udayanews

ಗುರುವಾರ, ನವೆಂಬರ್ 3, 2022

ಜಾಲಿ ಮೂಡಲ್ಲಿ ಸಿದ್ದರಾಮಯ್ಯ ಫುಲ್ ಖುಷ್ ಖುಷ್



ಚಿಕ್ಕಮಗಳೂರು :ಇಂದು  ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫುಲ್ ಜಾಲಿ ಮೂಡಲ್ಲಿ ಇದ್ದರು

ಸುದ್ದಿಗೋಷ್ಠಿಯಲ್ಲಿ ಖುಷಿ-ಖುಷಿಯಾಗೇ ಮಾತನಾಡಿದ ಸಿದ್ದರಾಮಯ್ಯನವರ  ಬಾಡಿ ಲಾಂಗ್ವೇಜ್ ಸೂಪರ್  ಆಗಿತ್ತು .
ಎರಡೂ ಕೈಗಳನ್ನ ತಲೆ ಹಿಂದಕ್ಕೆ ಕಟ್ಟಿ ಮಾತನಾಡುತ್ತಿದ್ದ ಅವರು ಎಲ್ಲಿಯೂ  ಗರಂ ಆಗದೆ ಕೆಲ ವೇಳೆ ಎರಡೂ ಕೈಗಳನ್ನೂ ಮೇಲೆಕ್ಕೆ ಎತ್ತಿ ಹ್ಯಾಪಿಯಾಗಿ ಮಾತನಾಡಿದ್ದು ವಿಶೇಷವಾಗಿತ್ತು .
ಕಾಫಿನಾಡ ವಾತಾವರಣ, ಸೌಂದರ್ಯಕ್ಕೆ ಮನ ಸೋತಂತೆ  ಇದ್ದ ಅವರು  130-150 ಸೀಟ್ ಗೆಲ್ತೇವೆ, ಮತ್ತೆ ಸಿಎಂ ಆಗ್ತೀನಿ ಅನ್ನೋ  ಖುಷಿಯಲ್ಲಿದ್ದಂತೆ  ಕಾಣಿಸಿತು  .ಇತ್ತೀಚೆಗೆ ನಡೆದ ರಾಹುಲ್ ಗಾಂಧಿ ಪಾದಯಾತ್ರೆ ಸಕ್ಸಸ್  ಆಗಿದ್ದು ಇದಕ್ಕೆ ಕಾರಣ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ
ಸಿದ್ದುಗೆ ಬೇರೆ ಏನಾದ್ರು ಶುಭಸಂಕೇತದ ಮುನ್ಸೂಚನೆ ಸಿಕ್ಕಿದ್ಯಾ, ಗೊತ್ತಿಲ್ಲ.ಆದರೆ, ಒಂದುಕಾಲು ಗಂಟೆಯ ಸುದ್ದಿಗೋಷ್ಠಿ ಬಿಂದಾಸ್ ಆಗಿ ಇದ್ದದ್ದು ಸುಳ್ಳಲ್ಲ .
ಮತ್ತೆ ಮುಖ್ಯಮಂತ್ರಿ :ಸುದ್ದಿಗೋಷ್ಠಿ ಮುಗಿಸಿ ಸಿದ್ದರಾಮಯ್ಯ ಹೊರಬರುತ್ತಿದ್ದಂತೆ ಬೆಂಬಲಿಗರು  ಮುಂದಿನ ಮುಖ್ಯಮಂತ್ರಿ ಸಿದ್ಧರಾಮಣ್ಣ ಎಂದು ಘೋಷಣೆ ಕೂಗಿದರು .
ನಾಯಕರಿಗೆ ಟಾಂಗ್ : ಸಿಟಿ ರವಿ ಎಂದರೆ ಬರೀ ಸುಳ್ಳು ಎಂದು ಟಾಂಗ್ ನೀಡಿದ್ದೆ ಅಲ್ಲದೆ , ಅಧಿಕಾರಕ್ಕೆ ಬಂದರೆ ನಾಗಮೋಹನ್ ದಾಸ್ ವರದಿ ಜಾರಿ ಮಾಡುವುದಾಗಿ ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿದ್ದ ಸಚಿವ ಶ್ರೀರಾಮುಲೂ ರವರನ್ನೂ ಕುಕ್ಕಿದರು .
ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ಟೀಕಿಸಿದರು .

FLSH NEWS :ನಬಂಬರ್ ಅಂತ್ಯದೊಳಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ : ಸಿದ್ದರಾಮಯ್ಯ

 



ಚಿಕ್ಕಮಗಳೂರು :ಚಿಕ್ಕಮಗಳೂರು ಸೇರಿದಂತೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಈ  ತಿಂಗಳ ಅಂತ್ಯದೊಳಗೆ ಬಿಡುಗಡೆ ಮಾಡುವುದಾಗಿ ಮಾಜಿ ಮುಖ್ಯ ಮಂತ್ರಿಗಳೂ ಆದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ .

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ತಿಂಗಳ  15 ರ ಒಳಗೆ  ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದರು .

ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸುವ ಬಗ್ಗೆ ಪ್ರಶ್ನಿಸಿದಾಗ ರಾಜ್ಯದ ವಿವಿಧ ಭಾಗಗಳಲ್ಲಿ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಡ ಹೇರುತ್ತಿದ್ದು ,ಪಕ್ಷದ ವರಿಷ್ಠರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು .

ಮೀಸಲಾತಿ  ರಾಜಕೀಯ ಗಿಮಿಕ್ ಎಂದು ಟೀಕಿಸಿದ ಸಿದ್ದರಾಮಯ್ಯ , ಶೇ.40 ರಷ್ಟು ಕಮಿಷನ್ ಪಡೆಯುತ್ತಿರುವ ಬಗ್ಗೆ ಪ್ರಧಾನಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ  ಎಂದು ವ್ಯಂಗ್ಯವಾಡಿದರು .

ಶಾಸಕ ಸಿ ಟಿ ರವಿ ಬಗ್ಗೆ ಕೆಲವರು ಮೃದು ಧೋರಣೆ ಅನುಸರಿಸುತ್ತಿರುವ ಬಗ್ಗೆ ಕೇಳಿದಾಗ  ಸಾಫ್ಟ್ - ಹಾರ್ಡೂ ಏನೂ ಇಲ್ಲ  ಎಂದು ಆರೋಪ ತಳ್ಳಿ ಹಾಕಿದರು..

ಪಕ್ಷ ಬಿಟ್ಟು ಬಿಜೆಪಿಗೆ ವಲಸೆ ಹೋದವರಿಗೆ ಮತ್ತೆ ಕಾಂಗ್ರೆಸ್ ನಿಂದ ಟಿಕೆಟ್ ಕೊಡುವ ಬಗ್ಗೆ ಪ್ರಶ್ನಿಸಿದಾಗ ,ಪಕ್ಷದ ನಾಯಕತ್ವ ಮತ್ತು ಸಿದ್ಧಾಂತ ಒಪ್ಪಿ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು ಅಂತಿಮ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಹೇಳಿದರು 


ಮಂಗಳವಾರ, ನವೆಂಬರ್ 1, 2022

ಮೋರ್ಬಿಯ ಈಗಿನ ದುರಂತ; ಮೋರ್ವಿಯ ಆಗಿನ ದುರಂತ:



(ಅದೇ ಊರಿನ, ಅದೇ ನದಿಯ  ಹಳೇ ದುರಂತದ ನೆನಪು.)ಗುಜರಾತ್‌ನ ಮಚ್ಚೂ ನದಿಗೆ ಮೋರ್ಬಿ ಪಟ್ಟಣದ ಬಳಿ ಕಟ್ಟಿದ್ದ ತೂಗು ಸೇತುವೆ ಹರಿದು ಬಿದ್ದು 60ಕ್ಕೂ ಹೆಚ್ಚು ಜನರು ನಿಧನರಾದ ಸುದ್ದಿ ಈಗ ತಾನೇ ಬರುತ್ತಿದೆ. ಈ ತೂಗು ಸೇತುವೆ ನೂರು ವರ್ಷಗಳ ಹಿಂದೆ ಕಟ್ಟಲಾಗಿದ್ದು ಮತ್ತೆ ಮತ್ತೆ ಇದರ ರಿಪೇರಿ ಆಗಿತ್ತು. ಕಳೆದ ಏಳು ತಿಂಗಳಿಂದ ದುರಸ್ತಿ ಕೆಲಸ ನಡೆದು, ಕೇವಲ ಐದು ದಿನಗಳ ಹಿಂದಷ್ಟೇ ಜನರ ಓಡಾಟಕ್ಕೆ ಅದನ್ನು ತೆರೆಯಲಾಗಿತ್ತು. ನನ್ನ ನೆನಪು 45 ವರ್ಷಗಳ ಹಿಂದಕ್ಕೆ ಓಡುತ್ತದೆ. ನಾನು ಆಗ ನೈನಿತಾಲ್‌ನಲ್ಲಿ ಹೊಸದಾಗಿ ಪರಿಸರ ಉಪನ್ಯಾಸಕನಾಗಿ ನೇಮಕಗೊಂಡಿದ್ದೆ.  ಮೋರ್ವಿ ಡ್ಯಾಮ್‌ ಕುಸಿದು ಅದೆಷ್ಟೊ ಸಾವಿರ ಜನರು ನೀರುಪಾಲಾದ ಸುದ್ದಿ ಆಗ ನಿಧಾನಕ್ಕೆ ಹೊಮ್ಮತೊಡಗಿತ್ತು. ಪರಿಸರ ಪಠ್ಯಕ್ಕೆ ಸೇರ್ಪಡೆ ಮಾಡಲು ನನಗೆ ಪಾಠವೊಂದು ಸಿಕ್ಕಂತಾಗಿದ್ದರೂ ಹೆಚ್ಚಿನ ಮಾಹಿತಿಗಾಗಿ ಪರದಾಡುತ್ತಿದ್ದೆ. ಇಡೀ ದೇಶವೇ ಪರದಾಡುತ್ತಿತ್ತು ಅನ್ನಿ.  ಸತ್ತವರು ಎಷ್ಟೆಂಬುದು ಆಗ ಗೊತ್ತಿರಲಿಲ್ಲ (ಈಗಲೂ ಖಚಿತವಿಲ್ಲ). ಏನಿಲ್ಲೆಂದರೂ 1800 ಜನರು, ಗರಿಷ್ಠ 25 ಸಾವಿರ ಜನರು ನೀರು ಪಾಲಾಗಿರಬೇಕೆಂದು ಅಂದಾಜು ಮಾಡಲಾಗಿದೆ. ಅದು, ಜಗತ್ತಿನ ಅತಿ ದೊಡ್ಡ ಡ್ಯಾಮ್‌ ಕುಸಿತದ ದುರಂತವೆಂದು ಗಿನ್ನೆಸ್‌ ದಾಖಲೆಯಲ್ಲೂ ಸ್ಥಾನ ಪಡೆದಿತ್ತು*.ಆಗಿದ್ದೇನೇಂದರೆ-ಇದೇ ಮಚ್ಚೂ ನದಿಗೆ ಮೋರ್ಬಿ ಪಟ್ಟಣದಿಂದ (ಆಗ ಅದಕ್ಕೆ ಮೋರ್ವಿ ಎನ್ನುತ್ತಿದ್ದರು) ಐದು ಕಿ.ಮೀ. ದೂರದಲ್ಲಿ ಒಂದು ಅಣೆಕಟ್ಟು ಕಟ್ಟಲಾಗಿತ್ತು. ನಾಲ್ಕು ಕಿಲೊಮೀಟರ್‌ ಉದ್ದದ ಆ ಕಟ್ಟೆಯನ್ನು ಹೆಚ್ಚಿನ ಪಾಲು ಮಣ್ಣಿನಿಂದಲೇ ಭರ್ತಿ ಮಾಡಲಾಗಿತ್ತು. 1979ರ ಆಗಸ್ಟ್‌ 11ರಂದು ಭಾರೀ ಅಂದರೆ ಭಾರೀ ಮಳೆ ಸುರಿಯಿತು. ಇಡೀ ವರ್ಷದಲ್ಲಿ ಸುರಿಯಬೇಕಿದ್ದ ಮಳೆ (20”) ಅಲ್ಲಿ ಕೇವಲ 16 ಗಂಟೆಗಳಲ್ಲಿ ಸುರಿದಿತ್ತು. ಅಣೆಕಟ್ಟೆಯ ಧಾರಣ ಸಾಮರ್ಥ್ಯಕ್ಕಿಂತ ಮೂರು ಪಟ್ಟು ಮಳೆನೀರು ಆ ಜಲಾಶಯಕ್ಕೆ ಹರಿದು ಬಂತು. ಅಣೆಕಟ್ಟೆ ಒಡೆಯಿತು. ಕಟ್ಟೆ ಒಡೆದ ಕೇವಲ ಇಪ್ಪತ್ತು ನಿಮಿಷಗಳಲ್ಲಿ, ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ, ಮೋರ್ಬಿ ಪಟ್ಟಣಕ್ಕೆ ನೀರು ನುಗ್ಗಿತು. ನದಿಯ ಪಾತ್ರ ಇದ್ದಕ್ಕಿದ್ದಂತೆ ಹತ್ತು ಮೀಟರ್‌ ಮೇಲಕ್ಕೇರಿತು. ನದಿಯ ದಡದಲ್ಲಿದ್ದ ಮನೆಗಳನ್ನೆಲ್ಲ ಕೊಚ್ಚಿಕೊಂಡು ಹೋಯಿತು. ಪಟ್ಟಣದ ಮಧ್ಯಭಾಗದಲ್ಲೂ ನಾಲ್ಕಾರು ಮೀಟರ್‌ ಎತ್ತರಕ್ಕೆ ನೀರು ತುಂಬಿಕೊಂಡಿತು.ತುರ್ತು ಸಂಪರ್ಕ ಸಾಧನವೆಂದರೆ ಆಗೆಲ್ಲ ಟೆಲಿಫೋನ್‌ ಲ್ಯಾಂಡ್‌ಲೈನ್‌ ತಾನೆ?  ಅವೆಲ್ಲ ಕೈಕೊಟ್ಟವು. ಸುದ್ದಿ ಅಹ್ಮದಾಬಾದ್‌ಗೂ ತಲುಪಿರಲಿಲ್ಲ.ಆದರೆ ಅಮೆರಿಕದ ಉಪಗ್ರಹವೊಂದು (ನಿಂಬಸ್‌ ಇರಬೇಕು) ಈ ಚಿತ್ರವನ್ನು ಗ್ರಹಿಸಿ ದಿಲ್ಲಿಗೆ ತುರ್ತು ಸುದ್ದಿ ರವಾನಿಸಿತೆಂದೂ ಆ ನಂತರವೇ ಗುಜರಾತಿನ ರಾಜಧಾನಿಗೆ ಈ ದುರಂತದ ವಿಷಯ ಗೊತ್ತಾಗಿ ಪರಿಹಾರ ಮತ್ತು ರಕ್ಷಣೆಯ ಕೆಲಸ ಸಾಕಷ್ಟು ತಡವಾಗಿ ಆರಂಭವಾಗಿತ್ತು. “ಎಲ್ಲಿ ನೋಡಿದಲ್ಲಿ ಕೊಳೆತ ಹೆಣಗಳ, ಜಾನುವಾರುಗಳ ರಾಶಿ. ಮುಖಕ್ಕೆ ಬಟ್ಟೆ ಕಟ್ಟಿಕೊಂಡ ಭೂಸೇನೆಯ ಜವಾನರು ಶವಗಳನ್ನು ಎತ್ತಿ ಎತ್ತಿ ದಿಮ್ಮಿಗಳಂತೆ ಲಾರಿಗೆ ಬಿಸಾಕುತ್ತಿದ್ದರು; ಇಡೀ ಮೋರ್ವಿ ಪಟ್ಟಣವೇ ಮೌನದಲ್ಲಿ ಮುಳುಗಿತ್ತು” ಎಂದು  ಒಂದು ವಾರದ ನಂತರ ಅಲ್ಲಿಗೆ ಹೋದ ʼಇಂಡಿಯಾ ಟುಡೇʼ ವರದಿಗಾರ ಸುನೀಲ್‌ ಸೇಠಿ ವರದಿ ಮಾಡಿದ್ದರು. 19ನೇ ತಾರೀಖಿನಂದು ಗುಜರಾತ್‌ ಮುಖ್ಯಮಂತ್ರಿ ಬಾಬೂಭಾಯಿ ಪಟೇಲ್‌ “ಇಂದು 1137 ಜನರ ಮತ್ತು 2919 ಜಾನುವಾರುಗಳ ಶವಗಳನ್ನು ದಫನ ಮಾಡಲಾಯಿತು” ಎಂದು ಯಾಂತ್ರಿಕವಾಗಿ ಅಂಕಿಸಂಖ್ಯೆಗಳನ್ನು ಪಠಿಸುತ್ತಿದ್ದರು. ದುರಂತವನ್ನು ಕಣ್ಣಾರೆ ನೋಡಲು ಬಂದ ಗಣ್ಯರೇ  ಪರಿಹಾರ ಕಾರ್ಯಕ್ಕೆ ದೊಡ್ಡ ಅಡೆತಡೆಯಾಗಿದ್ದರು.  ಆಡಳಿತ ಯಂತ್ರವೆಲ್ಲ ಗಣ್ಯರ ಅನುಕೂಲಕ್ಕಾಗಿ ಶ್ರಮಿಸುತ್ತಿತ್ತು. ಆಗಸ್ಟ್‌ 16ರ ಒಂದೇ ದಿನ, “ಶ್ರೀಮತಿ ಇಂದಿರಾ ಗಾಂಧಿಯವರೂ ಸೇರಿದಂತೆ 21 ಗಣ್ಯರು ಮೋರ್ಬಿಗೆ ಬಂದಿದ್ದರು” – ಹೀಗೆಂದು ಸೇಠಿ ವರದಿ ಮಾಡಿದ್ದರು. ಅವರ ಆಗಿನ ಅಂದಾಜಿನ ಪ್ರಕಾರ 4ರಿಂದ 5 ಸಾವಿರ ಜನರು ಆ ದುರ್ಘಟನೆಯಲ್ಲಿ ಗತಿಸಿದ್ದರು.(ಮೋರ್ಬಿ ಬೇರೆ, ಮೋರ್ವಿ ಬೇರೆ ಇದ್ದೀತೆ ಎಂದು ಮತ್ತೆ ಮತ್ತೆ ಚೆಕ್‌ ಮಾಡಿದೆ. ಅದೇ ಮಚ್ಚೂ ನದಿ, ಅದೇ ಮೋರ್ವಿ ಪಟ್ಟಣ ಇದು.) .......*ಗಿನ್ನೆಸ್‌ ರೆಕಾರ್ಡ್‌ನಲ್ಲಿ ಮೋರ್ವಿ ಅಣೆಕಟ್ಟೆಯ  ದುರಂತದ ದಾಖಲೆಯನ್ನು ಅಳಿಸಲಾಗಿದೆ. ಏಕೆಂದರೆ ಇದಕ್ಕಿಂತ ದೊಡ್ಡ ದುರಂತ ಚೀನಾದ ಹೆನಾನ್‌ ಪ್ರಾಂತದ ರೂʼ ನದಿಗೆ ನಿರ್ಮಿಸಲಾಗಿದ್ದ ಬಾನ್‌ಕ್ಯೂ ಅಣೆಕಟ್ಟು 1975ರಲ್ಲಿ ಕುಸಿದಾಗ ಸಂಭವಿಸಿತ್ತು. ಭಾರೀ ಸುಂಟರಗಾಳಿ ಮತ್ತು ಮಹಾಮಳೆಯಿಂದಾಗಿ ಕಟ್ಟೆ ಒಡೆದು ಸುಮಾರು 30 ಪಟ್ಟಣಗಳು ಕೊಚ್ಚಿ ಹೋದವು. ಸತ್ತವರ ಸಂಖ್ಯೆ ಅಂದಾಜು ಕನಿಷ್ಠ ಹತ್ತಾರು ಸಾವಿರ, ಗರಿಷ್ಠ 240 ಸಾವಿರ. ಚೀನಾ  30 ವರ್ಷಗಳ ನಂತರ ಈ ದುರಂತಕ್ಕೆ ಸಂಬಂಧಿಸಿದ ಕಡತಗಳನ್ನು ಬಹಿರಂಗಪಡಿಸಿದೆ.ಅಂದಹಾಗೆ, ಈ ದಿನ ಇನ್ನೂ ಬಿಬಿಸಿ, ಸಿಎನ್‌ಎನ್‌ಗಳು ಮೋರ್ಬಿಗೆ ತಲುಪಿದಂತಿಲ್ಲ. ಅವರ ಗಮನವೆಲ್ಲ ದಕ್ಷಿಣ ಕೊರಿಯಾ ರಾಜಧಾನಿ ಸೋಲ್‌ನಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತಕ್ಕೆ ಸೀಮಿತವಾಗಿತ್ತು. ಅಲ್ಲಿ ಹ್ಯಾಲೊವೀನ್‌ ಸಂಭ್ರಮದ ಸಂದರ್ಭದಲ್ಲಿ ಕಿರಿದಾದ ಓಣಿಯಲ್ಲಿ ಎಲ್ಲರೂ ಓಡುತ್ತಿದ್ದಾಗ ಕಾಲ್ತುಳಿತಕ್ಕೆ 160 ಜನರು ಗತಿಸಿದ್ದಾರೆ. ಜಗತ್ತಿನ ದೊಡ್ಡ ದೊಡ್ಡ ಗಣ್ಯರೆಲ್ಲ ಸಂತಾಪ ಸೂಚಿಸುತ್ತಿದ್ದಾರೆ. ದಿಲ್ಲಿಯಲ್ಲೂ ಕೊರಿಯಾ ಧ್ವಜವನ್ನು ಅರ್ಧಕ್ಕೆ ಇಳಿಸಲಾಗಿದೆ.*ಈದಿನದ ಮೋರ್ಬಿ ಸೇತುವೆ ಕುಸಿತಕ್ಕೆ "ಛತ್‌ ಪೂಜಾ" ಸಂಭ್ರಮವೇ ಕಾರಣವೆಂದು ಹೇಳಲಾಗುತ್ತಿದೆ. ಮಹಿಳೆಯರು ನದಿಗೆ ಹೋಗಿ ಸೂರ್ಯನಿಗೆ ಅರ್ಘ್ಯ ಕೊಡುವ ಈ ಛತ್‌ ಪೂಜಾ ಹಿಂದೆಲ್ಲ ಬಿಹಾರ ರಾಜ್ಯಕ್ಕಷ್ಟೇ ಸೀಮಿತವಾಗಿತ್ತು. ಇಂದು ಬೆಳಿಗ್ಗೆಯಷ್ಟೇ ಪ್ರದಾನಿ ಮೋದಿಯವರು ಸೂರ್ಯನ ಆರಾಧನೆಯ ಈ ಸಂಪ್ರದಾಯವನ್ನು ಹಾಡಿ ಹೊಗಳಿದ್ದರು. ಭಾರತದ ಈ ವಿರಾಸತ್‌ ಇಂದು ಇಡೀ ದೇಶಕ್ಕಷ್ಟೇ ಅಲ್ಲ, ಜಗತ್ತಿಗೇ ವ್ಯಾಪಿಸಿದೆ ಎಂದು ಬಣ್ಣಿಸಿದ್ದರು. ಈ ಹಬ್ಬಕ್ಕೆ ಅಷ್ಟೇನೂ ನೇರ ಸಂಬಂಧಿಸಿಲ್ಲವಾದರೂ (ಚುನಾವಣೆಗೆ ಸಂಬಂಧಿಸಿದ್ದರಿಂದ) ಗುಜರಾತ್‌ ಹೇಗೆ ಸೌರಶಕ್ತಿಯನ್ನು ಮನೆಮನೆಗೆ ತಲುಪಿಸುತ್ತಿದೆ ಎಂಬುದನ್ನು ತಮ್ಮ ಎಂದಿನ ಸಂಮೋಹಕ ಮಾತುಗಳಲ್ಲಿ ವಿವರಿಸಿದರು. ಅವರ ಮನ್‌ಕೀ ಬಾತ್‌ ಗೂ ಇಂದಿನ ದುರಂತಕ್ಕೂ ನೇರ ಸಂಬಂಧ ಇಲ್ಲ ನಿಜ. ಇದು ಸಾಂದರ್ಭಿಕ ಸಂಗತಿ ಅಷ್ಟೆ. ಕಾಕತಾಳೀಯ ಎನ್ನೋಣ ಬೇಕಿದ್ದರೆ.

 (*ನಾಗೇಶ್ ಹೆಗಡೆಯವರ ವಾಲ್ ನಿಂದ )

ಕಾರ್ಮಿಕರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ : ಶಾಸಕರ ವಿರುದ್ಧ ಕಪ್ಪುಪಟ್ಟಿ ಪ್ರದರ್ಶನಕ್ಕೆ ಸಿದ್ಧತೆ - ಬಂಧನ


 ಚಿಕ್ಕಮಗಳೂರು :  ಕಳೆದ 5 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದ ದಲಿತ ಸಂಘಟನೆ ಮುಖಂಡರನ್ನು ಪೊಲೀಸರು ಇಂದು ಬಂಧಿಸಿದ್ದಾರೆ .

 ಕಾರ್ಮಿಕರ ಮೇಲೆ ಹಲ್ಲೆ, ದೌರ್ಜನ್ಯ ಖಂಡಿಸಿ ಇಲ್ಲಿನ ಆಜಾದ್ ಮೈದಾನದಲ್ಲಿ ಪ್ರತಿಭಟನೆ  ನಡೆಸಲಾಗುತ್ತಿತ್ತು. ಕನ್ನಡ ರಾಜ್ಯೋತ್ಸವ ಮೆರವಣಿಗೆ ಬರುತ್ತಿದ್ದ ಸಂದರ್ಭದಲ್ಲಿ  ಪ್ರತಿಭಟನೆ ನಿರತರು  ಜಿಲ್ಲಾಡಳಿತ, ಸರ್ಕಾರದ ವಿರುದ್ಧ   ಘೋಷಣೆ ಘೋಷಣೆ ಕೂಗಿದರು.





 ಹಲ್ಲೆ, ದೌರ್ಜನ್ಯ ನಡೆಸಿದ ಆರೋಪಿಯನ್ನು ಬಂಧಿಸದ ಕ್ರಮ ಖಂಡಿಸಿ   ಜಿಲ್ಲಾಡಳಿತ ಹಾಗೂ ಶಾಸಕರ ವಿರುದ್ಧ   ಕಪ್ಪು ಬಾವುಟ ಪ್ರದರ್ಶಿಸಲು ಸಿದ್ದತೆ ನಡೆಸಿದ್ದು ಮುಂಜ್ರಾಗತಾ ಕ್ರಮವಾಗಿ  ಪೊಲೀಸರು 20 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.  

ಚಿಕ್ಕಮಗಳೂರು ಪ್ರತ್ಯೇಕ ವಿವಿ ಪ್ರಸ್ತಾವನೆಗೆ ಸಮ್ಮತಿ : ಸದ್ಯದಲ್ಲೇ ಅಂಕಿತ- ಶಾಸಕ ರವಿ

 ಚಿ


ಕ್ಕಮಗಳೂರು :ಚಿಕ್ಕಮಗಳೂರು ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಲು ಸಮ್ಮತಿ ಸಿಕ್ಕಿದ್ದು ಸದ್ಯದಲ್ಲೇ ಸಚಿವ ಸಂಪುಟದ ಒಪ್ಪಿಗೆ ಸಿಗಲಿದೆ ಎಂದು ಶಾಸಕ ಸಿ .ಟಿ .ರವಿ ತಿಳಿಸಿದ್ದಾರೆ .

ಸುದೀರ್ಘ ಕಾಲದ ಬಳಿಕ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ಶಿಕ್ಷಣ ಸಚಿವರ ಜತೆಗೆ ಈ ಕುರಿತು ಈಗಾಗಲೇ ಚರ್ಚಿಸಲಾಗಿದೆ ಎಂದರು  .
ಸಮ್ಮತಿ ಸಿಕ್ಕಿದ್ದು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು .ಇದಕ್ಕಾಗಿ ಕದ್ರಿಮಿದ್ರಿ ಬಳಿ ನಲವತ್ತು ಎಕರೆ ಜಾಗ ಮೀಸಲಿಡಲಾಗಿದೆ ಎಂದು ಹೇಳಿದರು .
ಇದೇ ತಿಂಗಳ 15 ರಂದು ಕಡೂರಿಗೆ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ  ಆಗಮಿಸಲಿದ್ದು ಕಡೂರು ಮತ್ತು ತರೀಕೆರೆ ತಾಲ್ಲೂಕಿನ   ಹಳ್ಳಿಗಳಿಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಯೋಜನೆಗೆ ಶಿಲಾನ್ಯಾಸ ಹಾಕಲಿದ್ದಾರೆ ಎಂದರು .
ಅದೇ ದಿನ ಪಕ್ಷದ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು .
ಒಳಚರಂಡಿ ಕಾಮಗಾರಿಯನ್ನು ಡಿಸೆಂಬರ್ ಅಂತ್ಯಕ್ಕೆ ಮುಗಿಸಬೇಕೆಂದು ನಿರ್ಧರಿಸಿದ್ದು ,ಹೆಚ್ಚೆಂದರೆ ಮಾರ್ಚಿ ವೇಳೆಗೆ ಖಚಿತವಾಗಿ ಮುಗಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗುಜರಾತಿನ ಮೊರ್ಬಿಯಲ್ಲಿ ನಡೆದ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿ , ನಟನೆಗೆ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದರು .
ಜಿಲ್ಲೆಯ ವಿವಿಧ ಸಮಸ್ಯೆಗಳತ್ತ ಪತ್ರಕರ್ತರು ಗಮನ ಸೆಳೆದಾಗ ಪರಿಶೀಲಿಸುವ ಭರವಸೆ ನೀಡಿದರು .

ಸೋಮವಾರ, ಅಕ್ಟೋಬರ್ 31, 2022

ಜನಪ್ರತಿನಿಧಿ -ಅಧಿಕಾರಿಗಳ ನಿರ್ಲಕ್ಷ ;ಹೆದ್ದಾರಿಯಲ್ಲಿ ಸರಣಿ ಅಪಘಾತ; ಹಲವರ ಬಲಿ

 

ಚಿಕ್ಕಮಗಳೂರು :ಕೋಟೆ ಕೆರೆಯಿಂದ ಹಿರೇಮಗಳೂರು ಸಂಪರ್ಕಿಸುವ ಹೆದ್ದಾರಿಯಲ್ಲಿ ಸೂಕ್ತ ವಿದ್ಯುತ್ ವ್ಯವಸ್ಥೆ ಇಲ್ಲದೆ ಅನೇಕ ಅಪಘಾತಗಳು ಪದೇ ಪದೇ ಸಂಭವಿಸುತ್ತಿವೆ .ವಿದ್ಯುತ್ ವ್ಯವಸ್ಥೆ ಇಲ್ಲದೆ ಕತ್ತಲು ಆವರಿಸಿ ,ಡಿವೈಡರ್ ಗಳು ಕಾಣದೆ ಅನೇಕ ವಾಹನಗಳು ಅಪಘಾತಕ್ಕೆ ಒಳಗಾಗಿವೆ .

ಇಂದು ಅಂತಹದ್ದೇ ಘಟನೆಯೊಂದು ನಡೆದಿದೆ.ವೇಗವಾಗಿ ಬಂದ ಕಾರೊಂದು ,ಡಿವೈಡರ್ ಗೆ ಅಪ್ಪಳಿಸಿ ಎದುರಿನಿಂದ ಹೋಗುತ್ತಿದ್ದ ಆಟೋ ರಿಕ್ಷಾವನ್ನು ಸೀಳಿಕೊಂಡು ಶನಿ ದೇವಸ್ಥಾನದ ಬಳಿ ಹೋಗಿ ನುಜ್ಜುಗುಜ್ಜಾಗಿ  ನಿಂತಿದೆ .

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ .ಈ ಹಿಂದೆ  ನಡೆದ ಅಪಘಾತದಲ್ಲಿ ಇಬ್ಭರು ಸಾವಪ್ಪಿದ್ದು , ಇಂದು ಪಾದಚಾರಿಯೊಬ್ಬರು ಜಸ್ಟ್  ಮಿಸ್ ಆಗಿದ್ದಾರೆ .

ಈ ರಸ್ತೆಗೆ ಅಗತ್ಯ ವಿದ್ಯುತ್ ದೀಪ ಸೌಲಭ್ಯ ಕಲ್ಪಿಸುವಂತೆ ಅನೇಕ ಬಾರಿ ಒತ್ತಾಯಿಸಿದ್ದರೂ ಸಂಬಂಧಪಟ್ಟ ಅಧಿಕಾರಿ ಜನಪ್ರತಿನಿಧಿಗಳು ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ .

ನಗರಸಭೆ ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜನಪ್ರತಿನಿಧಿಗಳು ಪರಸ್ಪರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದು ಇನ್ನಾದರೂ ಸಮಸ್ಯೆ ಬಗೆಹರಿಸಿ ಮುಂದೆ ಆಗುವ ಅನಾಹುತಗಳಿಗೆ ಕಡಿವಾಣ ಹಾಕಲಿ ಎಂದು ಒತ್ತಾಯಿಸಿದ್ದಾರೆ 

ಭಾನುವಾರ, ಅಕ್ಟೋಬರ್ 30, 2022

ಕೃಷಿ ಕ್ಷೇತ್ರದಲ್ಲಿ ಸಾಧನೆ: ರಾಜ್ಯೋತ್ಸವ ಪ್ರಶಸ್ತಿ ಗೆ ಚಂದ್ರಶೇಖರ ನಾರಾಯಣಪುರ

 


ಚಿಕ್ಕಮಗಳೂರು :ರಾಜ್ಯ ಸರ್ಕಾರ ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಸಂಘ ಸಂಸ್ಥೆಗಳನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು ,ಜಿಲ್ಲೆಯ ಚಂದ್ರಶೇಖರ ನಾರಾಯಣಪುರ ಪ್ರಶಸ್ತಿಗೆ ಭಾಜನರಾಗಿದ್ದಾರೆ .

ಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ತರೀಕೆರೆ ತಾಲ್ಲೂಕಿನ ನಾರಾಯಣಪುರದ ಚಂದ್ರಶೇಖರ್  ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿ ಬಳಿಕ ತಮ್ಮ ಕ್ಷೇತ್ರವನ್ನು ಕೃಷಿಯತ್ತ ಬದಲಾಯಿಸಿದ್ದರು 

ಮೂಗ್ತಿಹಳ್ಳಿ  ಬಳಿ  ಜಮೀನು ಖರೀದಿಸಿ ನೈಸರ್ಗಿಕ ಕೃಷಿಗೆ ವಿಶೇಷ ಗಮನ ನೀಡಿ ಅಪಾರ ಸಾಧನೆ ಮಾಡಿ ಮನ್ನಣೆ ಗಳಿಸಿದ್ದರು .

ಇವರ ನೈಸರ್ಗಿಕ ಕೃಷಿ ಕ್ಷೇತ್ರಕ್ಕೆ ಹತ್ತು ಹಲವು ಗಣ್ಯರು ಭೇಟಿ ನೀಡಿ ಪ್ರಶಂಸೆ ಹೊರಹಾಕಿದ್ದರು .