udayanews

ಭಾನುವಾರ, ನವೆಂಬರ್ 20, 2022

ಮೂಡಿಗೆರೆ ಸಮೀಪ ಕಾಡಾನೆಗೆ ಮಹಿಳೆ ಬಲಿ: ಸ್ಥಳೀಯರ ಅಕ್ರೋಶ

 


ಮೂಡಿಗೆರೆ: ತಾಲೂಕಿನ ಹುಲೇಮನೆ ಕುಂದೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ.

  45 ವರ್ಷದ ಶೋಭಾ ಅಮೃತ ದುರ್ದೈವಿ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ಜನರು ಆತಂಕದಲ್ಲಿ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳು ಮನೆ ಸಮೀಪವೇ ಬರುತ್ತಿದ್ದು ಜನರು ಭಯಭೀತರಾಗಿದ್ದಾರೆ.

 ಜಾನುವಾರುಗಳಿಗೆ ಹುಲ್ಲು ತರಲು ಹೋದಾಗ ಶೋಭಾ ಮೇಲೆ ಕಾಡಾನೆ ನಡೆಸಿದ್ದು  ಮಹಿಳೆಯ ದೇಹವನ್ನು ಕಾಡಾನೆ ನಜ್ಜುಗುಜ್ಜು ಮಾಡಿದೆ. ಗ್ರಾಮಸ್ಥರು ಭಯ ಬೀತರಾಗಿದ್ದು ಹಾಡು ಹಗಲೇ ನಡೆದ ಘಟನೆಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿತನವೇ ಕಾರಣ ಎಂದು ಆರೋಪಿಸಿದ್ದಾರೆ.

 ಕಾಡಾನೆಗಳು ಊರಿನಲ್ಲಿ ಇದ್ದರು ಅರಣ್ಯ ಇಲಾಖೆ ತಿಳಿಸಿದರೆ ಅವುಗಳನ್ನು ಕಾಡಿಗಟ್ಟಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಿದ್ಯುತ್ ತಂತಿ ತಗುಲಿ ಬಾಲಕ ಸಾವು: ಬೀರೂರು ಸಮೀಪದ ದೊಡ್ಡಘಟ್ಟ ಗ್ರಾಮದ ಡಿ.ಕೆ ರಾಜಪ್ಪನವರ ಪುತ್ರ ಶರತ್ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾನೆ.

ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಮೋಟಾರ್ ಪಂಪಿನ ಸ್ಟಾರ್ಟರ್ ಬಾಕ್ಸ್ ಮೇಲೆ ಬಿದ್ದಿತ್ತು. ಬಾಕ್ಸ್ನ ಬೀಗ ತೆಗೆಯಲು ಬಂದಿದ್ದ ಶರತ್ ಗೆ ವಿದ್ಯುತ್ ಆಗಲಿ ಸ್ಥಳದಲ್ಲಿ ಸಾವಪ್ಪಿದ್ದಾನೆ.

ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಹಾಗೂ ವಿಮಾಸಂಸ್ಥೆ ಪ್ರತಿನಿಧಿಗಳು ಭೇಟಿ ನೀಡಿ ಸೂಕ್ತ ಪರಿಹಾರ ನೀಡುವ ಭರವಸೆ ಕೊಟ್ಟಿದ್ದಾರೆ

 

ಶನಿವಾರ, ನವೆಂಬರ್ 19, 2022

ಭಾರಿ ಪ್ರಮಾಣದ ಬಾಡಿಗೆ ಬಾಕಿ: ಕೋಳಿ ಅಂಗಡಿ ಮಳಿಗೆಗಳಿಗೆ ಬೀಗ

 


ಚಿಕ್ಕಮಗಳೂರು ನಗರದ ಸಂತೆ ಮಾರುಕಟ್ಟೆಯ ಒಳಗಿರುವ ಬಾಡಿಗೆ ಹಣ ಕಟ್ಟದ ಕೋಳಿ ಮಳಿಗೆಗಳಿಗೆ ಬೀಗ ಹಾಕಲಾಗಿದೆ.

 ಅನೇಕ ತಿಂಗಳುಗಳಿಂದ ಬಾಡಿಗೆ ಕಟ್ಟದೆ  ಲಕ್ಷ ರೂಗಳಿಗೂ ಹೆಚ್ಚು ಬಾಡಿಗೆ ಬಾಕಿ ಉಳಿದಿದ್ದು  ಅನೇಕ ಬಾರಿ ಹೇಳಿದರೂ ನಗರಸಭೆಗೆ ಬಾಡಿಗೆ ಕಟ್ಟಿಲ್ಲ.

ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್  ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಬಾಡಿಗೆ ನೀಡದೆ ಇರುವ ಮಳಿಗೆಗಳನ್ನು ನಗರಸಭೆಯ ವತಿಯಿಂದ ಬಾಗಿಲು ಮುಚ್ಚಿಸಿ ಬೀಗ ಹಾಕಿಸುವ ಕೆಲಸವನ್ನು ನಡೆಸಿದರು,

      ನಗರಸಭಾ ಎಂಜಿನಿಯರ್ ಚಂದನ್  ಕಂದಾಯ ನಿರೀಕ್ಷಕರಾದ ಶಿವಾನಂದ್, ಜಗದೀಶ್, ಬಿಲ್ ಕಲೆಕ್ಟರ್ ಸಂತೋಷ್, ಪ್ರದೀಪ್, ಸತೀಶ್, ಸೂಪರ್ವೈಸರ್ ಮುರುಗೇಶ್, ಇತರೆ   ಸಿಬ್ಬಂದಿ ಉಪಸ್ಥಿತರಿದ್ದರು.

ಬಾಬಾಬುಡನ್ ದರ್ಗಾ ವ್ಯವಸ್ಥಾಪನಾ ಸಮಿತಿಯ ರಚನೆಯಲ್ಲಿ ಬಿಜೆಪಿ ಸರ್ಕಾರದ ಕೋಮುವಾದ : ಚಿಂತಕ ಶಿವಸುಂದರ್ ಟೀಕೆ

 



ಚಿಕ್ಕಮಗಳೂರು  : ಬಾಬಾಬುಡನ್ ದರ್ಗಾ ವಿಷಯದಲ್ಲಿ  ಕೋಮುವಾದಿ ರಾಜಕಾರಣ ಮಾಡುತ್ತಾ ಅಧಿಕಾರಕ್ಕೆ ಬಂದ ಬಿಜೆಪಿ  ನಿರೀಕ್ಷೆಯಂತೆ ಬಾಬಾಬುಡನ್ ದರ್ಗಾ ವ್ಯವಸ್ಥಾಪನಾ ಸಮಿತಿಯ ರಚನೆಯಲ್ಲೂ ಎಲ್ಲಾ ಆಡಳಿತಾತ್ಮಕ  ಹಾಗೂ ಸಾಂವಿಧಾನಾತ್ಮಕ ನೈತಿಕತೆಗಳನು ಗಾಳಿಗೆ ತೂರಿದೆ ಎಂದು ಚಿಂತಕ ಶಿವ ಸುಂದರ ಆರೋಪಿಸಿದ್ದಾರೆ
ಬಾಬಾಬುಡನ್ ದರ್ಗಾದಲ್ಲಿ ಪಾರಂಪರಿಕವಾಗಿ ಆಡಳಿತಾತ್ಮಕ ಹಾಗೂ ಧಾರ್ಮಿಕ ಅಧಿಕಾರವನ್ನು ಹೊಂದಿದ್ದ ಶಾಖಾದ್ರಿಯ ಅಧಿಕಾರವನ್ನು ಕಿತ್ತುಹಾಕಿತು .. ಮತ್ತು  ಅಲ್ಲಿ ಆಡಳಿತ ಮತ್ತು ಧಾರ್ಮಿಕ ನಿರ್ವಹಣೆಗೆ ಒಂದು ವ್ಯವಸ್ಥಾಪನಾ ಸಮಿತಿಯನ್ನು ರಚಿಸಬೇಕೆಂಬ ಆದೇಶವನ್ನು ಹೊರಡಿಸಿತು.
ಪ್ರಸ್ತಾವಿತ ಸಂಸ್ಥೆಗೆ ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮದವರನ್ನೊಳಗೊಂಡ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವುದು .
ಸದರಿ ಸಂಸ್ಥೆಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು  ವ್ಯವಸ್ಥಾಪನಾ ಸಮಿತಿ ಅರ್ಚಕ ಹಾಗೂ ಮುಜಾವರ್ ಅವರನ್ನು ನೇಮಿಸುವುದು ಎಂದು ಆದೇಶಿಸಿತ್ತು.
ಆದರೆ  ಬಾಬಾಬುಡನ್ ದರ್ಗಾ ನಿರ್ವಹಣೆಗೆ ಸರ್ಕಾರ  ಮೂರು ವರ್ಷಗಳ ಅವಧಿಗೆ ಘೋಷಿಸಿರುವ  ಎಂಟು ಜನರ ಸಮಿತಿಯಲ್ಲಿ- ಏಳು ಸದಸ್ಯರು ಹಿಂದೂಗಳು.ಒಬ್ಬರು ಮಾತ್ರ ಮುಸ್ಲಿಮರಿದ್ದಾರೆ ಎಂದು ಆಕ್ಷೇಪ  ಹೊರ ಹಾಕಿದ್ದಾರೆ.

ಇದು ಬಿಜೆಪಿ ಸರ್ಕಾರದ ಹಿಂದುತ್ವ ರಾಜಕಾರಣದ ಸರ್ವಾಧಿಕಾರವಲ್ಲದೆ ಮತ್ತೇನು? ಎಂದು ಪ್ರಶ್ನಿಸಿ
ಎರಡೂ ಧರ್ಮದವರನ್ನೊಳಗೊಂಡ ಸಮಿತಿ ರಚಿಸಲಾಗುವುದು ಎಂದು ಕೋರ್ಟಿನ ಮುಂದೆ ಮುಚ್ಚಳಿಕೆ ಕೊಟ್ಟು ಸಮಿತಿಯಲ್ಲಿ  ನೆಪಮಾತ್ರಕ್ಕೆ ಒಬ್ಬ ಮುಸ್ಲಿಂ ಸದಸ್ಯನನ್ನು  ಮಾತ್ರ ನೇಮಕ ಮಾಡಿದೆ ಎಂದು ಟೀಕಿಸಿದ್ದಾರೆ.
ಇದಕ್ಕಿಂತ ಭಿನ್ನಾವಾದದ್ದನ್ನು ಬಿಜೆಪಿ ಸರ್ಕಾರ ಮಾಡುತ್ತದೆಂಬ ನಿರೀಕ್ಷೆಯೂ ಇರಲಿಲ್ಲ.
ನಾಗರೀಕ ಸಮಾಜ  ಮೌನ ಬಿಜೆಪಿಯ ಕ್ರೌರ್ಯಕ್ಕಿಂತ ಅಪಾಯಕಾರಿ.. ಅಲ್ಲವೇ? ಎಂದು ಹೇಳಿದ್ದಾರೆ

ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ -ಪೀಠಕ್ಕೆ ವ್ಯವಸ್ಥಾಪನ ಸಮಿತಿ ರಚನೆ

 



ಚಿಕ್ಕಮಗಳೂರು :ತಾಲೂಕಿನ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ -ಪೀಠಕ್ಕೆ ಸರ್ಕಾರ ವ್ಯವಸ್ಥಾಪನ ಸಮಿತಿಯನ್ನು ರಚಿಸಿದೆ.

8 ಸದಸ್ಯರನ್ನು ಒಳಗೊಂಡ ಸಮಿತಿ ಇದಾಗಿದೆ. ಸಮಿತಿ ಸದಸ್ಯರಾಗಲು 43 ಜನ ಅರ್ಜಿ ಸಲ್ಲಿಸಿದ್ದು, ಪರಿಶೀಲಿಸಿ ಆಯ್ಕೆಯನ್ನು ಮಾಡಲಾಗಿದೆ.

ಸಮಿತಿ ರಚಿಸಿದ ಸರ್ಕಾರವನ್ನು ಸ್ವಾಗತಿಸಿ ,ಐದು ದಶಕಗಳ ಹೋರಾಟಕ್ಕೆ ಸಂದ ಜಯ ಎಂದು ಶಾಸಕ ಸಿಟಿ ರವಿ ಮತ್ತು ವಿಶ್ವ ಹಿಂದೂ ಪರಿಷತ್ ಪ್ರತಿಕ್ರಿಯಿಸಿದೆ.


ಶುಕ್ರವಾರ, ನವೆಂಬರ್ 18, 2022

ಐಟಿ ದಾಳಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ- ಮನವಿ ಸಲ್ಲಿಕೆ

 


ಚಿಕ್ಕಮಗಳೂರು ವಿಧಾನ ಪರಿಷತ್ ಮಾಜಿ ಸದಸ್ಯ ಗಾಯತ್ರಿಶಾಂತ ಗೌಡರ ಮನೆ ನಡೆದ ಐಟಿ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಅಂಶುಮನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳನ್ನು ಒಕ್ಕೂಟ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಟೀಕಿಸಿದರು.

ಗಾಯತ್ರಿ ಶಾಂತಗೌಡರ ಮನೆ ಮೇಲೆ ನಡೆದ ದಾಳಿ ರಾಜಕೀಯ ಪ್ರೇರಿತವಾಗಿದ್ದು , ನಿಜವಾದ ಭ್ರಷ್ಟರ ಮೇಲೆ ದಾಳಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಮಾಜಿ ಸಚಿವೆ ಮೋಟಮ್ಮ ಮುಖಂಡರಾದ ರೇಖಾ ಹುಲಿಯಪ್ಪ ಗೌಡ' ದೇವರಾಜ ಪಾಲ್ಗೊಂಡಿದ್ದರು.


ಜನ ಬಳಕೆ ದೇಶದಲ್ಲಿ ಮೀಸಲು ಅರಣ್ಯ; ಸಾರ್ವಜನಿಕರ ವಿರೋಧ ರಸ್ತೆ ತಡೆ

 



ಚಿಕ್ಕಮಗಳೂರು: ಜನ ಬಳಕೆ ಮಾರ್ಗದಲ್ಲಿ ಮೀಸಲು ಅರಣ್ಯ ಜಾರಿ  ಪ್ರತಿಭಟಿಸಿ ರಾಜ್ಯ ಹೆದ್ದಾರಿ ತಡೆದು ನೂರಾರು ಜನ ಪ್ರತಿಭಟನೆ ಮಾಡಿದ್ದಾರೆ.

ಕೊಪ್ಪ ತಾಲೂಕು ಮೇಗುಂದ ಹೋಬಳಿ ಹೆಗ್ಗಾರು ಗ್ರಾಮದ ಬ್ಲಾಕ್ -1ರಿಂದ  4ರ ವರೆಗೆ  ಒಟ್ಟು 1175.02 ಎಕರೆ ಮತ್ತು ಹರಳಾನೆ ಗ್ರಾಮದ ಗೋಮಾಳ ಮತ್ತು ಸೊಪ್ಪಿನ ಬೆಟ್ಟದ ಪ್ರದೇಶವನ್ನು ಮೀಸಲು ಅರಣ್ಯವಾಗಿ ಘೋಷಿಸುವ ಪ್ರಸ್ತಾವನೆಯನ್ನು  ಸಲ್ಲಿಸಿದ್ದಾರೆ ಎಂದು ಜನ ಆರೋಪಿಸಿದರು.

ಮಲೆನಾಡಿನ ಭಾಗದ ಜನರು ಈಗಾಗಲೇ ಕೃಷಿಗೆ ಬಾಧಿಸಿರುವ ರೋಗಗಳಿಂದ ಹೈರಾಣಗಿದ್ದು ಈ ಅಧಿಸೂಚನೆಯು ಮೊದಲೇ ಆತಂಕದಲ್ಲಿದ್ದ ಜನರನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಲೆನಾಡಿನ ಜನರು ನಾವು ಉಳಿಸಿ ಬೆಳೆಸಿದ ಭೂಮಿ, ಕೃಷಿ, ಪರಿಸರಕ್ಕೆ ಧಕ್ಕೆಯುಂಟಾದಾಗ ಎಲ್ಲವನ್ನು ಬದಿಗಿಟ್ಟು ಒಂದಾಗಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದರು

ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಗಡಿಕಲ್ಲು  ಸಮೀಪ ನಾಗರಿಕ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ



ರಸ್ತೆ ತಡೆ ಹಿನ್ನೆಲೆ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್  ಆಗಿ ವಾಹನ ಸಂಚಾರ ಸ್ಥಗಿತ ಗೊಂಡಿತ್ತು.

ಗುರುವಾರ, ನವೆಂಬರ್ 17, 2022

ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತಗೌಡ ಮನೆಗೆ ಐಟಿ ದಾಳಿ : ರಾಜಕೀಯ ಪ್ರೇರಿತ ರಾಜಕೀಯ ಪ್ರೇರಿತ ಆರೋಪ- ಪ್ರತಿಭಟನೆ

 


ಚಿಕ್ಕಮಗಳೂರು ;ಕಾಂಗ್ರೆಸ್ ನಾಯಕಿ  ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತಗೌಡರ ಮನೆಗೆ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ಕೊಟ್ಟಿದ್ದಾರೆ.
ಇಂದು ಬೆಳಿಗ್ಗೆ ಮದುವೆ ಮನೆಗೆ ಹೋಗುವ ಸೋಗಿನಲ್ಲಿ ಆಗಮಿಸಿದ ಐಟಿ ಅಧಿಕಾರಿಗಳು ನೇರವಾಗಿ ಗಾಯತ್ರಿ    ಶಾಂತಗೌಡರ ಮನೆಗೆ ದಾಳಿ ಮಾಡಿ ಅನೇಕ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದಾಳಿ ಸುದ್ದಿ ತಿಳಿಯುತ್ತಿದ್ದಂತೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು  ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದ್ದುಗಾಯತ್ರಿ ಶಾಂತಗೌಡರನ್ನು ಕುಗ್ಗಿಸುವ ಯತ್ನ ಎಂದು ಆರೋಪಿಸಿ ದಾಳಿಯ ಹಿಂದೆ ಶಾಸಕ ಸಿಟಿ ರವಿ ಕೈವಾಡ ಇದೆ ಆರೋಪಿಸಿದರು.  ಶಾಸಕ ಸಿ.ಟಿ ರವಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.
ಕೇವಲ  ಗಾಯತ್ರಿ ಶಾಂತಗೌಡರ ಮನೆಗೆ ಮಾತ್ರ ದಾಳಿ ನಡೆಸಲಾಗಿದೆ .ಗುತ್ತಿಗೆದಾರ ಸುದರ್ಶನ್ ಮನೆಗೂ ದಾಳಿ ಮಾಡಬೇಕಿತ್ತು ಎಂದು ಒತ್ತಾಯಿಸಿದ್ದಾರೆ.
ಗಾಯತ್ರಿ ಶಾಂತಗೌಡರ ಮನೆ ಕ್ರಶರ್ ಅಳಿಯನ ಮನೆಗಳ ಮೇಲು ದಾಳಿ ನಡೆದಿದೆ. ರಾಜಕೀಯ ವಲಯದಲ್ಲಿ ಸಂಚಲನ ಉಂಟುಮಾಡಿದೆ.