udayanews

ಮಂಗಳವಾರ, ಜನವರಿ 26, 2021

ಕಂದಾಯ ಸಚಿವ ಪಿ.ಎ. ವಿರುದ್ಧ ದೂರು ದಾಖಲು

 ಚಿಕ್ಕಮಗಳೂರು : ಲಂಚ ಕೇಳಿದ ಆರೋಪದಡಿ ಕಂದಾಯ ಸಚಿವ ಆರ್.ಅಶೋಕ್  ಆಪ್ತ ಸಹಾಯಕ ಗಂಗಾಧರ್ ವಿರುದ್ಧ   ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು  ದಾಖಲಾಗಿದೆ .

ಶೃಂ


ಗೇರಿ ಸಬ್ ರಿಜಿಸ್ಟ್ರಾರ್  ಚೆಲುವರಾಜ್  ಜಿಲ್ಲೆಯ ಶೃಂಗೇರಿಯ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್  ಈ ಆಚರಣೆಗೆ ನೀಡಿದ್ದರು .   

ಗಂಗಾಧರ್ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದುತನಗೂ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಇದೇ 24ರಂದು ಚಿಕ್ಕಮಗಳೂರು ಪ್ರವಾಸ ಕೈಗೊಂಡಿದ್ದ ಸಚಿವ ಆರ್ ಅಶೋಕ್   ಈವೇಳೆ ಸಬ್ ರಿಜಿಸ್ಟ್ರಾರ್ ರಿಂದ ಹಣ ಕೇಳಿರುವ ಆರೋಪ

ಸಚಿವ ಆರ್ ಅಶೋಕ್ ಪಿಎ ಗಂಗಾಧರ್ ವಿರುದ್ಧ ಗಂಭೀರ ಆರೋಪ ಈ ಹಿನ್ನೆಲೆಯಲ್ಲಿ ಠಾಣೆಯಲ್ಲಿ ದೂರು ನೀಡಿರುವ ಚೆಲುವರಾಜ್

ಭಾನುವಾರ, ಜನವರಿ 24, 2021

ಅನ್ನದಾತರ ಹೋರಾಟಕ್ಕೆ 'ಸಮುದಾಯದ' ಸಹಾಯ ಹಸ್ತ


 ಚಿಕ್ಕಮಗಳೂರು :ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲವಾಗಿ ಇದೇ ತಿಂಗಳ ೨೬ ರಂದು ಬೆಂಗಳೂರಿನಲ್ಲಿ ನಡೆಯುವ ರೈತರ ಹೋರಾಟಕ್ಕೆ ಸಮುದಾಯ ತಂಡ ಬೆಂಬಲವಾಗಿ ನಿಂತಿದೆ .

ಆಹಾರ ನೀರು ಇತರೆ ಅಗತ್ಯ ವಸ್ತುಗಳ ಪೂರೈಕೆಗೆ ತಂಡ ಮುಂದಾಗಿದೆ .ಇದಕ್ಕಾಗಿ ಸಹೃದಯರ ನೆರವಿನ ಹಸ್ತವನ್ನು ಚಾಚಿದೆ.ಹನಿಗೂಡಿದರೆ ಹಳ್ಳವಾಗುತ್ತದೆ ....


ಕಲಾಮಂದಿರದಲ್ಲಿ ಕನ್ನಡದ ಕೊಲೆ


 ಚಿಕ್ಕಮಗಳೂರು :ಇಲ್ಲಿನ ಕುವೆಂಪು ಕಲಾ ಮಂದಿರದಲ್ಲಿ ಅಳವಡಿಸಿರುವ ಫಲಕ ಇದು . ವಿಪರ್ಯಾಸವೆಂದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯೂ ಇಲ್ಲಿಯೇ ಇದೆ .

ಬಿಜೆಪಿ ಕಚೇರಿಯಲ್ಲಿ ನೇತ್ರ ತಪಾಸಣಾ ಶಿಬಿರ


     ಚಿಕ್ಕಮಗಳೂರು: ಸ್ಥಳೀಯ ಶಾಸಕ ಸಿ ಟಿ ರವಿಯವರ ಮುತುವರ್ಜಿಯ ಫಲವಾಗಿ ಬಿಜೆಪಿ ಕಚೇರಿಯಲ್ಲಿ ಸಬ್ ನೇತ್ರಾಲಯ ತಂಡದಿಂದ ನೇತ್ರ ತಪಾಸಣಾ ಶಿಬಿರ ನಡೆಯಿತು .

ನಗರ ಹಾಗೂ ಗ್ರಾಮೀಣ ಪ್ರದೇಶದ  ಜನ ಆಗಮಿಸಿ ನೇತ್ರ ತಪಾಸಣೆ ಮಾಡಿಸಿಕೊಂಡು ಸೂಕ್ತ ಸಲಹೆ ಪಡೆದರು

    ಕೃಷ್ಣಪ್ರಸಾದ್ ಕೂಡ್ಲು  ,ಡಾ.ರಮ್ಯ ,ಡಾ.ಮೈತ್ರಿ ಹಾಗೂ ೨೦ ಜನರ ತಂಡ ಈ ಶಿಬಿರದಲ್ಲಿ ಪಾಲ್ಗೊಂಡಿತ್ತು . ಉಚಿತವಾಗಿ ಕನ್ನಡಕ ಔಷಧಿಗಳನ್ನು ವಿತರಿಸಲಾಯಿತು .

ಸರಳ ಸಮಾರಂಭವನ್ನು ಡಾ. ಪ್ರಸಾದ್ ಉದ್ಘಾಟಿಸಿದರು .ಶಾಸಕ ಸಿ.ಟಿ.ರವಿ ,ಬೆಳ್ಳಿಪ್ರಕಾಶ್ ,ಬಿಜೆಪಿ ಅಧ್ಯಕ್ಷ ಕಲ್ಮರುಡಪ್ಪ ಇತರರು ಉಪಸ್ಥಿತರಿದ್ದರು  

 

ಸ್ಫೋಟಕ ಸಾಗಣೆ- ಕಠಿಣ ನಿಯಮ ಜಾರಿ: ಸಚಿವ ಅಶೋಕ್


 ಚಿಕ್ಕಮಗಳೂರು :ಇತ್ತೀಚೆಗೆ ನಡೆದ ಶಿವಮೊಗ್ಗ  ಬ್ಲಾಸ್ಟ್ ಪ್ರಕರಣ ತನಿಖೆಗೆ  ತಂಡ ಕಳುಹಿಸಿದ್ದು ನಿಖರ ಕಾರಣಗಳಿಗೋಸ್ಕರ ವರದಿಯನ್ನು ಕಾಯಲಾಗುತ್ತಿದೆ ಎಂದು ಕಂದಾಯ ಸಚಿವ ಆರ್ .ಅಶೋಕ್ ತಿಳಿಸಿದ್ದಾರೆ  ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರುಶಿವಮೊಗ್ಗಕ್ಕೆ ಸ್ಪೋಟಕಗಳು ಆಂಧ್ರದಿಂದ ಬಂದಿದೆ ಎಂಬ ಮಾಹಿತಿ ಇದೆ‌ ಎಂದರು .

ಬೇರೆ ಕಾರ್ಯಕ್ಕೆ ಇದು ಬಳಕೆಯಾಗಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು‌. ಇನ್ನು ಮುಂದೆ ರಾಜ್ಯದ ಎಲ್ಲೆಡೆ ಚೆಕ್ ಪೋಸ್ಡ್ ಗಳನ್ನು ಸ್ಥಾಪಿಸಿ ಪರಿಶೀಲನೆ ನಡೆಸಲಾಗುವುದು.ಇದಕ್ಕಾಗಿ ಬಿಗಿ ನಿಯಮವನ್ನು ತರಲಾಗುತ್ತದೆ ಎಂದು ಹೇಳಿದರು .

ಅಧಿಕಾರಿಗಳ ಸಭೆ ಕರೆದು ಇನ್ನು ಮುಂದೆ ಈ ರೀತಿಯಾಗದಂತೆ ಹೊಸ ಮಾರ್ಗಸೂಚಿ  ರೂಪಿಸಿ ಕಠಿಣ ನಿಯಮ ಜಾರಿಗೆ  ತರಲಾಗುವುದು‌ ಎಂದರು .ಸಿಬಿಐ ತನಿಖೆ ನಡೆಸುವ ಅವಶ್ಯಕತೆಯಿಲ್ಲ‌‌ ರಾಜ್ಯದ ಪೊಲೀಸರು ಸಮರ್ಥರಿದ್ದಾರೆ ಎಂದ ಅಶೋಕ್ 

 ಚಿಕ್ಕಮಗಳೂರಿನಲ್ಲಿ ನಡೆದ ಜಾರಳಿ ಹೊಳೆ ನೇತೃತ್ವದ ಸಭೆ‌ಗೆ ಮಹತ್ವ ನೀಡಬೇಕಾಗಿಲ್ಲ ಎಂದು ಹೇಳಿದರು.

ಶನಿವಾರ, ಜನವರಿ 23, 2021

ಪರೀಕ್ಷೆ ಮುಂದೂಡಿಕೆ: ಭ್ರಷ್ಟ ವ್ಯವಸ್ಥೆಗೆ ಹಿಡಿದ ಕನ್ನಡಿ


 ಚಿಕ್ಕಮಗಳೂರು :ನಾಳೆ ನಡೆಯಬೇಕಾಗಿದ್ದ ಪ್ರಥಮ ದರ್ಜೆ ಸಹಾಯಕ ಹುದ್ದೆ ಪರೀಕ್ಷೆ ರದ್ದಾಗಿದೆ .

ಪ್ರಶ್ನೆ ಪತ್ರಿಕೆ ಬಯಲಾಗಿರುವುದು .ಈ ಸಂಬಂಧ ಈಗಾಗಲೇ 6ಜನರನ್ನು ಬಂಧಿಸಿ ಲಕ್ಷಾಂತರ ರೂ , ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ .

ಇದು ಮುಖ್ಯವಲ್ಲ. ಪ್ರಶ್ನೆಪತ್ರಿಕೆ ಸೋರಿಕೆ ಹೇಗೆ ಆಯಿತು ಎನ್ನುವುದೇ ಮುಖ್ಯ .ಪ್ರಶ್ನೆಪತ್ರಿಕೆ ಸಿದ್ಧಪಡಿಸಿ , ಮುದ್ರಿಸಿ ರವಾನೆ ಮಾಡುವುದು ಗೌಪ್ಯ ಕಾರ್ಯಾಚರಣೆ 

ಹೀಗಿರುವಾಗ ಪ್ರಶ್ನೆಪತ್ರಿಕೆ ಬಹಿರಂಗವಾಗಿದೆ ಎಂದರೆ ಇದರಲ್ಲಿ ಅನೇಕ ಅಧಿಕಾರಿ ಸಿಬ್ಬಂದಿ ಶಾಮೀಲಾಗಿರುವುದು  ಸ್ಪಷ್ಟ .

ಪ್ರಶ್ನೆ ಪತ್ರಿಕೆ ಬಯಲು' ಆರೋಪಿಗಳ ಬಂಧನ ,ತನಿಖೆ ಯಾವುದೂ ಹೊಸತಲ್ಲ. ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಮುಂದೆಯೂ ನಡೆಯಲಿರುವ ನಾಟಕ ಇದು .

ಭ್ರಷ್ಟ  ವ್ಯವಸ್ಥೆಯ ಕಬಂಧ ಬಾಹು  ಎಲ್ಲಿಯವರೆಗೆ ಚಾಚಿರುತ್ತದೆಯೋ ಅಲ್ಲಿಯವರೆಗೆ  ಇದೆಲ್ಲ ಮಾಮೂಲು .ಇದಕ್ಕೆ ಅಧಿಕಾರಿಗಳು ರಾಜಕಾರಣಿಗಳ ಕೃಪಾಕಟಾಕ್ಷವು ಇದ್ದೇ ಇರುತ್ತದೆ .

೧೧೧೭ ಹುದ್ದೆಗೆ ೩.೭೦ ಲಕ್ಷ ಜನ ಪರೀಕ್ಷೆ ಎದುರಿಸಬೇಕಾಗಿತ್ತು . ನಿರುದ್ಯೋಗ ಸಮಸ್ಯೆ ಎಷ್ಟು ಇದೆ ಎಂಬುದಕ್ಕೆ ಇದೇ ಸಾಕ್ಷಿ . ಪಾಪ ಪರೀಕ್ಷೆಗೆ ಸಿದ್ಧತೆ ನಡೆಸಿದವರ  ಪಾಡೇನು  ?

ಎಲ್ಲದಕ್ಕೂ ಸರ್ಕಾರವೇ ಹೊಣೆಯನ್ನು ಹೊರಬೇಕು . ತೋರಿಕೆಯ ತನಿಖೆ ನಡೆಸಿದರೆ ಯಾವುದೇ ಪ್ರಯೋಜನವಿಲ್ಲ.ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು . ಭ್ರಷ್ಟ ವ್ಯವಸ್ಥೆಯಲ್ಲಿ ಇದು ಸಾಧ್ಯವೇ ಎನ್ನುವುದು ಮತ್ತೆ ಮತ್ತೆ ಕಾಡುವ ಪ್ರಶ್ನೆ . 

ಮಂಡ್ಯ ಜೀವಧಾರೆ ಟ್ರಸ್ಟ್ ನಿಂದ ಅರ್ಥಪೂರ್ಣ ಕಾರ್ಯಕ್ರಮ


 ಚಿಕ್ಕಮಗಳೂರು: ನೇತಾಜಿ ಸುಭಾಶ್ಚಂದ್ರ ಬೋಸ್ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿನ ಕುವೆಂಪು ಕಲಾ ಮಂದಿರದಲ್ಲಿ ಮಂಡ್ಯದ ಜೀವಧಾರೆ ಟ್ರಸ್ಟ್ ನಿಂದ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು.

ಎರಡನೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಯೋಧರ ಪತ್ನಿಯರ ಪಾದಗಳನ್ನು ತೊಳೆದು ಗೌರವ ಸಮರ್ಪಿಸಿದ ಸಂಘಟಕರು ಜಿಲ್ಲೆಯ ೬೦ ಯೋಧರನ್ನು ಗೌರವಿಸಿದರು  .

ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರೆ, ಯುವಜನ ಸೇವಾ ಮತ್ತು ಸಂಸ್ಕತಿ ಇಲಾಖೆಯ ಅಧಿಕಾರಿ ಮಂಜುಳಾ ಅರ್ಚಕ ಹಿರೇಮಗಳೂರು ಕಣ್ಣನ್ ಇತರರು ಪಾಲ್ಗೊಂಡಿದ್ದರು .ಯೋಧರ ಸೇವೆಯನ್ನು ಸ್ಮರಿಸಿದರು .