udayanews

ಶನಿವಾರ, ಡಿಸೆಂಬರ್ 3, 2022

ಶಾಸಕ ಸಿಟಿ ರವಿ ಮನೆಗೆ ಕಾಂಗ್ರೆಸ್ ಕಾರ್ಯಕರ್ತರ ಲಗ್ಗೆ ಯತ್ನ : ಮಾರ್ಗ ಮಧ್ಯದಲ್ಲಿ ತಡೆದ ಪೊಲೀಸರು-ಇನ್ನೊಂದೆಡೆ ಬಿಜೆಪಿ ಪ್ರತಿ ದಾಳಿ

 



ಚಿಕ್ಕಮಗಳೂರು : ಮಾಜಿ ಮುಖ್ಯಮಂತ್ರಿಗಳು ಆದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆ ಖಂಡಿಸಿ  ಶಾಸಕ ಸಿ.ಟಿ .ಮನೆಗೆ   ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ರೂಪಿಸಿದ್ದ ತಂತ್ರವನ್ನು  ಪೊಲೀಸರು ವಿಫಲಗೊಳಿಸಿದ್ದಾರೆ.
ತಾಲೂಕು ಕಚೇರಿಯಿಂದ ಮೆರವಣಿಗೆ ಹೋಗಿ ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಸಿ.ಟಿ.ರವಿ ಮನೆಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ ಹಾಕುವ ಕಾರ್ಯಕ್ರಮ ರೂಪಿಸಲಾಗಿತ್ತು.
ಪ್ರತಿಭಟನಾಕಾರರನ್ನ ರಸ್ತೆ ಮಧ್ಯೆಯೇ  ಪೊಲೀಸರು ತಡೆದರಲ್ಲದೆ ಇನ್ನೊಂದೆಡೆ ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿ ಮನೆ ರಸ್ತೆ ಮಧ್ಯೆಯೇ ಅಡ್ಡ ಹಾಕಿ ಕಾಂಗ್ರೆಸ್ ಕಾರ್ಯಕರ್ತರಿಗೆ ಬರುವಂತೆ ಸವಾಲು ಹಾಕಿದರು
ಹಂತದಲ್ಲಿ ಮುಲ್ಲಾ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರ ಬಂಧನಕ್ಕೆ ಪೊಲೀಸರು ಮುಂದಾಗುತ್ತಿದ್ದಂತೆ ಮಾತಿನ ವಾಕ್ ಸಮರ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಗೊಂಡಿತ್ತು.
ಪೊಲೀಸ್-ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತಲ್ಲದೆ. ಶಾಸಕ ಸಿಟಿ ರವಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರೆ ರವಿ ಪರ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು.
ಒಂದೆಡೆ ಕಾಂಗ್ರೆಸ್ ಮುಖಂಡರುಭಾಷಣ ಮಾಡಿದರೆ ಮತ್ತೊಂದೆಡೆ ಬಿಜೆಪಿ ಪ್ರತಿಭಟನೆ ಕೂಗು ಮೊಳಗಿ ಗೊಂದಲದ ವಾತಾವರಣ ಉಂಟಾಗಿತ್ತು
ರಸ್ತೆಯ ಎರಡು ಬದಿ  ಇಬ್ಬರನ್ನೂ ಬಿಟ್ಟು ಮಧ್ಯೆ  ಪೊಲೀಸರು ನಿಂತು ತಮಾಷೆ ವೀಕ್ಷಿಸಿದರು. ಶಾಸಕರ ಮನೆಗೆ ಪೊಲೀಸ್ ಹೆಚ್ಚಿನ ಕಾವಲು ಹಾಕಿದ್ದು ಎಚ್ಚರಿಕೆ ವಹಿಸಲಾಗಿದೆ.









ಶುಕ್ರವಾರ, ಡಿಸೆಂಬರ್ 2, 2022

ವ್ಯವಸ್ಥಾಪನ ಸಮಿತಿ ರದ್ದುಪಡಿಸಲು ಒತ್ತಾಯಿಸಿ SDPI ಆಶ್ರಯದಲ್ಲಿ ಪ್ರತಿಭಟನೆ

 



ಚಿಕ್ಕಮಗಳೂರು :ತಾಲೂಕಿನ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕೆ ನೇಮಿಸಿರುವ ವ್ಯವಸ್ಥಾಪನಾ ಸಮಿತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಎಸ್‌ಡಿಪಿಐ ಆಶ್ರಯದಲ್ಲಿ ಪ್ರತಿಭಟನೆ ನಡೆದಿದೆ.

ಕೋಮು ಸಾಮರಸ್ಯದ ಕೇಂದ್ರವಾಗಿರುವ ಪೀಠಕ್ಕೆ ರಚಿಸಿರುವ 8 ಎಂಟು ಸದಸ್ಯರಿರುವ ಸಮಿತಿಯಲ್ಲಿ 7 ಸದಸ್ಯರು ಒಂದೇ ಸಮುದಾಯಕ್ಕೆ ಸೇರಿದ್ದು ಇದು ನ್ಯಾಯಾಲಯದ ಆದೇಶದ ಉಲ್ಲಂಘನೆ ಆಗಿದೆ ಎಂದು ಆರೋಪಿಸಿದ್ದಾರೆ.

 ನಾಮಕಾವಸ್ತೆಗೆ ಮುಸ್ಲಿಂ ಸಮುದಾಯದ ಒಬ್ಬ ಸದಸ್ಯರನ್ನು ಮಾತ್ರ ನೇಮಕ ಮಾಡಿದ್ದು , ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರಿಗೂ ಅವಕಾಶ ಕಲ್ಪಿಸಿಲ್ಲ ಎಂದು ಟೀಕಿಸಿದ್ದಾರೆ.

ಹಿಂದೂ ಮತ್ತು ಮುಸ್ಲಿಂ ಎರಡು ಸಮುದಾಯದ ಸಮಾನ ಸದಸ್ಯರು ಇಲ್ಲದ ಈ ಸಮಿತಿಯನ್ನು ತಕ್ಷಣ ವಿಸರ್ಜಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರ ತಪ್ಪು ಸಂದೇಶಗಳನ್ನು ನೀಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.


ಶಾಸಕರ ತಾಳಕ್ಕೆ ತಕ್ಕ ಕುಣಿದ ಅಧಿಕಾರಿ : ಚುನಾವಣೆ ಮುಂದೂಡಿಕೆ : ಮಾಜಿ ಶಾಸಕ ಶ್ರೀನಿವಾಸ ಅಕ್ಷೇಪ



ಚಿಕ್ಕಮಗಳೂರು: ಶಾಸಕರ ಅಣತಿಯಂತೆ  ಚುನಾವಣಾ ಅಧಿಕಾರಿ ಚುನಾವಣೆ ನಡೆಸದ ಘಟನೆ ನಡೆದಿದ್ದು ಈ ಬಗ್ಗೆ ಕಾಂಗ್ರೆಸ್ ಪಕ್ಷ ಆಕ್ರೋಶ ಹೊರ ಹಾಕಿದೆ

ಚುನಾವಣೆ ನೋಟಿಫಿಕೇಶನ್ ಹೊರಡಿಸಿದ ಅಧಿಕಾರಿ ಆರೋಗ್ಯ ಸರಿಯಿಲ್ಲ ಎಂದು ಪಟ್ಟಣದಲ್ಲಿ ಓಡಾಡುವ ಮೂಲಕ ಶಾಸಕರ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ
ತರೀಕೆರೆ ತಾಲೂಕಿನ ಬೆಟ್ಟದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೆಟ್ಟದಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಚುನಾವಣೆ ನಡೆಯಬೇಕಿತ್ತು.
ಲೋಕೋಪಯೋಗಿ ಇಲಾಖೆ ಅಧಿಕಾರಿ ವಾಗೀಶ್ ಚುನಾವಣೆ ಅಧಿಕಾರಿಯಾಗಿ ನೋಟಿಫಿಕೇಶನ್ ಹೊರಡಿಸಿದ್ದರು.
ನೋಟಿಫಿಕೇಶನ್ ಹೊರಡಿಸಿ ಹುಷಾರಿಲ್ಲ ಎಂದು ತರೀಕೆರೆ ಪಟ್ಟಣದಲ್ಲಿ ಓಡಾಟ ನಡೆಸಿದ್ದು ಉಪವಿಭಾಗಾಧಿಕಾರಿಗಳೇ ಕಾರಲ್ಲಿ ತಂದು ಚುನಾವಣೆ ನಡೆಸುವಂತೆ ಸೂಚಿಸಿ ಬಿಟ್ಟು ಹೋಗಿದ್ದಾರೆ.
11 ಗಂಟೆಯಿಂದ 3 ಗಂಟೆವರೆಗೆ ಪಂಚಾಯಿತಿಯಲ್ಲೇ ಇದ್ದರೂ ಚುನಾವಣೆ ನಡೆಸಲಿಲ್ಲ ಎಂದು ಆರೋಪ ವ್ಯಕ್ತವಾಗಿದೆ.
ಶಾಸಕರು, ವೈದ್ಯರು ಹಾಗೂ ಆಂಬುಲೆನ್ಸ್ ಗೆ ಫೋನ್ ಮಾಡಿಕೊಂಡು 3 ಗಂಟೆಗೆ ಪೊಲೀಸ್ ಪ್ರೊಟಕ್ಷನ್ ನಲ್ಲಿ ಚುನಾವಣಾ ಅಧಿಕಾರಿ ತೆರಳಿದ್ದಾರೆ.
ಈ ಹಂತದಲ್ಲಿ ತೀವ್ರ ಮಾತಿನ ಚಕಮಕಿ ಪ್ರತಿಭಟನೆಯು ನಡೆದಿದೆ .ಚುನಾವಣೆ ನಡೆಸದ ತೀವ್ರ ಅಸಮಧಾನ ಹೊರ ಹಾಕಿರುವ ಕಾಂಗ್ರೆಸ್ ಮಾಜಿ ಶಾಸಕ ಶ್ರೀನಿವಾಸ್ ಮತ್ತು ಕಾರ್ಯಕರ್ತರು ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಡಿ.ಸಿ.ಗೆ ಮನವಿ ಸಲ್ಲಿಸಿದ್ದಾರೆ

ಗುರುವಾರ, ಡಿಸೆಂಬರ್ 1, 2022

ನಂದಿ ಬಟ್ಟಲು ಸಮೀಪ ವಿದ್ಯುತ್ ಸ್ಪರ್ಶಿಸಿ ಗಂಡಾನೆ ಬಲಿ

 



ಚಿಕ್ಕಮಗಳೂರು :ಮುಸುಕಿನ ಜೋಳ ತಿನ್ನಲು ಬಂದಿದ್ದ ಕಾಡಾನೆ ಎಂದು ವಿದ್ಯುತ್ ಸ್ಪರ್ಶಿಸಿ  ಮೃತಪಟ್ಟ ಘಟನೆ ನಡೆದಿದೆ. 
ತಣಿಗೆಬೈಲು  ವನ್ಯಜೀವಿ ವಲಯದ  ನಂದಿ ಬೆಟ್ಟದ ಸಮೀಪ ಈ ದುರ್ಘಟನೆ ಸಂಭವಿಸಿದೆ.
ಈ ಭಾಗದಲ್ಲಿ ಕಾಡುಪ್ರಾಣಿಗಳನ್ನು ನಿಯಂತ್ರಿಸಲು ಅಕ್ರಮವಾಗಿ ವಿದ್ಯುತ್ ಬೇಲಿಗಳನ್ನು ರೈತರು ನಿರ್ಮಿಸಿಕೊಳ್ಳುತ್ತಿದ್ದು ಇದರಿಂದ ಪದೇ ಪದೇ ವನ್ಯಜೀವಿಗಳು  ಮೃತ ಪಡುತ್ತಿವೆ ಎಂದು ಪರಿಸರ ಪ್ರೇಮಿಗಳು ಕಡವಳ ವ್ಯಕ್ತಪಡಿಸಿದ್ದಾರೆ.
ಕೊಲೆ ಆರೋಪಿಗಳ ಸೆರೆ ಅಜ್ಜಂಪುರ ತಾಲೂಕು ಶಿವನಿ ಗ್ರಾಮದ ನಿವೃತ್ತ ಶಿಕ್ಷಕ ಶೇಖರಪ್ಪ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ಉಮೇಶ್ ಮತ್ತು ಆತನ ಮಗ ಮಲ್ಲಿಕಾರ್ಜುನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಗೆ ಆಶ್ರಯ ನೀಡಿದ ಕಡೂರಿನ ಹೇಮಂತ್ ಕುಮಾರ್ ಆಲಘಟ್ಟದ ಶಾಂತಕುಮಾರ್ ಹಾಗೂ ದೊಡ್ಡಬಳ್ಳಾಪುರ ದರ್ಶಣ್ಮುಖಪ್ಪನವರ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ, ನವೆಂಬರ್ 30, 2022

ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಮತ್ತೆ ಲೋಕಾಯುಕ್ತಕ್ಕೆ ದೂರು

 



ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಶಾಸಕರಾಜೇಗೌಡ ವಿರುದ್ಧ ಮತ್ತೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ

ಕೊಪ್ಪ ಮೂಲದ ದಿನೇಶ್ ಹೊಸೂರು  ದೂರು ಸಲ್ಲಿಸುವ ಮೂಲಕ ಕಾಂಗ್ರೆಸ್ ಶಾಸಕರಿಗೆ ಕಂಟಕವಾಗುತ್ತಾ ಶಬಾನಾ ರಂಜಾನ್ ಸಂಸ್ಥೆ ಎನ್ನುವ ಅನುಮಾನ ಕಾಡುತ್ತಿದೆ

ಟಿ.ಡಿ.ರಾಜೇಗೌಡ 123 ಕೋಟಿಯಷ್ಟು ಅಕ್ರಮ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಇದೇ ತಿಂಗಳ 18ರಂದು ಕೊಪ್ಪ ಮೂಲದ ವಿಜಯಾನಂದ ದೂರು ನೀಡಿದ್ದು

ದೂರು ದಾಖಲಾದ 4-5 ದಿನದಲ್ಲಿ ಕೇಸ್ ಹಿಂಪಡೆದಿದ್ದರು.

ವಾರ್ಷಿಕ 35 ಲಕ್ಷ ಆದಾಯ ತೋರಿಸಿದ್ದ ರಾಜೇಗೌಡ, 123 ಕೋಟಿ ಆಸ್ತಿ ಖರೀದಿ ಹೇಗೆ ಎಂದು ದೂರಿನಲ್ಲಿ ಪ್ರಶ್ನಿಸಿ ತನಿಖೆಗೆ ಒತ್ತಾಯಿಸಿದ್ದಾರೆ


ಮಂಗಳವಾರ, ನವೆಂಬರ್ 29, 2022

ಕಡೂರು ತಹಸಿಲ್ದಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ -ಗುರು ಶಾಂತಪ್ಪ


 

ಚಿಕ್ಕಮಗಳೂರು: ಮೃತ ವ್ಯಕ್ತಿಯ ಹೆಸರಿಗೆ ಖಾತೆ ಮಾಡಿ ಕೊಟ್ಟಿರುವುದು ಸೇರಿದಂತೆ ಅನೇಕ ಆರೋಪಗಳನ್ನು ಎದುರಿಸುತ್ತಿರುವ ಕಡೂರು ತಹಸೀಲ್ದಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರೈತ ಸಂಘ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಗುರು ಶಾಂತಪ್ಪ ಕಡೂರು ತಹಸಿಲ್ದಾರ್ ಉಮೇಶ್ ಬೇರೆಯವರ ಲಾಗಿನ್ ಬಳಸಿ ಭಾರಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ರೈತ ಸಂಘದ ನಿರಂತರ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದರು ಉಪವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಲ್ಲಿ ಮೀನಮೇಶ ಎಣಿಸುತ್ತಿದ್ದಾರೆ ಎಂದು ಟೀಕಿಸಿದರು.

ಈ ಅಧಿಕಾರಿ ವಿರುದ್ಧ ಶಿಸ್ತು ಕ್ರಮಕ್ಕೆ ತುರ್ತಾಗಿ ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರು ಸೂಚಿಸಿದರು ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳದೆ ಇರುವುದು ಅನುಮಾನಕ್ಕೆ ಎಡೆ ಮಾಡಿದೆ ಎಂದು  ಆರೋಪಿಸಿದರು.

8 ದಿನದ ಒಳಗೆ ಶಿಸ್ತುಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಅನಿರ್ದಿಷ್ಟ ಅವಧಿ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿದರು

ಕೊಪ್ಪ ಸರ್ವೆ ಇಲಾಖೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರ -ಸಹನೆ ಕಳೆದುಕೊಂಡ ಜನರಿಂದ ಪ್ರತಿಭಟನೆ

 



ಕೊಪ್ಪ :ಇಲ್ಲಿನ ಭೂ ದಾಖಲೆಗಳ ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ ಎಂದು ಆರೋಪಿಸಿ ನೊಂದವರು ಪ್ರತಿಭಟನೆ ನಡೆಸಿದ್ದಾರೆ.

 ಸಹಾಯಕ ನಿರ್ದೇಶಕರ ಕಚೇರಿ ಬಾಗಿಲ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದೆ ಅಲ್ಲದೆ ಒಂದು ಹಂತದಲ್ಲಿ ಬೀಗ ಹಾಕಲು ಹೊರಟಿದ್ದರು.

ದಾಖಲೆಗಳನ್ನು ಪಡೆಯಲು ತಿಂಗಳಗಟ್ಟಲೆ ಅಲೆಯಬೇಕಾಗಿದೆ. ಹಣವಿಲ್ಲದೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಅಧಿಕಾರಿ ಸಿಬ್ಬಂದಿ ವಿರುದ್ಧ ಕಿಡಿಕಾರಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸಮಾಧಾನ ಪಡಿಸಲು ಮಾಡಿದ ಯತ್ನ ಫಲಿಸದೆ ಅವರ ಎದುರಿನಲ್ಲಿ ಪ್ರತಿಭಟನೆ ನಿರತರು ಇಲಾಖೆ ವಿರುದ್ಧ ಕೂಗಾಡಿದರು.