udayanews

ಶನಿವಾರ, ಮಾರ್ಚ್ 27, 2021

ಉರುಳಿಗೆ ಸಿಲುಕಿ ಚಿರತೆ ಸಾವು


 

ಚಿಕ್ಕಮಗಳೂರು :ದುಷ್ಕರ್ಮಿಗಳು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ಪ್ರಾಣಬಿಟ್ಟಿದೆ .

ಚಿಕ್ಕಮಗಳೂರು ಅರಣ್ಯ ವಿಭಾಗದ  ಕೆ .ಆರ್ .ಪೇಟೆ ಸಮೀಪದ  ಕೆಳಗಣೆ ಗ್ರಾಮದ ಅಂಬಿಕಾ ಎಸ್ಟೇಟ್ ನಲ್ಲಿ ಈ ಘಟನೆ ನಡೆದಿದೆ .

 ಉರುಳಿಗೆ ಸಿಲುಕಿದ್ದ ಚಿರತೆ  ಜೀವಂತವಾಗಿ ಒದ್ದಾಡುತ್ತಿದ್ದು , ಶಿವಮೊಗ್ಗ ದಿಂದ ಅಗತ್ಯ ಔಷಧ ಬರುವುದು ತಡವಾದ ಹಿನ್ನೆಲೆಯಲ್ಲಿ  ಚಿರತೆಯ ಹೊಟ್ಟೆ ಭಾಗ ಸೀಳಿ  ಹೋದ ಕಾರಣ ಅತೀವ ನೋವಿನಿಂದ ಪ್ರಾಣಬಿಟ್ಟಿದೆ. 

ಚಿರತೆಯ ಮರಣೋತ್ತರ ಪರೀಕ್ಷೆಯನ್ನು ಮತ್ತಾವರ ಅರಣ್ಯದಲ್ಲಿ ಕೈಗೊಂಡು ನಂತರ ಸುಡಲಾಯಿತು.

 ಅರಣ್ಯ ಇಲಾಖೆಯ ಅಧಿಕಾರಿ'  ಸಿಬ್ಬಂದಿ ಸ್ಥಳದಲ್ಲಿ ಇದ್ದರು. ಅಂಬಿಕಾ ಎಸ್ಟೇಟ್ ನ ಮಾಲೀಕರ ಮೇಲೆ ಪ್ರಕರಣ  ದಾಖಲಿಸಲಾಗಿದೆ.

ಕರ್ತವ್ಯಲೋಪ :ಎಎಸ್ ಐ ಸೇರಿ ಮೂವರ ಅಮಾನತು


 ಚಿಕ್ಕಮಗಳೂರು: ಕರ್ತವ್ಯಲೋಪದ ಆರೋಪದ ಮೇಲೆ ಸಹಾಯಕ ಠಾಣಾಧಿಕಾರಿ ಸೇರಿದಂತೆ ಮೂವರನ್ನು ಅಮಾನತುಗೊಳಿಸಿ ಜಿಲ್ಲಾ ರಕ್ಷಣಾಧಿಕಾರಿಗಳ ಆದೇಶಿಸಿದ್ದಾರೆ .

ಸಖರಾಯಪಟ್ಟಣ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಶಿವಕುಮಾರ್ ಪೊಲೀಸರಾದ ಶಿವಾಜಿ' ಶಿವು ಅಮಾನತುಗೊಂಡವರು .

ಈ ಮೂವರು ಕರ್ತವ್ಯದಲ್ಲಿ ಇದ್ದ ಸಂದರ್ಭದಲ್ಲಿ ಪೊಕ್ಸೊ ಕಾಯಿದೆಯಡಿ ಬಂಧಿತ ಆರೋಪಿ ಲಾಕಪ್ ನಿಂದ ತಪ್ಪಿಸಿಕೊಂಡಿದ್ದು, ಕರ್ತವ್ಯಲೋಪದ ಆರೋಪದ ಮೇಲೆ ಇವರನ್ನು ಅಮಾನತುಗೊಳಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ .

ಗಾಳಿಕೆರೆ: ಕುರುಡು ಭಕ್ತಿಯೂ... ಅರಣ್ಯ ಇಲಾಖೆಯೂ


 ಚಿಕ್ಕಮಗಳೂರು : ಬಾಬಾಬುಡನ್ ಗಿರಿ ಶ್ರೇಣಿಯ ಚಂದ್ರದ್ರೋಣ ಪರ್ವತದ ನೆತ್ತಿಯ ಮೇಲಿರುವ 'ಗಾಳಿಕೆರೆ' ಎಂಬ ಚೆಂದದ ಕೆರೆಯು ಕುರುಡು ಭಕ್ತರು ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯುವ ಮೊದಲು ಹೇಗಿತ್ತು ಈಗ ಹೇಗಿದೆ ನೋಡಿ .

ಅರಣ್ಯ ಇಲಾಖೆ ಎಂಥಾ ಮೂಢತ್ವದ ಕೆಲಸ ಮಾಡಿದೆಯೆಂದರೆ, ಶೋಲಾ ಹುಲ್ಲುಗಾವಲಿನ ಅತಿ ಸೂಕ್ಷ್ಮ ಪ್ರದೇಶವಾದ ಹಾಗೂ ಐದು ಸಾವಿರ ಅಡಿ ಎತ್ತರದ ಪ್ರದೇಶದಲ್ಲಿನ ಅಮೂಲ್ಯ ಜಲಮೂಲವನ್ನು ರಕ್ಷಿಸುವ ಸಲುವಾಗಿ ಭಕ್ತರನ್ನು, ಪ್ರವಾಸಿಗರನ್ನು ಹಾಗೂ ಪ್ರಾಣಿಬಲಿಯನ್ನು ನಿರ್ಬಂಧಿಸುವ ಬದಲು ಕೆರೆಗೆ ಕಬ್ಬಿಣದ ಬೇಲಿಯನ್ನು ಅಳವಡಿಸುವ ಮೂಲಕ ಪ್ರಾಣಿಗಳು ನೀರು ಕುಡಿಯಲು ಬರದಂತೆ ನಿರ್ಬಂಧಿಸಿದೆ.! 

ಅಸಲಿಗೆ ಜನರು ಕೆರೆಗೆ ಇಳಿಯದಂತೆ ನಿರ್ಬಂಧಿಸುವ ಸಲುವಾಗಿ ಬೇಲಿ ನಿರ್ಮಿಸಿರುವುದಾದರೂ, ಎರಡು ಮೂರು ಗೇಟು ಅಳವಡಿಸಿರುವುದರಿಂದ ಜನ ಎಂದಿನಂತೆ ಸಲೀಸಾಗಿ ಕೆರೆಯೊಳಗೆ ಇಳಿದು ಎಗ್ಗಿಲ್ಲದೆ ಮಲಿನಗೊಳಿಸುತ್ತಿದ್ದಾರೆ. ಈ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಮಿಶ್ರಿತ ಹೊಲಸು ನೀರನ್ನು  ಕುಡಿಯುವ ಪ್ರಾಣಿಗಳ ಗತಿಯೇನಾಗುತ್ತಿರಬಹುದು ಎಂಬ ಊಹೆಯೂ ಇಲಾಖೆಗಿದ್ದಂತಿಲ್ಲ.! 

 ಅನಾಹುತಕಾರಿ ಸಂಗತಿಯೆಂದರೆ, ಇಲ್ಲಿಂದ ಹಾಗೂ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ 


ಮಗ್ಗುಲಿಗಿರುವ ಚಿಕ್ಕ ತೊರೆಯಿಂದ ಹೊರಹೋಗುವ ನೀರು ಇನ್ನೊಂದಷ್ಟು ಹಳ್ಳಗಳನ್ನು‌ ಸೇರಿಕೊಂಡು ಭದ್ರಾ ಮೀಸಲು ಅರಣ್ಯದೊಳಗೆ ಹರಿಯುತ್ತದೆ. ಕಾಡಿನ ಕಡೆಗೆ ಹರಿಯುತ್ತಿರುವ ಈ ತ್ಯಾಜ್ಯಮಿಶ್ರಿತ ನೀರು ಜೈವಿಕ ವ್ಯವಸ್ಥೆಯನ್ನು ಹೇಗೆ ನಿರಂತರವಾಗಿ ಕೊಲ್ಲುತ್ತಿರಬಹುದು ಎಂಬುದನ್ನು ಅರಣ್ಯ ಇಲಾಖೆ ಮನಗಂಡಿದೆಯಾ...!?  ಎಚ್ಚೆತ್ತುಕೊಳ್ಳಲು ಇದು ಸಕಾಲ. 


*ಕಾರ್ತಿಕಾದಿತ್ಯ ಬೆಳ್ಗೋಡು*

ಶುಕ್ರವಾರ, ಮಾರ್ಚ್ 26, 2021

ಪತ್ರಕರ್ತರನ್ನು ಕಟ್ಟಿಹಾಕುವ ಯತ್ನ: ಮಾಧ್ಯಮ ಸ್ವಾತಂತ್ರ್ಯದ ಮೇಲೆ ಸರ್ಕಾರದ ದಾಳಿ

 


ಚಿಕ್ಕಮಗಳೂರು :ಇತ್ತೀಚೆಗೆ ಪ್ರಶ್ನೆ ಮಾಡುವವರನ್ನು, ಸರ್ಕಾರ ವಿರುದ್ಧ ಮಾತನಾಡುವವರನ್ನು  ಒಂದಿಲ್ಲ      ಒಂದು ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಿ ಜೈಲಿಗೆ ಅಟ್ಟುವ ಪರಿಪಾಠ ಹೆಚ್ಚಾಗುತ್ತಿದೆ .

ದೇಶದ ವಿವಿಧ ಕಡೆಗಳಲ್ಲಿ ಇಂತಹ ಅನೇಕ ಘಟನೆಗಳು ಈಗಾಗಲೇ ಜರುಗಿವೆ. ಅದರಲ್ಲಿ ಪತ್ರಕರ್ತರು ಒಳಗೊಂಡಿದ್ದಾರೆ .

ಈಗ ರಾಜ್ಯ ಸರಕಾರವು ಪರೋಕ್ಷವಾಗಿ ಪತ್ರಕರ್ತರನ್ನು ಕಟ್ಟಿ ಹಾಕುವ ಕೆಲಸಕ್ಕೆ ಕೈ ಹಾಕಿದೆ .ಅದಕ್ಕಾಗಿ ಕ ಎಲ್ಲ ಪತ್ರಕರ್ತರ ಜಾತಕ ಸಂಗ್ರಹಿಸುವ ಕೆಲಸಕ್ಕೆ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ .

ಮಾನ್ಯತೆ ಪಡೆದ ಪತ್ರಕರ್ತರ ಮಾಹಿತಿಯನ್ನು ಒದಗಿಸುವ ಹೊಣೆಗಾರಿಕೆಯನ್ನು ವಾರ್ತಾ ಇಲಾಖೆಗೆ ನೀಡಲಾಗಿದೆ . 

ತಮಾಷೆಯ ಸಂಗತಿಯೆಂದರೆ ಇದರಲ್ಲಿ ಸಿದ್ಧಾಂತ ಯಾವುದು ಎಂದು ಕೇಳಿರುವುದು . ಸಂವೇದನಶೀಲ ಪತ್ರಕರ್ತರಿಗೆ ಇದರ ಮರ್ಮ ಅರ್ಥವಾಗಬಹುದು . ಕನಿಷ್ಠ ಈಗಲಾದರೂ ನಾವು ಇದನ್ನು ವಿರೋಧಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು 

**ಈ ಬಗ್ಗೆ ಟೆಲೆಕ್ಸ್ ರವಿ ಹೀಗೆ ಬರೆದಿದ್ದಾರೆ ...

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಗೃಹಸಚಿವರಾಗಿದ್ದ ವಿ ಎಸ್ ಆಚಾರ್ಯ ಸುದ್ದಿಮಾಧ್ಯಮ ಕ್ಷೇತ್ರಕ್ಕೆ ಓಂಬಡ್ಮನ್ ನೇಮಕ ಮಾಡಲು ಮುಂದಾಗಿದ್ದರು. ಆಗ  ಕಾರ್ಯನಿರತ ಪತ್ರಕರ್ತ ಸಂಘಟನೆಗಳ  ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಆ ನಿಧಾರವನ್ನು ಕೈ ಬಿಡಲಾಯಿತು.

 ಬಿಜೆಪಿ ಪ್ರತಿ ಸಂದರ್ಭದಲ್ಲೂ   ಪತ್ರಕರ್ತರು. ಮಾಧ್ಯಮಗಳು  ತಮ್ಮ ಮರ್ಜಿಗೆ ತಕ್ಕಂತೆ ಇರಬೇಕು ಎಂಬ ಧೋರಣೆ ಹೊಂದಿದೆ. ಅದಕ್ಕೆ ವಿರುದ್ಧವಾಗಿರುವವರನ್ನು ನಕ್ಸಲ್ ಸಿಂಪಥೈಸರ್, ದೇಶದ್ರೋಹಿಗಳು  ಎಂಬ ಹಣೆಪಟ್ಟಿ ಕಟ್ಟಿ ಹತ್ತಿಕ್ಕುವ  ಕೆಲಸ ಮಾಡುತ್ತಲೆ ಬಂದಿದೆ. 

ಈಗ ವಿವರ ಕೇಳುತ್ತಿರುವುದರ ಹಿಂದೆ ಇಂತಹ ಉದ್ದೇಶವೆ ಇದೆ

ಸ್ವಾತಂತ್ರ್ಯ ಸಂಭ್ರಮ :ಅಮೃತ ಮಹೋತ್ಸವಕ್ಕೆ ಚಾಲನೆ


 ಚಿಕ್ಕಮಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಮೃತ ಮಹೋತ್ಸವ   ಆಚರಿಸಲು ನಿರ್ಧರಿಸಲಾಗಿದೆ .

ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಹಮ್ಮಿಕೊಂಡಿದ್ದು ಅದರ ಭಾಗವಾಗಿ ಇಂದು ಜಿಲ್ಲಾ ಕೇಂದ್ರದಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು .

ಜಿಲ್ಲಾಧಿಕಾರಿ ಕೆ ಎನ್ ರಮೇಶ್ ನಗರಸಭೆ ಆಯುಕ್ತ ಬಸವರಾಜ್ ಇತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಸುರಕ್ಷತಾ ಕಿಟ್ ಗಳನ್ನು ವಿತರಿಸಲಾಯಿತು .

ಚಿತ್ರ: ತಾರನಾಥ್ ಕಾಮತ್ 

ಚಿಕ್ಕಮಗಳೂರು ನಗರಸಭೆ : ೧.೮೨ಕೋಟಿ ರೂ ಉಳಿತಾಯ ಬಜೆಟ್

 ಚಿಕ್ಕಮಗಳೂರು :ಇಲ್ಲಿನ ನಗರಸಭೆಯ ವಾರ್ಷಿಕ ೮೪.೩೬ಕೋಟಿ ರೂ ಮೊ


ತ್ತದ ಬಜೆಟ್ ಅನ್ನು ಜಿಲ್ಲಾಧಿಕಾರಿಯೂ ಆಗಿರುವ ಆಡಳಿತಾಧಿಕಾರಿ ಕೆ .ಎನ್. ರಮೇಶ್ ಮಂಡಿಸಿದ್ದಾರೆ .

    ನಗರದ 4ಕಡೆಗಳಲ್ಲಿ ಹೈಟೆಕ್ ವಾಣಿಜ್ಯ ಸಂಕೀರ್ಣ ನಿರ್ಮಾಣದ ಜೊತೆಗೆ ರಸ್ತೆ ,ಚರಂಡಿ, ಉದ್ಯಾನ ಅಭಿವೃದ್ಧಿ ,ತ್ಯಾಜ್ಯ ವಿಲೇವಾರಿಗೆ ವಿಶೇಷ ಗಮನ ನೀಡಲಾಗಿದೆ .

೧.೮೨  ಕೋಟಿ ರೂ ಉಳಿತಾಯ ಬಜೆಟ್ ಆಗಿದ್ದು , ಹಿಂದೂ ಮುಸಾಫಿರ್ ಖಾನ ಜಾಗದಲ್ಲಿ ೧೦ ಕೋಟಿ ರೂ ವೆಚ್ಚದಲ್ಲಿ  ಹೈಟೆಕ್ ವಾಣಿಜ್ಯ ಸಂಕೀರ್ಣ ನಿರ್ಮಾಣದ ಪ್ರಸ್ತಾವನೆ ಅಂಗೀಕರಿಸಲಾಗಿದೆ .

ನಗರಸಭೆ ಉದ್ಯಾನ ಅಭಿವೃದ್ಧಿಗೆ ೧೦ ಕೋಟಿ ರೂ. ಮೀಸಲು ಇಡಲಾಗಿದೆ .ಫುಡ್ ಕೋರ್ಟ್ ನಿರ್ಮಾಣ ವಿಚಾರವು ಮತ್ತೆ ಪ್ರಸ್ತಾವನೆ ಗೊಂಡಿದೆ .

ಬುಧವಾರ, ಮಾರ್ಚ್ 24, 2021

ಸಕಾಲ: ನಿಗದಿತ ಸಮಯದೊಳಗೆ ಅರ್ಜಿ ವಿಲೇವಾರಿಗೆ ಸೂಚನೆ

 ಚಿಕ್ಕಮಗಳೂರು,ಮಾ.೨೪: ಸಕಾಲ ಯೋಜನೆಯಡಿ ಸ್ವೀಕರಿಸಿದ ಅರ್ಜಿಗಳನ್ನು ನಿಗದಿತ ಸಮಯದೊಳಗೆ ವಿಲೇವಾರಿ ಮಾಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೂಚಿಸಿದರು.

 ಸಕಾಲ ಯೋಜನೆಯ  ಪ್ರಗತಿ ಪರಿಶೀಲನೆ ಹಾಗೂ ಸಕಾಲ ಸೇವೆಗಳ ಅನುಷ್ಠಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಿದ್ದು, ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕು ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೧೧೩ ಅರ್ಜಿಗಳುನೋಂದಣಿಯಾಗಿದ್ದು  ವಿಲೇವಾರಿಯಾಗದೆ ವಿಳಂಬವಾಗಿರುವುದಕ್ಕೆ ಸೂಕ್ತ ಕಾರಣವನ್ನು ನೀಡಬೇಕೆಂದು ನಗರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಾದೇಶಿಕೆ ಸಾರಿಗೆ ಇಲಾಖೆ, ಕೆ.ಎಸ್.ಆರ್.ಟಿ.ಸಿ, ಕೃಷಿ ಇಲಾಖೆ, ಆಯುಷ್ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳಲ್ಲಿ ವಿಲೇವಾರಿಯಾಗದೇ ಉಳಿದಿರುವ ಅರ್ಜಿಗಳನ್ನು ಪರಿಶೀಲಿಸಿ ಅವುಗಳನ್ನ

ನಿಗದಿತ ಸಮಯದೊಳಗೆ ವಿಲೇವಾರಿ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.