udayanews

ಸೋಮವಾರ, ಏಪ್ರಿಲ್ 19, 2021

ಔಷಧಿ ದರ ಹೆಚ್ಚಿಸಿದಲ್ಲಿ ಕ್ರಮ : ಶಾಸಕ ಸಿ.ಟಿ.ರವಿ




ಚಿಕ್ಕಮಗಳೂರು.:- ಕೋರೊನಾ ಎರಡನೇ ಅಲೆಯು ವ್ಯಾಪಾಕವಾಗಿ ಹರಡುತ್ತಿರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಔಷಧಿ ದರವನ್ನು ಹೆಚ್ಚಿಸುವಂತಿಲ್ಲ, ಹೆಚ್ಚಿಸಿದ್ದಲ್ಲಿ  ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ  ಶಾಸಕ ಸಿ.ಟಿ.ರವಿ ಸೂಚಿಸಿದರು. 


ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಖಾಸಗಿ ಆಸ್ಪತ್ರೆಗಳು ಶೇ. ೫೦% ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಬೇಕು,  ಇತರೆ ಖಾಯಿಲೆಗಳಿಗೆ ಸಂಬಂಧಿಸಿದ ರೋಗಿಗಳನ್ನು ನಿರ್ಲಕ್ಷಿಸದೇ ಪರ್ಯಾಯ ಮಾರ್ಗಗಳನ್ನು ರೂಪಿಸಬೇಕು . ಔಷಧಿ ದರಗಳನ್ನು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು  ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.


ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಹೆಚ್ಚಿನ ಜನರು ಭೇಟಿ ನೀಡುವುದರಿಂದ, ಅರ್ಚಕರಿಗೆ, ಮುಲ್ಲಾ, ಫಾದರ್‌ಗಳಿಗೆ , ಆಟೋ ಚಾಲಕರು, ಕ್ಷೌರಿಕರುಗಳಿಗೂ ಲಸಿಕೆ ನೀಡುವಂತೆ ತಿಳಿಸಿದರು.

  ನಿಯಮ ಪಾಲಿಸದ ಕಲ್ಯಾಣ ಮಂಟಪದ ಮಾಲೀಕರ ವಿರುದ್ಧ ಕ್ರಮ ಜರುಗಿಸುವಂತೆ ಹೇಳಿದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್  , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹೆಚ್, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ, ತಹಸೀಲ್ದಾರ್ ಕಾಂತರಾಜ್, ಜಿಲ್ಲಾ ಆರೋಗ್ಯ ಮತ್ತು ಕುಂಟಬ ಕಲ್ಯಾಣಾಧಿಕಾರಿ ಡಾ.ಉಮೇಶ್  ಉಪಸ್ಥಿತರಿದ್ದರು.

ಸೋಮವಾರ, ಏಪ್ರಿಲ್ 12, 2021

ಚಿಕ್ಕಮಗಳೂರು: ತೀವ್ರಗೊಂಡ ಸಾರಿಗೆ ನೌಕರರ ಮುಷ್ಕರ


ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರ ಆರನೇ ದಿನಕ್ಕೆ ಕಾಲಿಟ್ಟಿದೆ 

.ಸರ್ಕಾರ ಅನುಸರಿಸುತ್ತಿರುವ ಯಾವುದೇ ರೀತಿಯ ದಮನಕಾರಿ  ತಂತ್ರಗಳಿಗೆ ಮಣಿಯದೆ  ನೌಕರರು ತಮ್ಮ ಪಟ್ಟನ್ನು ಸಡಿಲಿಸದೆ ಮುಷ್ಕರ ಮುಂದುವರಿಸಿದ್ದಾರೆ .ಇಂದು ಆಜಾದ್ ಮೈದಾನದಲ್ಲಿ ತಟ್ಟೆ ಲೋಟ ಬಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನೌಕರರು  ಬೇಡಿಕೆ ಈಡೇರುವ ತನಕ ಮುಷ್ಕರ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ .

ಮುಷ್ಕರಕ್ಕೆ ಬಿಜೆಪಿ ಹೊರತುಪಡಿಸಿ ವಿವಿಧ ಪಕ್ಷ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ .ಸರ್ಕಾರ ನೌಕರರ ಮೇಲೆ ಹೇರುತ್ತಿರುವ ಒತ್ತಡವನ್ನು ಮುಖಂಡರು ಖಂಡಿಸಿದ್ದಾರೆ 


ಮಂಗಳವಾರ, ಏಪ್ರಿಲ್ 6, 2021

ಚಿಕ್ಕಮಗಳೂರು :ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಆರಂಭ


 ಚಿಕ್ಕಮಗಳೂರು :ನಗರದ ಎಲ್ಲೆಂದರಲ್ಲಿ ಬೀದಿನಾಯಿಗಳ ಹಾವಳಿ ತೀವ್ರವಾಗಿದ್ದು ಜನ ಆತಂಕಕ್ಕೆ ಒಳಗಾಗಿದ್ದರು .

ಬೀದಿ ನಾಯಿಗಳ ಹಾವಳಿಯಿಂದ ಬೇಸತ್ತ ಜನ ನಗರಸಭೆಗೆ ದೂರನ್ನು ಸಲ್ಲಿಸಿದ್ದರು. ಸಾರ್ವಜನಿಕರ ದೂರು ಆಧರಿಸಿ ನಗರಸಭೆ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಿಸಲು ಆರಂಭಿಸಿದೆ .

ಇಂದಾವರದ ಹೊರವಲಯದಲ್ಲಿ ಈ ಕೆಲಸ ನಡೆಯುತ್ತಿದ್ದು ಸಂತಾನಹರಣ ಚಿಕಿತ್ಸೆಗೆ ಒಳಗಾದ ನಾಯಿಗಳನ್ನು 4ದಿನಗಳ ಬಳಿಕ ಬಿಡಲಾಗುವುದು ಎಂದು ನಗರಸಭೆ ಆಯುಕ್ತ ಬಸವರಾಜ್  ತಿಳಿಸಿದ್ದಾರೆ 

ಸೋಮವಾರ, ಏಪ್ರಿಲ್ 5, 2021

ದಾಸರಹಳ್ಳಿ ಕೆರೆ ಕಾಲುವೆ ಒತ್ತುವರಿ ತೆರವು

 ಚಿಕ್ಕಮಗಳೂರು : ಸಮೀಪದ ದಾಸರಹಳ್ಳಿ ಕೆರೆ ಕಾಲುವೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಉಪವಿಭಾಗಧಿಕಾರಿ ಡಾ.ಹೆಚ್.ಎಲ್ ನಾಗರಾಜ್  ಮಾರ್ಗದರ್ಶನದಲ್ಲಿ ದಾಸರಹಳ್ಳಿ ಕೆರೆ ಸರ್ವೆ ಕಾರ್ಯ ಮುಗಿದಿದ್ದು ಇಂದು 


ಕಾಲುವೆ ಒತ್ತುವರಿ ತೆರವು ಮಾಡಿಸಲಾಯಿತು.

ರೆವಿನ್ಯೂ ಇನ್ಸ್‌ಪೆಕ್ಟರ್ ಪುಟ್ಟರಾಜು,ಸರ್ವೆಯರ್ ದೊರೆರಾಜು. ವಿಷನ್ ಚಿಕ್ಕಮಗಳೂರು ಟ್ರಸ್ಟ್ ಸದಸ್ಯರು ಹಾಗೂ ಸ್ಥಳೀಯರಯ ಭಾಗವಹಿಸಿದ್ದರು.

ಭಾನುವಾರ, ಏಪ್ರಿಲ್ 4, 2021

ವಾಹನಕ್ಕೆ ಸಿಲುಕಿ ಚಿರತೆ ಮರಿ ಸಾವು

 ಚಿಕ್ಕಮಗಳೂರು :ಕಡೂರು ವಲಯದ ಹಾದಿ


ಗೆರೆ ಗ್ರಾಮದ ಬಳಿ ಅಂದಾಜು 1 ಒಂದು ವರ್ಷದ ಚಿರತೆ ಮರಿ ಸಾವನ್ನಪ್ಪಿದೆ. ಯಾವುದೋ ಅಪರಿಚಿತ ವಾಹನಕ್ಕೆ ಸಿಲುಕಿ ಸತ್ತಿರುವ ಸಾಧ್ಯತೆ ಇದೆ.

ಭದ್ರ ವನ್ಯಜೀವಿ ವಿಭಾಗದ ಪಶವೈದ್ಯಾಧಿಕಾರಿ ಯಶಸ್ ಮತ್ತು ಅಸಂದಿ ಗ್ರಾಮ ಪಶವೈದ್ಯಾಧಿಕಾರಿ ಭರತ್ ನೇತೃತವದಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು.

 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲ , ಕಡೂರು ವಲಯ ಅರಣ್ಯಾಧಿಕಾರಿ ತನುಜ್ ಕುಮಾರ್ , ಗೌರವ ವನ್ಯಜೀವಿ ಪರಿಪಾಲಕ ಜಿ. ವೀರೇಶ್ ಸಿಬ್ಬಂದಿಗಳು ಇದ್ದರು .ಈ ಸಂಬಂಧ ಪ್ರಕರಣ ದಾಖಲಾಗಿದೆ.

ಶನಿವಾರ, ಏಪ್ರಿಲ್ 3, 2021

ಚಾರ್ಮಾಡಿಯ' ದೂದ್ ಸಾಗರ್ '



 ಚಿಕ್ಕಮಗಳೂರು : ಸದಾ ಹಸಿರನ್ನು ಹೊದ್ದು ನಿಂತ ಮಲೆನಾಡನ್ನು ನೋಡುವುದೇ ಒಂದು ಸೊಬಗು ಮಳೆಗಾಲದ ನಂತರ ಅದರ ವೈಭವವೇ ಬೇರೆ . 

ಬೇಸಗೆಯಲ್ಲಿ ಕಾನನದಲ್ಲಿ ಅಡಗಿ ಕುಳಿತು ಮಳೆ ಬಿದ್ದೊಡನೆ ಧುತ್ತೆಂದು  ಹೊರಜಗತ್ತಿಗೆ ಕಾಣಿಸಿಕೊಳ್ಳುವ ಜಲ ಧಾರೆಗಳ ನೋಟ ಒಂದು ಕಾವ್ಯ .

ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಲಧಾರೆಗಳಿವೆ ಕೊರತೆಯಿಲ್ಲ . ಚಿಕ್ಕಮಗಳೂರು -ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿ ಜಲಧಾರೆಗಳ ಗಣಿ .

ಜುಲೈನಲ್ಲಿ ಧೋ ಎಂದು ಸುರಿಯುವ ಮಳೆ  ಇಲ್ಲಿನ ಜಲಪಾತಗಳಿಗೆ ಜೀವ ತುಂಬುತ್ತದೆ . ಹೆಜ್ಜೆಗೊಂದರಂತೆ ಸಿಗುವ ಜಲಕನ್ಯೆಯರು ಕಣ್ಮನ ತಣಿಸುತ್ತಾರೆ . ಅಕ್ಟೋಬರ್ ವರೆಗೆ ಈ ಸಂಭ್ರಮ ಇರುತ್ತದೆ .ಮತ್ತೆ ಮಳೆಗಾಲಕ್ಕೆ ಕಾಯಬೇಕು .

ಶುಕ್ರವಾರ, ಏಪ್ರಿಲ್ 2, 2021

ಚಿಕ್ಕಮಗಳೂರು:26 ವಿದ್ಯಾರ್ಥಿನಿಯರಲ್ಲಿ ಸೋಂಕು


 ಚಿಕ್ಕಮಗಳೂರು :ಜಿಲ್ಲೆಯಲ್ಲಿ ಕರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ ಜನರಲ್ಲಿ ಆತಂಕ ಮನೆಮಾಡಿದೆ .

ಇಂದು 47 ಪ್ರಕರಣಗಳು ಬೆಳಕಿಗೆ ಬಂದಿದ್ದು ಅದರಲ್ಲಿ 26 ವಿದ್ಯಾರ್ಥಿನಿಯರಿಗೆ ಸೋಂಕು ಇರುವುದು  ದೃಢಪಟ್ಟಿದ್ದು ಜನ ಗಾಬರಿಗೊಳ್ಳುವಂತೆ ಮಾಡಿದೆ .

ಬಸವನಹಳ್ಳಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಮೊದಲು ಸೋಂಕು ಕಾಣಿಸಿಕೊಂಡಿತ್ತು .ಆಕೆಯಿಂದಲೇ ಉಳಿದವರಿಗೂ ಹಬ್ಬಿರುವ ಶಂಕೆ ವ್ಯಕ್ತವಾಗಿದೆ . 

ಶೃಂಗೇರಿ ವಸತಿ ಶಾಲೆಯ ಮೂವರು ವಿದ್ಯಾರ್ಥಿನಿಯರಲ್ಲಿ ಸೋಂಕು ಕಾಣಿಸಿಕೊಂಡಿದೆ