udayanews

ಸೋಮವಾರ, ನವೆಂಬರ್ 28, 2022

250 ಕೋಟಿ ಬೆಲೆಗೆ ಜೀವರಾಜ್ ರವರೇ ಜಮೀನು ಖರೀದಿಸಲಿ :ಶಾಸಕ ರಾಜೇಗೌಡ ಸವಾಲು -ತನಿಖೆಗೆ ಸಿದ್ದ ಇರುವುದಾಗಿ ಘೋಷಣೆ

 


ಚಿಕ್ಕಮಗಳೂರು: ತಾವು ಬಾಳೆಹೊನ್ನೂರು ಬಳಿ ಖರೀದಿಸಿರುವ  ಜಮೀನನ್ನು 250 ಕೋಟಿಗೆ ಜೀವರಾಜ್ ರವರು ಖರೀದಿಸುವುದಾದರೆ ಸಂತೋಷದಿಂದ ಕೊಡುವುದಾಗಿ ಶೃಂಗೇರಿ ಶಾಸಕ ಟಿ.ಡಿ .ರಾಜೇಗೌಡ ಸವಾಲು ಹಾಕಿದ್ದಾರೆ.
ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಸರಿಸುಮಾರು 20 ಕೋಟಿ ರೂ.ಗಳಿಗೆ ಜಮೀನನ್ನು ಖರೀದಿಸಿದ್ದು ಯಾವುದೇ ರೀತಿಯ ಅವ್ಯವಹಾರ ಕಾನೂನು ಬಾಹಿರ ಕೃತ್ಯ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಮೀನು ಖರೀದಿ ನಮ್ಮ ಮತ್ತು ಸಿದ್ಧಾರ್ಥ ಕುಟುಂಬದ ನಡುವಿನ ವ್ಯವಹಾರ. ಅದು ಕಾಯ್ದೆ ಮತ್ತು ಕಾನೂನು ಚೌಕಟ್ಟಿನಲ್ಲಿ ಅಡಿಯಲ್ಲಿಯೇ ನಡೆದಿದೆ.ಈಗಾಗಲೇ ಸಿದ್ದಾರ್ಥ ಅವರ ಪತ್ನಿ ಮಾಳವಿಕಾರವರು ಕೂಡ ಸ್ಪಷ್ಟನೆ ನೀಡಿದ್ದಾರೆ ಎಂದರು.
ಲೋಕಾಯುಕ್ತಕ್ಕೆ  ತಮ್ಮ ವಿರುದ್ಧ ದೂರು ನೀಡಿದ ಬಗ್ಗೆ ಅಧಿಕೃತವಾಗಿ  ಮಾಹಿತಿ ಬಂದಿಲ್ಲ. ಹೀಗಾಗಿ ಸ್ಪಷ್ಟನೆಯನ್ನು ಕೊಟ್ಟಿರಲಿಲ್ಲ. ಆದರೆ ಕೊಪ್ಪಕ್ಕೆ ಬಂದ ಮುಖ್ಯಮಂತ್ರಿಗಳಾಗಿ ಎಲ್ಲರೂ ಈ ವಿಷಯವನ್ನು ಚರ್ಚಿಸುತ್ತಿರುವುದರಿಂದ ಸ್ಪಷ್ಟನೆ ನೀಡುತ್ತಿರುವುದಾಗಿ ಹೇಳಿದರು.
ಲೋಕಾಯುಕ್ತ ಸೇರಿದಂತೆ ಯಾವುದೇ ರೀತಿಯ ತನಿಖಾ ಸಂಸ್ಥೆಯಿಂದ ತನಿಖೆ ನಡೆದರು ತಾವು ಎದುರಿಸಲು ಸಿದ್ಧ . ಈ ಹಿಂದೆಯೂ ತಮ್ಮ ಹಾಗೂ ತಮ್ಮ ಬೆಂಬಲಿಗರ ವಿರುದ್ಧ ಹಲವು ರೀತಿಯ ತನಿಖೆಗಳು ಆಗಿವೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಸೋತು ಹತಾಶರಾಗಿರುವ ಡಿ .ಎನ್ ಜೀವರಾಜ್ ಗೆ ಒಂದೊಮ್ಮೆ ರಾಜಕೀಯ ಕಾರ್ಯದರ್ಶಿ ಸ್ಥಾನ ಸಿಗದೇ ಹೋಗಿದ್ದರೆ ಮಾನಸಿಕವಾಗಿ ಅಸ್ವಸ್ಥರಾಗುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಜೀವರಾಜ್ ಮೇಲೆ ಇರುವಂತೆ ತಮ್ಮ ವಿರುದ್ಧ ಯಾವುದೇ ಆಪಾದನೆಗಳು ಇಲ್ಲ .ತನಿಖೆಗಳು ನಡೆಯುತ್ತಿಲ್ಲ ಪತ್ರಿಕೆಗಳಲ್ಲಿ ಸುದ್ದಿ ಬಾರದಂತೆ ತಡೆ ಆಜ್ಞೆಯನ್ನು ತಂದಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ತಮ್ಮ ವಿರುದ್ಧ ಭ್ರಷ್ಟಾಚಾರ ಸುಳ್ಳುಆಪಾದನೆ ಹೊರಿಸುತ್ತಿರುವ ಜೀವರಾಜ್ ಬಹುಶಃ ಅವರ ಅಧಿಕಾರ ಅವಧಿಯಲ್ಲಿ ಅದನ್ನೇ ಮಾಡಿದ್ದಾರೆ ಎಂದು ಟೀಕಿಸಿದರು.

ಕಾಡಾನೆ ಸೆರೆ ಕಾರ್ಯಾಚರಣೆ ; ಆರಂಭಿಕ ಗೆಲುವು- ಒಂದು ಆನೆ ಸೆರೆ



ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಇತ್ತೀಚಿಗೆ ಮಹಿಳೆಯೊಬ್ಬರನ್ನು ಬಲಿ ತೆಗೆದುಕೊಂಡಿದ್ದ ಆನೆ ಕೊನೆಗೂ ಸೆರೆಯಾಗಿದೆ

ಕಾಡಾನೆ ಸೆರೆ ಹಿಡಿಯುವಂತೆ ಸ್ಥಳೀಯರು ಮತ್ತು ಜನಪ್ರತಿನಿಧಿಗಳ ನಿರಂತರ ಒತ್ತಡದ ಹಿನ್ನೆಲೆಯಲ್ಲಿ ಸರ್ಕಾರ ಕಾಡಾನೆ ಸೆರೆಗೆ ಆದೇಶ ಹೊರಡಿಸಿತ್ತು.

6 ಆನೆಗಳೊಂದಿಗೆ ಕಾರ್ಯಾಚರಣೆಗೆ ಇಳಿದ ಅರಣ್ಯ ಸಿಬ್ಬಂದಿ ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದು ಬೆಳಗೋಡಿನ ಕುಂಡರ ಕಾಡು ಎಂಬಲ್ಲಿ ಆನೆಯೊಂದನ್ನು ಸೆರೆ ಹಿಡಿಯಲಾಗಿದೆ.

ಆನೆ ಸೆರೆಹಿಡಿದಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸ್ಥಳೀಯರು ಈ ಭಾಗದಲ್ಲಿ ಇನ್ನಷ್ಟು ಆನೆಗಳು ಇದ್ದು ಅವುಗಳನ್ನು ಸೆರೆ ಹಿಡಿಯಬೇಕೆಂಬ ಒತ್ತಾಯ ವ್ಯಕ್ತಪಡಿಸಿದ್ದಾರೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆನೆ ಸೆರೆ ಕಾರ್ಯಾಚರಣೆ ಮುಂದುವರೆದಿದೆ. ಹಿಡಿದಿರುವ ಆನೆಯನ್ನು ಎಲ್ಲಿಗೆ ಸಾಗಿಸುವುದು ಎನ್ನುವ ಸಮಾಲೋಚನೆಯು ನಡೆದಿದೆ

ಡಿ.6ರಿಂದ 8ರ ವರೆಗೆ ದತ್ತ ಜಯಂತಿ ; ದತ್ತ ಭಕ್ತರಿಂದ ದತ್ತ ಮಾಲಾ ಧಾರಣೆ-ಪ್ರವಾಸಿಗರಿಗೆ ನಿರ್ಬಂಧ

 


ಚಿಕ್ಕಮಗಳೂರು : ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ನಡೆಯಲಿರುವ ದತ್ತಜಯಂತಿ ಹಿನ್ನೆಲೆಯಲ್ಲಿ ಇಂದು ಮಾಲಾ ಧಾರಣೆ ಮಾಡಲಾಯಿತು
ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಶಾಸಕ ಸಿ.ಟಿ.ರವಿ ಸೇರಿ ಹಲವರಿಂದ ಮಾಲಾಧಾರಣೆ ನಡೆಯಿತು.
ನಗರದಲ್ಲಿ 100 ಕ್ಕೂ ಹೆಚ್ಚು ಭಕ್ತರು ಮಾಲಾ ಧಾರಣೆ ಮಾಡಿದ್ದು ಮುಂದಿನ ತಿಂಗಳ 6ರಂದು ಅನುಸೂಯ ಜಯಂತಿ 7 ರಂದು ಜಿಲ್ಲಾ ಕೇಂದ್ರದಲ್ಲಿ ಶೋಭ ಯಾತ್ರೆ 8 ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಪಾದುಕೆ ದರ್ಶನ' ಮಾಲಾ ವಿಸರ್ಜನೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಪ್ರವಾಸಿಗರಿಗೆ ನಿರ್ಬಂಧ: ದತ್ತ ಜಯಂತಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಡಿ. 6 ಬೆಳಿಗ್ಗೆ 6 ರಿಂದ ಡಿ.9 ರ ಬೆಳಿಗ್ಗೆ 10 ಗಂಟೆಯವರೆಗೆ ಮುಳ್ಳಯ್ಯನಗಿರಿ ಬಾಬಾ ಬುಡನ್ ಗಿರಿ ಶ್ರೇಣಿಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ಮಾಡಲಾಗಿದೆ

ಭಾನುವಾರ, ನವೆಂಬರ್ 27, 2022

ಪಕ್ಷದ ನಿಷ್ಠಾವಂತನಾದ ತನಗೆ ಕಾಂಗ್ರೆಸಿಗ ಎಂಬ ಪಟ್ಟ ಕಟ್ಟಿದರು :ವಿಶ್ವಾಸದ್ರೋಹ ಮಾಡಿದರು- ವಿಜಯಾನಂದ ಪಶ್ಚಾತಾಪ

 


ಚಿಕ್ಕಮಗಳೂರು ಶೃಂಗೇರಿ ಕ್ಷೇತ್ರ ಶಾಸಕ ಟಿಡಿ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ನೀಡಿದ ದೂರು ಪ್ರಕರಣ ಈಗ ಹೊಸ ಆಯಾಮ ಪಡೆಯುತ್ತಿದೆ.

ದೂರುದಾರ ಡಿ ಎನ್ ಜೀವರಾಜ್ ಗೆ ಚಾಲಕನಾಗಿದ್ದ ವಿಜಯಾನಂದ ಬಿಡುಗಡೆ ಮಾಡಿರುವ ವಿಡಿಯೋ ಮತ್ತು ವಿಜಯಾನಂದ ಹಾಗೂ ಜೀವರಾಜ್ ಪರಮಾಪ್ತ ದಿನೇಶ್ ಮಧ್ಯ ನಡೆದಿರುವ ಆಡಿಯೋ ಸಂಭಾಷಣೆ ಭಾರಿ ಸದ್ದು ಮಾಡುತ್ತಿವೆ.

ನಿನ್ನೆ ಮತ್ತೆ ರಾತ್ರಿ ಬಿಟ್ಟಿರುವ ವಿಡಿಯೋದಲ್ಲಿ ವಿಜಯಾನಂದ ಪಶ್ಚಾತಾಪದ ಮಾತುಗಳನ್ನು ಆಡಿದ್ದಾರೆ.

ಪಕ್ಷದ ಸಿದ್ಧಾಂತ ನಂಬಿ ಪ್ರಾಮಾಣಿಕವಾಗಿ ದುಡಿದಿದ್ದ ತನಗೆ ಕಾಂಗ್ರೆಸ್ಸಿಗ ಎನ್ನುವ ಪಟ್ಟವನ್ನು ಕಟ್ಟಿದ್ದಾರೆ. ಸ್ನೇಹಿತರ ಎದುರು ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರಿನ ಸತ್ಯ ಸಂಗತಿ ತಿಳಿಯುತ್ತಿದ್ದಂತೆ ತನ್ನ ಕುಟುಂಬದಲ್ಲಿ ತಳಮಳ ಆರಂಭಗೊಂಡಿದೆ. ದೂರನ್ನು ಹಿಂದೆ ಪಡೆಯುವಂತೆ ತಾನೆ ಅನೇಕ ಬಾರಿ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಆನೆಯ ಜೊತೆ ಆನೆಯ ಗುದ್ದಾಟ ಮಾಡಬೇಕು ಎಂದು ಹೇಳುವ ಮೂಲಕ ಸತಕ ರಾಜೇಗೌಡರು ವಿರುದ್ಧ ಜೀವರಾಜ್  ದೂರನ್ನು ಸಲ್ಲಿಸಬೇಕಿತ್ತು ಎಂದು ಮಾರ್ವಿಕವಾಗಿ ತಿವಿದಿದ್ದಾರೆ.

ಆನೆ ಎದುರು ಆನೆಯ ತಾಕಬೇಕು ಇರುವೆಯನ್ನು ಹೊಸಕಿ ಹಾಕುತ್ತಾರೆ. ತನ್ನನ್ನು ನಡು ನೀರಿನಲ್ಲಿ ಕೈಬಿಟ್ಟರು ಎಂದು ಕಿಡಿ ಕಾರಿದ್ದಾರೆ. ತಾನು ದೂರನ್ನು ಹಿಂದೆ ಪಡೆದ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳು ನಡೆಯುತ್ತಿವೆ. ಆ ಕುರಿತು ತನಗೆ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ವಿಜಯಾನಂದ ಮತ್ತು ಜೀವರಾಜ್ ಆಪ್ತ ದಿನೇಶ್ ಮಧ್ಯೆ ನಡೆದ ಸಂಭಾಷಣೆ ಮತ್ತಷ್ಟು ರೋಚಕವಾಗಿದೆ.

ನಿನ್ನನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಒಂದೊಮ್ಮೆ ಜೀವರಾಜ್ ಸಹಾಯ ಮಾಡದಿದ್ದರೂ ತಾನು ಸಹಾಯ ಮಾಡುತ್ತೇನೆ ಎಂದು ದಿನೇಶ್ ಭರವಸೆ ಕೊಟ್ಟಿದ್ದಾರೆ. ಇನ್ನಿಬ್ಬರಿಂದ ದೂರನ್ನು ಕೊಡಿಸುತ್ತೇನೆ ಎಂದು ಧೈರ್ಯ ತುಂಬುವ ಕೆಲಸ ಮಾಡಿ ಯಾವುದಕ್ಕೂ ಧೈರ್ಯ ಕಳೆದುಕೊಳ್ಳಬೇಡ ಎಂದು ಹೇಳಿರುವ ದಿನೇಶ್ ದೂರು ಕೊಡಿಸುವಲ್ಲಿ ತನ್ನ ಪಾತ್ರವು ಮುಖ್ಯ ಎನ್ನುವುದನ್ನು ಸಾಬೀತು ಮಾಡಿದ್ದಾರೆ.


ಶನಿವಾರ, ನವೆಂಬರ್ 26, 2022

ಶಾಸಕ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ನೀಡಿದ್ದ ದೂರು ವಾಪಸ್ : ಉದ್ಯೋಗದ ಆಮಿಷಕ್ಕೆ ಬಲಿಯಾಗಿ ದೂರು ನೀಡಿಕೆ -ದೂರುದಾರನ ಸ್ಪಷ್ಟನೆ

 


BIG NEWS

ಚಿಕ್ಕಮಗಳೂರು: ಶೃಂಗೇರಿ ಸೇರಿದಂತೆ ರಾಜ್ಯದಲ್ಲಿ ಸಂಚಲನ ಉಂಟುಮಾಡಿದ್ದ ಶಾಸಕ ಟಿ.ಡಿ. ರಾಜೇಗೌಡರ ವಿರುದ್ಧ ಲೋಕಾಯುಕ್ತಕ್ಕೆ ನೀಡಿದ ದೂರನ್ನು ಹಿಂದಕ್ಕೆ ಪಡೆಯಲಾಗಿದೆ.
ದೂರುದಾರ ವಿಜಯಾನಂದ ಈ ಬಗ್ಗೆ ಪ್ರಮಾಣ ಪತ್ರವನ್ನು ಸಲ್ಲಿಸಿದ್ದು ತಾವು ಮಾಹಿತಿ ಇಲ್ಲದೆ ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರನ್ನು ಹಿಂದೆ ಪಡೆಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ತಾವು ಈ ಹಿಂದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ರವರಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು ಅನಗತ್ಯ ಆರೋಪಗಳನ್ನು ಹೊರೆಸಿ ಕೆಲಸದಿಂದ ತೆಗೆದುಹಾಕಿದ್ದರು ಎಂದು ಪ್ರಮಾಣ ಪತ್ರದಲ್ಲಿ ವಿವರಿಸಿದ್ದಾರೆ.
ಮತ್ತೆ ಉದ್ಯೋಗ ಕೇಳಿ ಹೋದ ಸಂದರ್ಭದಲ್ಲಿ ಶಾಸಕ ಟಿ.ಡಿ .ರಾಜೇಗೌಡರ ವಿರುದ್ಧ ಲೋಕಾಯುಕ್ತಕ್ಕೆ ದೂರು ಕೊಡಲು ಒಪ್ಪಿದರೆ ಮಾತ್ರ ಕೆಲಸ ಕೊಡುವ ಆಮಿಷ ಒಡ್ಡಿದ್ದು ಅದರಂತೆ ದೂರು ಪ್ರತಿಗೆ ಸಹಿ ಹಾಕಿ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ದೂರು ಅರ್ಜಿಯ ವಿಷಯಗಳನ್ನು ತಮ್ಮ ಗಮನಕ್ಕೂ ತಂದಿಲ್ಲ ಪ್ರತಿಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿ ಸಿದ್ದಾರ್ಥ ಹೆಗಡೆಯವರಾಗಲಿ ರಾಜೇಗೌಡರ ಬಗ್ಗೆ ಆಗಲಿ ತನಗೆ ಯಾವುದೇ ಮತ್ಸರ ಇಲ್ಲದಿದ್ದು ನೀಡಿದ ದೂರಿನಿಂದ ಆದ ತೊಂದರೆಗೆ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.
ಲೋಕಾಯುಕ್ತಕ್ಕೆ ನೀಡಿದ ದೂರನ್ನೇ ಬಂಡವಾಳವಾಗಿ ಇಟ್ಟುಕೊಂಡು ಸುದ್ದಿಗೋಷ್ಠಿ ಮೂಲಕ ಟಿ ಡಿ ರಾಜೇಗೌಡರ ತೇಜೋವಧೆಗೆ ಯತ್ನಿಸಿದ ಡಿ ಎನ್ ಜೀವರಾಜ್ ಮತ್ತು ಬಿಜೆಪಿ ಮುಖಂಡರಿಗೆ ಈಗ ಭಾರಿ ಮುಖಭಂಗವಾಗಿದೆ ಎನ್ನುವ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.

ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ : ಚಾಲಕರನ್ನು ಕಟ್ಟಿ ಹಾಕಿ ಥಳಿತ

 



ಚಿಕ್ಕಮಗಳೂರು : ವಿಧ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ತೋರಿದ  ಕ್ಯಾಬ್ ಚಾಲಕನನ್ನು ಕಟ್ಟಿಹಾಕಿ ಥಳಿಸಿದ ಘಟನೆ ನಡೆದಿದೆ

 ಚಾಲಕ ರಾಜಪ್ಪನನ್ನ ಕಂಬಕ್ಕೆ ಕಟ್ಟಿ ಕಡೂರು ತಾಲೂಕಿನ  ಸಖರಾಯಪಟ್ಟಣದ ಸಿದ್ದರಹಳ್ಳಿಯಲ್ಲಿ   ಥಳಿಸಲಾಗಿದೆ

ಚಾಲಕ ರಾಜಪ್ಪನ ಮೇಲೆ ಪೋಸ್ಕೋ ಕೇಸ್ ದಾಖಲು ಮಾಡಿದ್ದಾರೆ

ಕ್ಯಾಬ್ ನಲ್ಲಿ ಕಡೂರಿನಿಂದ ಸಿದ್ದರಹಳ್ಳಿಗೆ ಶಿಕ್ಷಕಿಯರನ್ನ ಕರೆತರುತ್ತಿದ್ದ ರಾಜಪ್ಪ

ಬೆಳಗ್ಗೆಯಿಂದ ಸಂಜೆವರೆಗೂ ಶಾಲೆ ಬಳಿಯೇ ಇರುತ್ತಿದ್ದ ಎಂದು ಆರೋಪಿಸಲಾಗಿದೆ

ಸಖರಾಯಪಟ್ಣಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


ಶುಕ್ರವಾರ, ನವೆಂಬರ್ 25, 2022

ಕಾಡಾನೆ ನಿಯಂತ್ರಿಸುವಲ್ಲಿ ವಿಫಲ: ರೊಚ್ಚಿಗೆದ್ದ ಯುವಕರು- ಕಾಫಿನಾಡಲ್ಲಿ ಫಾರೆಸ್ಟ್‌ ಆಫೀಸ್ ಪುಡಿ...ಪುಡಿ

 



ಚಿಕ್ಕಮಗಳೂರು :ಕಾಡಾನೆ ಹಿಡಿದು ನಿಯಂತ್ರಿಸುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೆದ್ದ ಜನಕಳ್ಳ ಬೇಟೆ ನಿಗ್ರಹ ಶಿಬಿರವನ್ನ ಧ್ವಂಸ ಮಾಡಿದ ಘಟನೆ ನಡೆದಿದೆ
ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಕೈಗೆ ಸಿಕ್ಕ... ಸಿಕ್ಕ... ವಸ್ತುಗಳನ್ನೆಲ್ಲಾ ಪುಡಿ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ
ಆನೆ ದಾಳಿಯನ್ನ ನಿಯಂತ್ರಿಸಲಾಗದ ಅರಣ್ಯ ಇಲಾಖೆ ವಿರುದ್ಧ ರೋಷ ವ್ಯಕ್ತಪಡಿಸಿನಿಮಗೆ ಪಟಾಕಿ ಕೊಡುವ ಯೋಗ್ಯತೆ ಇಲ್ಲವೆಂದು ಕಿಡಿ ಕಾರಿದ್ದಾರೆ
ಆನೆ ನಿಯಂತ್ರಿಸಕ್ಕೆ ಆಗಲ್ಲ, ತಿನ್ನೋಕೆ ಸೋನಾ ಮುಸುರಿ ಅಕ್ಕಿ  ಬೇಕಾ ಎಂದು ಪ್ರಶ್ನಿಸಿಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳ ವಿರುದ್ಧ ಕಿಡಿಕರಿದ್ದೆ ಅಲ್ಲದೆ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಸವಾಲ್ ಹಾಕಿದ್ದಾರೆ.
ನಿರಂತರ ದಾಳಿಯಿಂದ ಜನ ಕಂಗೆಟ್ಟಿದ್ದು
ನಾಲ್ಕು ದಿನದ ಹಿಂದೆ ಆನೆ ದಾಳಿಗೆ 35 ವರ್ಷದ ಮಹಿಳೆ ಸಾವಪ್ಪಿದ್ದು ಸ್ಥಳಕ್ಕೆ ತೆರಲಿದ್ದ ಶಾಸಕರ ಮೇಲೂ ಅಲ್ಲೇ ಯತ್ನ ನಡೆದಿತ್ತು