udayanews

ಮಂಗಳವಾರ, ನವೆಂಬರ್ 1, 2022

ಕಾರ್ಮಿಕರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ : ಶಾಸಕರ ವಿರುದ್ಧ ಕಪ್ಪುಪಟ್ಟಿ ಪ್ರದರ್ಶನಕ್ಕೆ ಸಿದ್ಧತೆ - ಬಂಧನ


 ಚಿಕ್ಕಮಗಳೂರು :  ಕಳೆದ 5 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದ ದಲಿತ ಸಂಘಟನೆ ಮುಖಂಡರನ್ನು ಪೊಲೀಸರು ಇಂದು ಬಂಧಿಸಿದ್ದಾರೆ .

 ಕಾರ್ಮಿಕರ ಮೇಲೆ ಹಲ್ಲೆ, ದೌರ್ಜನ್ಯ ಖಂಡಿಸಿ ಇಲ್ಲಿನ ಆಜಾದ್ ಮೈದಾನದಲ್ಲಿ ಪ್ರತಿಭಟನೆ  ನಡೆಸಲಾಗುತ್ತಿತ್ತು. ಕನ್ನಡ ರಾಜ್ಯೋತ್ಸವ ಮೆರವಣಿಗೆ ಬರುತ್ತಿದ್ದ ಸಂದರ್ಭದಲ್ಲಿ  ಪ್ರತಿಭಟನೆ ನಿರತರು  ಜಿಲ್ಲಾಡಳಿತ, ಸರ್ಕಾರದ ವಿರುದ್ಧ   ಘೋಷಣೆ ಘೋಷಣೆ ಕೂಗಿದರು.





 ಹಲ್ಲೆ, ದೌರ್ಜನ್ಯ ನಡೆಸಿದ ಆರೋಪಿಯನ್ನು ಬಂಧಿಸದ ಕ್ರಮ ಖಂಡಿಸಿ   ಜಿಲ್ಲಾಡಳಿತ ಹಾಗೂ ಶಾಸಕರ ವಿರುದ್ಧ   ಕಪ್ಪು ಬಾವುಟ ಪ್ರದರ್ಶಿಸಲು ಸಿದ್ದತೆ ನಡೆಸಿದ್ದು ಮುಂಜ್ರಾಗತಾ ಕ್ರಮವಾಗಿ  ಪೊಲೀಸರು 20 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.  

ಚಿಕ್ಕಮಗಳೂರು ಪ್ರತ್ಯೇಕ ವಿವಿ ಪ್ರಸ್ತಾವನೆಗೆ ಸಮ್ಮತಿ : ಸದ್ಯದಲ್ಲೇ ಅಂಕಿತ- ಶಾಸಕ ರವಿ

 ಚಿ


ಕ್ಕಮಗಳೂರು :ಚಿಕ್ಕಮಗಳೂರು ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಲು ಸಮ್ಮತಿ ಸಿಕ್ಕಿದ್ದು ಸದ್ಯದಲ್ಲೇ ಸಚಿವ ಸಂಪುಟದ ಒಪ್ಪಿಗೆ ಸಿಗಲಿದೆ ಎಂದು ಶಾಸಕ ಸಿ .ಟಿ .ರವಿ ತಿಳಿಸಿದ್ದಾರೆ .

ಸುದೀರ್ಘ ಕಾಲದ ಬಳಿಕ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ಶಿಕ್ಷಣ ಸಚಿವರ ಜತೆಗೆ ಈ ಕುರಿತು ಈಗಾಗಲೇ ಚರ್ಚಿಸಲಾಗಿದೆ ಎಂದರು  .
ಸಮ್ಮತಿ ಸಿಕ್ಕಿದ್ದು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು .ಇದಕ್ಕಾಗಿ ಕದ್ರಿಮಿದ್ರಿ ಬಳಿ ನಲವತ್ತು ಎಕರೆ ಜಾಗ ಮೀಸಲಿಡಲಾಗಿದೆ ಎಂದು ಹೇಳಿದರು .
ಇದೇ ತಿಂಗಳ 15 ರಂದು ಕಡೂರಿಗೆ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ  ಆಗಮಿಸಲಿದ್ದು ಕಡೂರು ಮತ್ತು ತರೀಕೆರೆ ತಾಲ್ಲೂಕಿನ   ಹಳ್ಳಿಗಳಿಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಯೋಜನೆಗೆ ಶಿಲಾನ್ಯಾಸ ಹಾಕಲಿದ್ದಾರೆ ಎಂದರು .
ಅದೇ ದಿನ ಪಕ್ಷದ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು .
ಒಳಚರಂಡಿ ಕಾಮಗಾರಿಯನ್ನು ಡಿಸೆಂಬರ್ ಅಂತ್ಯಕ್ಕೆ ಮುಗಿಸಬೇಕೆಂದು ನಿರ್ಧರಿಸಿದ್ದು ,ಹೆಚ್ಚೆಂದರೆ ಮಾರ್ಚಿ ವೇಳೆಗೆ ಖಚಿತವಾಗಿ ಮುಗಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗುಜರಾತಿನ ಮೊರ್ಬಿಯಲ್ಲಿ ನಡೆದ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿ , ನಟನೆಗೆ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದರು .
ಜಿಲ್ಲೆಯ ವಿವಿಧ ಸಮಸ್ಯೆಗಳತ್ತ ಪತ್ರಕರ್ತರು ಗಮನ ಸೆಳೆದಾಗ ಪರಿಶೀಲಿಸುವ ಭರವಸೆ ನೀಡಿದರು .

ಸೋಮವಾರ, ಅಕ್ಟೋಬರ್ 31, 2022

ಜನಪ್ರತಿನಿಧಿ -ಅಧಿಕಾರಿಗಳ ನಿರ್ಲಕ್ಷ ;ಹೆದ್ದಾರಿಯಲ್ಲಿ ಸರಣಿ ಅಪಘಾತ; ಹಲವರ ಬಲಿ

 

ಚಿಕ್ಕಮಗಳೂರು :ಕೋಟೆ ಕೆರೆಯಿಂದ ಹಿರೇಮಗಳೂರು ಸಂಪರ್ಕಿಸುವ ಹೆದ್ದಾರಿಯಲ್ಲಿ ಸೂಕ್ತ ವಿದ್ಯುತ್ ವ್ಯವಸ್ಥೆ ಇಲ್ಲದೆ ಅನೇಕ ಅಪಘಾತಗಳು ಪದೇ ಪದೇ ಸಂಭವಿಸುತ್ತಿವೆ .ವಿದ್ಯುತ್ ವ್ಯವಸ್ಥೆ ಇಲ್ಲದೆ ಕತ್ತಲು ಆವರಿಸಿ ,ಡಿವೈಡರ್ ಗಳು ಕಾಣದೆ ಅನೇಕ ವಾಹನಗಳು ಅಪಘಾತಕ್ಕೆ ಒಳಗಾಗಿವೆ .

ಇಂದು ಅಂತಹದ್ದೇ ಘಟನೆಯೊಂದು ನಡೆದಿದೆ.ವೇಗವಾಗಿ ಬಂದ ಕಾರೊಂದು ,ಡಿವೈಡರ್ ಗೆ ಅಪ್ಪಳಿಸಿ ಎದುರಿನಿಂದ ಹೋಗುತ್ತಿದ್ದ ಆಟೋ ರಿಕ್ಷಾವನ್ನು ಸೀಳಿಕೊಂಡು ಶನಿ ದೇವಸ್ಥಾನದ ಬಳಿ ಹೋಗಿ ನುಜ್ಜುಗುಜ್ಜಾಗಿ  ನಿಂತಿದೆ .

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ .ಈ ಹಿಂದೆ  ನಡೆದ ಅಪಘಾತದಲ್ಲಿ ಇಬ್ಭರು ಸಾವಪ್ಪಿದ್ದು , ಇಂದು ಪಾದಚಾರಿಯೊಬ್ಬರು ಜಸ್ಟ್  ಮಿಸ್ ಆಗಿದ್ದಾರೆ .

ಈ ರಸ್ತೆಗೆ ಅಗತ್ಯ ವಿದ್ಯುತ್ ದೀಪ ಸೌಲಭ್ಯ ಕಲ್ಪಿಸುವಂತೆ ಅನೇಕ ಬಾರಿ ಒತ್ತಾಯಿಸಿದ್ದರೂ ಸಂಬಂಧಪಟ್ಟ ಅಧಿಕಾರಿ ಜನಪ್ರತಿನಿಧಿಗಳು ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ .

ನಗರಸಭೆ ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜನಪ್ರತಿನಿಧಿಗಳು ಪರಸ್ಪರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದು ಇನ್ನಾದರೂ ಸಮಸ್ಯೆ ಬಗೆಹರಿಸಿ ಮುಂದೆ ಆಗುವ ಅನಾಹುತಗಳಿಗೆ ಕಡಿವಾಣ ಹಾಕಲಿ ಎಂದು ಒತ್ತಾಯಿಸಿದ್ದಾರೆ 

ಭಾನುವಾರ, ಅಕ್ಟೋಬರ್ 30, 2022

ಕೃಷಿ ಕ್ಷೇತ್ರದಲ್ಲಿ ಸಾಧನೆ: ರಾಜ್ಯೋತ್ಸವ ಪ್ರಶಸ್ತಿ ಗೆ ಚಂದ್ರಶೇಖರ ನಾರಾಯಣಪುರ

 


ಚಿಕ್ಕಮಗಳೂರು :ರಾಜ್ಯ ಸರ್ಕಾರ ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಸಂಘ ಸಂಸ್ಥೆಗಳನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು ,ಜಿಲ್ಲೆಯ ಚಂದ್ರಶೇಖರ ನಾರಾಯಣಪುರ ಪ್ರಶಸ್ತಿಗೆ ಭಾಜನರಾಗಿದ್ದಾರೆ .

ಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ತರೀಕೆರೆ ತಾಲ್ಲೂಕಿನ ನಾರಾಯಣಪುರದ ಚಂದ್ರಶೇಖರ್  ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿ ಬಳಿಕ ತಮ್ಮ ಕ್ಷೇತ್ರವನ್ನು ಕೃಷಿಯತ್ತ ಬದಲಾಯಿಸಿದ್ದರು 

ಮೂಗ್ತಿಹಳ್ಳಿ  ಬಳಿ  ಜಮೀನು ಖರೀದಿಸಿ ನೈಸರ್ಗಿಕ ಕೃಷಿಗೆ ವಿಶೇಷ ಗಮನ ನೀಡಿ ಅಪಾರ ಸಾಧನೆ ಮಾಡಿ ಮನ್ನಣೆ ಗಳಿಸಿದ್ದರು .

ಇವರ ನೈಸರ್ಗಿಕ ಕೃಷಿ ಕ್ಷೇತ್ರಕ್ಕೆ ಹತ್ತು ಹಲವು ಗಣ್ಯರು ಭೇಟಿ ನೀಡಿ ಪ್ರಶಂಸೆ ಹೊರಹಾಕಿದ್ದರು .

ಧರ್ಮಗ್ರಂಥಗಳನ್ನು ಪೂರ್ಣವಾಗಿ ಅಧ್ಯಯನ ಮಾಡಿದವನು ಕೋಮುವಾದಿ ಆಗುವುದಿಲ್ಲ : ಸಿನಾನ್ ಫೈಝಿ

 



ಬಣಕಲ್ : ಧರ್ಮಗ್ರಂಥಗಳನ್ನು ಸಮರ್ಪಕವಾಗಿ ಅಧ್ಯಯನ ಮಾಡಿದವನು ಎಂದಿಗೂ ಕೋಮವಾದಿ ಆಗುವುದಿಲ್ಲ ಎಂದು ಚಕಮಕ್ಕಿಯ ಖಲಂದರಿಯ ಅನಾಥಾಶ್ರಮದ ಪ್ರಾಂಶುಪಾಲ ಮೌಲಾನಾ ಸಿನಾನ್ ಫೈಝಿ ಹೇಳಿದರು.

ಬಣಕಲ್ ನಲ್ಲಿ ನಡೆದ ವಾರ್ಷಿಕ ಈದ್ ಮಿಲಾದ್ ಕಾರ್ಯಕ್ರಮದಲ್ಲಿ  ಮಾತನಾಡಿ ಕುರಾನ್, ಭಗವದ್ಗೀತೆ, ಬೈಬಲ್ ಧರ್ಮ ಗ್ರಂಥಗಳನ್ನು  ಪೂರ್ಣವಾಗಿ ಅರಿತವನು ಕೋಮುವಾದಿಯಾಗಲು ಸಾಧ್ಯವಿಲ್ಲ , ಪ್ರವಾದಿ ಮಹಮ್ಮದ್ ಪೈಗಂಬರ್ ಜಗತ್ತಿಗೆ ಬೆಳಕು ನೀಡಿದ ಮಹಾನ್ ವ್ಯಕ್ತಿ  ಎಂದರು.

ಬಣಕಲ್ ಸುನ್ನೀ ಜಾಮಿಯಾ ಜುಮ್ಮ ಮಸೀದಿಯ ಧರ್ಮಗುರು ಜನಾಬ್ ಮೌಲಾನ ಮಹಮ್ಮದ್ ಶಾಕೀಬ್ ರಜ್ವಿ ನೂರಿ  ಮಾತನಾಡಿದರು  . ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು . 

ಕೊಟ್ಟಿಗೆಹಾರ ಬದ್ರಿಯ ಜುಮ್ಮಾ ಮಸೀದಿಯ ಧರ್ಮ ಗುರುಅಬ್ದುಲ್ ರೆಹಮಾನ್ ಫೈಝಿ,  ಮೋಹಿದ್ದೀನ್ ಜುಮ್ಮಾ ಮಸೀದಿಯ ಧರ್ಮ ಗುರು ಜುಬೇರ್ ಧಾರಿಮಿ,  ಹೋಬಳಿ ಮಿಲಾದ್ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಆಲಿ ಹಾಜಿ ಪಾಲ್ಗೊಂಡಿದ್ದರು 

ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆ : ಪೋಕ್ಸೊ ಕಾಯ್ದೆ ಅಡಿ ಶಿಕ್ಷಕನ ಬಂಧನ

 ಚಿ


ಕ್ಕಮಗಳೂರು :ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಕೊಪ್ಪದ ಸರ್ಕಾರಿ ಶಾಲೆ ಶಿಕ್ಷಕನೊಬ್ಬನನ್ನು ಬಂಧಿಸಲಾಗಿದೆ .

ಕೊಪ್ಪ ಸರ್ಕಾರಿ ಶಾಲೆ ಶಿಕ್ಷಕ ಸತೀಶ್ ಬಂಧಿತ ಆರೋಪಿ .ಈತನ ವಿರುದ್ಧ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ .

ಈ ಶಿಕ್ಷಕ ಈ ಹಿಂದೆ ಕೆಲಸ ಮಾಡುತ್ತಿದ್ದ ಶಾಲೆ ಮುಚ್ಚಲು ಈತನ ಅನುಚಿತ ವರ್ತನೆ ಕಾರಣ ಎನ್ನುವ ಆರೋಪವೂ ಇದೆ .ಶಿಕ್ಷಕನನ್ನು ಈಗಾಗಲೇ  ಅಮಾನತುಪಡಿಸಲಾಗಿದೆ

 ಅನುದಾನ ಹಂಚಿಕೆ ತಾರತಮ್ಯ ಆರೋಪ : ಪಿಡಿಒ -ಸದಸ್ಯರ ಮಧ್ಯೆ ಜಟಾಪಟಿ ;ರಸ್ತೆ ತಡೆ ಪ್ರತಿಭಟನೆ 


ಚಿಕ್ಕಮಗಳೂರು :ಅನುದಾನ ಹಂಚಿಕೆ ವಿಚಾರವಾಗಿ ಗ್ರಾಮ ಪಂಚಾಯತಿ ಸದಸ್ಯ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡ ಘಟನೆ ನಡೆದಿದೆ .

ಕಡೂರು ತಾಲ್ಲೂಕಿನ ನಾಗನಹಳ್ಳಿ ಗ್ರಾಮ ಪಂಚಾಯಿತಿ  ಸದಸ್ಯ ವಸಂತ್ ಕುಮಾರ್ ಮತ್ತು ಪಿಡಿಒ ಪದ್ದಣ್ಣ ಗಾವಾಡಿಯ ನಡುವೆ  ಚರಂಡಿ ಸ್ವಚ್ಛತೆ ವಿಚಾರದಲ್ಲಿ ಆರಂಭವಾದ ಜಗಳ ಅನುದಾನ ಹಂಚಿಕೆ ವಿಷಯಕ್ಕೆ ತಿರುಗಿ ಪರಸ್ಪರ ಬಡಿದಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ .

ಈ ಬಗ್ಗೆ ಸಖರಾಯಪಟ್ಟಣ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದ್ದು ಪಿಡಿಒ ತಲೆಮರೆಸಿಕೊಂಡಿದ್ದಾರೆ . 

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳೀಯರು ರಾಜಿ ಪಂಚಾಯಿತಿ ಮಾಡಲು ಯತ್ನಿಸಿದ್ದರೂ ಪಂಚಾಯಿತಿ ಕಾರ್ಯದರ್ಶಿ ವೆಂಕಟೇಶ್ ಉದ್ದೇಶಪೂರ್ವಕವಾಗಿ ಪಿಡಿಓರವರನ್ನು ತಲೆಮರೆಸಿಕೊಳ್ಳಲು ಸಹಕಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ .

ವಿಷಯ ತಿಳಿಯುತ್ತಿದ್ದಂತೆ ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಖರಾಯಪಟ್ಟಣ ಠಾಣೆ ಎದುರು ರಸ್ತೆ ತಡೆ ನಡೆಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಂಧಿಸುವಂತೆ ಒತ್ತಾಯಿಸಿದ್ದಾರೆ.

ರಸ್ತೆ ತಡೆ ನಡೆಸಿದ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು .ಪ್ರಕರಣ ಈಗ ರಾಜಕೀಯ ಸ್ವರೂಪ ಪಡೆದಿದ್ದು ಎಲ್ಲಿಗೆ ಹೋಗಿ ನಿಲ್ಲುತ್ತದೆೊ ಕಾದು ನೋಡಬೇಕು