udayanews

ಗುರುವಾರ, ಫೆಬ್ರವರಿ 11, 2021

ಹಲ್ಲೆ ನೆಡಸಿ ೧೫ ದಿನವಾದರೂ ಕ್ರಮವಿಲ್ಲ !?



ಚಿಕ್ಕಮಗಳೂರು : ಪಾನಮತ್ತನತ್ತನಾಗಿ ಬಂದ ವ್ಯಕ್ತಿಯೋರ್ವ  ಹಲ್ಲೆ ನಡೆಸಿ 15 ದಿನವಾದರೂ ಪೋಲಿಸರು  ಕ್ರಮಕೈಗೊಂಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ .

ಮೂಡಿಗೆರೆ ತಾಲೂಕಿನ ಕಣಚೂರಿನಲ್ಲಿಪ್ರಸನ್ನ ಎಂಬಾತ ತಮ್ಮ  ಮೇಲೆ  ಹಲ್ಲೆ   ನಡೆಸಿರುವುದಾಗಿ ಗೋಣಿಬೀಡು ಪೊಲೀಸರಿಗೆ ಪುಟ್ಟಸ್ವಾಮಿ  ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ .

 ಇನ್ನೂ ಎಫ್ ಐ ಅರ್ ದಾಖಲು ಮಾಡದಿದ್ದು ,ಹಲ್ಲೆಯಿಂದ ತೀವ್ರ ಗಾಯಗೊಂಡಿರುವ  ಪುಟ್ಟಸ್ವಾಮಿ ಹಾಸಿಗೆ ಹಿಡಿದಿದ್ದಾರೆ .


ಶೃಂಗೇರಿ ಅತ್ಯಾಚಾರ ಪ್ರಕರಣ :ಬಂಧಿತರ ಸಂಖ್ಯೆ 14ಕ್ಕೆ ಏರಿಕೆ


 ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ .

ಚಾಲಕ ಯತೀಶ್ ಬಂಧಿತ ಆರೋಪಿಯಾಗಿದ್ದು ,ಈತ ಬಾಲಕಿಗೆ ಪದೇಪದೆ ಕರೆ ಮಾಡಿ  ಕಿರುಕುಳ ನೀಡುತ್ತಿದ್ದ ಆರೋಪವಿದೆ .

ಈ ಮಧ್ಯೆ ಬಾಲಕಿ ೨೦೦ ಕ್ಕೂ ಅಧಿಕ  ಸಂಖ್ಯೆಗಳನ್ನು  ಬ್ಲ್ಯಾಕ್ ಲಿಸ್ಟ್ ನಲ್ಲಿ ಸೇರಿಸಿದ್ದು ಆ ಕುರಿತು ತನಿಖೆ ನಡೆಯುತ್ತಿದೆ .ಇನ್ನೊಂದು ಪ್ರಕರಣ : ಈ ಮಧ್ಯೆ ಮೂಡಿಗೆರೆ ತಾಲ್ಲೂಕಿನ ಬಾಳೂರು ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ ನಡೆದಿದ್ದು ಆರೋಪಿಯನ್ನು ಬಂಧಿಸಲಾಗಿದೆ .

ಶೃಂಗೇರಿ ಪ್ರಕರಣದ ಸಮಗ್ರ ತನಿಖೆ ಹಾಗೂ ಉಳಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾ ಕೇಂದ್ರದಲ್ಲಿ ವಿವಿಧ ಸಂಘಟನೆಗಳು ನಿತ್ಯ ಪ್ರತಿಭಟನೆ ನಡೆಸುತ್ತಿರುವುದು ಗಮನಾರ್ಹ .

ಗಡಿರೇಖೆಯ ಮರಗಳಿಗೆ ಕತ್ತರಿ :7ಜನ ಅಮಾನತು


 ಚಿಕ್ಕಮಗಳೂರು :ಮಾಫಿ ಪಾಸ್ ಹೆಸರಿನಲ್ಲಿ  ಗಡಿರೇಖೆಯ ಸುಮಾರು ಮರಗಳನ್ನು ಕಡಿದ ಆರೋಪದ ಮೇಲೆ ೭ ಜನ ಅರಣ್ಯ ನೌಕರರನ್ನು ಅಮಾನತು ಪಡಿಸಲಾಗಿದೆ .

ಮೂಡಿಗೆರೆ ತಾಲ್ಲೂಕಿನ ಬಾಳೂರು  ಮೀಸಲು ಅರಣ್ಯ ಪ್ರದೇಶದಲ್ಲಿ  ಮಾಫಿ ಪಾಸ್ ಹೆಸರಿನಲ್ಲಿ ೩೫೦ ಕ್ಕೂ ಹೆಚ್ಚು ಮರಗಳನ್ನು  ಕಡಿಯಲಾಗಿತ್ತು  ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು .

ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೂ ಅಧಿಕಾರಿಗಳ ವಿರುದ್ಧ ದೂರನ್ನು ನೀಡಲಾಗಿತ್ತು . ಪ್ರಕರಣದ ಪ್ರಾಥಮಿಕ ವರದಿ ಹಾಗೂ ನಿಷ್ಪಕ್ಷಪಾತ ತನಿಖೆ ಉದ್ದೇಶದಿಂದ ೭ ಜನರನ್ನು ಅಮಾನತು ಪಡಿಸಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ .

ಚಿಕ್ಕಮಗಳೂರು ವಿಭಾಗದ ಪ್ರಭಾರಿ ಸರ್ವೆ ರೇಂಜರ್ ದಿನೇಶ್ ,ಫಾರೆಸ್ಟರ್ ಗಳಾದ ಮಧುಸೂದನ್, ಶಿವರಾಜನಾಯಕ್ ಮೂಡಿಗೆರೆ ಉಪ ವಿಭಾಗದ ಅರಣ್ಯ ರಕ್ಷಕ ಸುರೇಶ್ ,ಕೊಪ್ಪ ವಿಭಾಗದ ಫಾರೆಸ್ಟರ್ ಯಾಸಿನ್ ಬಾಷಾ ,ಅರಣ್ಯ ರಕ್ಷಕ ನವೀನ್ ಕುಮಾರ್ ,ಸರ್ವೆ ಫಾರೆಸ್ಟರ್  ಅರುಣ್ ಕುಮಾರ್  ಅಮಾನತುಗೊಂಡಿದ್ದು , ಪ್ರಕರಣದ ಕೂಲಂಕಷ ತನಿಖೆಗೆ ಆದೇಶಿಸಲಾಗಿದೆ .

ಬುಧವಾರ, ಫೆಬ್ರವರಿ 10, 2021

ಅತ್ಯಾಚಾರ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ


 ಚಿಕ್ಕಮಗಳೂರು :ಶೃಂಗೇರಿ ಹಾಗೂ ಮಲ್ಲಂದೂರಿನಲ್ಲಿ ಅಪ್ರಾಪ್ತ  ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ  ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಯಿತು .

ಆಜಾದ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸ್ಕ್ವೇರ್ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳನ್ನು ಬಂಧಿಸದೆ ರಕ್ಷಣೆ ನೀಡಲಾಗುತ್ತದೆ, ಮಲ್ಲಂದೂರಿನ ಆರೋಪಿಯನ್ನು ಈವರೆಗೂ ಬಂಧಿಸಿಲ್ಲ ಎಂದು ಆರೋಪಿಸಿದರು .

 ಶೃಂಗೇರಿ ಪ್ರಕರಣದಲ್ಲಿ ಓರ್ವ ಅಧಿಕಾರಿಯನ್ನು ಅಮಾನತು ಮಾಡಿದರೆ ಮತ್ತೊಬ್ಬರನ್ನು ಎತ್ತಂಗಡಿ ಮಾಡಲಾಗಿದೆ.ಅಧಿಕಾರಿಗಳು ಪ್ರಭಾವಕ್ಕೆ ಮಣಿದಿರುವುದನ್ನು ಇದು ಸೂಚಿಸುತ್ತದೆ ಎಂದು ಟೀಕಿಸಿದರು. 

ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಇಲ್ಲವಾದಲ್ಲಿ  ಚಳವಳಿಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು .

ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ


 ಚಿಕ್ಕಮಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಚಿಕ್ಕಮಗಳೂರಿನಲ್ಲಿ ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಯಿತು .

ಪೆಟ್ರೋಲ್, ಡೀಸೆಲ್ ,ಅಡುಗೆ ಅನಿಲ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ .ಇದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ.  ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು .

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್ ಎಚ್ ದೇವರಾಜ್, ಹೊಲಗದ್ದೆ ಗಿರೀಶ್ ಇತರರು ಪಾಲ್ಗೊಂಡಿದ್ದರು .

ಮಂಗಳವಾರ, ಫೆಬ್ರವರಿ 9, 2021

ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಹೊಸ ಸಸ್ಯ ಪ್ರಭೇದ ಪತ್ತೆ


 ಚಿಕ್ಕಮಗಳೂರು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಾಧಿಕಾರಿ ವಾಹನ ಚಾಲಕ ಮಂಜುನಾಥ್  .ಬಿ ,ಮುಳ್ಳಯ್ಯನಗಿರಿ ಭಾಗದಲ್ಲಿ ಕಂಡುಬರುವ ವಿಶಿಷ್ಟ  ಆರ್ಕಿಡ್ ಸಸ್ಯ ( ಸೀತಾಳೆಹೂವಿನ ಪ್ರಭೇದ ) ಪತ್ತೆಮಾಡಿದ್ದಾರೆ .ಕೇರಳದ ವಯನಾಡುವಿನಲ್ಲಿ ಡಾ.ಕೆ .ವಿ ಜಾರ್ಜ್ ಎಮರಿಟ್  ಸಸ್ಯ ತಜ್ನ್ಯ ಪತ್ತೆಮಾಡಿದ್ದರು . ವೈಭಿಯ ಜಾತಿಗೆ ಸೇರಿದ ಸಸ್ಯ .

ತೇವಾಂಶ ಬರೀತಾ ಕಾಡು ಶೋಲಾ ಕಾಡಿನಲ್ಲಿ ಹುಟ್ಟುತ್ತದೆ .ಡಿಸೆಂಬರ್ ನಲ್ಲಿ ಚಿಗುರಿ ,ಫೆಬ್ರವರಿ ಯಲ್ಲಿ ಹೂವು ಬಿಡುತ್ತದೆ .
ಮಂಜುನಾಥ್ ಸಸ್ಯಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ,ವಿಶಿಷ್ಟ ಸಸ್ಯ ಪ್ರಭೇದಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.
##ಕರ್ನಾಟಕ ಅರಣ್ಯ ಇಲಾಖೆ 
##ಪ್ರವಾಸೋದ್ಯಮ 
#ಚಿಕ್ಕಮಗಳೂರು ಫಾರೆಸ್ಟ್ 
#chikmagalur  forest

ಸೋಮವಾರ, ಫೆಬ್ರವರಿ 8, 2021

ಸೌಂದರ್ಯದ ಗಣಿ : ಕ್ಯಾತನಮಕ್ಕಿ


 ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ವಾಸಿ ಸ್ಥಳ ಕ್ಯಾತನಮಕ್ಕಿ .

ನಿಸರ್ಗದ ಸೌಂದರ್ಯವನ್ನೆಲ್ಲ ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಪ್ರಶಾಂತ ಸ್ಥಳ .

 ವಾರದ ರಜಾ ದಿನ ಕಳೆಯಲು ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ .ಅರಣ್ಯ ಇಲಾಖೆ ಇದೀಗ 50 ರೂ ಶುಲ್ಕ ವಿಧಿಸುತ್ತಿದೆ .

#ಚಿಕ್ಕಮಗಳೂರು ಪ್ರವಾಸೋದ್ಯಮ

#ಕರ್ನಾಟಕ ಪ್ರವಾಸೋದ್ಯಮ 

#chikmagalur tourist spot