udayanews

ಶುಕ್ರವಾರ, ನವೆಂಬರ್ 11, 2022

ಜಾತಿ ವ್ಯವಸ್ಥೆ ವಿರುದ್ಧ ಸಂದೇಶ ಸಾರಿದ್ದ ಕನಕದಾಸರು: ಜಿಲ್ಲಾಧಿಕಾರಿ ರಮೇಶ್

 


ಚಿಕ್ಕಮಗಳೂರು : ದಾಸಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರು, ಸಾಹಿತ್ಯ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಮಹಾನ್ ದಾರ್ಶನಿಕ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಬಣ್ಣಿಸಿದರು.


ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ  ಆಯೋಜಿಸಿದ್ದ ಕನಕದಾಸ ಜಯಂತಿ ಉದ್ಘಾಟಿಸಿ ಮಾತನಾಡಿದರು.

ವ್ಯಾಸರಾಯರ ಶಿಷ್ಯರಾದ ಕನಕದಾಸರು ವ್ಯಾಕರಣ, ತರ್ಕ , ಮೀಮಾಂಸೆ ಸಾಹಿತ್ಯವನ್ನು ಅಭ್ಯಸಿಸಿ  ೫ ಮಹಾನ್ ಕಾವ್ಯಗಳನ್ನು ರಚಿಸಿದ್ದಾರೆ. ರಾಮಧಾನ್ಯಚರಿತ ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಈ ಕಾವ್ಯ ೧೫೬ ಪದ್ಯಗಳನ್ನು ಒಳಗೊಂಡಿದ್ದು, ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ ಕೃತಿ ಎಂದರು.

 ಜಾತಿಯ ಮೂಲವನ್ನು ಪ್ರಶ್ನೆ ಮಾಡುವ ಮೂಲಕ ಸಮಾಜದಿಂದ ಜಾತಿ ವ್ಯವಸ್ಥೆಯನ್ಬು ಕಿತ್ತುಹಾಕಬೇಕು , ಮನುಷ್ಯ ತನ್ನ ಕರ್ತವ್ಯ ಮಾಡಬೇಕು ಎನ್ನುವ ಸಂದೇಶ ಸಾರಿದ್ದಾರೆ ಎಂದು  ಹೇಳಿದರು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ವೆಂಕಟೇಶ್ , ನಗರಸಭೆ ಅಧ್ಯಕ್ಷ  ವರಸಿದ್ಧಿ ವೇಣುಗೋಪಾಲ್ ಇತರರು ಪಾಲ್ಗೊಂಡಿದ್ದರು .

ಚಿಕ್ಕಮಗಳೂರು ಕ್ಷೇತ್ರ :ಮುಸ್ಲೀಂ ಅಭ್ಯರ್ಥಿ ಘೋಷಣೆಗೆ ನಿರ್ಣಯ


 ಚಿಕ್ಕಮಗಳೂರು:- ಸುಮಾರು 32 ಸಾವಿರ ಜನಸಂಖ್ಯೆ ಮುಸ್ಲಿಂ ಸಮುದಾಯದವರಿಗೆ  ಕಾಂಗ್ರೆಸ್ ಪಕ್ಷದಿಂದ  ಚಿಕ್ಕಮಗಳೂರು ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕೆಂಬ ನಿರ್ಣಯ ತೆಗೆದುಕೊಳ್ಳಲಾಗಿದೆ  .

ಸಮುದಾಯದ ಮುಖಂಡ ಸಿ.ಎನ್.ಅಕ್ಮಲ್ ಗೆ  ಕಾಂಗ್ರೆಸ್‌ನಿಂದ ಟಿಕೇಟ್ ನೀಡಬೇಕು ಎಂದು ಪಕ್ಷದ ಮುಖಂಡರು, ಮಸೀದಿ ಗುರುಗಳು ಹಾಗೂ ಮುಸ್ಲೀಂ ಸಂಘಟನೆ ಮುಖಂಡರು ನಿರ್ಣಯಿಸಿದ್ದಾರೆ.

ಮೂರು ಬಾರಿ ಶಾಸಕರಾಗಿ /ಸಚಿವರಾಗಿ ಜಿಲ್ಲೆಯ ಜನತೆಗೆ ಅಭಿವೃದ್ದಿಯ ಕೊಡುಗೆ ನೀಡಿದ ಸಗೀರ್ ಅಹ್ಮದ್ ನಂತರದ ಇದುವರೆಗೂ   ಮುಸ್ಲೀಂ ಸಮುದಾಯದ ಅಭ್ಯರ್ಥಿಗೆ ಟೀಕೇಟ್ ನೀಡಿಲ್ಲ ಎಂಬ ಅಭಿಪ್ರಾಯ ವ್ಯಕ್ತಗೊಂಡಿತು .

 ಸಂಖ್ಯಾತರನ್ನು ದೊಡ್ಡಶಕ್ತಿ  ಎಂದು ಪರಿಗಣಿಸಿ ಸಿ.

ಎನ್. ಅಕ್ಮಲ್ ಅವರನ್ನು  ಅಭ್ಯರ್ಥಿ ಎಂದು ಘೋಷಿಸಬೇಕು ಒತ್ತಾಯ ಕೇಳಿಬಂದಿದೆ .

ಬ್ಯಾರಿ ಒಕ್ಕೂಟದ ಮಾಜಿ ರಾಜ್ಯಾಧ್ಯಕ್ಷ ಕೆ.ಮಹಮದ್ , ಸಿಡಿಎ ಮಾಜಿ ಅಧ್ಯಕ್ಷ ಅತಿಕ್ ಖೈಸರ್,  ಇತರರು  ಉಪಸ್ಥಿತರಿದ್ದರು.

ಹಣ ದುರ್ಬಳಕೆ ಆರೋಪ : ಮಾಜಿ ಶಾಸಕ ಶ್ರೀನಿವಾಸ್ ಗೆ ಘೇರಾವ್

 


ಚಿಕ್ಕಮಗಳೂರು : ದೇವಸ್ಥಾನದ ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಮಾಜಿ ಶಾಸಕರೊಬ್ಬರಿಗೆ ಘೇರಾವ್ ಹಾಕಿದ ಘಟನೆ ನಡೆದಿದೆ 

ತರೀಕೆರೆಯ ಶ್ರೀ ಗುರು ರೇವಣಸಿದ್ದೇಶ್ವರ ದೇವಸ್ಥಾನ ಕಮಿಟಿಯ ಹಣ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಕನಕ ಜಯಂತಿ ಕಾರ್ಯಕ್ರಮಕ್ಕೆ ತೆರಳಿದ ಮಾಜಿ ಶಾಸಕ ಶ್ರೀನಿವಾಸ್ ಗೆ ಘೇರಾವ್ ಹಾಕಲಾಗಿದೆ .

ರೇವಣಸಿದ್ದೇಶ್ವರ ಕುರುಬ ಸಮಾಜದ ಮುಖಂಡರು ಶಾಸಕರು ಪಾಲ್ಗೊಳ್ಳುವುದನ್ನು ತೀವ್ರ ವಿರೋಧಿಸಿ ಧಿಕ್ಕಾರ ಕೂಗಿದರು  .

ಮೆರವಣಿಗೆಯ ಟ್ರ್ಯಾಕ್ಟರ್ ಏರದಂತೆ, ಧ್ವಜಾರೋಹಣ ಮಾಡದಂತೆ ಆಕ್ರೋಶ ಹೊರಹಾಕಿ  ಕಾರ್ಯಕ್ರಮ ಮುಂದುವರೆಸಿದರು .

ಗುರುವಾರ, ನವೆಂಬರ್ 10, 2022

ಚಾರ್ಮಾಡಿ ಘಾಟ್ ನಲ್ಲಿ ಕಳೆದ ಒಂದು ವಾರದ ಹಿಂದೆ ಕಾಣಿಸಿಕೊಂಡಿದ್ದ ಹೆಬ್ಬಾವು ಮತ್ತೆ ಪ್ರತ್ಯಕ್ಷ

 


ಕೊಟ್ಟಿಗೆಹಾರ:ಕಳೆದ ಒಂದು ವಾರದ ಹಿಂದೆ ಚಾರ್ಮಾಡಿ ಘಾಟ್ ನಲ್ಲಿ ಕಾಣಿಸಿಕೊಂಡಿದ್ದ ಹೆಬ್ಬಾವೊಂದು ಮತ್ತೆ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಪ್ರವಾಸಿಗರಿಗೆ ದರ್ಶನ ನೀಡಿದೆ. ಯಾವುದೋ ಪ್ರಾಣಿಯೊಂದನ್ನು ನುಂಗಿ ರಸ್ತೆಯ ಒಂದು ಬದಿಯಲ್ಲಿದ್ದ ಹೆಬ್ಬಾವಿನ ವೀಡಿಯೋ ವನ್ನು ಈ ಭಾಗವಾಗಿ ಪ್ರಯಾಣಿಸುತ್ತಿದ್ದ ಪ್ರವಾಸಿಗರಾದ ಅರೆನೂರು ಸುಪ್ರೀತ್  ಸೆರೆ ಹಿಡಿದಿದ್ದಾರೆ. 

ವಾರದ ಹಿಂದೆಯಷ್ಟೆ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಹೆಬ್ಬಾವು ಮತ್ತೆ ರಸ್ತೆಯಲ್ಲಿ ಕಾಣಿಸಿಕೊಂಡಿದ್ದು ವಾಹನಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ‌ ಇದೀಗ ಹೆಬ್ಬಾವಿನ  ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

ಬುಧವಾರ, ನವೆಂಬರ್ 9, 2022

ಬಿಜೆಪಿ ಮುಖಂಡ ಶಿವಶಂಕರ್ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿಕೆ; ಸಾಬೀತು -ಕ್ರಮಕ್ಕೆ ಸೂಚನೆ

 



ಶೃಂಗೇರಿ: ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡರೂ ಆದ ಶಿವಶಂಕರ್ (ಶೃಂಗೇರಿ ಶಿವಣ್ಣ) ಸುಳ್ಳು ಜಾತಿ ಪ್ರಮಾಣ ಪತ್ರವನ್ನು, ಜಾತಿಯ ಕುರಿತಾದ ಸುಳ್ಳು ಮಾಹಿತಿಯನ್ನು ನೀಡಿ ಸರ್ಕಾರದಿಂದ ಸೌಲಭ್ಯಗಳನ್ನು ಪಡೆದಿರುವುದು ದೃಢಪಟ್ಟಿದೆ .

ಸರ್ಕಾರಕ್ಕೆ ವಂಚಿಸಿರುವುದು ವಿಚಾರಣಾ ಅವಧಿಯಲ್ಲಿ ಧೃಢಪಟ್ಟಿದೆ ಎಂಬುದಾಗಿ ನಾಗರೀಕ ಹಕ್ಕುಜಾರಿ ನಿರ್ದೇಶನಾಲಯ ಧೃಢಪಡಿಸಿದೆ.
ಶಿವಶಂಕರ ಬಿನ್ ಬಂಗಾರಸ್ವಾಮಿ ಇವರ ಜಾತಿ ವಿಚಾರಣೆ ನಡೆಸುವಂತೆ ಪ್ರಶಾಂತ್  ಇಲಾಖೆಯನ್ನು ಕೋರಿದ್ದರು.


ವಿಚಾರಣೆ ಕೈಗೊಂಡ ಇಲಾಖೆ ದಾಖಲಾತಿಗಳನ್ನು ಸಂಗ್ರಹಿಸಿ ವರದಿಯನ್ನು ಸಲ್ಲಿಸಿದೆ. ಈ ವರದಿ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿದಾಗ ಇವರು ಹಿಂದುಳಿದ ಪ್ರವರ್ಗ – 1 ರಲ್ಲಿ ಬರುವ ಬೋವಿ ಜಾತಿಗೆ ಸೇರಿರುತ್ತಾರೆ ಎಂದು ಧೃಢಪಟ್ಟಿದೆ ಎಂದು ತಿಳಿದುಬಂದಿದೆ .


ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯವನ್ನು ಪಡೆಯುವ ಉದ್ದೇಶದಿಂದ ಶೃಂಗೇರಿ ತಹಸೀಲ್ದಾರ್ ರಿಗೆ ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿಯ ಭೋವಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ನಿಜವಾದ ಪರಿಶಿಷ್ಟ ಜಾತಿಯ ಜನರನ್ನು ಮತ್ತು ಸರ್ಕಾರವನ್ನು ವಂಚಿಸಿದ್ದಾರೆ ಎಂಬುದಾಗಿ ವಿಚಾರಣಾ ಅವಧಿಯಲ್ಲಿ ಸಾಬೀತಾಗಿದೆ  ಎಂದು ಉಲ್ಲೇಖಿಸಲಾಗಿದೆ.

ಶಿವಶಂಕರ್ ಅವರು ಪಡೆದಿರುವ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸುವ ಸಲುವಾಗಿ ಅಧಿಕಾರಿಗಳು ಮುಂದಿನ ಕ್ರಮಕ್ಕೆ ಸೂಚಿಸಿದ್ದಾರೆ.


ಹಿಂದೂಗಳಿಗೆ ಅವಮಾನ :ಜಾರಕಿಹೊಳಿ ವಿರುದ್ಧ ಬಿಜೆಪಿ ಪ್ರತಿಭಟನೆ -ಶಾಸಕ ರವಿ ಭಾಗಿ

 


ಚಿಕ್ಕಮಗಳೂರು : ಹಿಂದೂಗಳ ವಿರುದ್ಧ ಅವಮಾನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು .

ಆಜಾದ್  ಮೈದಾನದಲ್ಲಿ ಪ್ರತಿಭಟನೆ ನಡೆಸಿ , ಅಶ್ಲೀಲವಾಗಿರುವುದು ಹಿಂದೂ ಪದವಲ್ಲ ' ಕಾಂಗ್ರೆಸ್ ಎಂದು ಆರೋಪಿಸಿ ಹಿಂದೂಗಳಿಗೆ ಅಪಮಾನ ಮಾಡಿರುವ ಜಾರಕಿಹೊಳಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು .

ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಹಿಂದೂಗಳ ವಿರುದ್ಧ ನಿರಂತರವಾಗಿ ದಾಳಿ ನಡೆಸುತ್ತಿದೆ ಮುಂಬರುವ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರ ನೀಡುವಂತೆ ಕರೆ ನೀಡಿದರು .

ಶಾಸಕ ಸಿ ಟಿ ರವಿ , ಪಕ್ಷದ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಇತರರು ಪಾಲ್ಗೊಂಡಿದ್ದರು .



ಕರಡು ಮತದಾರರ ಪಟ್ಟಿ ಪ್ರಕಟ: ಮತದಾರರ ಚೀಟಿ ಪರಿಷ್ಕರಣೆಗೆ ಡಿಸಿ ಸೂಚನೆ

 



ಚಿಕ್ಕಮಗಳೂರು : ಜಿಲ್ಲೆಯ ಎಲ್ಲಾ ತಾಲ್ಲೂಕು ಮತ್ತು ಎಲ್ಲಾ ಮತಗಟ್ಟೆಗಳಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು ಮತದಾರರಲ್ಲಿ  ಜಾಗೃತಿ ಮೂಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಜಿಲ್ಲೆಯಲ್ಲಿ ಒಟ್ಟು ೯,೩೪,೭೬೯ ಮತದಾರರಿದ್ದು, ಅದರಲ್ಲಿ  ೪,೬೪,೨೨೮ ಗಂಡು ಹಾಗೂ ೪,೭೦,೫೦೫ ಹೆಣ್ಣು ಮತದಾರರಿದ್ದಾರೆ. ಅವರಲ್ಲಿ   ಯುವ ಮತದಾರರ ಸಂಖ್ಯೆ  ೧೧,೫೦೨  ಆಗಿದೆ ಎಂದರು
ಭಾರತ ಚುನಾವಣಾ ಆಯೋಗ ೪  ನವೆಂಬರ್ ೧೨, ೨೦, ಡಿಸೆಂಬರ್ ೩ ಮತ್ತು ೪ರಂದು ವಿಶೇಷ ಆಂದೋಲನ  ಹಮ್ಮಿಕೊಂಡಿದ್ದು ಬೂತ್ ಮಟ್ಟದ ಅಧಿಕಾರಿ(ಬಿಎಲ್‌ಒ)ಗಳು ಮನೆಮನೆಗೆ ತೆರಳಿ ಮತದಾರರಲ್ಲಿ ಅರಿವು ಮೂಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಡಿಸೆಂಬರ್ ೮ರವರೆಗೆ ಮತದಾರರ ಗುರುತಿನ ಚೀಟಿ ಪರಿಷ್ಕರಣೆಗೆ ಅವಕಾಶವಿದೆ. ಮತದಾರರು ತಮ್ಮ ಹೆಸರು, ಜನ್ಮದಿನಾಂಕ, ವಿಳಾಸ ಪರಿಷ್ಕರಣೆ ಹಾಗೂ ಭಾವಚಿತ್ರ ಬದಲಾವಣೆ ಮಾಡಿಕೊಳ್ಳಬಹುದು ಎಂದರು .
ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು  ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮತ್ತು ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ ಉಪಸ್ಥಿತರಿದ್ದರು.