udayanews

ಸೋಮವಾರ, ಮಾರ್ಚ್ 15, 2021

ನಗರಸಭೆಗೆ ಚುನಾವಣೆಗೆ ಒತ್ತಾಯಿಸಿ ಪ್ರತಿಭಟನೆ

 ಚಿ


ಚಿಕ್ಕಮಗಳೂರು .: ನಗರಸಭೆಗೆ ಚುನಾವಣೆ ನಡೆಯದೆ ಎರಡು ವರ್ಷ ಕಳೆದಿದ್ದು ಈ ತಕ್ಷಣ ಚುನಾವಣೆ ನಡೆಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರಸಭೆ ಎದುರು ಪ್ರತಿಭಟನೆ ಮಾಡಿದರು  

       ಶಾಸಕ ಸಿಟಿ ರವಿ  , ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಪಿ  ಮಂಜೇಗೌಡ ಮಾತನಾಡಿ ಶಾಸಕ ಸಿ.ಟಿ ರವಿ  ಮೀಸಲಾತಿ  ವಿರುದ್ಧ ತಮ್ಮ    ಪಕ್ಷದ ಸದಸ್ಯರಿಂದಲೇ ತಡೆಯಾಜ್ಞೆ ತಂದು ಉದ್ದೇಶಪೂರ್ವಕವಾಗಿ ಚುನಾವಣೆ ನಡೆಯದಂತೆ ಮಾಡಿದ್ದಾರೆಂದು ಆರೋಪಿಸಿದರು .

      ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ನಗರಸಭೆ ಮಾಜಿ ಸದಸ್ಯೆ ಸುರೇಖ ಸಂಪತ್ ರಾಜ್ ,    ಮಾಜಿ ಸದಸ್ಯ ರೂಬೆನ್ ಮೊಸಸ್ ಮಾತನಾಡಿ ಸ್ವಂತ ಕ್ಷೇತ್ರವನ್ನು ಸರಿಪಡಿಸಿ ಕೊಳ್ಳಲಾಗದ ಶಾಸಕ ಸಿ.ಟಿ. ರವಿ ಬೇರೆ ರಾಜ್ಯ ಸರಿಪಡಿಸಲು ಹೋರಟಿರುವುದು ಹಾಸ್ಯಾಸ್ಪದ ಎಂದರು.

      ನಗರ ಕಾಂಗ್ರೆಸ್ ಅಧ್ಯಕ್ಷ   ತನೋಜ್ ಮಾತನಾಡಿ  ಕೂಡಲೇ ನಗರಸಭೆ ಚುನಾವಣೆ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಶಾಸಕ ಸಿಟಿ ರವಿ ಮನೆ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

    ಮಹಿಳಾ ಕಾಂಗ್ರೆಸ್ಸಿನ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಸಿಡಿಎ ಮಾಜಿ ಅಧ್ಯಕ್ಷ ಅನೀಫ್,  ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಿ ಎಂ ಸಂದೀಪ್ ಇತರರು, ಉಪಸ್ಥಿತರಿದ್ದರು.

ತರೀಕೆರೆ ಶಾಸಕರ ದೌರ್ಜನ್ಯ :ಸಿಎಂ ಪುತ್ರನ ಮುಂದೆ ಕುಟುಂಬಸ್ಥರ ಕಣ್ಣೀರು

 ಚಿಕ್ಕಮಗಳೂರು :ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತರೀಕೆರೆ ಕ್ಷೇತ್ರದ ಶಾಸಕ  ಸುರೇಶ್ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ನೊಂದ ಕುಟುಂಬಸ್ಥರು ಸಿಎಂ ಪುತ್ರ ವಿಜಯೇಂದ್ರ ನ ಮುಂದೆ ಕಣ್ಣೀರು ಹಾಕಿದ ಘಟನೆ ನಡೆದಿದೆ .



ರೀಕೆರೆ ಲಕ್ಕವಳ್ಳಿ ಸಮೀಪ ಚಿಕ್ಕಮಗಳೂರು ಮೂಲದ ಪ್ರಸನ್ನ 7 ವರ್ಷದ ಹಿಂದೆ  50 ಎಕರೆ  ಜಮೀನು ಖರೀದಿ ಮಾಡಿದ್ದರು.

ಕಳೆದ ಒಂದು ವರ್ಷದಿಂದ ತರೀಕೆರೆ ಶಾಸಕ ಸುರೇಶ್ ದೌರ್ಜನ್ಯ ನಡೆಸುತ್ತಿರುವ ಬಗ್ಗೆ ಆರೋಪ ಮಾಡಿದ  ಪ್ರಸನ್ನ ಕುಟುಂಬ ಪ್ರಕರಣ ನ್ಯಾಯಾಲಯದಲ್ಲಿ ಇದ್ದರೂ ಶಾಸಕರು ಹಿಂಬಾಲಕರ ಮೂಲಕ ಹಲ್ಲೆ ನಡೆಸುತ್ತಿದ್ದಾರೆಂದು ಆರೋಪಿಸಿದರು.

ನ್ಯಾಯ  ಇಲ್ಲವೇ ದಯಾಮರಣ ಕೊಡಿ ಎಂದು ಆಕ್ರೋಶ ಹೊರಹಾಕಿ ಬಿಕ್ಕಿ ಬಿಕ್ಕಿ ಅತ್ತರು .ಪೊಲೀಸ್ ಠಾಣೆಗೆ ದೂರು ನೀಡಿದರೆ ನ್ಯಾಯ ಸಿಗುತ್ತಿಲ್ಲ ಎಂದು ಕುಟುಂಬಸ್ಥರು ದೂರಿದರು 

ಚಿಕ್ಕಮಗಳೂರು ನಗರದ ಖಾಸಗಿ ಕಾರ್ಯಕ್ರಮದಲ್ಲಿ  ಈ  ಘಟನೆ ನಡೆದಿದ್ದು ವಿಜಯೇಂದ್ರ ಕ್ಷಣಕಾಲ ಮುಜುಗರಕ್ಕೆ ಒಳಗಾದರು .

ಹೆಲಿಕಾಪ್ಟರ್ ಗೆ ಪೊಲೀಸ್ ಕಾವಲು- ವ್ಯಾಪಕ ಟೀಕೆ


 ಚಿಕ್ಕಮಗಳೂರು: ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರ ಹೆಲಿಕಾಪ್ಟರಿಗೆ ಪೋಲಿಸ್ ಕಾವಲು ಹಾಕಿದ ಅಧಿಕಾರಿಗಳ ಕ್ರಮ ಟೀಕೆಗೆ ಗುರಿಯಾಗಿದೆ .ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು  ಶಾಸಕ ಸಿ .ಟಿ .ರವಿ ತಮಿಳುನಾಡಿನಿಂದ

ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದರು  .ಐಡಿಎಸ್ ಜಿ ಕಾಲೇಜು ಬಳಿ ಹೆಲಿಕಾಪ್ಟರನ್ನು ನಿಲ್ಲಿಸಿದ್ದು 6 ಕ್ಕೂ ಅಧಿಕ ಪೊಲೀಸರು ಅದನ್ನು ಕಾಯುತ್ತಾ , ಹರಟೆ ಹೊಡೆಯುತ್ತಾ  ನಿಂತಿದ್ದರು .

ಮುಖ್ಯಮಂತ್ರಿಗಳು ಸೇರಿದಂತೆ ಅತಿ ಗಣ್ಯರು ಆಗಮಿಸುವ ಹೆಲಿಕಾಪ್ಟರಿಗೆ ರಕ್ಷಣೆ ನೀಡುವುದು ಸಾಮಾನ್ಯ , ಆದರೆ     ಶಾಸಕರು ಬಂದಿದ್ದ  ಹೆಲಿಕಾಪ್ಟರ್ ಗೆ ಇಷ್ಟೊಂದು ರಕ್ಷಣೆ ನೀಡುವ ಅಗತ್ಯ ಇತ್ತೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಅಂತಹ ಅಗತ್ಯತೆ ಇದ್ದಲ್ಲಿ ಖಾಸಗಿ ಭದ್ರತೆಯನ್ನು ನಿಯೋಜಿಸಿ ಕೊಳ್ಳಬೇಕಾಗಿತ್ತು  ಎನ್ನುವ ಮಾತುಗಳು ಕೇಳಿಬರುತ್ತಿವೆ  .

ಸಿಡಿ ಪ್ರಕರಣ :ಡಿಕೆಶಿ ಹೆಸರು ಥಳಕು- ಶಾಸಕ ರವಿ ಅಚ್ಚರಿ

 ಚಿಕ್ಕಮಗಳೂರು :ಸಿಡಿ ಪ್ರಕರಣದಲ್ಲಿ ಡಿಕೆಶಿ ತನ್ನ ಹೆಸರನ್ನ ಯಾಕೆ ಥಳಕು ಹಾಕುತ್ತಿದ್ದಾರೆ ಎನ್ನುವುದು  ಗೊತ್ತಾಗ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ ಅಚ್ಚರಿ ವ್ಯಕ್ತಪಡಿಸಿದ್ದಾರೆ .

ಜಾರಕಿಹೊಳಿ ಸಿಡಿ ಪ್ರಕರಣ  ಕರ್ನಾಟಕ ರಾಜಕಾರಣಕ್ಕೆ ಗೌರವ ತರುವ ವಿಷಯವಲ್ಲ ಎಂದು ಹೇಳಿದ್ದಾರೆ 

ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರಕರಣದ ತನಿಖೆಯಾಗಲಿ ಪ್ರೊಡ್ಯೂಸರ್, ಡೈರಕ್ಟರ್, ಆ್ಯಕ್ಟರ್ ಯಾರೆಂದು ಗೊತ್ತಾಗುತ್ತೆ ಎಂದರು .

ಹಿಂದೆ ಮೌಲ್ಯಧಾರಿತ ರಾಜಕೀಯದ ಚರ್ಚೆ ನಡೆಯುತ್ತಿತ್ತು.ಈಗ ಸಿಡಿ ಆಧಾರಿತ ರಾಜಕೀಯದ ಚರ್ಚೆ ನಡೆಯುತ್ತಿದೆ ಎಂದು ಬೇಸರ ಹೊರ ಹಾಕಿದರು.

 ಮೌಲ್ಯಧಾರಿತವೋ... ಸಿಡಿ ಆಧಾರಿತ ರಾಜಕಾರಣ ಬೇಕೋ, ಎಲ್ಲರೂ ಯೋಚಿಸಬೇಕು ಎಂದು ಮಾರ್ಮಿಕವಾಗಿ ಹೇಳಿದರು .


ಸಾರ್ವಜನಿಕ ಜೀವನದಲ್ಲಿರುವ ನಾವು ಪರಿಶುದ್ಧ ರಾಜಕಾರಣದ ಬಗ್ಗೆ ಆಲೋಚಿಸಬೇಕು. ನಮಗೆ ನಾವೇ ಪರಿಮಿತ ಹಾಕಿಕೊಳ್ಳೋದು ಮುಖ್ಯ ಎಂದರು . 


ಶುಕ್ರವಾರ, ಮಾರ್ಚ್ 12, 2021

ಸಿಡಿ ಪ್ರಕರಣದಲ್ಲಿ ಆಲ್ದೂರು ಯುವಕ ವಶಕ್ಕೆ :ಜಿಲ್ಲೆಯಲ್ಲಿ ಸಂಚಲನ


 ಚಿಕ್ಕಮಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಆಲ್ದೂರಿನ  ಯುವಕನೊಬ್ಬನನ್ನು  ವಿಶೇಷ ತನಿಖಾ ತಂಡ ವಶಕ್ಕೆ ಪಡೆದಿದೆ .

ಸಹಜವಾಗಿ ಇದು ಜಿಲ್ಲೆಯಲ್ಲಿ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದ್ದು ,  ಈ ಯುವಕ ಯಾರು ಎನ್ನುವ ಚರ್ಚೆ ಎಲ್ಲೆಡೆ ಕೇಳಿಬರುತ್ತಿವೆ .

ಆಲ್ದೂರು  ಪಟ್ಟಣದ ಗ್ರಾಮ ಪಂಚಾಯ್ತಿ  ಮಾಜಿ ಪದಾಧಿಕಾರಿಯ ಪುತ್ರ  ಎನ್ನಲಾಗಿದ್ದು ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಎಂದು ಹೇಳಲಾಗುತ್ತಿದೆ .  ಯುವಕ ಬೆಂಗಳೂರಿನಲ್ಲಿ ನೆಲೆಸಿದ್ದ .

ಜಿಲ್ಲೆಯ ಇನ್ನಷ್ಟು ಯುವಕರು ಖೆಡ್ಡಾಕ್ಕೆ ಬೀಳುವ ಸಾಧ್ಯತೆಗಳು ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ .

ರಾಜ್ಯದಲ್ಲಿ ಬೆಳಕಿಗೆ ಬರುವ ಬಹುತೇಕ ಗಂಭೀರ ಪ್ರಕರಣಗಳಲ್ಲಿ ಜಿಲ್ಲೆಯ ಯುವಕರು ಥಳಕು ಹಾಕಿಕೊಳ್ಳುತ್ತಿರುವುದು   ಸಾಮಾನ್ಯವಾಗಿದೆ .


ಗುರುವಾರ, ಮಾರ್ಚ್ 11, 2021

ಮಲೆನಾಡಿಗೆ ಮಾರಕ ಯೋಜನೆಗಳು: ಸರಣಿ ಸಭೆಗೆ ನಿರ್ಧಾರ


 ಚಿಕ್ಕಮಗಳೂರು :ಜಿಲ್ಲೆಯ ಮಲೆನಾಡ ಭಾಗವನ್ನು ಕಾಡುತ್ತಿರುವ ಮುಳ್ಳಯ್ಯನಗಿರಿ  ಮೀಸಲು ಅರಣ್ಯ , ಹುಲಿ ಸಂರಕ್ಷಣಾ ರೋಜನೆ, ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಸರ್ಕಾರದ ಸ್ಪಷ್ಟ ನಿಲುವಿಗೆ ಒತ್ತಾಯಿಸಿ ಸರಣಿ ಸಭೆಗಳು ಆರಂಭವಾಗಿದೆ .

ಮುಳ್ಳಯ್ಯನಗಿರಿ ,ಜಾಗರ, ಕೊಳಗಾಮೆ ,ಖಾಂಡ್ಯ, ಸಂಗಮೇಶ್ವರಪೇಟೆ  ಸೇರಿದಂತೆ ಹಲವು ಗ್ರಾಮಗಳ ಜನರು ಈಗಾಗಲೇ ವಿವಿಧ ಹಂತಗಳಲ್ಲಿ ಹೋರಾಟಗಳನ್ನು ಮಾಡಿದ್ದಾರೆ .

ಗ್ರಾಮ ಪಂಚಾಯ್ತಿ ಚುನಾವಣೆಗಳನ್ನು ಮೊದಲ ಹಂತದಲ್ಲಿ ಬಹಿಷ್ಕರಿಸಲಾಗಿದ್ದುಎರಡನೇ ಹಂತದ ಚಹನಾವಣೆ ದಿನಾಂಕ ಪ್ರಕಟವಾಗಿದ್ದು ಮುಂದಿನ ನಿರ್ಧಾರ  ಕುರಿತು ಚರ್ಚಿಸಲು ಸಭೆಗಳು ನಡೆಯುತ್ತಿವೆ .

ಮಲೆನಾಡ ಜನರ ಬದುಕಿಗೆ ಮಾರಕವಾಗಿರುವ ಈ ಯೋಜನೆಗಳ ಬಗ್ಗೆ ಸರ್ಕಾರ ಹಾಗೂ ನ್ಯಾಯಾಲಯದಿಂದ ಈವರೆಗೂ ಯಾವುದೇ ಸ್ಪಷ್ಟ ಆದೇಶ ಬಾರದಿರುವುದು ಜನರನ್ನು ಆತಂಕಕ್ಕೆ ದೂಡಿದೆ .

ಈ ಮಧ್ಯೆ ಚುನಾವಣೆ ಬಹಿಷ್ಕರಿಸುವ ನಿಟ್ಟಿನಲ್ಲಿ ಕೆಲವು ಗ್ರಾಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು , ಒಂದೊಮ್ಮೆ ಯಾರಾದರೂ ನಾಮಪತ್ರ ಸಲ್ಲಿಸಿದರೆ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ .



ಟಾಯ್ಲೆಟ್ ಮುಂದೆ ಸೆಲ್ಫಿ !!


 ಚಿಕ್ಕಮಗಳೂರು :ಶೀರ್ಷಿಕೆ ನೋಡಿ ಅಚ್ಚರಿಯಾಗಬಹುದು .

ತರೀಕೆರೆಯ ಸಾರ್ವಜನಿಕ ಶೌಚಾಲಯ ನೋಡಿದಾಗ ಯಾರಿಗಾದರೂ 1ಸೆಲ್ಫಿ ತೆಗೆದುಕೊಳ್ಳುವ ಮನಸ್ಸಾಗದೆ ಇರದು .

ಸಾರ್ವಜನಿಕ ಶೌಚಾಲಯಗಳೆಂದರೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ಇಂದಿಗೂ ಇದೆ . ನಿರ್ವಹಣೆ ಕೊರತೆ ಇದಕ್ಕೆ ಮುಖ್ಯ ಕಾರಣ .

ತರೀಕೆರೆಯಲ್ಲಿ ಇರುವ ಸಾರ್ವಜನಿಕ 11 ಶೌಚಾಲಯಗಳು ಇದಕ್ಕೆ ಭಿನ್ನ .  ಆಕರ್ಷಕ ಬಣ್ಣ ಹೊಡೆದು ಪ್ರಾಣಿ ಪಕ್ಷಿ ಸೇರಿದಂತೆ ವಿವಿಧ ಚಿತ್ತಾರಗಳನ್ನು ಬಿಡಿಸಿದ್ದು ಸಾರ್ವಜನಿಕರ ಗಮನ ಸೆಳೆಯುತ್ತಿವೆ .

ಹೊರಗಷ್ಟೇ ಸುಂದರವಲ್ಲ .ಒಳಗೂ ಅಚ್ಚುಕಟ್ಟಾಗಿ ಶುಚಿತ್ವ ಕಾಪಾಡಲಾಗಿದೆ.     ಶೌಚಾಲಯ ಬಳಸಿದವರು ಸೆಲ್ಫಿ ತೆಗೆದುಕೊಂಡು ಹೋಗುವುದು ಸಾಮಾನ್ಯ  .ಇದರ ಹಿಂದಿನ ರೂವಾರಿ ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಮತ್ತವರ ಸಿಬ್ಬಂದಿ.