udayanews

ಗುರುವಾರ, ಮಾರ್ಚ್ 11, 2021

ಟಾಯ್ಲೆಟ್ ಮುಂದೆ ಸೆಲ್ಫಿ !!


 ಚಿಕ್ಕಮಗಳೂರು :ಶೀರ್ಷಿಕೆ ನೋಡಿ ಅಚ್ಚರಿಯಾಗಬಹುದು .

ತರೀಕೆರೆಯ ಸಾರ್ವಜನಿಕ ಶೌಚಾಲಯ ನೋಡಿದಾಗ ಯಾರಿಗಾದರೂ 1ಸೆಲ್ಫಿ ತೆಗೆದುಕೊಳ್ಳುವ ಮನಸ್ಸಾಗದೆ ಇರದು .

ಸಾರ್ವಜನಿಕ ಶೌಚಾಲಯಗಳೆಂದರೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ಇಂದಿಗೂ ಇದೆ . ನಿರ್ವಹಣೆ ಕೊರತೆ ಇದಕ್ಕೆ ಮುಖ್ಯ ಕಾರಣ .

ತರೀಕೆರೆಯಲ್ಲಿ ಇರುವ ಸಾರ್ವಜನಿಕ 11 ಶೌಚಾಲಯಗಳು ಇದಕ್ಕೆ ಭಿನ್ನ .  ಆಕರ್ಷಕ ಬಣ್ಣ ಹೊಡೆದು ಪ್ರಾಣಿ ಪಕ್ಷಿ ಸೇರಿದಂತೆ ವಿವಿಧ ಚಿತ್ತಾರಗಳನ್ನು ಬಿಡಿಸಿದ್ದು ಸಾರ್ವಜನಿಕರ ಗಮನ ಸೆಳೆಯುತ್ತಿವೆ .

ಹೊರಗಷ್ಟೇ ಸುಂದರವಲ್ಲ .ಒಳಗೂ ಅಚ್ಚುಕಟ್ಟಾಗಿ ಶುಚಿತ್ವ ಕಾಪಾಡಲಾಗಿದೆ.     ಶೌಚಾಲಯ ಬಳಸಿದವರು ಸೆಲ್ಫಿ ತೆಗೆದುಕೊಂಡು ಹೋಗುವುದು ಸಾಮಾನ್ಯ  .ಇದರ ಹಿಂದಿನ ರೂವಾರಿ ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಮತ್ತವರ ಸಿಬ್ಬಂದಿ.


 

ಬುಧವಾರ, ಮಾರ್ಚ್ 10, 2021

ಸಿಡೀ ಹಗರಣ :ಕಾನೂನು ತಂದರೆ ವಿಧಾನಸೌಧದಲ್ಲಿ ಕೊಠಡಿ ಬುಕ್ -ಮಲಾಲಿ ವ್ಯಂಗ್ಯ


 ಚಿಕ್ಕಮಗಳೂರು: ರಾಸಲೀಲೆ ಸೇರಿದಂತೆ ರಾಜಕಾರಣಿಗಳ ವಿರುದ್ಧ ಸುಳ್ಳು ಆರೋಪ ಹೊರಿಸಿ ಸೀಡಿಗಳನ್ನು ಬಿಡುಗಡೆ ಮಾಡುವುದನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಕಾನೂನು ಜಾರಿಗೆ ತರುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮಲಾಲಿ ಅಭಿಪ್ರಾಯಿಸಿದ್ದಾರೆ .

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಇಂತಹ ಕಾನೂನುಗಳು ರಾಜಕಾರಣಿಗಳಿಗೆ ಪರವಾನಿಗೆ ನೀಡಿದಂತೆ ಆಗುತ್ತದೆ. ಮುಂದೆ ಇಂಥ ಕೃತ್ಯಗಳಿಗೆ ವಿಧಾನ ಸೌಧದಲ್ಲಿ ಕೊಠಡಿಗಳನ್ನು ಕಾದಿರಿಸುತ್ತಾರೆ ಎಂದು ವ್ಯಂಗ್ಯವಾಡಿದರು .

ವೇಶ್ಯಾವಾಟಿಕೆಯನ್ನು ಮೊದಲು ನಿಲ್ಲಿಸಬೇಕು ರಾಜಕಾರಣಿಗಳು ತಮ್ಮ ಮನೆ ,ಕುಟುಂಬ ,ಸಾಮಾಜಿಕ ಜೀವನದ ಬಗ್ಗೆ ಯೋಚನೆ ಮಾಡುವುದು ಅಗತ್ಯ .ಕೆಲವು ರಾಜಕಾರಣಿಗಳಿಗೆ ಇದೊಂದು ಹವ್ಯಾಸವಾಗಿ ಹೋಗಿದೆ.ಈವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ  ಎಂದು ಬೇಸರ ಹೊರಹಾಕಿದರು .

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ದೊಡ್ಡ ದುರಂತ ಈ ಘಟನೆಯ ಹಿಂದೆ ದೊಡ್ಡ ಷಡ್ಯಂತ್ರವಿದೆ ,ಯಾರನ್ನೊ  ಹಣಿಯಬೇಕು, ರಾಜೀನಾಮೆ ಕೊಡಿಸಬೇಕು ಎನ್ನುವ ಉದ್ದೇಶದಿಂದ ವ್ಯವಸ್ಥಿತವಾಗಿ ಮಾಡಿದ ಪಿತೂರಿ ಎಂದು ಟೀಕಿಸಿದರು .

ಸುಳ್ಳು ಆರೋಪ ಹೊರಿಸಿ ಈ ರೀತಿ ಮಾಡುವವರ ವಿರುದ್ಧ ಮೊಕದ್ದಮೆ ಹೂಡುವುದು ಸ್ವಾಗತಾರ್ಹ .ಖಾಸಗಿ ವ್ಯಕ್ತಿತ್ವ  ಹಾಳು ಮಾಡುವುದನ್ನು ನಿಲ್ಲಿಸಬೇಕು .ಕಾನೂನಿನಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು .

ಮಂಗಳವಾರ, ಮಾರ್ಚ್ 9, 2021

ಜನಪ್ರತಿನಿಧಿಗಳ ರಾಜೀನಾಮೆಗೆ ಜೆಡಿಎಸ್ ಆಗ್ರಹ


 ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣಿಗಳು ಇದ್ದರೂ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ಅವರಿಗೆ ಕಾಳಜಿ ಇಲ್ಲದಿರುವುದರಿಂದ ಅಧಿಕಾರದಲ್ಲಿ ಮುಂದುವರಿಯಲು ಅರ್ಹರಲ್ಲ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್ ಎಚ್ ದೇವರಾಜ್ ಒತ್ತಾಯಿಸಿದ್ದಾರೆ .

ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಪ್ರಭಾವಿಗಳು. ಆದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾತ್ರ ಶೂನ್ಯ ಎಂದು ವ್ಯಂಗ್ಯವಾಡಿದ ಅವರು ಇವರು ಕೇವಲ ಭಾಷಣಕ್ಕೆ ಸೀಮಿತರಾಗಿದ್ದಾರೆ ಎಂದು ಟೀಕಿಸಿದ್ದಾರೆ .

ರಾಜ್ಯ ಬಜೆಟ್ ನಲ್ಲಿ  ಜಿಲ್ಲೆಗೆ ಆದ್ಯತೆ ನೀಡದೆ ನಿರಾಸೆಯಾಗಿದೆ .  ವೈದ್ಯಕೀಯ , ಎಂಜಿನಿಯರಿಂಗ್ ಕಾಲೇಜು ಇನ್ನಿತರೆ ಯೋಜನೆಗಳ ಪ್ರಸ್ತಾವವೂ ಇಲ್ಲ ಎಂದು ಛೇಡಿಸಿದರು .

ಕ್ಷೇತ್ರದ ಶಾಸಕ ಸಿ ಟಿ ರವಿ ತಮಿಳುನಾಡಿನ ಉಸ್ತುವಾರಿಯನ್ನು ಹೊತ್ತಿದ್ದು ಗೊತ್ತಿಲ್ಲದ ಭಾಷೆಯಲ್ಲಿ ಮಾತನಾಡಿ ಕ್ಷೇತ್ರದ ಜನ ತಲೆತಗ್ಗಿಸುವಂತೆ ಮಾಡುತ್ತಿದ್ದರೆಂದು ವಿಷಾದಿಸಿದರು . 

ಗುರುವಾರ, ಮಾರ್ಚ್ 4, 2021

ಧರ್ಮದ ಆಧಾರದಲ್ಲಿ ತಾರತಮ್ಯ ಸಲ್ಲದು :ದೇವಜ್ಯೋತಿ ರೇ


 ಚಿಕ್ಕಮಗಳೂರು,ಮಾ.೦೪: ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡದೆ  ಜನತೆಯನ್ನು ಸಮಾನವಾಗಿ ಕಾಣುವಂತೆ ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕ ದೇವಜ್ಯೋತಿ ರೇ ಹೇಳಿದರು.

 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ನಡೆದ ೧೩ನೇ ತಂಡದ ೪ನೇ 67 ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿ

 


ಕಾನೂನಿನ ಅಡಿಯಲ್ಲಿ ಸಮರ್ಪಕವಾಗಿ  ಕಾರ್ಯ ನಿರ್ವಹಿಸಬೇಕು ಎಂದರು 

ಬುಧವಾರ, ಮಾರ್ಚ್ 3, 2021

ಮುಳ್ಳಯ್ಯನಗಿರಿ ರಕ್ಷಿತ ಅರಣ್ಯ ಘೋಷಣೆ ವಿರೋಧಿಸಿ ಮತ್ತೆ ಪ್ರತಿಭಟನೆ


 ಚಿಕ್ಕಮಗಳೂರು :ಮುಳ್ಳಯ್ಯನಗಿರಿ ಮೀಸಲು ಅರಣ್ಯ ಘೋಷಣೆ ಪ್ರಸ್ತಾವನೆ ವಿರೋಧಿಸಿ ಚಿಕ್ಕಮಗಳೂರಿನಲ್ಲಿ ಮತ್ತೆ ಪ್ರತಿಭಟನೆ ನಡೆದಿದೆ .

ಮುಳ್ಳಯ್ಯನಗಿರಿ ವ್ಯಾಪ್ತಿಯ ಗ್ರಾಮಸ್ಥರುವಿವಿಧ ಪಕ್ಷ ಸಂಘಟನೆಗಳ ಆಶ್ರಯದಲ್ಲಿ ಚಿಕ್ಕಮಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು  .

ಮುಳ್ಳಯ್ಯನಗಿರಿ ಮೀಸಲು ಅರಣ್ಯ ವಿರೋಧಿ ಹೋರಾಟ ಸಮಿತಿಯ ಆಶ್ರಯದಲ್ಲಿ ಪ್ರತಿಭಟನಾ ಸಭೆ ನಡೆದು ಸರ್ಕಾರ ಈ ಪ್ರಸ್ತಾವನೆಯನ್ನು ಕೈಬಿಡುವಂತೆ ಒತ್ತಾಯಿಸಿದರು .

ಉದ್ದೇಶಿತ ಪ್ರಸ್ತಾವನೆಯಿಂದ ಈ ಭಾಗದ ಗ್ರಾಮಸ್ಥರ ಬದುಕಿನ ಮೇಲೆ ಗಂಭೀರ ಪರಿಣಾಮ ಎದುರಾಗಲಿದೆ .ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಕಾನೂನು ಜಾರಿ ನೆಪದಲ್ಲಿ ಜನರಿಗೆ ಕಿರುಕುಳ ನೀಡುವ ಸಾಧ್ಯತೆ ಇದೆ ಎಂದು ಆರೋಪಿಸಿದರು .

ಶನಿವಾರ, ಫೆಬ್ರವರಿ 27, 2021

ಹುಲಿ ಉಗುರು ಮಾರಾಟ :ಇಬ್ಬರ ಸೆರೆ

 ಚಿಕ್ಕಮಗಳೂರು ಜಿಲ್ಲಾ ಅಪರಾಧ ತನಿಖಾ ವಿಭಾಗ ಕಾರ್ಯಾಚರಣೆ 8 ಹುಲಿ ಉಗುರು ಸೇರಿದಂತೆ , ಹುಲಿಯ ಹಲ್ಲು ಮತ್ತು ಮುಳೆ ಮತ್ತು  ವನ್ಯಜೀವಿ ಕಳ್ಳಸಾಗಣೆ  ಗೆ ಬಳಸಿದ ಸ್ವಿಫ್ಟ್ ಕಾರು ವಶ ಪಡಿಸಿಕೊಂಡಿದ್ದಾರೆ. ಅರಶಿನಗುಪ್ಪೆ ನಿವಾಸಿ ಸಾಗರ್ ಮತ್ತು ಹಾಸನ ಮೂಲದ ಬೆಂಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದ ಲೋಕೇಶ್ ಬಂಧನ. ನಗರದ ರೈಲ್ವೆ ನಿಲ್ದಾಣದ ಬಳಿ ಮಾರಾಟ ಮಾಡುವಾಗ ಖಚಿತ ಮಾಹಿತಿ ಮೇರೆಗೆ ಬಂಧನ. ವೃತ ನಿರೀಕ್ಷಕ ಸತ್ಯ ನಾರಾಯಣ ತಂಡ ಕಾರ್ಯಾಚರಣೆ. ಹೆಚ್ಚಿನ ತನಿಖೆಗೆ ಅರಣ್ಯ ಇಲಾಖೆಗೆ ಪ್ರಕರಣ ನೀಡಲಾಗಿದೆ.ಚಿಕ್ಕಮಗಳೂರಿನ ಗೌರವ ವನ್ಯಜೀವಿ ಪರಿಪಾಲಕ ಜಿ.ವೀರೇಶ್ ಇದ್ದರು. ಇತ್ತೀಚಿನ ದನಮಾನಗಳಲ್ಲಿ ಹುಲಿ ಬೇಟೆ ಮತ್ತು ಅದರ ಆಂಗ ಅಂಗಗಳ ಮಾರಾಟ ಜಾಲ ಸಕ್ರಿಯವಾಗಿದೆ.


ಚಿಕ್ಕಮಗಳೂರಿನಲ್ಲಿ ಹಾಡು ಹಗಲೇ ಕಳ್ಳತನಕ್ಕೆ : ಇಬ್ಬರು ಅಂದರ್


 ಚಿಕ್ಕಮಗಳೂರು :ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಮನೆಯೊಂದಕ್ಕೆ ನುಗ್ಗಿದ ಇಬ್ಬರು ಹಾಡುಹಗಲೇ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ .

ಕಲ್ಯಾಣ ನಗರದ ವಾಸಿ ಚಂದ್ರೇಗೌಡ ಮನೆಯಲ್ಲಿದ್ದ  ಸಮಯದಲ್ಲಿ ಹಿಂದಿನಿಂದ ಬಂದ ಇಬ್ಬರು ಬಾಯಿಗೆ ಬಟ್ಟೆಯನ್ನು ಕಟ್ಟಿ ,ಬೆದರಿಸಿ ಚಿನ್ನ ಹಾಗೂ ನಗದನ್ನು ಅಪಹರಿಸಿದ್ದಾರೆ .
ಆ ಸಂದರ್ಭದಲ್ಲಿ ಚಂದ್ರೇಗೌಡರ ಮಗ ಮನೆಗೆ ಬಂದು ಬೆಲ್ಲನ್ನು ಮಾಡಿದ್ದು, ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡು ಕೂಗಿಕೊಂಡಾಗ ಕಳ್ಳರು ಪರಾರಿಯಾಗಲು ಯತ್ನಿಸಿದ್ದಾರೆ .
ಅಕ್ಕಪಕ್ಕದವರು ಸೆರೆ ಹಿಡಿಯಲು ಯತ್ನಿಸಿದ್ದು ಕಳ್ಳರು ಪರಾರಿಯಾಗಿದ್ದು ನಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .ಬಂಧಿತ ಇಬ್ಬರು ಚಂದ್ರೇಗೌಡರ ಸಂಬಂಧಿಕರಾಗಿರುವುದು ವಿಶೇಷ .