udayanews

ಶುಕ್ರವಾರ, ನವೆಂಬರ್ 18, 2022

ಐಟಿ ದಾಳಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ- ಮನವಿ ಸಲ್ಲಿಕೆ

 


ಚಿಕ್ಕಮಗಳೂರು ವಿಧಾನ ಪರಿಷತ್ ಮಾಜಿ ಸದಸ್ಯ ಗಾಯತ್ರಿಶಾಂತ ಗೌಡರ ಮನೆ ನಡೆದ ಐಟಿ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಅಂಶುಮನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳನ್ನು ಒಕ್ಕೂಟ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಟೀಕಿಸಿದರು.

ಗಾಯತ್ರಿ ಶಾಂತಗೌಡರ ಮನೆ ಮೇಲೆ ನಡೆದ ದಾಳಿ ರಾಜಕೀಯ ಪ್ರೇರಿತವಾಗಿದ್ದು , ನಿಜವಾದ ಭ್ರಷ್ಟರ ಮೇಲೆ ದಾಳಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಮಾಜಿ ಸಚಿವೆ ಮೋಟಮ್ಮ ಮುಖಂಡರಾದ ರೇಖಾ ಹುಲಿಯಪ್ಪ ಗೌಡ' ದೇವರಾಜ ಪಾಲ್ಗೊಂಡಿದ್ದರು.


ಜನ ಬಳಕೆ ದೇಶದಲ್ಲಿ ಮೀಸಲು ಅರಣ್ಯ; ಸಾರ್ವಜನಿಕರ ವಿರೋಧ ರಸ್ತೆ ತಡೆ

 



ಚಿಕ್ಕಮಗಳೂರು: ಜನ ಬಳಕೆ ಮಾರ್ಗದಲ್ಲಿ ಮೀಸಲು ಅರಣ್ಯ ಜಾರಿ  ಪ್ರತಿಭಟಿಸಿ ರಾಜ್ಯ ಹೆದ್ದಾರಿ ತಡೆದು ನೂರಾರು ಜನ ಪ್ರತಿಭಟನೆ ಮಾಡಿದ್ದಾರೆ.

ಕೊಪ್ಪ ತಾಲೂಕು ಮೇಗುಂದ ಹೋಬಳಿ ಹೆಗ್ಗಾರು ಗ್ರಾಮದ ಬ್ಲಾಕ್ -1ರಿಂದ  4ರ ವರೆಗೆ  ಒಟ್ಟು 1175.02 ಎಕರೆ ಮತ್ತು ಹರಳಾನೆ ಗ್ರಾಮದ ಗೋಮಾಳ ಮತ್ತು ಸೊಪ್ಪಿನ ಬೆಟ್ಟದ ಪ್ರದೇಶವನ್ನು ಮೀಸಲು ಅರಣ್ಯವಾಗಿ ಘೋಷಿಸುವ ಪ್ರಸ್ತಾವನೆಯನ್ನು  ಸಲ್ಲಿಸಿದ್ದಾರೆ ಎಂದು ಜನ ಆರೋಪಿಸಿದರು.

ಮಲೆನಾಡಿನ ಭಾಗದ ಜನರು ಈಗಾಗಲೇ ಕೃಷಿಗೆ ಬಾಧಿಸಿರುವ ರೋಗಗಳಿಂದ ಹೈರಾಣಗಿದ್ದು ಈ ಅಧಿಸೂಚನೆಯು ಮೊದಲೇ ಆತಂಕದಲ್ಲಿದ್ದ ಜನರನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಲೆನಾಡಿನ ಜನರು ನಾವು ಉಳಿಸಿ ಬೆಳೆಸಿದ ಭೂಮಿ, ಕೃಷಿ, ಪರಿಸರಕ್ಕೆ ಧಕ್ಕೆಯುಂಟಾದಾಗ ಎಲ್ಲವನ್ನು ಬದಿಗಿಟ್ಟು ಒಂದಾಗಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದರು

ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಗಡಿಕಲ್ಲು  ಸಮೀಪ ನಾಗರಿಕ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ



ರಸ್ತೆ ತಡೆ ಹಿನ್ನೆಲೆ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್  ಆಗಿ ವಾಹನ ಸಂಚಾರ ಸ್ಥಗಿತ ಗೊಂಡಿತ್ತು.

ಗುರುವಾರ, ನವೆಂಬರ್ 17, 2022

ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತಗೌಡ ಮನೆಗೆ ಐಟಿ ದಾಳಿ : ರಾಜಕೀಯ ಪ್ರೇರಿತ ರಾಜಕೀಯ ಪ್ರೇರಿತ ಆರೋಪ- ಪ್ರತಿಭಟನೆ

 


ಚಿಕ್ಕಮಗಳೂರು ;ಕಾಂಗ್ರೆಸ್ ನಾಯಕಿ  ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತಗೌಡರ ಮನೆಗೆ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ಕೊಟ್ಟಿದ್ದಾರೆ.
ಇಂದು ಬೆಳಿಗ್ಗೆ ಮದುವೆ ಮನೆಗೆ ಹೋಗುವ ಸೋಗಿನಲ್ಲಿ ಆಗಮಿಸಿದ ಐಟಿ ಅಧಿಕಾರಿಗಳು ನೇರವಾಗಿ ಗಾಯತ್ರಿ    ಶಾಂತಗೌಡರ ಮನೆಗೆ ದಾಳಿ ಮಾಡಿ ಅನೇಕ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದಾಳಿ ಸುದ್ದಿ ತಿಳಿಯುತ್ತಿದ್ದಂತೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು  ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದ್ದುಗಾಯತ್ರಿ ಶಾಂತಗೌಡರನ್ನು ಕುಗ್ಗಿಸುವ ಯತ್ನ ಎಂದು ಆರೋಪಿಸಿ ದಾಳಿಯ ಹಿಂದೆ ಶಾಸಕ ಸಿಟಿ ರವಿ ಕೈವಾಡ ಇದೆ ಆರೋಪಿಸಿದರು.  ಶಾಸಕ ಸಿ.ಟಿ ರವಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.
ಕೇವಲ  ಗಾಯತ್ರಿ ಶಾಂತಗೌಡರ ಮನೆಗೆ ಮಾತ್ರ ದಾಳಿ ನಡೆಸಲಾಗಿದೆ .ಗುತ್ತಿಗೆದಾರ ಸುದರ್ಶನ್ ಮನೆಗೂ ದಾಳಿ ಮಾಡಬೇಕಿತ್ತು ಎಂದು ಒತ್ತಾಯಿಸಿದ್ದಾರೆ.
ಗಾಯತ್ರಿ ಶಾಂತಗೌಡರ ಮನೆ ಕ್ರಶರ್ ಅಳಿಯನ ಮನೆಗಳ ಮೇಲು ದಾಳಿ ನಡೆದಿದೆ. ರಾಜಕೀಯ ವಲಯದಲ್ಲಿ ಸಂಚಲನ ಉಂಟುಮಾಡಿದೆ.

ಮಂಗಳವಾರ, ನವೆಂಬರ್ 15, 2022

ಅಡಿಕೆ ಎಲೆಚುಕ್ಕಿ ರೋಗ : ಗಂಭೀರ ಪರಿಗಣನೆ - ಮುಖ್ಯಮಂತ್ರಿ ಬೊಮ್ಮಾಯಿ

 


ಅಡಿಕೆ ಎಲೆಚುಕ್ಕಿ ರೋಗ :  ಗಂಭೀರ ಪರಿಗಣನೆ - ಮುಖ್ಯಮಂತ್ರಿ  ಬೊಮ್ಮಾಯಿ
ಚಿಕ್ಕಮಗಳೂರು :  ಅಡಿಕೆ ಬೆಳೆಗೆ ತಗಲಿರುವ ಎಲೆಚುಕ್ಕಿ ರೋಗದ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು , ರಾಜ್ಯ ಸರ್ಕಾರ ರೋಗ ತಡೆಗಟ್ಟಲು ಔಷಧಿ ಸಿಂಪಡಣೆಗೆ 10 ಕೋಟಿ ರೂ. ಬಿಡುಗಡೆ ಮಾಡಿಲಾದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಕಡೂರು ಹಾಗೂ ತರೀಕೆರೆ ತಾಲ್ಲೂಕುಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು  ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿಎಲೆಚುಕ್ಕಿ ರೋಗವು ದೊಡ್ಡಪ್ರಮಾಣದಲ್ಲಿ ಹರಡುತ್ತಿದ್ದು, ಈ ರೋಗದಿಂದ ಇಳುವರಿ ಕಡಿಮೆಯಾಗಿ ರೈತರಿಗೆ ನಷ್ಟವಾಗುತ್ತಿದೆ ಎಂದರು.
ರೋಗ ನಿವಾರಣೆಗೆ ವಿಶ್ವವಿದ್ಯಾಲಯಗಳ ತಂಡ, ಕೃಷಿ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಸಂಸ್ಥೆಗಳ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು  ಅವರ ವರದಿ ಆಧರಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಬಳಿಕ ಸುಮಾರು ರೂ. ೩೭೫ ಕೋಟಿ ವೆಚ್ಚದಲ್ಲಿ ತರೀಕೆರೆ ತಾಲ್ಲೂಕಿನ ಪ್ರತಿ ಮನೆಗಳಿಗೆ ಕುಡಿಯುವ ನೀರು  ಕೊಡುವ ಮತ್ತು  ಘರ್‌ಘರ್‌ಗಂಗಾ ಯೋಜನೆಯಡಿಯಲ್ಲಿ ಅಜ್ಜಂಪುರ ಭಾಗದಲ್ಲಿ ಸುಮಾರು ರೂ. ೬೬೯ ಕೋಟಿ ವೆಚ್ಚದ ಬೃಹತ್ ಯೋಜನೆಗಳಿಗೆ ಚಾಲನೆ ನೀಡಿದರು. 
ಭದ್ರಾ ಮೇಲ್ದಂಡೆ ಕಾಮಗಾರಿಗಳಿಗೆ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು , ಎನ್‌ಆರ್‌ಇಜಿನಲ್ಲಿ ಚಿಕ್ಕಮಗಳೂರು ಜಿಲ್ಲೆ ಉತ್ತಮ ಸಾಧನೆ ಮಾಡಿದ್ದು ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತರೀಕೆರೆ ಶಾಸಕ ಡಿ.ಎಸ್.ಸುರೇಶ್  ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ  ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಉಪಸ್ಥಿತರಿದ್ದರು.

ಭಾನುವಾರ, ನವೆಂಬರ್ 13, 2022

ವಾಹನ ಕೆಟ್ಟು ನಿಂತು ಚಾರ್ಮಾಡಿ ಘಾಟ್ ನಲ್ಲಿ ಟ್ರಾಫಿಕ್ ಜಾಮ್


 

ವಾಹನ ಸವಾರರು ಹೈರಾಣ
ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯ  11 ನೇ ತಿರುವಿನಲ್ಲಿ   ಪೊಲೀಸ್ ಡಿಆರ್ ವಾಹನ ಕೆಟ್ಟು ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು.
ಚಿಕ್ಕಮಗಳೂರಿನ ಪೊಲೀಸ್ ಡಿಆರ್ ವಾಹನ  ಕೆಟ್ಟು ನಿಂತಿದ್ದರಿಂದ ಪ್ರವಾಸಿಗರು ಪರದಾಡುವಂತಾಯಿತು.
ಎರಡು ಬದಿಯಿಂದ ವಾಹನಗಳು ಏಕಕಾಲದಲ್ಲಿ ಸಂಚರಿಸಲಾಗದೇ ಕಿ.ಮೀ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಒಂದು ಬದಿ ವಾಹನ ಸಾಗಲು ಹರಸಾಹಸ ಪಡಬೇಕಾಯಿತು.ವಾರಾಂತ್ಯ ಆದುದರಿಂದ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು.ಸಂಜೆ ಏಳು ಗಂಟೆ ವರೆಗೂ ವಾಹನ ರಿಪೇರಿ ಆಗಿರಲಿಲ್ಲ 

ಶುಕ್ರವಾರ, ನವೆಂಬರ್ 11, 2022

ದತ್ತಮಾಲೆ ಅಭಿಯಾನ ಹಿನ್ನೆಲೆ :1500 ಕ್ಕೂಹೆಚ್ಚು ಪೊಲೀಸರ ನಿಯೋಜನೆ -ಕಟ್ಟುನಿಟ್ಟಿನ ಮುನ್ನೆಚ್ಚರಿಕೆ

 


ಚಿಕ್ಕಮಗಳೂರು :ಇದೇ ತಿಂಗಳ 13 ರಂದು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಶ್ರೀರಾಮ ಸೇನೆ ಆಶ್ರಯದಲ್ಲಿ ನಡೆಯಲಿರುವ ದತ್ತಮಾಲಾ ಅಭಿಯಾನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ .

5 ರಾಜ್ಯ  ಸಶಸ್ತ್ರ ಮೀಸಲು ಪಡೆ ,11 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿದಂತೆ 1500 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ .

26 ಚೆಕ್ ಪೋಸ್ಟ್ ಗಳನ್ನು ನಿರ್ಮಾಣ ಮಾಡಿದ್ದು, ವಿಶೇಷ ದಂಡಾಧಿಕಾರಿಗಳನ್ನು ನೇಮಿಸಲಾಗಿದೆ .  13 ರಂದು ಬಾಬಾಬುಡನ್ ಗಿರಿಗೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ .

ಶೋಭಯಾತ್ರೆ ಹಿನ್ನೆಲೆಯಲ್ಲಿ  13 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಸವನಹಳ್ಳಿ ಮುಖ್ಯ ರಸ್ತೆ ಮಹಾತ್ಮಗಾಂಧಿ ರಸ್ತೆಯಲ್ಲಿ ವಾಹನ ನಿಲುಗಡೆ ,ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ .

13 ರಂದು ಇಂದಿರಾಗಾಂಧಿ ರಸ್ತೆ, ರತ್ನಗಿರಿ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ . ಎಲ್ಲ ರೀತಿಯ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ .

ಜಾತಿ ವ್ಯವಸ್ಥೆ ವಿರುದ್ಧ ಸಂದೇಶ ಸಾರಿದ್ದ ಕನಕದಾಸರು: ಜಿಲ್ಲಾಧಿಕಾರಿ ರಮೇಶ್

 


ಚಿಕ್ಕಮಗಳೂರು : ದಾಸಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರು, ಸಾಹಿತ್ಯ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಮಹಾನ್ ದಾರ್ಶನಿಕ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಬಣ್ಣಿಸಿದರು.


ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ  ಆಯೋಜಿಸಿದ್ದ ಕನಕದಾಸ ಜಯಂತಿ ಉದ್ಘಾಟಿಸಿ ಮಾತನಾಡಿದರು.

ವ್ಯಾಸರಾಯರ ಶಿಷ್ಯರಾದ ಕನಕದಾಸರು ವ್ಯಾಕರಣ, ತರ್ಕ , ಮೀಮಾಂಸೆ ಸಾಹಿತ್ಯವನ್ನು ಅಭ್ಯಸಿಸಿ  ೫ ಮಹಾನ್ ಕಾವ್ಯಗಳನ್ನು ರಚಿಸಿದ್ದಾರೆ. ರಾಮಧಾನ್ಯಚರಿತ ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಈ ಕಾವ್ಯ ೧೫೬ ಪದ್ಯಗಳನ್ನು ಒಳಗೊಂಡಿದ್ದು, ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ ಕೃತಿ ಎಂದರು.

 ಜಾತಿಯ ಮೂಲವನ್ನು ಪ್ರಶ್ನೆ ಮಾಡುವ ಮೂಲಕ ಸಮಾಜದಿಂದ ಜಾತಿ ವ್ಯವಸ್ಥೆಯನ್ಬು ಕಿತ್ತುಹಾಕಬೇಕು , ಮನುಷ್ಯ ತನ್ನ ಕರ್ತವ್ಯ ಮಾಡಬೇಕು ಎನ್ನುವ ಸಂದೇಶ ಸಾರಿದ್ದಾರೆ ಎಂದು  ಹೇಳಿದರು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ವೆಂಕಟೇಶ್ , ನಗರಸಭೆ ಅಧ್ಯಕ್ಷ  ವರಸಿದ್ಧಿ ವೇಣುಗೋಪಾಲ್ ಇತರರು ಪಾಲ್ಗೊಂಡಿದ್ದರು .