udayanews

ಸೋಮವಾರ, ಫೆಬ್ರವರಿ 8, 2021

ಅಕ್ರಮ ಮರ ಕಡಿತಲೆ ಆರೋಪ :ನಾಲ್ವರು ಅಧಿಕಾರಿಗಳ ವಿರುದ್ಧ ದೂರು ಸಲ್ಲಿಕೆ


 ಚಿಕ್ಕಮಗಳೂರು: ಅಕ್ರಮ ಮರ ಕಡಿತಲೆ ಆರೋಪದ ಮೇಲೆ ನಾಲ್ವರು ಅರಣ್ಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಲಾಗಿದೆ .

ಮೂಡಿಗೆರೆ ತಾಲ್ಲೂಕಿನ ಬಾಳೂರು ಮೀಸಲು ಅರಣ್ಯದಲ್ಲಿ ಖಾಸಗಿ ಭೂಮಿಯಲ್ಲಿ ಮರ ಕಡಿತಲೆ ಮಾಡಲು ಪರವಾನಗಿಯನ್ನು ಪಡೆದು ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮರವನ್ನು ಕಡಿಯಲಾಗಿದೆ ಎಂದು ಆರೋಪಿಸಲಾಗಿದೆ .
ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪನ್ವಾರ್ ,ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ , ಮೂಡಿಗೆರೆ ಮತ್ತು ಕಳಸ ವಲಯ ಅರಣ್ಯಾಧಿಕಾರಿಗಳ ವಿರುದ್ಧ ರಾಮನಗರದ ದಿನೇಶ್ ಕಲ್ಲಹಳ್ಳಿ ಎಂಬುವರು ದೂರನ್ನು ಸಲ್ಲಿಸಿದ್ದಾರೆ .
ಕಳೆದ ಕೆಲ ದಿನಗಳಿಂದ ಈ ಪ್ರಕರಣ ಜಿಲ್ಲೆಯಲ್ಲಿ ಸುದ್ದಿ ಮಾಡುತ್ತಿದ್ದರು ಅರಣ್ಯ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಯಾವುದೇ ಪ್ರತಿಕ್ರಿಯೆಯನ್ನು ಈವರೆಗೂ ನೀಡಿಲ್ಲ .

ಶನಿವಾರ, ಫೆಬ್ರವರಿ 6, 2021

ಕೃಷಿ ಕಾಯ್ದೆ ವಿರೋಧಿಸಿ ರಕ್ತದಲ್ಲಿ ಸಹಿ ಹಾಕಿ ಪತ್ರ ಚಳವಳಿ



 ಚಿಕ್ಕಮಗಳೂರು: ರೈತರ ಪಾಲಿಗೆ ಮರಣ ಶಾಸನವಾಗಿರುವ ಕೃಷಿ  ಕಾಯ್ದೆಯನ್ನು ತಕ್ಷಣ ರದ್ದುಪಡಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರಿನಲ್ಲಿ ರಕ್ತ ಸಹಿ ಪತ್ರ ಚಳವಳಿ ನಡೆಯಿತು .

ಆಲ್ದೂರು ಹೋಬಳಿ ಕಾಫಿ ಬೆಳೆಗಾರರ ಒಕ್ಕೂಟದ ಮುಖಂಡ ವಿಜಯ್ ನೇತೃತ್ವದಲ್ಲಿ ಅಂಚೆ ಕಚೇರಿ ಬಳಿ ಜಮಾಯಿಸಿದ ರೈತರು ಕೃಷಿ ಕಾಯ್ದೆಯನ್ನು ವಿರೋಧಿಸಿ ಪತ್ರಕ್ಕೆ ರಕ್ತದಲ್ಲಿ ಸಹಿ ಮಾಡಿ ಪ್ರಧಾನಿಗೆ ಪತ್ರವನ್ನು ಪೋಸ್ಟ್ ಮಾಡಿದರು .ಇನ್ನೊಂದೆಡೆ ಹಿರೇಮಗಳೂರಿನಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ರಸ್ತೆ  ತಡೆ ಚಳವಳಿ ನಡೆಯಿತು .ಇದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು .


ಶುಕ್ರವಾರ, ಫೆಬ್ರವರಿ 5, 2021

ನಾಟಕ ಅಕಾಡಮಿ ಪ್ರಶಸ್ತಿ ಪ್ರಕಟ


 ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ 2020ನೇ ಸಾಲಿನ ಪ್ರಶಸ್ತಿ ಘೋಷಣೆಯಾಗಿದೆ.

ಜೀವಮಾನದ ರಂಗಗೌರವ ಪ್ರಶಸ್ತಿಗೆ ನಟ, ನಾಟಕಕಾರ, ನಿರ್ದೇಶಕ ಎಸ್.ಎನ್.ಸೇತೂರಾಂ ಆಯ್ಕೆಯಾಗಿದ್ದಾರೆ. ವಾರ್ಷಿಕ ಪ್ರಶಸ್ತಿಗೆ 25 ಮಂದಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಮಾರ್ಚ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನಡೆಯಲಿದೆ.

ಜೀವಮಾನದ ರಂಗಗೌರವ ಪ್ರಶಸ್ತಿ

1. ಶ್ರೀ ಎಸ್.ಎನ್.ಸೇತೂರಾಂ, ಬೆಂಗಳೂರು

ವಾರ್ಷಿಕ ರಂಗಪ್ರಶಸ್ತಿ

1. ಸಂತೋಷ ಕುಮಾರ ಕುಸನೂರು, ಕಲಬುರ್ಗಿ

2. ಎಂ.ಇಸ್ಮಾಯಿಲ್ ಸಾಬ್, ರಾಯಚೂರು

3. ಭರಮಪ್ಪ ಜುಟ್ಲದ, ಕೊಪ್ಪಳ

4. ಮಾ.ಭ.ಸೋಮಣ್ಣ, ಹೊಸಪೇಟೆ, ಬಳ್ಳಾರಿ

5. ಗೆಣಿಕೆಹಾಳು ತಿಮ್ಮನಗೌಡ ಮೇಲುಸೀಮೆ, ಬಳ್ಳಾರಿ

6. ಗುರುಬಸಪ್ಪ ಕಲ್ಲಪ್ಪ ಸಜ್ಜನ, ವಿಜಯಪುರ

7. ಹಣಮವ್ವ ಗಾಜರ ಕುಳಲಿ, ಬಾಗಲಕೋಟೆ

8. ಪಿ ಢಗಳಚಂದ್ರ ಪವಾರ, ಬಾಗಲಕೋಟೆ

9. ಉಮಾದೇವಿ ಹಿರೇಮಠ, ಗದಗ

10. ಬಸವರಾಜ ಬ ಕಡ್ಲೆಣ್ಣನವರ, ಧಾರವಾಡ

11. ಐರಣಿ ಬಸವರಾಜ, ದಾವಣಗೆರೆ

12. ನೂರಜಹಾನ ಗೊರಜಿನಾಳ್, ಚಿತ್ರದುರ್ಗ

13. ಮಹಾವೀರ ಜೈನ್, ಚಿಕ್ಕಮಗಳೂರು

14. ಅಶ್ವತ್ಥ ಕದಂಬ, ಮೈಸೂರು

15. ಚಂದ್ರಶೇಖರಯ್ಯ ಎಂ.ಆರ್., ಕೊಡಗು

16. ಧನ್ಯಕುಮಾರ, ಮಂಡ್ಯ

17. ವೆಂಕಟರಮಣಸ್ವಾಮಿ, ಚಾಮರಾಜನಗರ

18. ಶ್ರೀನಿವಾಸ ಪ್ರಭು ಉಪ್ಪುಂದ, ಉಡುಪಿ

19. ರೋಹಿಣಿ ಜಗರಾಂ, ಮಂಗಳೂರು

20. ಕೆ.ಎನ್.ವಾಸುದೇವ ಮೂರ್ತಿ, ಬೆಂಗಳೂರು ಗ್ರಾಮಾಂತರ

21. ವಿ.ಲಕ್ಷ್ಮೀಪತಿ, ಬೆಂಗಳೂರು ನಗರ

22. ಎಂ.ಎಸ್.ವಿದ್ಯಾ, ಬೆಂಗಳೂರು ನಗರ

23. ಮಂಜುಳಾ ಬಿ.ಎನ್. ಬೆಂಗಳೂರು ನಗರ

24. ಗೀತಾ ಸುರತ್ಕಲ್, ಬೆಂಗಳೂರು ನಗರ

25. ಬಾಬು ಹಿರಣ್ಣಯ್ಯ, ಬೆಂಗಳೂರು ನಗರ

ಕಲ್ಚರ್ಡ್ ಕೆಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ: ಮಾ.ಭಾಸ್ಕರ, ಬೆಂಗಳೂರು

ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ : ವೆಂಕಣ್ಣ ಕಾಮನೂರು, ಕೊಪ್ಪಳ

ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿ : ಅನ್ನಪೂರ್ಣ ಹೊಸಮನಿ, ಧಾರವಾಡ

ಕೆ.ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರ: ರಂಗಸಂಪದ, ಬೆಳಗಾವಿ

ಶ್ರೀಮತಿ ಮಾಲತಿಶ್ರೀ,ಮೈಸೂರು ದತ್ತಿನಿಧಿ ಪುರಸ್ಕಾರ: ಸುನಂದಾ ಹೊಸಪೇಟೆ, ಧಾರವಾಡ

ಅತ್ಯಾಚಾರಿಗಳಿಗೆ ರಕ್ಷಣೆ ಆರೋಪ :ತನಿಖಾಧಿಕಾರಿ ಅಮಾನತು


 ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳಿಗೆ ರಕ್ಷಣೆ ನೀಡಿದ್ದಾರೆಂಬ ಆರೋಪದ ಮೇಲೆ ತನಿಖಾಧಿಕಾರಿ ಸಿದ್ದರಾಮಪ್ಪನ ಅವರನ್ನು ಅಮಾನತುಪಡಿಸಲಾಗಿದೆ .

    ಕೆಲವರನ್ನು ಮಾತ್ರ ಈವರೆಗೆ ಬಂಧಿಸಿದ್ದು ಉಳಿದವರನ್ನು  ಬಂಧಿಸುವಲ್ಲಿ  ಮೀನಮೇಷ ಎಣಿಸುತ್ತಿದ್ದು , ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಇವರ ವಿರುದ್ಧ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ದೂರು ನೀಡಿದ್ದರು .

ಪೊಲೀಸರು ಬಾಲಕಿಯನ್ನು ರಕ್ಷಿಸಿದಾಗ ಸಮಿತಿ ಗಮನಕ್ಕೆ ತಂದಿಲ್ಲ. ದೂರು ನೀಡಿ 2ದಿನ ಕಳೆದಿದ್ದರು ಪ್ರಕರಣ ದಾಖಲಿಸಿರಲಿಲ್ಲ ಎಂದು ಆರೋಪಿಸಲಾಗಿತ್ತು.

ಈ ಪ್ರಕರಣದಲ್ಲಿ ಬಿಜೆಪಿ ಹಾಗೂ ಅದರ ಅಂಗ ಸಂಸ್ಥೆಯ ಅನೇಕ ಕಾರ್ಯಕರ್ತರು ಆರೋಪಿಗಳಾಗಿರುವುದು ಕಾಲ ಗಮನಾರ್ಹ ಸಂಗತಿಯಾಗಿದೆ .ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಹಾಗೂ ತನಿಖಾಧಿಕಾರಿ  ಅಮಾನತಿಗೆ  ಒತ್ತಾಯಿಸಿ ಕಾಂಗ್ರೆಸ್  ಘಟಕದ ವತಿಯಿಂದ ಶೃಂಗೇರಿ ಠಾಣೆಮುಂದೆ ಬೃಹತ್ ಪ್ರತಿಭಟನೆ ನಡೆದು ಮುತ್ತಿಗೆ ಹಾಕುವ ಯತ್ನ ನಡೆದಿತ್ತು. 

 

ಅತ್ಯಾಚಾರಿಗೆ ಶಾಸಕರ ಸಖ್ಯ !!? -ಪೊಲೀಸ್ ರಕ್ಷಣೆ ?


 ಚಿಕ್ಕಮಗಳೂರು: ತಾಲೂಕಿನ ಮಲ್ಲಂದೂರು ಠಾಣೆ ವ್ಯಾಪ್ತಿಯಲ್ಲಿ ದಲಿತ ಯುವತಿ ಮೇಲೆ ಅತ್ಯಾಚಾರ ಪ್ರಕರಣವೊಂದು ನಡೆದಿದ್ದು ದೂರು ನೀಡಿ 15 ದಿನ ಕಳೆದರೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. 

ಆರೋಪಿ ಸಂಸದೆ ಶೋಭಾ ಕರಂದ್ಲಾಜೆ ,ಶಾಸಕರಾದ ಸಿ ಟಿ ರವಿ, ಪ್ರಾಣೇಶ್ ಜೂತೆ ಗುರುತಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ .ಈ ದತ್ತ ಜಯಂತಿಯಲ್ಲಿ ಪಾಲ್ಗೊಂಡಿದ್ದು ಕೇಸರಿ ರುಮಾಲು ರಾರಾಜಿಸುತ್ತಿದೆ !

ಆವತಿ ಗ್ರಾಮದ ಎಚ್ ಟಿ ಮಲ್ಲೇಶ್ ಎಂಬಾತ ತನ್ನ ತೋಟಕ್ಕೆ ಕೂಲಿಗೆಂದು ಯುವತಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದು , ಆಕೆ ಈಗ ಗರ್ಭಿಣಿಯಾಗಿದ್ದಾಳೆ .ಈ ಸಂಬಂಧ ಮಲ್ಲಂದೂರು ಠಾಣೆ ಕೆಲ ದಿನಗಳ ಹಿಂದೆ ದೂರು ನೀಡಲಾಗಿದೆ . ಈವರೆಗೂ ಆರೋಪಿಯನ್ನು ಬಂಧಿಸದೆ ತಲೆಮರೆಸಿಕೊಂಡಿದ್ದಾನೆ ಎಂದು ಹೇಳುತ್ತ ಪರೋಕ್ಷವಾಗಿ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ .

ಆರೋಪಿಯನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಬಹುಜನ ಸಮಾಜ ಪಕ್ಷದ ಕೆ ಟಿ ರಾಧಾಕೃಷ್ಣ ಒತ್ತಾಯಿಸಿದ್ದಾರೆ.

ತನಿಖಾಧಿಕಾರಿ ಬದಲಾವಣೆಗೆ ಆಗ್ರಹ : ಈ ಮಧ್ಯೆ ಶೃಂಗೇರಿಯಲ್ಲಿ ಯುವತಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಸಿದ್ದರಾಮಪ್ಪಅವರನ್ನು  ಬದಲಿಸ ಬೇಕೆಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಜಿಲ್ಲಾ ರಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ .

t

ಗುರುವಾರ, ಫೆಬ್ರವರಿ 4, 2021

ಭಗವಾನ್ ಮೇಲೆ ಹಲ್ಲೆ: ಸದಸ್ಯತ್ವ ಕಿತ್ತು ಹಾಕಲು ಅಮೀನ್ ಮಟ್ಟು ಒತ್ತಾಯ

 


ಸೈದ್ಧಾಂತಿಕ ವಿರೋಧಿಗಳ ಹತ್ಯೆ, ಅವರ ಮೇಲೆ ಹಲ್ಲೆ,ದೌರ್ಜನ್ಯ, ಮಸಿಬಳಿಯುವ ಹೀನ ಕೃತ್ಯವನ್ನು ಯಾರೇ ನಡೆಸಿದರೂ ಖಂಡನೀಯ . ಇದು ವೈಚಾರಿಕವಾಗಿ ವಿರೋಧಿಸಲಾಗದವರ ಸೈದ್ಧಾಂತಿಕ ದಿವಾಳಿತನ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಿಸಿದ್ದಾರೆ .     

ಭಗವಾನ್ ಅವರನ್ನು ಟೀಕಿಸುವವರು ದಯವಿಟ್ಟು ಬಾಬಾಸಾಹೇಬ್ ಅಂಬೇಡ್ಕರ್  ಬರವಣಿಗೆಗಳನ್ನು ಓದಬೇಕು .  ಹಿಂದೂ ದೇವರು-ಧರ್ಮ, ರಾಮ-ಕೃಷ್ಣರನ್ನು  ಕಟುವಾಗಿ ಬಾಬಾಸಾಹೇಬ್ ಅಂಬೇಡ್ಕರ್ ವಿಶ್ಲೇಷಿಸಿದ್ದಾರೆ ಎನ್ನುವುದನ್ನೂ ನಾವು ಗಮನಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ .ವಕೀಲೆ ಮೀರಾ ರಾಘವೇಂದ್ರ  ಮಸಿ ಬಳಿದದ್ದು ಕೆ.ಎಸ್.ಭಗವಾನ್ ಅವರಿಗಲ್ಲ, ಅವರ ವಕೀಲಿ ವೃತ್ತಿಗೆ ಅದಕ್ಕಿಂತಲೂ ಮಿಗಿಲಾಗಿ ನ್ಯಾಯಾಂಗಕ್ಕೆ. ನ್ಯಾಯಾಲಯದ ಆವರಣದಲ್ಲಿ ಕಕ್ಷಿದಾರರ ಮೇಲೆ ಹಲ್ಲೆ ನಡೆಸುವುದು ಕ್ರಿಮಿನಲ್ ಅಪರಾಧ. ಈ ಕೃತ್ಯವನ್ನು ವಕೀಲರೇ ನಡೆಸಿದರೆ ಅದಿನ್ನೂ ಘೋರ ಕ್ರಿಮಿನಲ್ ಅಪರಾಧ  ಎಂದು ಕಳವಳ ಹೊರಹಾಕಿದ್ದಾರೆ .

ಕೆ.ಎಸ್. ಭಗವಾನ್ ಅವರು ಮೀರಾ ರಾಘವೇಂದ್ರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈಗ ಚೆಂಡು ಹೈಕೋರ್ಟ್ ಅಂಗಳದಲ್ಲಿದೆ. ಹೈಕೋರ್ಟ್ ಮುಖ್ಯನ್ಯಾಯಾಧೀಶರು ತಕ್ಷಣ ವಕೀಲೆ ಮೀರಾ ರಾಘವೇಂದ್ರ ಅವರ ನೋಂದಣಿಯನ್ನು ರದ್ದುಪಡಿಸಬೇಕು. ವೃತ್ತಿ ಸಂಹಿತೆಯನ್ನು ಉಲ್ಲಂಘಿಸಿರುವ ವಕೀಲೆಯ ಬಾರ್ ಕೌನ್ಸಿಲ್ ಸದಸ್ಯತ್ವವನ್ನು ಕಿತ್ತುಹಾಕಬೇಕು ಎಂದು ಒತ್ತಾಯಿಸಿದ್ದಾರೆ .

ಭಗವಾನ್ ಮುಖಕ್ಕೆ ಮಸಿ : ಸಚಿವ ಲಿಂಬಾವಳಿ ಖಂಡನೆ


 ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಮುಖಕ್ಕೆ  ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ  ಇದು ದುರಾದೃಷ್ಟಕರ ಘಟನೆ ಎಂದು ಖಂಡಿಸಿದ್ದಾರೆ .

 ತಾತ್ವಿಕ ಬಿನ್ನಾಭಿಪ್ರಾಯ ದೈಹಿಕ ಹಲ್ಲೆ , ಹಿಂಸೆ ರೂಪ ತಾಳಬಾರದು ,ಮಸಿ ಬಳಿಯವುದು ಕನ್ನಡದ ಸಂಸ್ಕೃತಿ ಅಲ್ಲಎಂದು ಹೇಳಿದ್ದಾರೆ.

ಕ್ರಮಕ್ಕೆ ಒತ್ತಡ :ಸಾಹಿತಿ ಭಗವಾನ್ ಮೇಲೆ ಹಲ್ಲೆ ನಡೆಸಿರುವ ವಕೀಲೆ  ಮೀರಾ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ಅಧಿಕವಾಗಿದೆ .

ನ್ಯಾಯಾಲಯದ ಆವರಣದಲ್ಲೇ ಇಂತಹ ಕೃತ್ಯಕ್ಕೆ ಮುಂದಾಗಿರುವ ಇವರ ಸದಸ್ಯತ್ವವನ್ನು ರದ್ದು ಮಾಡಬೇಕು. ಈ ನಿಟ್ಟಿನಲ್ಲಿ  ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ  ಬರೆಯಬೇಕು ಎಂಬ ಒತ್ತಾಯವೂ ಕೇಳಿಬಂದಿದೆ .