udayanews

ಬುಧವಾರ, ನವೆಂಬರ್ 23, 2022

ಮಧ್ಯರಾತ್ರಿ ಗ್ರಾಮಕ್ಕೆ ನುಗ್ಗಿ ಕುರಿಯನ್ನು ಹೊತ್ತೊಯ್ದ ಚಿರತೆ




ಚಿಕ್ಕಮಗಳೂರು : ಮಧ್ಯೆರಾತ್ರಿ ಗ್ರಾಮಕ್ಕೆ ನುಗ್ಗಿ

 ಚಿರತೆಯೊಂದು ಕುರಿಯನ್ನ ಹೊತ್ತೊಯ್ದ ಪ್ರಕರಣ

ಚಿಕ್ಕಮಗಳೂರು ತಾಲೂಕಿನ

ಉದ್ದೆಬೋರನಹಳ್ಳಿ-ತಡೆಬೆನಹಳ್ಳಿ ಗ್ರಾಮದಲ್ಲಿ  ನಡೆದಿದೆ

ಒಂದು ಕುರಿಯನ್ನ ಕೊಂದು, ಮತ್ತೊಂದು ಕುರಿಯನ್ನ ಹಚ್ಚಿಕೊಂಡು ಹೋಗಿದೆ

ರಮೇಶ್ ಎಂಬುವರಿಗೆ ಸೇರಿದ ಕುರಿಗಳ ಮೇಲೆ ಚಿರತೆ ದಾಳಿ ಮಾಡಿದ್ದು ಕಳೆದ ಮೂರ್ನಾಲ್ಕು ತಿಂಗಳಿನಿಂದ ನಿರಂತರವಾಗಿ  ಚಿರತೆ ಕಾಣಿಸಿಕೊಳ್ಳುತ್ತಿದ್ದು ಚಿರತೆಯನ್ನ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಶಾಸಕ ಟಿ .ಡಿ .ರಾಜೇಗೌಡ ಜಮೀನು ಖರೀದಿ ಪ್ರಕರಣ :ತನಿಖೆ ತೀವ್ರಗೊಳಿಸುವಂತೆ ಜೀವರಾಜ್ ಒತ್ತಾಯ

 



ಚಿಕ್ಕಮಗಳೂರು:  ಜಮೀನು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡರ ವಿರುದ್ಧ ಸಲ್ಲಿಕೆಯಾಗಿರುವ ದೂರು ಆಧರಿಸಿ ಲೋಕಾಯುಕ್ತ ಪೊಲೀಸ್ತರು ತಕ್ಷಣ ಎಫ್ ಐ ಆರ್ ದಾಖಲಿಸಿ ತನಿಖೆ ಚುರುಕುಗೊಳಿಸುವಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ. ಎನ್ .ಜೀವರಾಜ್ ಆಗ್ರಹಿಸಿದ್ದಾರೆ.

ದೂರು ಪ್ರತಿಯನ್ನು ಮುಂದಿಟ್ಟುಕೊಂಡು ಸುದ್ದಿಗೋಷ್ಠಿ ನಡೆಸಿರುವ ಅವರು ಸುಮಾರು 200 ಎಕರೆ ಜಮೀನನ್ನು ಶಾಸಕ ಟಿ ಡಿ ರಾಜೇಗೌಡ145 ಕೋಟಿ ರೂ.ಗಳಿಗೆ ಪತ್ನಿ ಹೆಸರಿನಲ್ಲಿ ಖರೀದಿಸಿದ್ದು ಅಷ್ಟು ಹಣ ಅವರಿಗೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.

ಆಸ್ತಿ ಖರೀದಿಸಿರುವ ಬಗ್ಗೆ ತಮ್ಮ ತಕರಾರು ಇಲ್ಲ. ಚುನಾವಣೆಗೆ ಸ್ಪರ್ಧಿಸುವ ಸಮಯದಲ್ಲಿ 35 ಲಕ್ಷ ರೂ. ಇರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಉಳಿಕೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿ ಆ ಬಗ್ಗೆ ದಾಖಲೆ ಸಲ್ಲಿಸಿದ್ದಾರೆಯೇ ಎಂದು ಕೇಳಿದ್ದಾರೆ.

ಬಾಳೆಹೊನ್ನೂರು ಸಮೀಪ ಸಿದ್ದಾರ್ಥ ಹೆಗ್ಡೆ ಇವರಿಗೆ ಸಂಬಂಧಿಸಿದ ಜಮೀನು ಖರೀದಿ ಪ್ರಕ್ರಿಯೆಯಲ್ಲಿಯೂ ಸಾಕಷ್ಟು ತೆರಿಗೆ ವಂಚನೆ ನಡೆದಿದೆ ಎಂದು ಆರೋಪಿಸಿದ್ದಾರೆ.

ದೂರು ಸಲ್ಲಿಕೆಯಾಗಿ ಸಾಕಷ್ಟು ದಿನಗಳು ಆಗಿದ್ದರು ಶಾಸಕರು ಇನ್ನೂ ಪ್ರತಿಕ್ರಿಯೆ ನೀಡದೆ ಇರುವುದು ತಪ್ಪನ್ನು ಒಪ್ಪಿಕೊಂಡಂತೆ ಆಗಿದೆ ಎಂದು ವ್ಯಾಖ್ಯಾನಿಸಿದರು.

ಲೋಕಾಯುಕ್ತರು ತಕ್ಷಣ ಎಫ್ ಐ ಆರ್ ದಾಖಲಿಸಿ ತನಿಖೆ ತೀವ್ರಗೊಳಿಸುವುದರ ಜೊತೆಗೆ ಕಾನೂನು ಪ್ರಕ್ರಿಯೆಗೂ ಮುಂದಾಗಬೇಕೆಂದು ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಅಧ್ಯಕ್ಷ ಕಲ್ಮರುಡಪ್ಪ,' ನಗರಸಭೆ ಮಾಜಿ ಅಧ್ಯಕ್ಷ ದೇವರಾಜ್' ಸುದ್ದಿಗೋಷ್ಠಿಯಲ್ಲಿದ್ದರು.

ಮಂಗಳವಾರ, ನವೆಂಬರ್ 22, 2022

ಎರಡು ಪ್ರತ್ಯೇಕ ಅಪಘಾತ ಪ್ರಕರಣ: ಒಬ್ಬರ ಸಾವು - ಐವರಿಗೆ ಗಾಯ

 


ಚಿಕ್ಕಮಗಳೂರು : ಇಂದು ಸಂಜೆ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಬ್ಬರು ಮೃತಪಟ್ಟು ಹಲವರಿಗೆ ಗಾಯಗಳುಆಗಿವೆ.

ಕಳಸ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ ನಿಯಂತ್ರಣ ತಪ್ಪಿ ಜೀಪ್ ಕಂದಕಕ್ಕೆ ಬಿದ್ದು ಅಕ್ಷತಾ (35) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ

ಹೊಸಗದ್ದೆಯಿಂದ ಹೊರನಾಡಿಗೆ ಹೋಗುತ್ತಿದ್ದ ಜೀಪ್  ಇದಾಗಿದ್ದು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಕೋಲಾರದಿಂದ ಧರ್ಮಸ್ಥಳ ಕ್ಕೆ ಹೊರಟಿದ್ದ ಪ್ರವಾಸಿಗರ ಇನೋವಾ 20 ಅಡಿ ಪ್ರಪಾತಕ್ಕೆ ಪಲ್ಟಿ ಹೊಡೆದು ವಾಹನದಲಿದ್ದ ಐದು ಜನ ಪ್ರವಾಸಿಗರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ

ಚಾರ್ಮಾಡಿ ಘಾಟ್ ನ ಮಲಯ ಮಾರುತ ಬಳಿ ಈ ದುರ್ಘಟನೆ ಸಂಭವಿಸಿದ್ದು ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

ಶಾಸಕರ ಮೇಲೆ ಹಲ್ಲೆ : ದಲಿತ ದೌರ್ಜನ್ಯ ಪ್ರಕರಣ ದಾಖಲಿಸಲು ಆಗ್ರಹ



ಚಿಕ್ಕಮಗಳೂರು: ಆನೆ ತುಳಿತದಿಂದ ಸಾವಿಗೀಡಾದ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳಿದ್ದ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಯವರನ್ನು ಜಾತಿ ನಿಂದನೆ ಮಾಡಿದವರ ವಿರುದ್ಧ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ವಿವಿಧ ಸಂಘಟನೆಗಳು ಒತ್ತಾಯಿಸಿವೆ.
ಹೊನ್ನೇಶ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಅಂದುಶಾಸಕರನ್ನು ಜಾತಿ ಸೂಚಕ ಪದಗಳಿಂದ ನಿಂದಿಸಿದ್ದು ಈವರೆಗೂ ಆ ಬಗ್ಗೆ ಪ್ರಕರಣ ದಾಖಲಿಸದೆ ಪೊಲೀಸರು ನಿರ್ಲಕ್ಷ ತಾಳಿದ್ದಾರೆ ಎಂದು ಆರೋಪಿಸಿದ್ದಾರೆ.
ಬೀಮ್ ಸೇನಾ ಅರ್ಮಿಯ ವತಿಯಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.
ಮುಗ್ಧರ ವಿರುದ್ಧ ಕ್ರಮ ಸಲ್ಲದು : ಮೂಡಿಗೆರೆ ಶಾಸಕರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಮುಗ್ಧರ ವಿರುದ್ಧ ಪ್ರಕರಣದ ದಾಖಲಿಸಿ ಬಂಧಿಸಿರುವುದು ಸರಿಯಲ್ಲ ಎಂದು ಭಾರತ ಕಮ್ಯುನಿಸ್ಟ್ ಪಕ್ಷ ' ಕಾಂಗ್ರೆಸ್ ಹಾಗೂ ಜೆಡಿಎಸ್   ಅಭಿಪ್ರಾಯಸಿದೆ.
ಘಟನೆ ಹಿಂದೆ ಬಿಜೆಪಿಯವರದ್ದೇ ಕೆಲವರ ಷಡ್ಯಂತರ ಇದ್ದು ತಪ್ಪಿತಸ್ಥರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ರಾಧಾ  ಸುಂದರೇಶ್ ದೇವರಾಜ್ ಮತ್ತು ಮಂಜಪ್ಪ ಗೌಡ ಒತ್ತಾಯಿಸಿದ್ದಾರೆ




ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ತೊರೆದ ನೂರಾರು ಕಾರ್ಯಕರ್ತರು : ಶಾಸಕರಿಗೆ ಶಾಕ್


ಚಿಕ್ಕಮಗಳೂರು :ಶೃಂಗೇರಿ ಕ್ಷೇತ್ರದ ಮಹಲ್ ಗೋಡು ಗೋಡು ಗ್ರಾಮದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಟಿ.ಡಿ.ರಾಜೇಗೌಡಗೆ ಸ್ವ-ಹೋಬಳಿಯಲ್ಲೇ ಶಾಕ್ ಕೊಟ್ಟಿದ್ದಾರೆ

 ಗ್ರಾ.ಪಂ ಮಾಜಿ ಅಧ್ಯಕ್ಷೆ ಕಮಲ ನೇತೃತ್ವದಲ್ಲಿ ಬೂತ್ ಮಟ್ಟದ ಕಾರ್ಯಕರ್ತರು  ಬಿಜೆಪಿಗೆ ಸೇರಿದ್ದಾರೆ.

ಶಾಸಕ ರಾಜೇಗೌಡ ವಿರುದ್ಧ ಬೇಸತ್ತು ಶಾಮಿಯಾನ ಹಾಕಿ, ಕಾರ್ಯಕ್ರಮ ಮಾಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ರಾಜೇಗೌಡರ ಮೇಲೆ ವಿಶ್ವಾಸವಿಲ್ಲ ಎಂದು ಘೋಷಣೆ ಹಾಕಿದ್ದು  ಮಾಜಿ ಸಚಿವ ಜೀವರಾಜ್ ಬಹುತೇಕ ಹಿಂದುಳಿದ ಜನಾಂಗಕ್ಕೆ ಸೇರಿದ ಈ ಕಾರ್ಯಕರ್ತರನ್ನು ಬರ ಮಾಡಿಕೊಂಡಿದ್ದಾರೆ.

ಮೀಸಲಾತಿ ಹೆಚ್ಚಿಸಿದ ಬಿಜೆಪಿಗೆ ಜಿಂದಾಬಾದ್ ಕೂಗಿದ್ದಾರೆ.



ಸೋಮವಾರ, ನವೆಂಬರ್ 21, 2022

ತಮ್ಮ ಮೇಲಿನ ಹಲ್ಲೆ ವ್ಯವಸ್ಥಿತ ಸಂಚು: ರಾಜಕೀಯ ಪಿತೂರಿ-ಮೂಡಿಗೆರೆ ಶಾಸಕ ಎಂ. ಪಿ ಕುಮಾರಸ್ವಾಮಿ

 


ಚಿಕ್ಕಮಗಳೂರು: ಕಾಡಾನೆಯಿಂದ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳಿದ್ದ ಸಂದರ್ಭದಲ್ಲಿ ತಮ್ಮ ಮೇಲೆ ನಡೆದ ಹಲ್ಲೆ ಪೂರ್ವ ನಿಯೋಜಿತ ಹಾಗೂ ರಾಜಕೀಯ ಸಂಚು ಎಂದು ಮೂಡಿಗೆರೆ ಶಾಸಕ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮೂಡಿಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ತಾವು ಸ್ಥಳಕ್ಕೆತೆರಳಿದ್ದ ಸಂದರ್ಭದಲ್ಲಿ ಬಹಳಷ್ಟು ಜನ ಕೈಯಲ್ಲಿ ದೊಣ್ಣೆ ಇತರೆ ಆಯುಧಗಳು ಇದ್ದು ಎಂದು ದೂರಿದ್ದಾರೆ.
ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಸಹವಾಲು ಸ್ವೀಕರಿಸಲು ತೆರಳಿದ್ದ ಸಂದರ್ಭದಲ್ಲಿ ಗುಂಪು ಕಟ್ಟಿಕೊಂಡು ಆಕ್ರೋಶಭರಿತರಾಗಿದ್ದ ಜನ ಚಪ್ಪಲಿಯಿಂದ ತಳ್ಳಿಸಿದ್ದೆ ಅಲ್ಲದೆ, ಅಟ್ಟಾಡಿಸಿಕೊಂಡು ಬಂದರು ಎಂದು ಘಟನೆಯ ಮಾಹಿತಿ ಕೊಟ್ಟಿದ್ದಾರೆ.
ತಮ್ಮ ಹಾಗೂ ಪೊಲೀಸರ ವಾಹನಗಳ ಮೇಲು ಕಲ್ಲು ತೂರಿದ್ದು ಇದೊಂದು ರಾಜಕೀಯ ವ್ಯವಸ್ಥಿತ ಪಿತೂರಿ ಎಂದು ಆರೋಪಿಸಿ ಮುಂದಿನ ದಿನಗಳಲ್ಲಿ ತಾವು ಚುನಾವಣೆಗೆ ನಿಲ್ಲಬಾರದು ಎನ್ನುವ ಷಡ್ಯಂತರ ಇದರ  ಹಿಂದೆ ಇದೆ ಎಂದರು.
ವ್ಯಾಪಕ ಖಂಡನೆ: ಮೂಡಿಗೆರೆ ಶಾಸಕ ಎಂಪಿ ಕುಮಾರ ಸ್ವಾಮಿ ಮೇಲೆ ನಿನ್ನೆ ನಡೆದ ಹಲ್ಲೆಯನ್ನು ವಿವಿಧ ದಲಿತ ಪರ ಸಂಘಟನೆಗಳು ಖಂಡಿಸಿವೆ. ಇಂಥ ಘಟನೆಗಳ ವಿರುದ್ಧ ಸಂಘಟಿತ ಹೋರಾಟ ನಡೆಸುವಂತೆ ಕರೆ ನೀಡಿವೆ
ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿಯನ್ನು ಹತ್ತಿಕ್ಕುವ ಕೆಲಸವನ್ನು ಕೆಲ ಮೇಲ್ವರ್ಗದವರು ನಿರಂತರವಾಗಿ ಮಾಡುತ್ತಿದ್ದು ಅದರ ಮುಂದುವರಿದ ಭಾಗ ಈ ಘಟನೆ ಎಂದು ಸಾರ್ವಜನಿಕ ವಲಯದಲ್ಲೂ ಟೀಕೆ ವ್ಯಕ್ತವಾಗಿದೆ

ಭಾನುವಾರ, ನವೆಂಬರ್ 20, 2022

ಆನೆ ದಾಳಿಗೆ ಮಹಿಳೆ ಸಾವು: ಸ್ಥಳಕ್ಕೆ ತೆರಳಿದ ಶಾಸಕರ ಮೇಲೆ ಹಲ್ಲೆ ಯತ್ನ : ಶವ ಇಟ್ಟು ಪ್ರತಿಭಟನೆ- ಲಾಠಿ ಪ್ರಹಾರ ಕೊಟ್ಟಿಗೆಹಾರ :ಹುಲ್ಲೆಮನೆ ಕುಂದೂರಿನಲ್ಲಿ ಕಾಡಾನೆ ತುಳಿದು ಮಹಿಳೆ ಸಾವನ್ನಪ್ಪಿದ್ದ ಪ್ರಕರಣ ಈಗ ಹೊಸ ತಿರುವು ಪಡೆಯ ತೊಡಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರಿನಲ್ಲಿಮಹಿಳೆಯ ಶವ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ ಘಟನೆಯು ನಡೆದಿದೆ.ಬೆಳಗ್ಗೆ 7.30ಕ್ಕೆ ಕಾಡಾನೆ ತುಳಿದು ಮಹಿಳೆ ಸಾವಪಿದ್ದು ಸಂಜೆ 6 ಗಂಟೆಗೆ ಗ್ರಾಮಕ್ಕೆ ತೆರಳಿದ ಶಾಸಕ ಎಂ.ಪಿ.ಕುಮಾರಸ್ವಾಮಿ ನಡೆಯನ್ನ ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಗ್ರಾಮಸ್ಥರು ಹಾಗೂ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ.ಶಾಸಕ ಕುಮಾರಸ್ವಾಮಿಯನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡಿದ್ದುಪ್ರಶ್ನೆ ಮಾಡಿದ ಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ ಪೊಲೀಸರ ಕ್ರಮಕ್ಕೆ ಖಂಡನೆ ವ್ಯಕ್ತವಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಗೊಂಡಿದೆ . ಶಾಸಕರ ಮೇಲೆ ಹಲ್ಲೆ ಯತ್ನ ನಡೆದಿದ್ದು ಅವರನ್ನು ಗ್ರಾಮದಿಂದ ಪೊಲೀಸರು ಜೀಪಿನಲ್ಲಿ ಸುರಕ್ಷಿತವಾಗಿ ಕರೆತಂದಿದ್ದಾರೆ. ಹರಿದು ಹೋದ ಅಂಗಿಯೊಂದಿಗೆ ಸ್ಪಷ್ಟನೆಯನ್ನು ನೀಡಿದ ಶಾಸಕರು ಉದ್ದೇಶಪೂರ್ವಕವಾಗಿ ಈ ಹಲ್ಲೆ ಯತ್ನ ತಡೆದಿದೆ ಎಂದು ಆರೋಪಿಸಿದ್ದಾರೆ

 


ಕೊಟ್ಟಿಗೆಹಾರ :ಹುಲ್ಲೆಮನೆ ಕುಂದೂರಿನಲ್ಲಿ ಕಾಡಾನೆ ತುಳಿದು ಮಹಿಳೆ ಸಾವನ್ನಪ್ಪಿದ್ದ ಪ್ರಕರಣ ಈಗ ಹೊಸ ತಿರುವು ಪಡೆಯ ತೊಡಗಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರಿನಲ್ಲಿಮಹಿಳೆಯ ಶವ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ ಘಟನೆಯು ನಡೆದಿದೆ.ಬೆಳಗ್ಗೆ 7.30ಕ್ಕೆ ಕಾಡಾನೆ ತುಳಿದು ಮಹಿಳೆ ಸಾವಪಿದ್ದು ಸಂಜೆ 6 ಗಂಟೆಗೆ ಗ್ರಾಮಕ್ಕೆ ತೆರಳಿದ ಶಾಸಕ ಎಂ.ಪಿ.ಕುಮಾರಸ್ವಾಮಿ ನಡೆಯನ್ನ  ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ಗ್ರಾಮಸ್ಥರು ಹಾಗೂ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ.ಶಾಸಕ ಕುಮಾರಸ್ವಾಮಿಯನ್ನು  ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡಿದ್ದುಪ್ರಶ್ನೆ ಮಾಡಿದ ಜನರ ಮೇಲೆ  ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ
ಪೊಲೀಸರ ಕ್ರಮಕ್ಕೆ ಖಂಡನೆ ವ್ಯಕ್ತವಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಗೊಂಡಿದೆ .
ಶಾಸಕರ ಮೇಲೆ ಹಲ್ಲೆ ಯತ್ನ ನಡೆದಿದ್ದು ಅವರನ್ನು ಗ್ರಾಮದಿಂದ ಪೊಲೀಸರು ಜೀಪಿನಲ್ಲಿ ಸುರಕ್ಷಿತವಾಗಿ ಕರೆತಂದಿದ್ದಾರೆ.
ಹರಿದು ಹೋದ ಅಂಗಿಯೊಂದಿಗೆ ಸ್ಪಷ್ಟನೆಯನ್ನು ನೀಡಿದ ಶಾಸಕರು ಉದ್ದೇಶಪೂರ್ವಕವಾಗಿ ಈ ಹಲ್ಲೆ ಯತ್ನ ತಡೆದಿದೆ ಎಂದು ಆರೋಪಿಸಿದ್ದಾರೆ.