udayanews

ಬುಧವಾರ, ನವೆಂಬರ್ 9, 2022

ಕರಡು ಮತದಾರರ ಪಟ್ಟಿ ಪ್ರಕಟ: ಮತದಾರರ ಚೀಟಿ ಪರಿಷ್ಕರಣೆಗೆ ಡಿಸಿ ಸೂಚನೆ

 



ಚಿಕ್ಕಮಗಳೂರು : ಜಿಲ್ಲೆಯ ಎಲ್ಲಾ ತಾಲ್ಲೂಕು ಮತ್ತು ಎಲ್ಲಾ ಮತಗಟ್ಟೆಗಳಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು ಮತದಾರರಲ್ಲಿ  ಜಾಗೃತಿ ಮೂಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಜಿಲ್ಲೆಯಲ್ಲಿ ಒಟ್ಟು ೯,೩೪,೭೬೯ ಮತದಾರರಿದ್ದು, ಅದರಲ್ಲಿ  ೪,೬೪,೨೨೮ ಗಂಡು ಹಾಗೂ ೪,೭೦,೫೦೫ ಹೆಣ್ಣು ಮತದಾರರಿದ್ದಾರೆ. ಅವರಲ್ಲಿ   ಯುವ ಮತದಾರರ ಸಂಖ್ಯೆ  ೧೧,೫೦೨  ಆಗಿದೆ ಎಂದರು
ಭಾರತ ಚುನಾವಣಾ ಆಯೋಗ ೪  ನವೆಂಬರ್ ೧೨, ೨೦, ಡಿಸೆಂಬರ್ ೩ ಮತ್ತು ೪ರಂದು ವಿಶೇಷ ಆಂದೋಲನ  ಹಮ್ಮಿಕೊಂಡಿದ್ದು ಬೂತ್ ಮಟ್ಟದ ಅಧಿಕಾರಿ(ಬಿಎಲ್‌ಒ)ಗಳು ಮನೆಮನೆಗೆ ತೆರಳಿ ಮತದಾರರಲ್ಲಿ ಅರಿವು ಮೂಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಡಿಸೆಂಬರ್ ೮ರವರೆಗೆ ಮತದಾರರ ಗುರುತಿನ ಚೀಟಿ ಪರಿಷ್ಕರಣೆಗೆ ಅವಕಾಶವಿದೆ. ಮತದಾರರು ತಮ್ಮ ಹೆಸರು, ಜನ್ಮದಿನಾಂಕ, ವಿಳಾಸ ಪರಿಷ್ಕರಣೆ ಹಾಗೂ ಭಾವಚಿತ್ರ ಬದಲಾವಣೆ ಮಾಡಿಕೊಳ್ಳಬಹುದು ಎಂದರು .
ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು  ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮತ್ತು ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ ಉಪಸ್ಥಿತರಿದ್ದರು.  

ಮಂಗಳವಾರ, ನವೆಂಬರ್ 8, 2022

ಲಂಚ ಪಡೆಯುವ ವೇಳೆ ದಾಳಿ: ಲೋಕಾಯುಕ್ತ ಬಲೆಗೆ ಎನ್ ಆರ್ ಪುರ ವೃತ್ತ ನಿರೀಕ್ಷಕ

 


ಚಿಕ್ಕಮಗಳೂರು: ಎನ್.ಆರ್ ಪುರದ ವೃತ್ತ ನಿರೀಕ್ಷಕ ವಸಂತ್ ಶಂಕರ್ ಭಾಗವತ್ ಮಂಗಳವಾರ ಹತ್ತು ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.


ಮುಸ್ತಾಫ್ ಅಲಿ ಎಂಬುವವರಿಂದ 10 ಸಾವಿರ ಲಂಚಕ್ಕೆ ಡಿಮ್ಯಾಂಡ್ ಸಿಪಿಐ ಡಿಮ್ಯಾಂಡ್ ಮಾಡಿದ್ದರು. 

ಮಂಗಳವಾರ ವೃತ್ತ ನಿರೀಕ್ಷಕ ವಸಂತ್ ಶಂಕರ್ ಭಾಗವತ್ , ಮುಸ್ತಾಫ್ ಅಲಿ ಬಳಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿ ದಾಳಿ ನಡೆಸಿದ್ದಾರೆ. 


(ಚಿಕ್ಕಮಗಳೂರು ಸಮೀಪ ಕಾಡುಕೋಣಗಳ ಮೇರಾಥಾನ್ )

ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದಲ್ಲಿ ದಾಳಿ ನಡೆದಿದೆ. ಸಿಪಿಐ ವಸಂತ್ ಶಂಕರ್ ಭಾಗವತ್ ಲೋಕಾಯುಕ್ತ ಅಧಿಕಾರಿಗಳು ಕಸ್ಟಡಿಗೆ ತೆಗೆದುಕೊಂಡಿದ್ದು.‌ ಎಫ್.ಐ.ಆರ್ ದಾಖಲಿಸಿದ್ದಾರೆ.

ಸೋಮವಾರ, ನವೆಂಬರ್ 7, 2022

ಹದಗೆಟ್ಟ ರಸ್ತೆ -ವ್ಯಂಗ್ಯಚಿತ್ರಗಳ ಮೂಲಕ ಆಕ್ರೋಶ


 

ಚಿಕ್ಕಮಗಳೂರು :ರಸ್ತೆ ಅವ್ಯವಸ್ಥೆ ಬಗ್ಗೆ ವ್ಯಂಗ್ಯ ಚಿತ್ರಗಳ ಮೂಲಕ ಕಳಸ ಪಟ್ಟಣದ ನಾಗರಿಕರು ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

 ರಸ್ತೆ ಅವ್ಯವಸ್ಥೆ ಬಗೆಗಿನ ವ್ಯಂಗ್ಯ ಚಿತ್ರಗಳನ್ನು ಪ್ರಕಟಿಸಿ ಕಳಸ ಪಟ್ಟಣದ ಮುಖ್ಯ ರಸ್ತೆಯಿಂದ  ಹೊರನಾಡಿಗೆ ತೆರಳುವ ರಸ್ತೆಯ ದುಸ್ಥಿತಿ ತೆರೆದಿಟ್ಟಿದ್ದಾರೆ .

ವಾಹನಗಳು ಚಲಿಸದಷ್ಟು ಹೊಂಡ-ಗುಂಡುಗಳಿಂದ ರಸ್ತೆ  ಹದಗಟ್ಟಿರುವ ವ್ಯಂಗ್ಯಚಿತ್ರಗಳು ವ್ಯಾಪಕವಾಗಿ ವೈರಲ್ ಆಗಿವೆ.

ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ತೀವ್ರ ಮುಜುಗರಕ್ಕೆ ಈ ಚಿತ್ರಗಳು ಕಾರಣವಾಗಿವೆ .

ಕಳಸ ತಾಲ್ಲೂಕು ಕೇಂದ್ರವಾಗಿದ್ದರೂ ಅಭಿವೃದ್ದಿ ಶೂನ್ಯ ಎನ್ನುವ ಆಕ್ರೋಶ ವ್ಯಕ್ತಪಡಿಸಿದ್ದಾರೆ 


ಪ್ರತಿವರ್ಷ ಬಂದು ಹೆಣವಿಲ್ಲದ ಗೋರಿ ನೀಡುವುದೇ ಆಗಿದೆ - ನ.13 ರ ನಂತರ ಪರಿಸ್ಥಿತಿ ನೆಟ್ಟಗಿರುವುದಿಲ್ಲ -ಶ್ರೀರಾಮಸೇನೆ ಎಚ್ಚರಿಕೆ

 


ಚಿಕ್ಕಮಗಳೂರು : "ಪ್ರತಿವರ್ಷ ಬಂದು ಹೆಣವಿಲ್ಲದ ಗೋರಿ ನೀಡಿ ಹೋಗುವುದು , ಎಚ್ಚರಿಕೆ ನೀಡಿ...ನೀಡಿ... ಬೇಜಾರು, ಆಕ್ರೋಶವಾಗಿದೆ ನಮಗೆ ಈ‌ ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ .

ಈ ರೀತಿಯ ಅಸಹನೆ ವ್ಯಕ್ತ ಪಡಿಸಿದವರು ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ 

ಶ್ರೀರಾಮ ಸೇನೆ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನದಲ್ಲಿ ಪಾಲ್ಗೊಂಡ ಅವರು  ಧರ್ಮದ ವಿಚಾರದಲ್ಲಿ ಡ್ರಾಮಾ ಒಳ್ಳೆದಲ್ಲ, ತಕ್ಷಣ ಏನಾದ್ರು ಆಗಲಿ ಎಂದು ಗಟ್ಟಿ ನಿರ್ಧಾರ ಮಾಡಿ ಕೂಡಲೇ ದತ್ತಪೀಠವನ್ನ ಹಿಂದೂಗಳ ಪೀಠವೆಂದು ಆದೇಶಿಸಿ, ಹಿಂದೂ ಅರ್ಚಕರ ನೇಮಿಸಿ ಎಂದು ಒತ್ತಾಯಿಸಿದ್ದಾರೆ 

13ನೇ ತಾರೀಖಿನೊಳಗೆ ಅರ್ಚಕರ ನೇಮಿಸದಿದ್ದರೆ ಪರಿಸ್ಥಿತಿ ಕಠಿಣವಾಗುತ್ತೆ ಎಂದು ಎಚ್ಚರಿಸಿರುವ ಅವರು ಹೇಗೆ ಬಿಜೆಪಿ ಅಧ್ಯಕ್ಷರ ಕಾರು ಅಲುಗಾಡಿತ್ತೋ, ಅದೇ ರೀತಿ ಸರ್ಕಾರ ಅಲುಗಾಡುತ್ತೆ ಎಂದು ಹೇಳಿದ್ದಾರೆ .

ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸದಿದ್ದರೆ ಯಡಿಯೂರಪ್ಪರ ಪೀಠ ಹೋಗುತ್ತೆ ಎಂದು ಹೇಳಿದ್ದೆ .ದತ್ತ ಗುರುಗಳ ಶಾಪದಿಂದ ಯಡಿಯೂರಪ್ಪ ಪೀಠ ಕಳ್ಕೊಂಡರು ಎಂದು ಉಲ್ಲೇಖಿಸಿದರು .

ಈಗ ಬೊಮ್ಮಾಯಿಗೂ ಹೇಳ್ತಿದ್ದೀವಿ, ಮುಂದೆ ಸರ್ಕಾರ ಬರಬೇಕಂದ್ರೆ ತಕ್ಷಣ ದತ್ತಪೀಠವನ್ನ ಹಿಂದುಗಳಿಗೆ ಒಪ್ಪಿಸಿಇಲ್ಲವಾದರೆ, ಯಡಿಯೂರಪ್ಪನವರಿಗೆ ಆದ ಪರಿಸ್ಥಿತಿಯೇ ನಿಮಗೂ ಆಗುತ್ತೆ ಎಂದು ಖಡಕ್ ಸಂದೇಶ ನೀಡಿದ್ದಾರೆ 


ಭಾನುವಾರ, ನವೆಂಬರ್ 6, 2022

ಆನ್ ಲೈನ್ ಎಡವಟ್ಟು :ಟಿಇಟಿ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳು

 


ಚಿಕ್ಕಮಗಳೂರು : ಆನ್ ಲೈನ್ ಎಡವಟ್ಟಿನಿಂದ  ಟಿಇಟಿ ಪರೀಕ್ಷೆಯಿಂದ  ವಿದ್ಯಾರ್ಥಿಗಳು ವಂಚಿತರಾದ ಪ್ರಕರಣ ನಡೆದಿದೆ 

ಚಿಕ್ಕಮಗಳೂರು ನಗರದ ಹಲವು ಸೆಂಟರ್ ಗಳಲ್ಲಿ  ಶಿಕ್ಷಕರ ನೇಮಕಾತಿ ಹಿನ್ನೆಲೆ ಟಿಇಟಿ ಪರೀಕ್ಷೆ ನಡೆಯುತ್ತಿದ್ದು ,ಆನ್ ಲೈನ್ ನಲ್ಲಿ ಎರಡು ಬಾರಿ ಪ್ರತ್ಯೇಕ ಸೆಂಟರ್ ತೋರಿಸಿದ್ದು ,ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಎದುರಾಗಿದೆ ಬಸವನಹಳ್ಳಿ ಶಾಲೆ ಪರೀಕ್ಷಾ ಕೇಂದ್ರದ ಬಳಿಬ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದು ಇಲ್ಲದ ಸಬೂಬು ನೀಡಿ ಪರೀಕ್ಷಾ ಕೇಂದ್ರದ ಒಳಗೆ ಸಿಬ್ಬಂದಿ ಪ್ರವೇಶ ನಿರಾಕರಿಸಿದೆ .

ಪರೀಕ್ಷೆ ಬರೆಯದೇ ಬಳ್ಳಾರಿಯಿಂದ ಬಂದಿದ್ದ ಅಭ್ಯರ್ಥಿಗಳು ವಂಚಿತರಾಗಿದ್ದಾರೆ .

ಅನಧಿಕೃತ ಕಟ್ಟಡ ನಿರ್ಮಾಣ : ದಾಖಲೆ ಸಲ್ಲಿಕೆಗೆ ಸೂಚನೆ

 


ಚಿಕ್ಕಮಗಳೂರು ನಗರದ ಹೊರವಲಯದ ಬೈಪಾಸ್ ರಸ್ತೆಗೆ ಹೊಂದಿಕೊಂಡಂತೆ ಇರೋ ಆಶ್ರಯ ಕಾಲೋನಿಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡ ಪತ್ತೆಯಾಗಿದ್ದು ದಾಖಲೆ ಸಲ್ಲಿಸುವಂತೆ ನಗರಸಭೆ ಅಧಿಕಾರಿಗಳು ಸೂಚಿಸಿದ್ದಾರೆ .

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಆಯುಕ್ತ ಬಸವರಾಜ್ ನೇತತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ,ಮೇಲ್ನೋಟಕ್ಕೆ ಇದೊಂದು ಮಸಿದಿ ಎಂದು ತಿಳಿದು ಬಂದಿದ್ದು 3 ದಿನದೊಳಗೆ ಅಗತ್ಯ ದಾಖಲೆಗಳನ್ನು ನೀಡುವಂತೆ ಸೂಚಿಸಲಾಗಿದೆ .

ಸೂಕ್ತ ದಾಖಲೆಗಳನ್ನು ನಿಗದಿತ ಸಮಯದಲ್ಲಿ ಒದಗಿಸದೆ ಇದ್ದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ .


ಪತ್ರಕರ್ತನ ಮೇಲೆ ಹಲ್ಲೆ ಖಂಡನೆ :ಶೃಂಗೇರಿಯ ಪತ್ರಕರ್ತ ರಾಘವೇಂದ್ರ ಮೇಲೆ ಶಾಸಕ ಟಿ ಡಿ ರಾಜೇಗೌಡ ಬೆಂಬಲಿಗರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ .

ಪ್ರಸನ್ನ ಶೆಟ್ಟಿ ಮತ್ತು ಶ್ರೀನಿವಾಸ್ ಶೆಟ್ಟಿ ಎಂಬಿಬ್ಬರು  ನಗರದ ಸೋಮೇಶ್ವರ ಹೋಟೆಲ್ ಒಂದರ ಬಳಿ ಹಲ್ಲೆ ಮಾಡಿದ್ದುಬಹೆಬ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ .

ರಾಘವೇಂದ್ರ ಮೇಲೆ ನಡೆದ ಹಲ್ಲೆಯನ್ನು ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಖಂಡಿಸಿವೆ .

ಶನಿವಾರ, ನವೆಂಬರ್ 5, 2022

ಆಪರೇಷನ್ ಭೈರ ಕಾರ್ಯಾಚರಣೆ ಸ್ಥಗಿತ ; ಸ್ಥಳೀಯರಲ್ಲಿ ನಿರಾಸೆ



ಮೂಡಿಗೆರೆ :ತಾಲ್ಲೂಕಿನ ಊರುಬಗೆ ಅರಣ್ಯ ಪ್ರದೇಶದಲ್ಲಿ ನರಹಂತಕ ಕಾಡಾನೆಯನ್ನು ಹಿಡಿದು ಸಾಗಿಸುವ  ಆಪರೇಷನ್ ಬೈರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಕಾರ್ಯಾಚರಣೆಗೆ ಬಂದಿದ್ದ 6 ದಸರಾ ಆನೆಗಳು ವಾಪಸ್ ತೆರಳಿದೆ. 
ಅಭಿಮನ್ಯುವಿಗೆ ಜ್ವರ ಭೇದಿ ಬಾಧಿಸಿದೆ. ಅಜ್ಜಯ್ಯ ಮತ್ತು ಗೋಪಾಲಸ್ವಾಮಿ ಆನೆಗೆ ಮದ ಬಂದಿದೆ. ಬೈರ ಮೂಡಿಗೆರೆ ತಾಲ್ಲೂಕಿನ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡು ಸಕಲೇಶಪುರ ಅಥವ ಮಂಗಳೂರು ಅರಣ್ಯ ಭಾಗಕ್ಕೆ ತೆರಳಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ.

 ಈ ಕಾರಣದಿಂದ ಕಾರ್ಯಚರಣೆ ಮಾಡಲು ಸಾಧ್ಯವಿಲ್ಲವೆಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚಿಕ್ಕಮಗಳೂರು ಡಿಸಿಎಫ್ ಕ್ರಾಂತಿ  ತಿಳಿಸಿದ್ದಾರೆ.

ನಿರಾಶೆ :ಮೂಡಿಗೆರೆ ತಾಲ್ಲೂಕಿನ ವಿವಿಧ ಭಾಗಗಳಿಗೆ ಲಗ್ಗೆ ಇಡುತ್ತಿದ್ದ  ಕಾಡಾನೆ ಈವರೆಗೆ ಹಲವರನ್ನು ಬಲಿ ತೆಗೆದುಕೊಂಡಿದ್ದು ಸಾಕಷ್ಟು ಬೆಳೆಯನ್ನು ಹಾನಿ ಮಾಡಿದೆ .

ಆನೆ ಹಿಡಿಯುವಂತೆ ಸ್ಥಳೀಯರು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತಿದ್ದು , ಕಾರ್ಯಾಚರಣೆ ಆರಂಭವಾಗಿ ಸ್ಥಳೀಯರು ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವ ವೇಳೆಗೆ ಕಾರ್ಯಾಚರಣೆ ಸ್ಥಗಿತ ಕೊಂಡು ನಿರಾಶೆ ತಂದಿದೆ