಮಾನ್ಯರು, ರೈತರಲ್ಲಿ ಜಾಗೃತಿ ಮೂಡಿಸುವಂತೆ   ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಸಾಕಷ್ಟು ರೈತರು ಕರೆ ಮಾಡುತ್ತಿದ್ದು ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಕಾಲದಲ್ಲಿ ದೊರೆಯುತ್ತಿಲ್ಲ ಎಂದು ಹೇಳುತ್ತಿದ್ದು ವೈದ್ಯರು ತಕ್ಷಣ ಸ್ಪಂದಿಸಬೇಕೆಂದು ತಿಳಿಸಿದರು.

ಜಾನುವಾರುಗಳಿಗೆ ಸೂಕ್ತ ಔಷಧಿಗಳ ವ್ಯವಸ್ಥೆ ಇದ್ದರೂ ಕೆಲ ಪಶುವೈದ್ಯರು ಔಷಧಗಳನ್ನು ಹೊರಗಡೆಯಿಂದ ತರಲು ಚೀಟಿ ಬರೆದುಕೊಡುತ್ತಿರುವುದು  ಗಮನಕ್ಕೆ ಬಂದಿದೆ ಎಂದು  ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು .

ಎರಡು ಗೋಶಾಲೆ:ಪ್ರತಿ ತಾಲೂಕಿನಲ್ಲಿ ಗೋಮಾಳದ ಸ್ಥಳವನ್ನು ಗುರುತಿಸಿ ಗೋಶಾಲೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ತಿಳಿಸಿ ಖಾಸಗಿ ಗೋಶಾಲೆಗಳನ್ನು ತೆರೆಯಲು ಮುಂದಾದರೆ  ನೆರವಾಗಲು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚಿಂದ್ರ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರು ಪಾಲ್ಗೊಂಡಿದ್ದರು 


ರೈತ ಹೋರಾಟಕ್ಕೆ ಬೆಂಬಲಿಸಿ ಉಪವಾಸ ಸತ್ಯಾಗ್ರಹ


 ಚಿಕ್ಕಮಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಗೆ ಬೆಂಬಲಿಸಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯಿದೆ ವಿರೋಧಿಸಿ  ಇಲ್ಲಿನ ಗಾಂಧಿ ಉದ್ಯಾನವನದಲ್ಲಿ ಉಪವಾಸ ಸತ್ಯಾಗ್ರಹ ನಡೆಯಿತು . 

ವಿವಿಧ ಸಂಘಟನೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು .ಮತ್ತು ಕೊಪ್ಪ ತಾಲ್ಲೂಕಿನ ಹಾಗಲಗಂಜಿ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ನಡೆಸಿ ಹೋರಾಟವನ್ನು ಬೆಂಬಲಿಸಿದರು .

ಹುತಾತ್ಮ ದಿನಾಚರಣೆ: ಬಾಪೂಗೆ ನಮನ

ಚಿಕ್ಕಮಗಳೂರು,ಜ.೩೦: ರಾಷ್ಟ್ರಪಿತ ಮಹಾತ್ಮ ಗಾಂಧೀಯವರು ದೇಹ ತ್ಯಾಗ ಮಾಡಿದ ದಿನದ ಹಿನ್ನೆಲೆಯಲ್ಲಿ  ಜಿಲ್ಲಾಧಿಕಾರಿ ಕಛೇರಿ ಉದ್ಯಾನವನದಲ್ಲಿ  ಹುತಾತ್ಮರ ದಿನಾಚರಣೆ ಆಚರಿಸಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಪೂವಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹೆಚ್, ಅಪರ ಜಿಲ್ಲಾಧಿಕಾರಿ ಡಾ. ಕುಮಾರ್, ಉಪವಿಭಾಗಾಧಿಕಾರಿ ಹೆಚ್.ಎಲ್. ನಾಗರಾಜ್  ಮಹತ್ಮಾ ಗಾಂಧೀಜಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.
 

ವಿಧಾನಪರಿಷತ್ ನಲ್ಲಿ ಮೊಬೈಲ್ ನಿಷೇಧ -ಸಭಾಪತಿಗಳ ಜೊತೆ ಚರ್ಚೆ: ಪ್ರಾಣೇಶ್


 ಚಿಕ್ಕಮಗಳೂರು: ವಿಧಾನಪರಿಷತ್ ಗೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸುವ ಕುರಿತು ಸಭಾಪತಿಗಳ ಜತೆ ಚರ್ಚಿಸುವುದಾಗಿ ಪರಿಷತ್ ಉಪ ಸಭಾಪತಿ ಎಂ. ಕೆ .ಪ್ರಾಣೇಶ್ ತಿಳಿಸಿದ್ದಾರೆ  .

ಪಕ್ಷದ ಕಚೇರಿಯಲ್ಲಿ ನೀಡಿದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೂತೆ ಮಾತನಾಡಿದ ಅವರು  ಸದನಕ್ಕೆ ಮೊಬೈಲನ್ನು ತೆಗೆದುಕೊಂಡು ಹೋಗುವ ಅವಶ್ಯಕತೆಯೇ ಇಲ್ಲ .ತುರ್ತು ಸಂದರ್ಭ ಬಳಸಬೇಕಾದಲ್ಲಿ ಅದಕ್ಕಾಗಿಯೇ ಜಾಗವನ್ನು ಮೀಸಲಿಡಲಾಗಿದೆ ಎಂದರು ಉಪಸಭಾಪತಿ ಸ್ಥಾನ ಅನಿರೀಕ್ಷಿತವಾಗಿ ಒಲಿದಿದೆ ಸದನದ  ಘನತೆ ಗೌರವವನ್ನು ಕಾಪಾಡುವ ಹೊಣೆಗಾರಿಕೆ ನಮ್ಮ ಮೇಲಿದೆ .ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವುದಾಗಿ ಹೇಳಿದರು .

ಈ ಹಿಂದೆ ನಡೆದ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು .ಘಟನೆ ಸಂಬಂಧ ನೀಡಿರುವ ಮಧ್ಯಂತರ ವರದಿ ಬಗ್ಗೆ ಸಭಾಪತಿಗಳ ಜೊತೆ ಚರ್ಚಿಸಿದ್ದೇನೆ.  ಎಂದು ತಿಳಿಸಿದರು .

ಲಂಚಕ್ಕೆ ಬೇಡಿಕೆ :ಪ್ರಕರಣ ದಾಖಲು


 ಚಿಕ್ಕಮಗಳೂರು: ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಕಂದಾಯ ಸಚಿವ ಆರ್ ಅಶೋಕ್ ಅವರ ಮಾಜಿ ಪಿಎ ಗಂಗಾಧರ್ ವಿರುದ್ಧ ಶೃಂಗೇರಿ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂದಾಯ ಸಚಿವ ಆರ್ ಅಶೋಕ್ ಇದೇ ತಿಂಗಳ ೨೪ ರಂದು ಶೃಂಗೇರಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ  ಅವರ ಆಪ್ತ ಸಹಾಯಕ ಗಂಗಾಧರ್  ಶೃಂಗೇರಿಯ ಸಬ್ ರಿಜಿಸ್ಟರ್ ಚೆಲುವರಾಜ್ ಅವರಿಂದ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ .

ಈ ಸುದ್ದಿ ಮಾಧ್ಯಮ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಪ್ರಕಟವಾಗಿ ಸಚಿವರು ಹಾಗೂ ಬಿಜೆಪಿ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿತ್ತು .

ಈ ಹಿನ್ನೆಲೆಯಲ್ಲಿ ಸಚಿವರ ಆಪ್ತ ಸಹಾಯಕನನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು .

 ಈ ಮಧ್ಯೆ ಲಂಚ ಕೇಳಿದ ಆರೋಪದ ಬಗ್ಗೆ ಸಬ್ ರಿಜಿಸ್ಟರ್ ಠಾಣೆಗೆ ದೂರು ನೀಡಿದ್ದು ., ದೂರು ಹಿಂದೆ ಪಡೆಯುವಂತೆ ರಾಜಕೀಯ ಒತ್ತಡವೂ ಬಂದಿತ್ತು ಎನ್ನಲಾಗಿದೆ .ಕೊನೆಗೂ 3ದಿನಗಳ ಬಳಿಕ ಪ್ರಕರಣ ದಾಖಲಾಗಿದೆ .