udayanews

ಶನಿವಾರ, ನವೆಂಬರ್ 26, 2022

ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ : ಚಾಲಕರನ್ನು ಕಟ್ಟಿ ಹಾಕಿ ಥಳಿತ

 



ಚಿಕ್ಕಮಗಳೂರು : ವಿಧ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ತೋರಿದ  ಕ್ಯಾಬ್ ಚಾಲಕನನ್ನು ಕಟ್ಟಿಹಾಕಿ ಥಳಿಸಿದ ಘಟನೆ ನಡೆದಿದೆ

 ಚಾಲಕ ರಾಜಪ್ಪನನ್ನ ಕಂಬಕ್ಕೆ ಕಟ್ಟಿ ಕಡೂರು ತಾಲೂಕಿನ  ಸಖರಾಯಪಟ್ಟಣದ ಸಿದ್ದರಹಳ್ಳಿಯಲ್ಲಿ   ಥಳಿಸಲಾಗಿದೆ

ಚಾಲಕ ರಾಜಪ್ಪನ ಮೇಲೆ ಪೋಸ್ಕೋ ಕೇಸ್ ದಾಖಲು ಮಾಡಿದ್ದಾರೆ

ಕ್ಯಾಬ್ ನಲ್ಲಿ ಕಡೂರಿನಿಂದ ಸಿದ್ದರಹಳ್ಳಿಗೆ ಶಿಕ್ಷಕಿಯರನ್ನ ಕರೆತರುತ್ತಿದ್ದ ರಾಜಪ್ಪ

ಬೆಳಗ್ಗೆಯಿಂದ ಸಂಜೆವರೆಗೂ ಶಾಲೆ ಬಳಿಯೇ ಇರುತ್ತಿದ್ದ ಎಂದು ಆರೋಪಿಸಲಾಗಿದೆ

ಸಖರಾಯಪಟ್ಣಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


ಶುಕ್ರವಾರ, ನವೆಂಬರ್ 25, 2022

ಕಾಡಾನೆ ನಿಯಂತ್ರಿಸುವಲ್ಲಿ ವಿಫಲ: ರೊಚ್ಚಿಗೆದ್ದ ಯುವಕರು- ಕಾಫಿನಾಡಲ್ಲಿ ಫಾರೆಸ್ಟ್‌ ಆಫೀಸ್ ಪುಡಿ...ಪುಡಿ

 



ಚಿಕ್ಕಮಗಳೂರು :ಕಾಡಾನೆ ಹಿಡಿದು ನಿಯಂತ್ರಿಸುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೆದ್ದ ಜನಕಳ್ಳ ಬೇಟೆ ನಿಗ್ರಹ ಶಿಬಿರವನ್ನ ಧ್ವಂಸ ಮಾಡಿದ ಘಟನೆ ನಡೆದಿದೆ
ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಕೈಗೆ ಸಿಕ್ಕ... ಸಿಕ್ಕ... ವಸ್ತುಗಳನ್ನೆಲ್ಲಾ ಪುಡಿ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ
ಆನೆ ದಾಳಿಯನ್ನ ನಿಯಂತ್ರಿಸಲಾಗದ ಅರಣ್ಯ ಇಲಾಖೆ ವಿರುದ್ಧ ರೋಷ ವ್ಯಕ್ತಪಡಿಸಿನಿಮಗೆ ಪಟಾಕಿ ಕೊಡುವ ಯೋಗ್ಯತೆ ಇಲ್ಲವೆಂದು ಕಿಡಿ ಕಾರಿದ್ದಾರೆ
ಆನೆ ನಿಯಂತ್ರಿಸಕ್ಕೆ ಆಗಲ್ಲ, ತಿನ್ನೋಕೆ ಸೋನಾ ಮುಸುರಿ ಅಕ್ಕಿ  ಬೇಕಾ ಎಂದು ಪ್ರಶ್ನಿಸಿಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳ ವಿರುದ್ಧ ಕಿಡಿಕರಿದ್ದೆ ಅಲ್ಲದೆ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಸವಾಲ್ ಹಾಕಿದ್ದಾರೆ.
ನಿರಂತರ ದಾಳಿಯಿಂದ ಜನ ಕಂಗೆಟ್ಟಿದ್ದು
ನಾಲ್ಕು ದಿನದ ಹಿಂದೆ ಆನೆ ದಾಳಿಗೆ 35 ವರ್ಷದ ಮಹಿಳೆ ಸಾವಪ್ಪಿದ್ದು ಸ್ಥಳಕ್ಕೆ ತೆರಲಿದ್ದ ಶಾಸಕರ ಮೇಲೂ ಅಲ್ಲೇ ಯತ್ನ ನಡೆದಿತ್ತು

ಗುರುವಾರ, ನವೆಂಬರ್ 24, 2022

100 ಬೆಡ್ ಆಸ್ಪತ್ರೆ -ಮೈಕ್ ಗೆ ಅನುಮತಿ ನಿರಾಕರಣೆ: ತಮಟೆ ಹೊಡೆದು ಪ್ರಚಾರ ; ಪೊಲೀಸ್ ಇಲಾಖೆಗೆ ಸಡ್ಡು ಹೊಡೆದ ಯುವಕರು

 


ಚಿಕ್ಕಮಗಳೂರು: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಹಾಗೂ ತಾಲೂಕು ಕೇಂದ್ರ ಆಗಿರುವ ಶೃಂಗೇರಿಯಲ್ಲಿ  100 ಹಾಸಿಗೆ ಇರುವ ಆಸ್ಪತ್ರೆ ಆರಂಭಿಸುವ ಬೇಕೆಂಬ ಹೋರಾಟ ಮತ್ತೆ ಮುನ್ನಡೆಗೆ ಬಂದಿದೆ.

ಮುಖ್ಯಮಂತ್ರಿಗಳಾದಿಯಾಗಿ ಎಲ್ಲಾ ಜನ ಪ್ರತಿನಿಧಿಗಳು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಸಾಕಷ್ಟು ಬಾರಿ ಭರವಸೆ ಪಡೆದು ರೋಸಿ ಹೋದ ಸಮಾನ ಮನಸ್ಕರ ಯುವಕರ ತಂಡ ; ಪ್ರಜ್ಞಾವಂತ ನಾಗರಿಕರು ಈಗ ಅಹೋರಾತ್ರಿ ಚಳುವಳಿಗೆ ಸಿದ್ಧರಾಗಿದ್ದಾರೆ.

ಚಳವಳಿಯ ಬಗ್ಗೆ ಮೈಕ್ ಮೂಲಕ ಪ್ರಚಾರ ನಡೆಸಲು ಪೊಲೀಸ್ ಇಲಾಖೆ ಅನುಮತಿ ನಿರಾಕರಣೆ ಮಾಡಿದ್ದು ಇದರಿಂದ ಸಿಟ್ಟಿಗೆದ್ದ ಯುವಕರು ತಮಟೆ ಬಾರಿಸುತ್ತ ಧರಣಿ ಸತ್ಯಾಗ್ರಹದ ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ

ಶೃಂಗೇರಿಯ ಬೀದಿ ಬೀದಿಯಲ್ಲಿ ಸುತ್ತಿ ತಮಟೆ ಪ್ರಚಾರ ನಡೆಸಿದ್ದೇ ಅಲ್ಲದೆ ತಾಲೂಕಿನಾದ್ಯಂತ ಪ್ರಚಾರ ಮಾಡಲು ಮುಂದಾಗಿ ಜನಪ್ರತಿನಿಧಿಗಳು ಹಾಗೂ ಪೊಲೀಸ್ ಇಲಾಖೆಗೆ ಮಂಗಳಾರತಿ ಎತ್ತಿದ್ದಾರೆ .

 ಕಳೆದ ವರ್ಷ ಶೃಂಗೇರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.ಈ ವೇಳೆ ಒಂದು ತಿಂಗಳ ಒಳಗಾಗಿ ಆಸ್ಪತ್ರೆ ಮಂಜೂರು ಮಾಡುತ್ತೇವೆ ಎಂದು ಅಧಿಕಾರಿಗಳು ಭರವಸೆ ಕೊಟ್ಟಿದ್ದೆ ಅಲ್ಲದೆ  ಶೃಂಗೇರಿ ಭೇಟಿ ವೇಳೆ ಮುಖ್ಯಮಂತ್ರಿಗಳುಮಾತು ಕೊಟ್ಟಿದ್ದ ರು.




ಎರಡು ಪ್ರತ್ಯೇಕ ಅಪಘಾತ ಪ್ರಕರಣ : 7 ಜನರಿಗೆ ಗಾಯ -ಆಸ್ಪತ್ರೆಗೆ ದಾಖಲು



ಚಿಕ್ಕಮಗಳೂರು :ಇಂದು ಸಂಭವಿಸಿದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಏಳು ಜನರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾರ್ಮಾಡಿ ಘಾಟ್ ನ ತಿರುವಿನಲ್ಲಿಆಂಬುಲೆನ್ಸ್ ಮತ್ತು ಆಟೋ ಮುಖಾಮುಖಿ ಡಿಕ್ಕಿಯಾಗಿ ಆಟೋದಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಂಗಳೂರಿನಿಂದ ಮೂಡಿಗೆರೆಗೆ ರೋಗಿಯನ್ನು ಬಿಟ್ಟು ಹೋಗುತ್ತಿದ್ದ ಆಂಬುಲೆನ್ಸ್ ನ ಚಾಲಕನ ನಿಯಂತ್ರಣ ತಪ್ಪಿ ಚಾರ್ಮಾಡಿ ಘಾಟ್ ನ ಒಂದನೇ ತಿರುವಿನಲ್ಲಿ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲಿದ್ದ ನಾಲ್ವರಿಗೆ ಪೆಟ್ಟಾಗಿದ್ದು ಕಕ್ಕಿಂಜೆ ಆಸ್ಪತ್ರೆಗೆ ರವಾನಿಸಲಾಗಿದೆ.

ಬಣಕಲ್ ಆಟೋದಲಿದ್ದ ಪ್ರಯಾಣಿಕರು ಧರ್ಮಸ್ಥಳ ಕ್ಕೆ ಹೋಗಿ ದರ್ಶನ ಮುಗಿಸಿ ಬರುವಾಗ ನಡೆದ ಅಪಘಾತ ಎರಡು ವಾಹನಗಳು ಜಖಂ ಗೊಂಡಿದೆ.

ಇನ್ನೊಂದು ಪ್ರಕರಣದಲ್ಲಿ ಬಿದರಳ್ಳಿ ಬಳಿ ಚಲಿಸುತ್ತಿದ್ದ ಆಟೋ ಗೆ ಹಿಂಬದಿಯಿಂದ ಕಾರು ಗುದ್ದಿದ್ದು ಎರಡು ವಾಹನಗಳು ಜಖಂ ಗೊಂಡಿವೆ.

ಆಟೋದಲಿದ್ದ ಮೂವರಿಗೆ ಹೆಚ್ಚಾಗಿ ಪೆಟ್ಟಾಗಿದ್ಫು  ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ


ಬುಧವಾರ, ನವೆಂಬರ್ 23, 2022

ಮಧ್ಯರಾತ್ರಿ ಗ್ರಾಮಕ್ಕೆ ನುಗ್ಗಿ ಕುರಿಯನ್ನು ಹೊತ್ತೊಯ್ದ ಚಿರತೆ




ಚಿಕ್ಕಮಗಳೂರು : ಮಧ್ಯೆರಾತ್ರಿ ಗ್ರಾಮಕ್ಕೆ ನುಗ್ಗಿ

 ಚಿರತೆಯೊಂದು ಕುರಿಯನ್ನ ಹೊತ್ತೊಯ್ದ ಪ್ರಕರಣ

ಚಿಕ್ಕಮಗಳೂರು ತಾಲೂಕಿನ

ಉದ್ದೆಬೋರನಹಳ್ಳಿ-ತಡೆಬೆನಹಳ್ಳಿ ಗ್ರಾಮದಲ್ಲಿ  ನಡೆದಿದೆ

ಒಂದು ಕುರಿಯನ್ನ ಕೊಂದು, ಮತ್ತೊಂದು ಕುರಿಯನ್ನ ಹಚ್ಚಿಕೊಂಡು ಹೋಗಿದೆ

ರಮೇಶ್ ಎಂಬುವರಿಗೆ ಸೇರಿದ ಕುರಿಗಳ ಮೇಲೆ ಚಿರತೆ ದಾಳಿ ಮಾಡಿದ್ದು ಕಳೆದ ಮೂರ್ನಾಲ್ಕು ತಿಂಗಳಿನಿಂದ ನಿರಂತರವಾಗಿ  ಚಿರತೆ ಕಾಣಿಸಿಕೊಳ್ಳುತ್ತಿದ್ದು ಚಿರತೆಯನ್ನ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಶಾಸಕ ಟಿ .ಡಿ .ರಾಜೇಗೌಡ ಜಮೀನು ಖರೀದಿ ಪ್ರಕರಣ :ತನಿಖೆ ತೀವ್ರಗೊಳಿಸುವಂತೆ ಜೀವರಾಜ್ ಒತ್ತಾಯ

 



ಚಿಕ್ಕಮಗಳೂರು:  ಜಮೀನು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡರ ವಿರುದ್ಧ ಸಲ್ಲಿಕೆಯಾಗಿರುವ ದೂರು ಆಧರಿಸಿ ಲೋಕಾಯುಕ್ತ ಪೊಲೀಸ್ತರು ತಕ್ಷಣ ಎಫ್ ಐ ಆರ್ ದಾಖಲಿಸಿ ತನಿಖೆ ಚುರುಕುಗೊಳಿಸುವಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ. ಎನ್ .ಜೀವರಾಜ್ ಆಗ್ರಹಿಸಿದ್ದಾರೆ.

ದೂರು ಪ್ರತಿಯನ್ನು ಮುಂದಿಟ್ಟುಕೊಂಡು ಸುದ್ದಿಗೋಷ್ಠಿ ನಡೆಸಿರುವ ಅವರು ಸುಮಾರು 200 ಎಕರೆ ಜಮೀನನ್ನು ಶಾಸಕ ಟಿ ಡಿ ರಾಜೇಗೌಡ145 ಕೋಟಿ ರೂ.ಗಳಿಗೆ ಪತ್ನಿ ಹೆಸರಿನಲ್ಲಿ ಖರೀದಿಸಿದ್ದು ಅಷ್ಟು ಹಣ ಅವರಿಗೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.

ಆಸ್ತಿ ಖರೀದಿಸಿರುವ ಬಗ್ಗೆ ತಮ್ಮ ತಕರಾರು ಇಲ್ಲ. ಚುನಾವಣೆಗೆ ಸ್ಪರ್ಧಿಸುವ ಸಮಯದಲ್ಲಿ 35 ಲಕ್ಷ ರೂ. ಇರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಉಳಿಕೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿ ಆ ಬಗ್ಗೆ ದಾಖಲೆ ಸಲ್ಲಿಸಿದ್ದಾರೆಯೇ ಎಂದು ಕೇಳಿದ್ದಾರೆ.

ಬಾಳೆಹೊನ್ನೂರು ಸಮೀಪ ಸಿದ್ದಾರ್ಥ ಹೆಗ್ಡೆ ಇವರಿಗೆ ಸಂಬಂಧಿಸಿದ ಜಮೀನು ಖರೀದಿ ಪ್ರಕ್ರಿಯೆಯಲ್ಲಿಯೂ ಸಾಕಷ್ಟು ತೆರಿಗೆ ವಂಚನೆ ನಡೆದಿದೆ ಎಂದು ಆರೋಪಿಸಿದ್ದಾರೆ.

ದೂರು ಸಲ್ಲಿಕೆಯಾಗಿ ಸಾಕಷ್ಟು ದಿನಗಳು ಆಗಿದ್ದರು ಶಾಸಕರು ಇನ್ನೂ ಪ್ರತಿಕ್ರಿಯೆ ನೀಡದೆ ಇರುವುದು ತಪ್ಪನ್ನು ಒಪ್ಪಿಕೊಂಡಂತೆ ಆಗಿದೆ ಎಂದು ವ್ಯಾಖ್ಯಾನಿಸಿದರು.

ಲೋಕಾಯುಕ್ತರು ತಕ್ಷಣ ಎಫ್ ಐ ಆರ್ ದಾಖಲಿಸಿ ತನಿಖೆ ತೀವ್ರಗೊಳಿಸುವುದರ ಜೊತೆಗೆ ಕಾನೂನು ಪ್ರಕ್ರಿಯೆಗೂ ಮುಂದಾಗಬೇಕೆಂದು ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಅಧ್ಯಕ್ಷ ಕಲ್ಮರುಡಪ್ಪ,' ನಗರಸಭೆ ಮಾಜಿ ಅಧ್ಯಕ್ಷ ದೇವರಾಜ್' ಸುದ್ದಿಗೋಷ್ಠಿಯಲ್ಲಿದ್ದರು.

ಮಂಗಳವಾರ, ನವೆಂಬರ್ 22, 2022

ಎರಡು ಪ್ರತ್ಯೇಕ ಅಪಘಾತ ಪ್ರಕರಣ: ಒಬ್ಬರ ಸಾವು - ಐವರಿಗೆ ಗಾಯ

 


ಚಿಕ್ಕಮಗಳೂರು : ಇಂದು ಸಂಜೆ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಬ್ಬರು ಮೃತಪಟ್ಟು ಹಲವರಿಗೆ ಗಾಯಗಳುಆಗಿವೆ.

ಕಳಸ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ ನಿಯಂತ್ರಣ ತಪ್ಪಿ ಜೀಪ್ ಕಂದಕಕ್ಕೆ ಬಿದ್ದು ಅಕ್ಷತಾ (35) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ

ಹೊಸಗದ್ದೆಯಿಂದ ಹೊರನಾಡಿಗೆ ಹೋಗುತ್ತಿದ್ದ ಜೀಪ್  ಇದಾಗಿದ್ದು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಕೋಲಾರದಿಂದ ಧರ್ಮಸ್ಥಳ ಕ್ಕೆ ಹೊರಟಿದ್ದ ಪ್ರವಾಸಿಗರ ಇನೋವಾ 20 ಅಡಿ ಪ್ರಪಾತಕ್ಕೆ ಪಲ್ಟಿ ಹೊಡೆದು ವಾಹನದಲಿದ್ದ ಐದು ಜನ ಪ್ರವಾಸಿಗರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ

ಚಾರ್ಮಾಡಿ ಘಾಟ್ ನ ಮಲಯ ಮಾರುತ ಬಳಿ ಈ ದುರ್ಘಟನೆ ಸಂಭವಿಸಿದ್ದು ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ