udayanews

ಶುಕ್ರವಾರ, ಏಪ್ರಿಲ್ 2, 2021

ಚಿಕ್ಕಮಗಳೂರಿನಲ್ಲಿ ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಆರೋಗ್ಯ ತಪಾಸಣೆ- ರಕ್ತದಾನ


 ಚಿಕ್ಕಮಗಳೂರು :ರಾಮನಹಳ್ಳಿ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ನಡೆಯಿತು .

ಜಿಲ್ಲಾಧಿಕಾರಿ ಕೆ ಎನ್ ರಮೇಶ್ ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂವಿತಾ, ಜಿಲ್ಲಾ ರಕ್ಷಣಾಧಿಕಾರಿ ಅಕ್ಷಯ್, ನಿವೃತ್ತ ಪೋಲಿಸ್ ನಿರೀಕ್ಷಕ ಪ್ರಭಾಕರ್ 


 ಇತರರು ಪಾಲ್ಗೊಂಡಿದ್ದರು .

ನಿವೃತ್ತ ಪೊಲೀಸರು ಹಾಗೂ ಕರೊನ ಸಂದರ್ಭದಲ್ಲಿ ಶ್ರಮಿಸಿದವರನ್ನು ಸನ್ಮಾನಿಸಲಾಯಿತು . ಧ್ವಜ ದಿನಾಚರಣೆ ಅಂಗವಾಗಿ ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ಆರೋಗ್ಯ ತಪಾಸಣೆ,  ರಕ್ತದಾನ ಶಿಬಿರ ನಡೆಯಿತು .

ಗುರುವಾರ, ಏಪ್ರಿಲ್ 1, 2021

ಕಳಸ ಕರ್ನಾಟಕ ಬ್ಯಾಂಕ್ ನಲ್ಲಿ ಬೆಂಕಿ ಅವಘಡ


 ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದ ಕರ್ನಾಟಕ ಬ್ಯಾಂಕ್ ನಲ್ಲಿ ಇಂದು ಸಂಜೆ  ಬೆಂಕಿ ಕಾಣಿಸಿಕೊಂಡಿದೆ .

ಪ್ಯಾನ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಈ ಬೆಂಕಿ ಹರಡಿದೆ ಎನ್ನಲಾಗಿದ್ದು .ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು  ಬ್ಯಾಂಕಿನ ಬಾಗಿಲನ್ನು ತೆಗೆಸಿದ್ದಾರೆ .

ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಂದಿಸಲಾಗಿದ್ದು ನಷ್ಟದ ಪ್ರಮಾಣ ತಿಳಿದುಬಂದಿಲ್ಲ .

ಹಣ ದುರುಪಯೋಗ ; ಶೃಂಗೇರಿಯ ಉಪನೋಂದಣಾಕಾರಿ ಚೆಲುವರಾಜು ಸೇರಿ 7 ಜನರಿಗೆ ಜೈಲು ಶಿಕ್ಷೆ


 ಚಿಕ್ಕಮಗಳೂರು : ರಾಜಸ್ವ ಹಣ ದುರುಪಯೋಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ  ನಾಲ್ವರು ಉಪ ನೋಂದಣಾಧಿಕಾರಿಗಳು ಸೇರಿದಂತೆ 7ಜನರಿಗೆ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ 

ಉಪನೋಂದಣಾಧಿಕಾರಿಗಳಿಗೆ  ತಲಾ 4 ವರ್ಷ, ಮೂವರು ಪತ್ರ ಬರಹಗಾರರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 1.25 ಕೋಟಿ ದಂಡ ವಿಧಿಸಿ  ಮಂಡ್ಯ 1ನೇ ಹೆಚ್ಚುವರಿ ಸಿವಿಲ್‌, ಜೆಎಂಎಫ್‌ಸಿ ನ್ಯಾಯಾಧೀಶರು ಮಹತ್ವದ ತೀರ್ಪು ನೀಡಿದ್ದಾರೆ.

2006ಕ್ಕೂ ಹಿಂದೆ ಮಂಡ್ಯ  ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಉಪ ನೋಂದಾವಣಾಧಿಕಾರಿಗಳಾಗಿದ್ದ ಎಸ್‌.ಎನ್‌.ಪ್ರಭಾ, ಚಲುವರಾಜು, ಪ್ರಭಾರ ಉಪ ನೋಂದಣಾಧಿಕಾರಿಗಳಾಗಿದ್ದ ಲೀಲಾವತಿ, ಸುನಂದಾ ಹಾಗೂ ಪತ್ರ ಬರಹಗಾರರಾಗಿದ್ದ ಬಿ.ಕೆ.ರಾಮರಾವ್‌, ನರಸಿಂಹಮೂರ್ತಿ, ಚಂದ್ರಶೇಖರ್‌ ಶಿಕ್ಷೆಗೆ ಒಳಗಾದವರು.

ಒಟ್ಟು 154 ಪ್ರಕರಣಗಳಲ್ಲಿ ಹಣ ದುರುಪಯೋಗವಾಗಿರುವ ಬಗ್ಗೆ 2006ರಲ್ಲಿ ಉಪ ನೋಂದಣಾಧಿಕಾರಿಯಾಗಿದ್ದ ನರಸಿಂಹಯ್ಯ ಪಶ್ಚಿಮ ಠಾಣೆಗೆ ದೂರು ಸಲ್ಲಿಸಿದ್ದರು. 

ಇದರ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ರಮೇಶ್‌ ಎಸ್ ಗಾಣಿಗೇರ್‌ ಮಹತ್ವದ ತೀರ್ಪು ನೀಡಿದ್ದಾರೆ.

ಎಸ್‌.ಎನ್‌.ಪ್ರಭಾ ಸದ್ಯ ಬೆಂಗಳೂರು ಐಜಿಆರ್‌ (ಇನ್‌ಸ್ಪೆಕ್ಟರ್‌ ಜನರಲ್‌ ಆಫ್‌ ರಿಜಿಸ್ಟ್ರೇಷನ್‌) ಕಛೇರಿಯಲ್ಲಿದ್ದಾರೆ. ಚೆಲುವರಾಜು ಶೃಂಗೇರಿ ಉಪ ನೋಂದಣಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ .


 ಲೀಲಾವತಿ ಮದ್ದೂರು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಎಫ್‌ಡಿಎ, ಸುನಂದಾ ಬೆಂಗಳೂರು ಎಲೆಕ್ಟ್ರಾನಿಕ್‌ ಸಿಟಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಎಫ್‌ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಅಭಿಯೋಜಕ ಎಂ. ಜಿ ಸುರೇಶ್‌ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಶೃಂಗೇರಿ ಉಪನೋಂದಣಾಧಿಕಾರಿ ಚಲುವರಾಜ್ ಇತ್ತೀಚೆಗೆ  ಕಂದಾಯ ಸಚಿವ ಆರ್ ಅಶೋಕ್ ರವರ ಆಪ್ತ ಸಹಾಯಕರ ಮೇಲೆ ಲಂಚದ ಆರೋಪ ಹೊರಿಸಿ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು .


ಯುವಕ ನೀರುಪಾಲು ದೃಶ್ಯ ಮೊಬೈಲ್ ನಲ್ಲಿ ಸೆರೆ

 


ಚಿಕ್ಕಮಗಳೂರು :ಜಿಲ್ಲೆಯ ಭದ್ರಾ ಹಿನ್ನೀರಿನಲ್ಲಿ ಯುವಕನೋರ್ವ ನೀರುಪಾಲಾಗುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ .

ನರಸಿಂಹರಾಜಪುರ ತಾಲ್ಲೂಕಿನ ಮಾರಿದಿಬ್ಬ ಬಳಿಯ ಭದ್ರಾ ಹಿನ್ನೀರಿನಲ್ಲಿ  ಶಿವಮೊಗ್ಗದ ಸಲ್ಮಾನ್ ಈಜಲು ತೆರಳಿದ್ದು  ನೀರುಪಾಲಾಗಿದ್ದಾನೆ .

ತನ್ನನ್ನು ರಕ್ಷಿಸುವಂತೆ ಮನವಿ ಮಾಡುತ್ತಿದ್ದರೂ ಯಾರೂ ಸ್ಪಂದಿಸಿಲ್ಲ .ಆದರೆ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ ಇರುವುದು ಅಚ್ಚರಿ ತಂದಿದೆ .


ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ :224 ಕೋಟಿ ರೂ ಉಳಿಕೆ


 ಚಿಕ್ಕಮಗಳೂರು :   ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರ ಪ್ರಸಕ್ತ ಸಾಲಿನಲ್ಲಿ 368. 29 ಕೋಟಿ ರೂ ಆದಾಯ ನಿರೀಕ್ಷಿಸಿದ್ದು   143.63ಕೋಟಿ ರೂ ವೆಚ್ಚ ಮಾಡಲು ತೀರ್ಮಾನಿಸಿದ್ದು, 224 ಕೋಟಿ ರೂ ಉಳಿತಾಯ ಆಗಲಿದೆ .

ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಪ್ರಾಧಿಕಾರದ ಅಧ್ಯಕ್ಷ ಆನಂದ ಹಾಗೂ ಪ್ರಭಾರಿ ಆಯುಕ್ತ ಬಸವರಾಜ್  ಬೈಪಾಸ್ ರಸ್ತೆಯಿಂದ ದಂಟರಮಕ್ಕಿ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಅತ್ಯಾಧುನಿಕ ವಸತಿ ಬಡಾವಣೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು .

ಉದ್ಯಾನವನ, ಕೆರೆಗಳ ಅಭಿವೃದ್ಧಿ ಜೊತೆಗೆ ಯಗಚಿ ಹಳ್ಳದ ಇಕ್ಕೆಲಗಳ ಬಫರ್ ಜಾಗವನ್ನು ಗುರುತಿಸಿ ಒತ್ತುವರಿ ತಡೆಯಲಾಗುತ್ತದೆ ಎಂದು ತಿಳಿಸಿದರು. 

ಬುಧವಾರ, ಮಾರ್ಚ್ 31, 2021

ಪಂಚಾಯಿತಿ ಚುನಾವಣೆ :ಮತ ಎಣಿಕೆ ಪೂರ್ಣ :ವಿಜಯೋತ್ಸವ


 ಚಿಕ್ಕಮಗಳೂರು :ಜಿಲ್ಲೆಯಲ್ಲಿ 32 ಗ್ರಾಮ ಪಂಚಾಯಿತಿಗಳ 257  ಸ್ಥಾನಗಳಿಗೆ ನಡೆದ  ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಪೂರ್ಣಗೊಂಡಿತು .

ಒಟ್ಟು 663 ಅಭ್ಯರ್ಥಿಗಳು  ಕಣದಲ್ಲಿ ಇದ್ದು ಬೆಳಿಗ್ಗೆ ೮ ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭವಾಯಿತು .

ಚಿಕ್ಕಮಗಳೂರು ಸೇರಿದಂತೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಭರದಿಂದ ಸಾಗಿದ್ದು ಸಿಬ್ಬಂದಿ ನೇಮಕ ಸೇರಿದಂತೆ  ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು .

ಮತ ಎಣಿಕೆ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಇದ್ದರೂ ಕೂಡ ಅದನ್ನು ಲೆಕ್ಕಿಸದೆ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು . ಕೋವಿಡ್ ನಿಯಮಗಳ ವ್ಯಾಪಕ ಉಲ್ಲಂಘನೆಯಾಗಿತ್ತು .

ಗೆದ್ದವರು ಬಿಗಿ ವಿಜಯೋತ್ಸವ ಆಚರಿಸಿದರೆ ,ಸೋತವರು ಸಪ್ಪೆ ಮುಖ ಹಾಕಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು .

ಬಸವನಹಳ್ಳಿ ಬಾಲಿಕಾ ಶಾಲೆಯಲ್ಲಿ ಸೋಂಕು ಪತ್ತೆ: ವಿದ್ಯಾರ್ಥಿಗಳಲ್ಲಿ ಆತಂಕ


 ಚಿಕ್ಕಮಗಳೂರು ಇಲ್ಲಿನ ಬಸವನಹಳ್ಳಿ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿ ಯೋರ್ವರಿಗೆ  ಕೊರೊನ ಸೋಂಕು ಪತ್ತೆಯಾಗಿದೆ .

ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಆತಂಕ ಮನೆ ಮಾಡಿದೆ.  ಈ ಶಾಲೆಯಲ್ಲಿ ಒಟ್ಟು 419 ವಿದ್ಯಾರ್ಥಿಗಳು ಇದ್ದು ಅದರಲ್ಲಿ ಇಂದು 284  ವಿದ್ಯಾರ್ಥಿಗಳು  ಹಾಜರಾಗಿದ್ದರು .

ಸೋಂಕು ಪತ್ತೆಯಾಗಿರುವುದು ತಿಳಿದ ತಕ್ಷಣ ಆರೋಗ್ಯ ಇಲಾಖೆ ನೆರವಿನಿಂದ ಎಲ್ಲ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಮಾಡಿಸಲಾಗಿದೆ .

ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೂ ಸೋಂಕು ಪತ್ತೆಯಾಗಿರುವುದು ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕಳವಳ ಮೂಡಿಸಿದ್ದು ಎಲ್ಲಿ   ಪರೀಕ್ಷೆಗಳು ಮುಂದೂಡಲ್ಪಡುತ್ತವೆ' ಶಾಲೆ ಮುಚ್ಚುತ್ತದೆ ಎಂಬ ಹೆದರಿಕೆ ಮನೆಮಾಡಿದೆ .

ಉಳಿದ ಶಾಲೆಗಳಲ್ಲಿಯೂ ಎಚ್ಚರಿಕೆ ವಹಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ .

ಚಿತ್ರ: ತಾರನಾಥ್ ಕಾಮತ್