udayanews

ಭಾನುವಾರ, ಫೆಬ್ರವರಿ 21, 2021

ಗಿರಿ ಸ್ವಚ್ಚತೆ :ರಾಶಿ ರಾಶಿ ಕಸ ಸಂಗ್ರಹ


 ಚಿಕ್ಕಮಗಳೂರು:ಜಿಲ್ಲಾ ಆಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ  ಗಿರಿ ಸ್ವಚ್ಛತಾ ಆಂದೋಲನದ ನಡೆಯಿತು .

ಸೂರ್ಯ ಮೂಡುವ ಮೊದಲೇ ಆಂದೋಲನಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಅಕ್ಷಯ್ ಹಾಕೆ ಚಾಲನೆ ನೀಡಿದರು  .

ಪ್ರವಾಸೋದ್ಯಮ ಇಲಾಖೆ, ಸೇವಾದಳ ,ಬ್ರಹ್ಮಕುಮಾರಿ ಸಂಸ್ಥೆ ,ಗೃಹರಕ್ಷಕದಳ ,ಪಶುಪಾಲನಾ ಇಲಾಖೆ ,ಎನ್ ಸಿಸಿ ಸೇರಿದಂತೆ ವಿವಿಧ ಸಂಘಟನೆಗಳ ಅಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು .

ಕೈಮರದಿಂದ ಮುಳ್ಳಯ್ಯನಗಿರಿ ವರೆಗೆ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಬೆಳಗಿನ ಚಳಿಯನ್ನು ಲೆಕ್ಕಿಸದೆ ನೂರಾರು ಜನ ಪಾಲ್ಗೊಂಡಿದ್ದರು . 

ರಸ್ತೆಯ ಇಕ್ಕೆಲ ಸೇರಿದಂತೆ ಬೆಟ್ಟದ ತಪ್ಪಲಿನಲ್ಲಿ ಬಿದ್ದಿದ್ದ ರಾಶಿ ರಾಶಿ ಕಸವನ್ನು ಸಂಗ್ರಹಿಸಲಾಯಿತು. ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಪರಿಸರವನ್ನು ಸ್ವಚ್ಛ ವಾಗಿ ಇಡುವಂತೆ ಇದೇ ಸಂದರ್ಭದಲ್ಲಿ  ಅರಿವು ಮೂಡಿಸಲಾಯಿತು .     

## ಚಿಕ್ಕಮಗಳೂರು ಜಿಲ್ಲಾಡಳಿತ ##ಪ್ರವಾಸೋದ್ಯಮ ಇಲಾಖೆ ##ಪೊಲೀಸ್ ಇಲಾಖೆ ##chikmagalur tourism .

## Karnataka tourism 

ಚಿತ್ರಕೃಪೆ :ತಾರನಾಥ್ ಕಾಮತ್ 

ಶನಿವಾರ, ಫೆಬ್ರವರಿ 20, 2021

ರಸ್ತೆ ನಿರ್ಮಿಸದೆ ಬಿಲ್ ಪಾವತಿ :ಭಾರಿ ಭ್ರಷ್ಟಾಚಾರ ಶಂಕೆ



 ಚಿಕ್ಕಮಗಳೂರು :ನಗರದ ಐಡಿಎಸ್ ಜಿ ಕಾಲೇಜು ಆವರಣದ ಹೆಲಿಪ್ಯಾಡ್ ಗೆ ರಸ್ತೆ ನಿರ್ಮಿಸದಿದ್ದರೂ 19.38 ಲಕ್ಷ ರೂ ಬಿಲ್ ಪಾವತಿಸಿರುವ ಹಗರಣ ಬೆಳಕಿಗೆ ಬಂದಿದೆ .

ದಾಖಲೆ ಸಮೇತ ಈ ಹಗರಣವನ್ನು ಬೆಳಕಿಗೆ ತಂದಿರುವ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ರಸೂಲ್ ಖಾನ್  ಕಾಮಗಾರಿಗೆ ೨೧ ಲಕ್ಷ ರೂ ಗುತ್ತಿಗೆ ನೀಡಲಾಗಿತ್ತು. ಆದರೆ ರಸ್ತೆಯನ್ನು ನಿರ್ಮಿಸಿಲ್ಲ .ಹೀಗಿದ್ದೂ ಲೋಕೋಪಯೋಗಿ ಇಲಾಖೆಯಿಂದ ಹಣ ಪಾವತಿಸಲಾಗಿದೆ ಎಂದು ಆರೋಪಿಸಿದ್ದಾರೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಉಡಾಫೆ ಉತ್ತರವನ್ನು ನೀಡುತ್ತಾರೆ ಎಂದು ಹೇಳಿರುವ ಅವರು ಈ ಬಗ್ಗೆ ಲೋಕಾಯುಕ್ತ ಹಾಗೂ ಎಸಿಬಿಗೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಪ್ರಕರಣದಲ್ಲಿ ಗುತ್ತಿಗೆದಾರನ ಗಮನಕ್ಕೆ ಬಾರದೆ ಬೇರೊಬ್ಬರಿಗೆ ಹಣ ಪಾವತಿಯಾಗಿರುವುದು ಅಚ್ಚರಿ ಮೂಡಿಸಿದೆ .

ಲೋಕೋಪಯೋಗಿ ಇಲಾಖೆಯಿಂದ ನಡೆದಿರುವ ಕಾಮಗಾರಿಗಳ ಸಮಗ್ರ ತನಿಖೆ ನಡೆದರೆ ಇನ್ನಷ್ಟು ಹಗರಣ ಬೆಳಕಿಗೆ ಬರುವ ಸಾಧ್ಯತೆಗಳು ಇವೆ  .

ಶುಕ್ರವಾರ, ಫೆಬ್ರವರಿ 19, 2021

ರಾಜ್ಯದ ಹಲವೆಡೆ ಆಲಿಕಲ್ಲು ಮಳೆ: ರೈತ ಕಂಗಾಲು


 ಚಿಕ್ಕಮಗಳೂರು :ರಾಜ್ಯದ ಅನೇಕ ಕಡೆಗಳಲ್ಲಿ ಇಂದು ಅಕಾಲಿಕ ಆಲಿಕಲ್ಲು ಮಳೆ ಬಿದ್ದಿದೆ .

ಮಡಿಕೇರಿ ಹಾಗೂ ಹಾಸನ ಜಿಲ್ಲೆಯ ಅನೇಕ ಕಡೆಗಳಲ್ಲಿ ಭಾರೀ  ಪ್ರಮಾಣದಲ್ಲಿ ಆಲಿ ಕಲ್ಲುಬಿದ್ದಿದ್ದು ಕೃಷಿಕರು ಕಂಗಲಾಗಿದ್ದಾರೆ .

ರಾಶಿ ರಾಶಿ ಆಲಿಕಲ್ಲುಗಳು ಬಿದ್ದಿದ್ದು ನೆಲಕ್ಕೆ ಹಿಮ ಹೊದಿಸಿದ ಅನುಭವ ಆಗಿದೆ .ಇದನ್ನು ನೋಡಿ ಜನ ಪುಳಕಿತಗೊಂಡಿದ್ದರೆ ಕೃಷಿಕರಿಗೆ ಮುಂದೇನು ಎಂಬ ಆತಂಕ ಎದುರಾಗಿದೆ .

ರಾಶಿ ರಾಶಿ ಬಿದ್ದ ಆಲಿಕಲ್ಲುಗಳನ್ನು ಕೆಲವರು ಪುಟ್ಟಿಗಳಲ್ಲಿ ಸಂಗ್ರಹಿಸಿದರೆ , ಕೆಲವರು ಹಾರೆ ಮೂಲಕ ಎಳೆದು ಹಾಕಿದ್ದಾರೆ. 

ಇನ್ನೂ ಹಲವೆಡೆ ರಸ್ತೆಗಳಲ್ಲಿ ಮಲ್ಲಿಗೆ ಹೂ ಹಾಸಿದಂತೆ ಆಲಿಕಲ್ಲು ಬಿದ್ದಿರುವುದು ಕಂಡುಬಂದಿದೆ .ಹೂಕುಂಡಗಳಲ್ಲಿ ಉಪ್ಪನ್ನು ರಾಶಿ ಹಾಕಿದಂತೆ ಕಾಣಿಸುತ್ತಿದೆ .


ಚಿಕ್ಕಮಗಳೂರು :ವಿವಿಧೆಡೆ ರಥಸಪ್ತಮಿ


 ಚಿಕ್ಕಮಗಳೂರು :ರಥಸಪ್ತಮಿ ಅಂಗವಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇಂದು ಸೂರ್ಯ ನಮಸ್ಕಾರ ನಡೆಯಿತು .

ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಸೂರ್ಯ ನಮಸ್ಕಾರ ನಡೆಯಿತು .

 ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಗಳು ಓಂ ಆಕೃತಿಯಲ್ಲಿ ನಿಂತು ಗಮನ ಸೆಳೆದರು .

 ಮಕ್ಕಳನ್ನು ಓಂ ಆಕಾರದಲ್ಲಿ ನಿಲ್ಲಿಸಿ ಸೂರ್ಯ ಗಾಯಿತ್ರಿ ಮಂತ್ರ ಹೇಳಿ ಕೊಡಲಾಯಿತು . ದೈಹಿಕ ಶಿಕ್ಷಕ  ದಿನಕರ್ , ಕಾರ್ಯದರ್ಶಿ ಶಂಕರ್, 
ಪ್ರಾಂಶುಪಾಲ ರಾಘವೇಂದ್ರ ಸೂರ್ಯ ನಮಸ್ಕಾರದ ಬಗ್ಗೆ  ತಿಳಿಸಿದರು.
*ಚಿತ್ರ ತಾರನಾಥ್ ಕಾಮತ್ 
 

ಬುಧವಾರ, ಫೆಬ್ರವರಿ 17, 2021

ಸಹಕಾರ ಸಾರಿಗೆ ಚಾಲಕ ಆತ್ಮಹತ್ಯೆ

 

ಚಿಕ್ಕಮಗಳೂರು: ಸಹಕಾರ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಗೋಪಾಲ ಪೂಜಾರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ .

ಸಾರಿಗೆ ಸಂಸ್ಥೆಯಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಸಂಸ್ಥೆಯಲ್ಲಿ 3ಲಕ್ಷ ರೂ ಸಾಲ ಮಾಡಿದ್ದರು ಎನ್ನಲಾಗಿದೆ .ಕಳೆದ 2ದಿನಗಳಿಂದ ಅವರು ಮನೆಗೆ ಬರದೆ ತಮ್ಮನ ಮನೆಯಲ್ಲಿ ಇದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ .

ಸಹಕಾರ ಸಾರಿಗೆ ತನ್ನ ಸಂಚಾರವನ್ನು ನಿಲ್ಲಿಸಿ 1ವರ್ಷ ಕಳೆದಿದ್ದು ಸಮಸ್ಯೆ ಈವರೆಗೂ ಬಗೆಹರಿದಿಲ್ಲ .ಸಂಸ್ಥೆಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಸರ್ಕಾರವೂ ಸ್ಪಂದಿಸಿಲ್ಲ .

ಮಂಗಳವಾರ, ಫೆಬ್ರವರಿ 16, 2021

ಕುಮಾರಸ್ವಾಮಿ ಆರೋಪ ದಲ್ಲಿ ಹುರುಳಿಲ್ಲ: ಸಿಟಿ ರವಿ ಪ್ರತಿಕ್ರಿಯೆ


 ಚಿಕ್ಕಮಗಳೂರು :ರಾಮಮಂದಿರಕ್ಕೆ ಹಣ ನೀಡದವರ ಮನೆಗಳಿಗೆ ಗುರುತು ಹಾಕುತ್ತಾರೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಮಾಜಿ ಸಚಿವ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ  ಪ್ರತಿಕ್ರಿಯೆ ನೀಡಿರುವ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯ ಉದ್ದೇಶದಿಂದ ಈ ಆರೋಪ ಮಾಡಿದ್ದಾರೆ. ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಸಾರಾಸಗಟಾಗಿ ತಳ್ಳಿಹಾಕಿದರು .

ರಾಮಮಂದಿರಕ್ಕೆ ಜನ ಸ್ವಯಂಪ್ರೇರಿತರಾಗಿ ಹಣವನ್ನು ನೀಡಿದ್ದಾರೆ ಇಚ್ಛೆ ಇದ್ದವರು ಕೊಡಬಹುದು .ಅನಗತ್ಯ ಆರೋಪ ಮಾಡಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದರು.

## ಎಚ್ ಡಿ ಕುಮಾರಸ್ವಾಮಿ 

## jds karnataka

ಸೋಮವಾರ, ಫೆಬ್ರವರಿ 15, 2021

ರಾಮಮಂದಿರಕ್ಕೆ ಹಣ ನೀಡದವರ ಮನೆಗಳಿಗೆ ಗುರುತು: ಕುಮಾರಸ್ವಾಮಿ ಆರೋಪ


 "ರಾಮಮಂದಿರಕ್ಕಾಗಿ ಹಣ  ಕೊಡದವರ  ಮನೆಗಳನ್ನು ಗುರುತು ಮಾಡುತ್ತಿರುವುದು ಗಮನಕ್ಕೆ ಬಂದಿದ್ದು ಇದು ಹಿಟ್ಲರ್ ಆಡಳಿತ ನೆನಪಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ . 

ಶಿವಮೊಗ್ಗದಲ್ಲಿ ಮಾತನಾಡಿದ ಅವರು ಹಿಟ್ಲರ್ ಕಾಲದಲ್ಲಿ ನಾಜಿ, ಮತ್ತು ಜ್ಯೂ ಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು.   ಆ ದಿನಗಳಲ್ಲೂ ಇದೇ ರೀತಿ ಮನೆಗಳಿಗೆ ಗುರುತು ಹಾಕಲಾಗುತ್ತಿತ್ತು   ಇದು ಎಲ್ಲಿಗೆ ಹೋಗುತ್ತೆ ? ಯಾತಕ್ಕೆ ಮನೆಗಳನ್ನು ಗುರುತು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ  ? 

ಆರ್ ಎಸ್ ಎಸ್ ಹುಟ್ಟಿದ್ದು ಜರ್ಮನಿಯಲ್ಲಿ. ನಾಜಿ ಹುಟ್ಟಿದ  ಕಾಲದಲ್ಲೇ ಎಂದು ಚರಿತ್ರಾಕಾರರು ಹೇಳುತ್ತಾರೆ.  ಆ ನೀತಿಗಳನ್ನೆ ಮುಂದುವರೆಸಿದರೆ  ಮುಂದೇನಾಗುತ್ತದೆ ಎನ್ನುವ ಭೀತಿ ಆವರಿಸಿದೆ ಎಂದು ಕಳವಳ ಹೊರಹಾಕಿದ್ದಾರೆ . 

ದೇಶದಲ್ಲಿ ಮಾತಾಡುವ ಮೂಲಭೂತ ಹಕ್ಕನ್ನೆ ಕಸಿಯುತ್ತಿದ್ದಾರೆ.ಸ್ವತಂತ್ರವಾಗಿ ಯಾರೂ ಭಾವನೆಗಳನ್ನೆ ವ್ಯಕ್ತಪಡಿಸಲು ಸಾಧ್ಯವಿಲ್ಲ.  ಅಘೋಷಿತ ತುರ್ತು ಪರಿಸ್ಥಿತಿ ಇದೆ  ವಾತಾವರಣ ನೋಡಿದಾಗ ಮುಂದೆ ದೇಶದಲ್ಲಿ ಏನು ಬೇಕಾದರೂ ಆಗಬಹುದು ಎಂದಿದ್ದಾರೆ.