udayanews

ಶುಕ್ರವಾರ, ಡಿಸೆಂಬರ್ 2, 2022

ಶಾಸಕರ ತಾಳಕ್ಕೆ ತಕ್ಕ ಕುಣಿದ ಅಧಿಕಾರಿ : ಚುನಾವಣೆ ಮುಂದೂಡಿಕೆ : ಮಾಜಿ ಶಾಸಕ ಶ್ರೀನಿವಾಸ ಅಕ್ಷೇಪ



ಚಿಕ್ಕಮಗಳೂರು: ಶಾಸಕರ ಅಣತಿಯಂತೆ  ಚುನಾವಣಾ ಅಧಿಕಾರಿ ಚುನಾವಣೆ ನಡೆಸದ ಘಟನೆ ನಡೆದಿದ್ದು ಈ ಬಗ್ಗೆ ಕಾಂಗ್ರೆಸ್ ಪಕ್ಷ ಆಕ್ರೋಶ ಹೊರ ಹಾಕಿದೆ

ಚುನಾವಣೆ ನೋಟಿಫಿಕೇಶನ್ ಹೊರಡಿಸಿದ ಅಧಿಕಾರಿ ಆರೋಗ್ಯ ಸರಿಯಿಲ್ಲ ಎಂದು ಪಟ್ಟಣದಲ್ಲಿ ಓಡಾಡುವ ಮೂಲಕ ಶಾಸಕರ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ
ತರೀಕೆರೆ ತಾಲೂಕಿನ ಬೆಟ್ಟದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೆಟ್ಟದಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಚುನಾವಣೆ ನಡೆಯಬೇಕಿತ್ತು.
ಲೋಕೋಪಯೋಗಿ ಇಲಾಖೆ ಅಧಿಕಾರಿ ವಾಗೀಶ್ ಚುನಾವಣೆ ಅಧಿಕಾರಿಯಾಗಿ ನೋಟಿಫಿಕೇಶನ್ ಹೊರಡಿಸಿದ್ದರು.
ನೋಟಿಫಿಕೇಶನ್ ಹೊರಡಿಸಿ ಹುಷಾರಿಲ್ಲ ಎಂದು ತರೀಕೆರೆ ಪಟ್ಟಣದಲ್ಲಿ ಓಡಾಟ ನಡೆಸಿದ್ದು ಉಪವಿಭಾಗಾಧಿಕಾರಿಗಳೇ ಕಾರಲ್ಲಿ ತಂದು ಚುನಾವಣೆ ನಡೆಸುವಂತೆ ಸೂಚಿಸಿ ಬಿಟ್ಟು ಹೋಗಿದ್ದಾರೆ.
11 ಗಂಟೆಯಿಂದ 3 ಗಂಟೆವರೆಗೆ ಪಂಚಾಯಿತಿಯಲ್ಲೇ ಇದ್ದರೂ ಚುನಾವಣೆ ನಡೆಸಲಿಲ್ಲ ಎಂದು ಆರೋಪ ವ್ಯಕ್ತವಾಗಿದೆ.
ಶಾಸಕರು, ವೈದ್ಯರು ಹಾಗೂ ಆಂಬುಲೆನ್ಸ್ ಗೆ ಫೋನ್ ಮಾಡಿಕೊಂಡು 3 ಗಂಟೆಗೆ ಪೊಲೀಸ್ ಪ್ರೊಟಕ್ಷನ್ ನಲ್ಲಿ ಚುನಾವಣಾ ಅಧಿಕಾರಿ ತೆರಳಿದ್ದಾರೆ.
ಈ ಹಂತದಲ್ಲಿ ತೀವ್ರ ಮಾತಿನ ಚಕಮಕಿ ಪ್ರತಿಭಟನೆಯು ನಡೆದಿದೆ .ಚುನಾವಣೆ ನಡೆಸದ ತೀವ್ರ ಅಸಮಧಾನ ಹೊರ ಹಾಕಿರುವ ಕಾಂಗ್ರೆಸ್ ಮಾಜಿ ಶಾಸಕ ಶ್ರೀನಿವಾಸ್ ಮತ್ತು ಕಾರ್ಯಕರ್ತರು ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಡಿ.ಸಿ.ಗೆ ಮನವಿ ಸಲ್ಲಿಸಿದ್ದಾರೆ

ಗುರುವಾರ, ಡಿಸೆಂಬರ್ 1, 2022

ನಂದಿ ಬಟ್ಟಲು ಸಮೀಪ ವಿದ್ಯುತ್ ಸ್ಪರ್ಶಿಸಿ ಗಂಡಾನೆ ಬಲಿ

 



ಚಿಕ್ಕಮಗಳೂರು :ಮುಸುಕಿನ ಜೋಳ ತಿನ್ನಲು ಬಂದಿದ್ದ ಕಾಡಾನೆ ಎಂದು ವಿದ್ಯುತ್ ಸ್ಪರ್ಶಿಸಿ  ಮೃತಪಟ್ಟ ಘಟನೆ ನಡೆದಿದೆ. 
ತಣಿಗೆಬೈಲು  ವನ್ಯಜೀವಿ ವಲಯದ  ನಂದಿ ಬೆಟ್ಟದ ಸಮೀಪ ಈ ದುರ್ಘಟನೆ ಸಂಭವಿಸಿದೆ.
ಈ ಭಾಗದಲ್ಲಿ ಕಾಡುಪ್ರಾಣಿಗಳನ್ನು ನಿಯಂತ್ರಿಸಲು ಅಕ್ರಮವಾಗಿ ವಿದ್ಯುತ್ ಬೇಲಿಗಳನ್ನು ರೈತರು ನಿರ್ಮಿಸಿಕೊಳ್ಳುತ್ತಿದ್ದು ಇದರಿಂದ ಪದೇ ಪದೇ ವನ್ಯಜೀವಿಗಳು  ಮೃತ ಪಡುತ್ತಿವೆ ಎಂದು ಪರಿಸರ ಪ್ರೇಮಿಗಳು ಕಡವಳ ವ್ಯಕ್ತಪಡಿಸಿದ್ದಾರೆ.
ಕೊಲೆ ಆರೋಪಿಗಳ ಸೆರೆ ಅಜ್ಜಂಪುರ ತಾಲೂಕು ಶಿವನಿ ಗ್ರಾಮದ ನಿವೃತ್ತ ಶಿಕ್ಷಕ ಶೇಖರಪ್ಪ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ಉಮೇಶ್ ಮತ್ತು ಆತನ ಮಗ ಮಲ್ಲಿಕಾರ್ಜುನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಗೆ ಆಶ್ರಯ ನೀಡಿದ ಕಡೂರಿನ ಹೇಮಂತ್ ಕುಮಾರ್ ಆಲಘಟ್ಟದ ಶಾಂತಕುಮಾರ್ ಹಾಗೂ ದೊಡ್ಡಬಳ್ಳಾಪುರ ದರ್ಶಣ್ಮುಖಪ್ಪನವರ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ, ನವೆಂಬರ್ 30, 2022

ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಮತ್ತೆ ಲೋಕಾಯುಕ್ತಕ್ಕೆ ದೂರು

 



ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಶಾಸಕರಾಜೇಗೌಡ ವಿರುದ್ಧ ಮತ್ತೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ

ಕೊಪ್ಪ ಮೂಲದ ದಿನೇಶ್ ಹೊಸೂರು  ದೂರು ಸಲ್ಲಿಸುವ ಮೂಲಕ ಕಾಂಗ್ರೆಸ್ ಶಾಸಕರಿಗೆ ಕಂಟಕವಾಗುತ್ತಾ ಶಬಾನಾ ರಂಜಾನ್ ಸಂಸ್ಥೆ ಎನ್ನುವ ಅನುಮಾನ ಕಾಡುತ್ತಿದೆ

ಟಿ.ಡಿ.ರಾಜೇಗೌಡ 123 ಕೋಟಿಯಷ್ಟು ಅಕ್ರಮ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಇದೇ ತಿಂಗಳ 18ರಂದು ಕೊಪ್ಪ ಮೂಲದ ವಿಜಯಾನಂದ ದೂರು ನೀಡಿದ್ದು

ದೂರು ದಾಖಲಾದ 4-5 ದಿನದಲ್ಲಿ ಕೇಸ್ ಹಿಂಪಡೆದಿದ್ದರು.

ವಾರ್ಷಿಕ 35 ಲಕ್ಷ ಆದಾಯ ತೋರಿಸಿದ್ದ ರಾಜೇಗೌಡ, 123 ಕೋಟಿ ಆಸ್ತಿ ಖರೀದಿ ಹೇಗೆ ಎಂದು ದೂರಿನಲ್ಲಿ ಪ್ರಶ್ನಿಸಿ ತನಿಖೆಗೆ ಒತ್ತಾಯಿಸಿದ್ದಾರೆ


ಮಂಗಳವಾರ, ನವೆಂಬರ್ 29, 2022

ಕಡೂರು ತಹಸಿಲ್ದಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ -ಗುರು ಶಾಂತಪ್ಪ


 

ಚಿಕ್ಕಮಗಳೂರು: ಮೃತ ವ್ಯಕ್ತಿಯ ಹೆಸರಿಗೆ ಖಾತೆ ಮಾಡಿ ಕೊಟ್ಟಿರುವುದು ಸೇರಿದಂತೆ ಅನೇಕ ಆರೋಪಗಳನ್ನು ಎದುರಿಸುತ್ತಿರುವ ಕಡೂರು ತಹಸೀಲ್ದಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರೈತ ಸಂಘ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಗುರು ಶಾಂತಪ್ಪ ಕಡೂರು ತಹಸಿಲ್ದಾರ್ ಉಮೇಶ್ ಬೇರೆಯವರ ಲಾಗಿನ್ ಬಳಸಿ ಭಾರಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ರೈತ ಸಂಘದ ನಿರಂತರ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದರು ಉಪವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಲ್ಲಿ ಮೀನಮೇಶ ಎಣಿಸುತ್ತಿದ್ದಾರೆ ಎಂದು ಟೀಕಿಸಿದರು.

ಈ ಅಧಿಕಾರಿ ವಿರುದ್ಧ ಶಿಸ್ತು ಕ್ರಮಕ್ಕೆ ತುರ್ತಾಗಿ ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರು ಸೂಚಿಸಿದರು ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳದೆ ಇರುವುದು ಅನುಮಾನಕ್ಕೆ ಎಡೆ ಮಾಡಿದೆ ಎಂದು  ಆರೋಪಿಸಿದರು.

8 ದಿನದ ಒಳಗೆ ಶಿಸ್ತುಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಅನಿರ್ದಿಷ್ಟ ಅವಧಿ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿದರು

ಕೊಪ್ಪ ಸರ್ವೆ ಇಲಾಖೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರ -ಸಹನೆ ಕಳೆದುಕೊಂಡ ಜನರಿಂದ ಪ್ರತಿಭಟನೆ

 



ಕೊಪ್ಪ :ಇಲ್ಲಿನ ಭೂ ದಾಖಲೆಗಳ ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ ಎಂದು ಆರೋಪಿಸಿ ನೊಂದವರು ಪ್ರತಿಭಟನೆ ನಡೆಸಿದ್ದಾರೆ.

 ಸಹಾಯಕ ನಿರ್ದೇಶಕರ ಕಚೇರಿ ಬಾಗಿಲ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದೆ ಅಲ್ಲದೆ ಒಂದು ಹಂತದಲ್ಲಿ ಬೀಗ ಹಾಕಲು ಹೊರಟಿದ್ದರು.

ದಾಖಲೆಗಳನ್ನು ಪಡೆಯಲು ತಿಂಗಳಗಟ್ಟಲೆ ಅಲೆಯಬೇಕಾಗಿದೆ. ಹಣವಿಲ್ಲದೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಅಧಿಕಾರಿ ಸಿಬ್ಬಂದಿ ವಿರುದ್ಧ ಕಿಡಿಕಾರಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸಮಾಧಾನ ಪಡಿಸಲು ಮಾಡಿದ ಯತ್ನ ಫಲಿಸದೆ ಅವರ ಎದುರಿನಲ್ಲಿ ಪ್ರತಿಭಟನೆ ನಿರತರು ಇಲಾಖೆ ವಿರುದ್ಧ ಕೂಗಾಡಿದರು.

ಭ್ರಷ್ಟಾಚಾರ -ಪರ್ಸೆಂಟೇಜ್ ವ್ಯವಹಾರ ಬಿಜೆಪಿ ಸರ್ಕಾರದ ಸಾಧನೆ:ಡಿ.ಕೆ.ಶಿವಕುಮಾರ್

 

ಮೂಡಿಗೆರೆ:ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು  ಪರ್ಸಂಟೇಜ್ ವ್ಯವಹಾರ ಹೊರತುಪಡಿಸಿ ಜನಪರವಾಗಿ ಕೆಲಸ ಮಾಡಿಲ್ಲ ಎಂದು  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ

     ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ  ಸಮಾವೇಶ ಉದ್ಘಾಟಿಸಿ ಬಿಜೆಪಿ ೩ ಬಾರಿ ನಡೆಸಿದ ಆಡಳಿತದಲ್ಲಿ ಜನರ ಬದುಕು ಬದಲಾವಣೆ ಮಾಡಲು ಸಾಧ್ಯವಾಗಿಲ್ಲ.   ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ ಎಂದರು.

  ಇಲ್ಲಿಯವರೆಗೆ ಅಧಿಕಾರವಿದ್ದಾಗಲೇ ಜನರ ಬದುಕು ಹಸನು ಮಾಡಲು ಸಾಧ್ಯವಾಗಿಲ್ಲ. ಇನ್ನು ಅಧಿಕಾರ ಕಳೆದುಕೊಳ್ಳುವ ಸಮಯದಲ್ಲಿ  ಸಾಧ್ಯವೇ ಎಂದು ಪ್ರಶ್ನಿಸಿದರು.  

  ಬಿಜೆಪಿ  ಕೇವಲ ಭಾವನೆ, ಕೋಮು ಗಲಭೆಯಲ್ಲೇ ಕಾಲ ಕಳೆದಿದ್ದಾರೆ. ಜನರ ಬದುಕು ಹಸನಾಗಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ  ನ ಯಾವುದೇ ಅಭ್ಯರ್ಥಿ  ನಿಲ್ಲಿಸಿದರೂ ಅವರನ್ನು ಗೆಲ್ಲಿಸಿಕೊಡುವ ಕರ್ತವ್ಯ ನಿಮ್ಮದು ಎಂದು ಹೇಳಿದರು. 

ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್  ಮಾತನಾಡಿ ಫ್ಲೆಕ್ಸ್ ಹಾಕುವ ಬದಲು ಜನ ಸಂಪರ್ಕ ಮಾಡುವುದು ಒಳಿತು ಎಂದು ಕಿವಿ ಮಾತು ಹೇಳಿದರು


ಮಾಜಿ ಸಚಿವರಾದ ಮೋಟಮ್ಮ, ಬಿ.ಶಿವರಾಂ, ಕಾರ್ಯಧ್ಯಕ್ಷ ದೃವ ನಾರಾಯಣ್, ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶು ಮಂತ್ ಇತರರು ಉಪಸ್ಥಿತರಿದ್ದರು. 

ನಾಗರತ್ನ ಮತ್ತು ನಯನ ಮೋಟಮ್ಮ ಪರ ಪ್ರತ್ಯೇಕವಾಗಿ ಭಾರಿ ಗಾತ್ರದ ಸೇಬಿನ ಹಾರ ಹಾಕುವ ಮೂಲಕ ಗುಂಪುಗಾರಿಕೆ ಬಿಂಬಿತಗೊಂಡಿತು.

ಸೋಮವಾರ, ನವೆಂಬರ್ 28, 2022

ಖಾಸಗಿ ಬಸ್ -ಟಿಪ್ಪರ್ ನಡುವೆ ಮುಖಾಮುಖಿ. ಓರ್ವ ಮಹಿಳೆ ಮೃತಪಟ್ಟು15 ಮಂದಿಗೆ ಗಾಯ

 


ಚಿಕ್ಕಮಗಳೂರು : ಖಾಸಗಿ ಬಸ್ -ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ
ಓರ್ವ ಮಹಿಳೆ  ಮೃತಪಟ್ಟು15 ಮಂದಿಗೆ ಗಾಯವಾಗಿದೆ
ಎನ್.ಆರ್.ಪುರ ತಾಲೂಕಿನ ಮುತ್ತಿನ ಕೊಪ್ಪದಲ್ಲಿ ಘಟನೆ ನಡೆದಿದ್ದು ,ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ರತ್ನಮ್ಮ  ಸಾವಪ್ಪಿದ್ದಾರೆ
ಗಾಯಾಳುಗಳನ್ನುಎನ್.ಆರ್ ಪುರ ಹಾಗೂ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .