udayanews

ಗುರುವಾರ, ಫೆಬ್ರವರಿ 4, 2021

ಹಿಂದೂ ಧರ್ಮದ ಅವಹೇಳನ :ಸಾಹಿತಿ ಭಗವಾನ್ ಮುಖಕ್ಕೆ ಮಸಿ


 ಬೆಂಗಳೂರು :ಹಿಂದೂ ಧರ್ಮ ಹಾಗೂ ಶ್ರೀರಾಮನ ಬಗ್ಗೆ ಸದಾ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಸಾಹಿತಿ ಪ್ರೊ.ಭಗವಾನ್  ಮುಖಕ್ಕೆ ವಕೀಲೆ ಮೀರಾ ರಾಘವೇಂದ್ರ ಇಂದು ಕೋರ್ಟ್ ಆವರಣದಲ್ಲೇ ಮಸಿ ಬಳಿದಿದ್ದಾರೆ.

ಪ್ರಕರಣ ಒಂದರಲ್ಲಿ ಜಾಮೀನು ಪಡೆಯಲು ಕೋರ್ಟ್ ಗೆ ಆಗಮಿಸಿದ್ದ ಭಗವಾನ್ ಮುಖಕ್ಕೆ ಮೀರಾ ರಾಘವೇಂದ್ರ ಮಸಿ ಬಳಿದು, ಇಷ್ಟು ವಯಸ್ಸಾಗಿದೆ ಸದಾ ದೇವರ ಬಗ್ಗೆ ರಾಮನ ಬಗ್ಗೆ ಮಾತಾಡ್ತಿರ ನಾಚಿಕೆ ಆಗಲ್ವಾ ನಿಮಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ  .

 ಈ ವೇಳೆ ಭಗವಾನ್ ಅರೆಸ್ಟ್ ಮಾಡಿ ಅವರನ್ನ ಅಂತಾರೆ. ಅದಕ್ಕೆ ಪ್ರತಿಕ್ರಿಯಿಸುವ ಮೀರಾ ರಾಘವೇಂದ್ರ ನಾನು ಎಲ್ಲದಕ್ಕೂ ರೆಡಿ, ಜೈಲಿಗೆ ಹೋಗಲೂ ಸಿದ್ಧ ಎಂದು ಹೇಳಿರುವುದು ದೃಶ್ಯದಲ್ಲಿ ಸೆರೆಯಾಗಿದೆ.

 ಇನ್ನು ಭಗವಾನ್ ರನ್ನು ಗನ್ ಮ್ಯಾನ್ ಹಾಗೂ ಪೊಲೀಸರು ಕೋರ್ಟ್ ಆವರಣದಿಂದ ಕರೆದೊಯ್ದಿದ್ದಾರೆ. ಭಗವಾನ್ ಈಗ ದೂರು ನೀಡಲು ಠಾಣೆಗೆ ತೆರಳಿದ್ದಾರೆ 

ಬುಧವಾರ, ಫೆಬ್ರವರಿ 3, 2021

ಶೃಂಗೇರಿ :ಅಪ್ರಾಪ್ತ ಬಾಲಕಿ . ಲೈಂಗಿಕ ದೌರ್ಜನ್ಯ ಪ್ರಕರಣ -ಕಾಂಗ್ರೆಸ್ ಪ್ರತಿಭಟನೆ-ಘಟನೆ ಖಂಡಿಸಿದ ಸಂಸದೆ


 ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು .

ಇದೊಂದು ಗಂಭೀರ ಪ್ರಕರಣವಾಗಿದೆ .ಇದರಲ್ಲಿ ಬಿಜೆಪಿ' ಭಜರಂಗದಳ ,ವಿಶ್ವಹಿಂದೂ ಪರಿಷತ್ತಿನ ನಂಟು ಹೊಂದಿರುವ ಅನೇಕ ವ್ಯಕ್ತಿಗಳು ಆರೋಪಿಗಳಾಗಿದ್ದಾರೆ ಎಂದು ಟೀಕಿಸಿದರು .

ರಾಜಕೀಯ ಒತ್ತಡ ತಂದು ಪ್ರಕರಣವನ್ನು  ಮೂಲೆಗುಂಪಾಗಿಸುವ ಯತ್ನವೂ ನಡೆದಿದೆ ಎಂದು ಶಂಕಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್, ಮಾಜಿ ಅಧ್ಯಕ್ಷ ವಿಜಯ ಕುಮಾರ್, ಮಹಿಳಾ ಘಟಕದ ರೇಖಾ ಹುಲಿಯಪ್ಪ ,ರಾಷ್ಟ್ರೀಯ ಕಾರ್ಯದರ್ಶಿ ಸಂದೀಪ್ ಇತರರು ನೇತೃತ್ವ ವಹಿಸಿದ್ದರು .

ಈ ಮಧ್ಯೆ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಂಸತ್ ಸದಸ್ಯೆ ಶೋಭಾ ಕರಂದ್ಲಾಜೆ ಘಟನೆ ನಡೆದ ದಿನವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ    ದೂರವಾಣಿಯಲ್ಲಿ ಮಾತನಾಡಿ ತನಿಖೆಗೆ ಸೂಚಿಸಿದ್ದೇನೆ ಎಂದಿದ್ದಾರೆ .

 ಸೂಕ್ಷ್ಮ ಪ್ರಕರಣವಾಗಿದ್ದು ಮಾಧ್ಯಮಗಳಲ್ಲಿ ಹೇಳಿಕೆ ನೀಡುವುದು ಸರಿ


ಯಲ್ಲ ಎಂದು ಭಾವಿಸಿದ್ದು . ಆರೋಪಿ ಚಿಕ್ಕಮ್ಮನ ಬಗ್ಗೆ ವಿಶೇಷ ತನಿಖೆ ನಡೆಯಬೇಕಾದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ .

ಮಂಗಳವಾರ, ಫೆಬ್ರವರಿ 2, 2021

ದೇವಸ್ಥಾನದ ನೋಂದಣಿ ಕಡ್ಡಾಯ: ಹೆಚ್.ಎಲ್ ನಾಗರಾಜ್


 ಚಿಕ್ಕಮಗಳೂರು,ಫೆ.೦೨: ದಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳನ್ನು ಹೊರತುಪಡಿಸಿ ಖಾಸಗಿ ಹಿಂದೂ ದೇವಸ್ಥಾನಗಳು ಒಂದು ತಿಂಗಳ ಒಳಗಾಗಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು, ನೋಂದಣಿ ಮಾಡಿಕೊಳ್ಳಲು ನಿರಾಕರಿಸಿದ್ದಲ್ಲಿ ಅಂತಹ ದೇವಸ್ಥಾನದ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ತಿಳಿಸಿದರು. 

ಧಾರ್ಮಿಕ ದತ್ತಿ ಸಮಿತಿ ೨೦೧೧ರ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಧಾರ್ಮಿಕ ದತ್ತಿ ಆಯುಕ್ತರ ಸುತ್ತೋಲೆ ೨೦೧೫ ರಂತೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ೨೦೧೧ ರನ್ನೊಳಗೊಂಡಂತೆ ಕಲಂ-೫೩ ರ ಅಡಿಯಲ್ಲಿ ಆಯಾಯ ಸಹಾಯಕ ಆಯುಕ್ತರು ನೋಂದಣಿ ಮಾಡುವುದು ಕಡ್ಡಾಯವಾಗಿರುತ್ತದೆ,
 ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳನ್ನು ಹೊರತುಪಡಿಸಿ ಪ್ರತಿಯೊಂದು ಖಾಸಗಿ ಹಿಂದೂ ದೇವಸ್ಥಾನಗಳು ನೋಂದಣಿ ಮಾಡಿಕೊಳ್ಳಬೇಕು. 
ನೋಂದಣಿ ಮಾಡಿಕೊಂಡ ದೇವಸ್ಥಾನಗಳಿಗೆ ಅರ್ಚಕರನ್ನು ನೇಮಿಸಿ ಗ್ರೇಡ್‌ಗಳನ್ನು ನೀಡಲಾಗುತ್ತದೆ ಎಂದರು.

ಪತ್ರಕರ್ತರ ಬಂಧನ ಖಂಡಿಸಿ ನಾಳೆ ಬೆಂಗಳೂರಿನಲ್ಲಿ ಪ್ರತಿಭಟನೆ

ಚಿಕ್ಕಮಗಳೂರು :ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ ಸುದ್ದಿ /ಲೇಖನ ಬರೆಯುತ್ತಿರುವ ,ಚರ್ಚೆಗಳಲ್ಲಿ ಪಾಲ್ಗೊಳ್ಳುವ ಪತ್ರಕರ್ತರ ಮೇಲೆ ಎಫ್ ಐಆರ್ ದಾಖಲಿಸಿ ಬಂಧಿಸುತ್ತಿರುವ ಕ್ರಮವನ್ನು ಖಂಡಿಸಿ ನಾಳೆ ಸಮಾನ ಮನಸ್ಕರ ವೇದಿಕೆ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ .

ನಾಳೆ ( ಜ೩) ಸಂಜೆ 5 ಗಂಟೆಗೆ ಬೆಂಗಳೂರಿನ  ಅಲ್ಯುಮಿನಿಯಂ ಹಾಲ್ ಬಳಿ  ಪ್ರತಿಭಟನೆ ನಡೆಯಲಿದ್ದು , ಪತ್ರಕರ್ತ ಮಿತ್ರರು ,ಪ್ರಗತಿಪರ ಚಿಂತಕರು , ಹೋರಾಟ ಬೆಂಬಲಿಸುವ ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ 

ಸೋಮವಾರ, ಫೆಬ್ರವರಿ 1, 2021

ಆರೋಪಿಗಳನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಕೊಲ್ಲಬೇಕು :ಮೋಹಿನಿ ಸಿದ್ದೇಗೌಡ ಆಕ್ರೋಶ



 ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದಿರುವ ಲೈಂಗಿಕ ಪ್ರಕರಣದ ಆರೋಪಿಗಳನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಕೊಲ್ಲಬೇಕು ಎಂದು ಸಾಂತ್ವನ ಕೇಂದ್ರದ ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ ಆಕ್ರೋಶ ಹೊರಹಾಕಿದ್ದಾರೆ .

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ಪ್ರಕರಣದ ಬಗ್ಗೆ ತೀವ್ರ ಬೇಸರ ಹೊರಹಾಕಿದ್ದಾರೆ .ಈ ಕೃತ್ಯಕ್ಕೆ ಮುಖ್ಯ ಕಾರಣಕರ್ತರಾಗಿರುವ ಬಾಲಕಿಯ ಚಿಕ್ಕಮ್ಮ ನ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ 

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಮಹಿಳೆಯರಿಗೆ ರಕ್ಷಣೆ ಇಲ್ಲದ ಸ್ಥಿತಿ ಇನ್ನೂ ಇದೆ ಎಂದು ವಿಷಾದಿಸಿದ ಮೋಹಿನಿ ಸಿದ್ದೇಗೌಡ ,ಕೋರ್ಟು ,ಕಚೇರಿ ,ವಕೀಲರು ಎಂದು ಆರೋಪಿಗಳು ಹೊರಬರುವ ಸಾಧ್ಯತೆಗಳು ಇದೆ ಎಂದು ಹೇಳಿದರು .


ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ :ಪೊಲೀಸ್ ಅಧಿಕಾರಿ ಹೇಳಿದ್ದೇನು ?



 ಚಿಕ್ಕಮಗಳೂರು: ಇತ್ತೀಚೆಗೆ ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಕುರಿತು ಹೆಚ್ಚುವರಿ ಪೊಲೀಸ್ ಅಧಿಕಾರಿ ಶ್ರುತಿ ಹೇಳಿದ್ದು ಹೀಗೆ .

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 7 ಜನ ಅಂದರ್



 ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸರು ಈವರೆಗೆ 7 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ .

ಶೃಂಗೇರಿಯಲ್ಲಿ ತನ್ನ ಚಿಕ್ಕಮ್ಮ ಗೀತಾರವರ ಮನೆಯಲ್ಲಿ ವಿದ್ಯಾಭ್ಯಾಸಕ್ಕೆ ಇದ್ದ ಬಾಲಕಿ ಕ್ರಷರ್ ಕೆಲಸಕ್ಕೆ ಹೋಗುತ್ತಿದ್ದು ಅಲ್ಲಿ ನಿಶ್ಚಿತ ಬಸ್ಸಿನ ಚಾಲಕ ಯೋಗೀಶ್ ಪರಿಚಯವಾಗಿದೆ ಎಂದು ಹೆಚ್ಚುವರಿ ರಕ್ಷಣಾಧಿಕಾರಿ ಶ್ರುತಿ ತಿಳಿಸಿದ್ದಾರೆ .

    ಬಳಿಕ ಈಕೆಯನ್ನು ಮುಖ್ಯ ಆರೋಪಿ ಅಭಿಗೆ ಪರಿಚಯ ಮಾಡಿಕೊಟ್ಟಿದ್ದು ಆತ ತನ್ನ ಸ್ನೇಹಿತರಿಗೂ ಈಕೆಯ ಪರಿಚಯ ಮಾಡಿಕೊಟ್ಟಿದ್ದಾನೆ .

ಆಕೆಯನ್ನು ಚೆನ್ನಾಗಿ ಬಳಸಿಕೊಂಡ ಅಭಿ ಆಕೆಯ ಭಾವಚಿತ್ರ ತೆಗೆದು ವಿಡಿಯೋ ದೃಶ್ಯಗಳನ್ನು ಮಾಡಿ ಬ್ಲಾಕ್ಮೇಲ್ ಮಾಡಿದ್ದಾನೆ


ಎಂದು ತಿಳಿಸಿದ್ದಾರೆ .

ಕಳೆದ ತಿಂಗಳಿ ೫ ತಿಂಗಳಿನಿಂದ  ಈ ಪ್ರಕರಣ ನಡೆದಿದ್ದು , ಆರಂಭದಲ್ಲಿ ಪೊಲೀಸರಿಗೆ ದೂರು ನೀಡಲು ಹೆದರಿದ ಯುವತಿ ಕೊನೆಗೂ ಶಿಶು ಅಭಿವೃದ್ಧಿ ಅಧಿಕಾರಿಗಳಲ್ಲಿ  ಅಳಲನ್ನು ತೋಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ನೀಡಿದ ದೂರು ಆಧರಿಸಿ ೧೩ ಜನರ ಮೇಲೆ ಪ್ರಕರಣವನ್ನು ದಾಖಲಿಸಿದ್ದು ಈವರೆಗೆ ೧೩ ಜನರನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ .

ಅಭಿಷೇಕ್, ಗಿರೀಶ್, ಮಣಿಕಂಠ' ಅಶ್ವತ್ಥ್ ರಾಜೇಶ್, ಸಂತೋಷ್ ಮತ್ತು ಗೀತಾರನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ .

ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ವಾಂತನ ಕೇಂದ್ರದ ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ ಇದೊಂದು ಗಂಭೀರ ಪ್ರಕರಣವಾಗಿದ್ದು ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಯಾವುದೇ ಕಾರಣಕ್ಕೆ ಅವರು ಹೊರ ಬರಬಾರದು ಎಂದು ಒತ್ತಾಯಿಸಿದ್ದಾರೆ .

ಪ್ರಕರಣದಲ್ಲಿ ಭಜರಂಗದಳದ ಮುಖಂಡರ ಹೆಸರುಗಳು ಮುಖ್ಯವಾಗಿ ಕೇಳಿಬರುತ್ತಿದ್ದು , ಕಾಂಗ್ರೆಸ್ ಪಕ್ಷವು ಈ ನಿಟ್ಟಿನಲ್ಲಿ ತನಿಖೆಗೆ ಒತ್ತಾಯಿಸಿದೆ . ಶೃಂಗೇರಿ ಶಾಸಕ ಟಿ. ಡಿ .ರಾಜೇಗೌಡ ಪ್ರಕರಣದ ತನಿಖೆಗೆ ಆಗ್ರಹಿಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ .

ಉಳಿದ ಆರೋಪಿಗಳ ಬಂಧನಕ್ಕೆ 2ತಂಡಗಳನ್ನು ರಚಿಸಲಾಗಿದೆ .