udayanews

ಮಂಗಳವಾರ, ಜನವರಿ 12, 2021

ಧ್ವಜ ಕಟ್ಟುವ ವಿಷಯದಲ್ಲಿ ಕಿರಿಕ್


ಚಿಕ್ಕಮಗಳೂರು: ಗ್ರಾಮ ಪಂಚಾಯಿತಿಯಲ್ಲಿ ಗೆದ್ದಿರುವ ಅಭ್ಯರ್ಥಿಗಳಿಗೆ ಬಿಜೆಪಿ ವತಿಯಿಂದ ಏರ್ಪಡಿಸಿರುವ ಅಭಿನಂದನಾ ಸಮಾರಂಭದ ಹಿನ್ನೆಲೆಯಲ್ಲಿ ಪ್ರಾರ್ಥನಾ ಸ್ಥಳದ ಬಳಿ ಧ್ವಜ  ಕಟ್ಟುವ ವಿಷಯದಲ್ಲಿ ಕಿರಿಕಿರಿ ಉಂಟಾಗಿದೆ .

ವಿಜಯಪುರದ ಒಕ್ಕಲಿಗರ ಕಲ್ಯಾಣ ಮಂಟಪದ ಬಳಿ ಈ ಘಟನೆ ನಡೆದಿದ್ದು , ಧ್ವಜ ಕಟ್ಟುವುದನ್ನು 1ಸಮುದಾಯದವರು ವಿರೋಧಿಸಿದ್ದು, ಈ ಹಂತದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದು ಸಣ್ಣಮಟ್ಟದ ಘರ್ಷಣೆಗೂ ಅವಕಾಶವಾಗಿದೆ .
ಬಿಜೆಪಿ ಯುವ ಮೋರ್ಚದ ಕೌಶಿಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ .ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಪಕ್ಷದ ಮುಖಂಡರ ಮೇಲೆ ದಾಳಿ ನಡೆಸಿದವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ .
ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಭೇಟಿ ನೀಡಿ ಮಾತುಕತೆ ನಡೆಸಿದ್ದು ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆ .

ಕೆರೆ ಒತ್ತುವರಿ ತೆರವಿಗೆ ಸೂಚನೆ

ಚಿಕ್ಕಮಗಳೂರು,ಜ,೧೨;- ಜಿಲ್ಲೆಯಲ್ಲಿ ಕೆರೆಗಳ  ಒತ್ತುವರಿಯನ್ನು ಏಪ್ರಿಲ್ ಅಂತ್ಯದೊಳಗೆ   ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್  ಅಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು  ಕೆರೆಗಳ ಒತ್ತುವರಿ ತೆರವುಗೊಳಿಸುವ ಸಂಬಂಧ  ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು ೧೧೦೩ ಕೆರೆಗಳಿದ್ದು, ಅವುಗಳಲ್ಲಿ ೫೨೦ ಕೆರೆಗಳ ಸರ್ವೆ ಕಾರ್ಯ ನಡೆಸಿ  ತೆರವುಗೊಳಿಸಲಾಗಿದ್ದು, ೫೮೩ ಕೆರೆಗಳ ಸರ್ವೆಕಾರ್ಯ ಬಾಕಿ ಉಳಿದಿದೆ. ಮಾರ್ಚ್ ತಿಂಗಳ ಅಂತ್ಯದೊಳಗೆ ಒತ್ತುವರಿ  ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.