udayanews

ಸೋಮವಾರ, ಫೆಬ್ರವರಿ 15, 2021

ಕೆರೆ ಉಳಿಸಲು ವಿಭಿನ್ನ ಪ್ರಯತ್ನ



 ಚಿಕ್ಕಮಗಳೂರು :ತಾಲ್ಲೂಕಿನ  ಲಕ್ಷೀಪುರ ಕೆರೆಯ ಬಳಿ ನಮ್ಮೂರ ಕೆರೆ ಹಬ್ಬ ಹಮ್ಮಿಕೊಂಡು ಸ್ಥಳಿಯರಿಗೆ ಮನರಂಜನೆ ಜೊತೆಗೆ ಸಂಜೆಯ ವೇಳೆ ಸರ್ಕಾರಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಕಂದಾಯ ಇಲಾಖೆಯ ಉಪ ವಿಭಾಗಧಿಕಾರಿ  ಡಾ|| ಹೆಚ್.ಎಲ್ ನಾಗರಾಜ್ ಹಾಗೂ ತಾಲೂಕು ತಹಶಿಲ್ದಾರ್ ಡಾ|| ಕೆ.ಜೆ ಕಾಂತರಾಜ್  ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ  ರಾತ್ರಿ ಹತ್ತು ಗಂಟೆಯವರೆಗೆ  ಕಾರ್ಯನಿರ್ವಹಿಸಿದರು .

ಕೆರೆ ಅಂಗಳದಲ್ಲಿ ಸಾಂಸ್ಕೃತಿಕ ಕಲರವ ಸಮೀಪದ ಗ್ರಾಮಸ್ಥರನ್ನು ಸೂಜಿ ಗಲ್ಲಿನಂತೆ ಸೆಳೆಯುವಂತಿತ್ತು. ವಿಷನ್ ಚಿಕ್ಕಮಗಳೂರು ಮತ್ತು ಲಕ್ಷಿಪುರ ಕೆರೆ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಕೆರೆಯ ಪಕ್ಕದಲ್ಲೇ ವೇದಿಕೆ ನಿರ್ಮಿಸಿ ,  ಫೈರ್ ಕ್ಯಾಂಪ್  ಆಯೋಜಿಲಾಗಿತ್ತು.  

ಸೂಫಿ ಸಂತ ನಾದ ಮಣಿನಾಲ್ಕೂರು ನಡೆಸಿಕೊಟ್ಟ ತತ್ವ ಪದಗಳು ,  ಸಾಣೆ ಹಳ್ಳಿ ರಂಗ ಶಾಲೆಯ  ರಂಗ ಕರ್ಮಿ ಆರ್. ಜಗದೀಶ್ ಜಾನಪದ ಗಾಯನ ನಡೆಸಿಕೊಟ್ಟರು. ಎ.ಎನ್ ಮಹೇಶ್, ಬೆಳವಾಡಿ ರವೀಂದ್ರ, ರೇಖಾ ಹುಲಿಯಪ್ಪಗೌಡ,ರವಿ ಪ್ರದೀಪ್,ಪ್ರಕಾಶ್ ಉಪಸ್ಥಿತರಿದ್ದರು.

ಭಾನುವಾರ, ಫೆಬ್ರವರಿ 14, 2021

ಅತ್ಯಾಚಾರದ ವಿಡಿಯೋ ವೈರಲ್: ಮೂವರ ಬಂಧನ


 ಚಿಕ್ಕಮಗಳೂರು: ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಅದನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಕಿರಾತಕರು ಆಕೆಯನ್ನು  ನಗ್ನಗೊಳಿಸಿ ವೀಡಿಯೋ ಮತ್ತು ಭಾವಚಿತ್ರವನ್ನು ತೆಗೆದು ಸ್ನೇಹಿತರಿಗೆ ಹಂಚಿದ್ದಾರೆ  .

ಈ ಬಗ್ಗೆ ಮಲ್ಲಂದೂರು  ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಪ್ರವೀಣ್ ಚರಣ್ ಹಾಗೂ ಸಂದೇಶ್ ಎಂಬಾತನನ್ನು ಬಂಧಿಸಲಾಗಿದೆ .

 ಜಿಲ್ಲೆಯಲ್ಲಿ ಇತ್ತೀಚೆಗೆ ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಅಧಿಕವಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ .

ಶನಿವಾರ, ಫೆಬ್ರವರಿ 13, 2021

ಪೋಲಿಸ್ ಠಾಣೆಗೆ ನುಗ್ಗಿದ ವಿದ್ಯಾರ್ಥಿಗಳು !!


 ಚಿಕ್ಕಮಗಳೂರು: ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವ ಭಾಗವಾಗಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಗೆ  ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶ ಕಲ್ಪಿಸಲಾಯಿತು .

೧೨೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಪ್ರದೇಶ ವ್ಯಾಪ್ತಿಯ ಠಾಣೆಗಳಿಗೆ ತೆರಳಿ ಪೊಲೀಸ್ ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ಗಮನಿಸಿದರು .

ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಅಧಿಕಾರಿಗಳು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರಲ್ಲದೆ ಸಖಿ ಸೇರಿದಂತೆ ವಿವಿಧ ಕಾರ್ಯಕ್ರಮ ಹಾಗೂ ಕಾಯಿದೆಗಳ ಕುರಿತು ಮಾಹಿತಿಯನ್ನು ಒದಗಿಸಿದರು .

ಚಿಕ್ಕಮಗಳೂರು ಡಿ.ಸಿ / ಎಡಿಸಿ ವರ್ಗಾವಣೆ


 ಚಿಕ್ಕಮಗಳೂರು: ಇಲ್ಲಿನ ಜಿಲ್ಲಾಧಿಕಾರಿಗಳಾಗಿದ್ದ ಬಗಾದಿ ಗೌತಮ್ ಅವರನ್ನು ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ .

 ಪ್ರವಾಸೋದ್ಯಮ ಇಲಾಖೆ  ನಿರ್ದೇಶಕರಾಗಿದ್ದ ರಮೇಶ್  ಇಲ್ಲಿನ ಡಿ.ಸಿ.ಯಾಗಿ ಆಗಮಿಸುತ್ತಿದ್ದಾರೆ . ಜಿಲ್ಲಾಧಿಕಾರಿಗಳ ಕೋರಿಕೆ ಮೇರೆಗೆ ಈ ವರ್ಗಾವಣೆ ನಡೆದಿದೆ .
ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ರವರನ್ನು ಮಂಗಳೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ .
ಕುಮಾರ್ ಇಲ್ಲಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಆಗಮಿಸಲು ಪ್ರಯತ್ನಿಸುತ್ತಿದ್ದರು 

ಶುಕ್ರವಾರ, ಫೆಬ್ರವರಿ 12, 2021

ಸರ್ಕಾರಿ ನೌಕರನ ಮೇಲೆ ಹಲ್ಲೆ ಆರೋಪ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೇರಿ ಇಬ್ಬರ ಮೇಲೆ ಎಫ್.ಐ.ಆರ್

ಚಿಕ್ಕಮಗಳೂರು :ಜಿಲ್ಲೆಯ ಕೊಪ್ಪ   ಪಟ್ಟಣ ಪಂಚಾಯತಿಯ ಸಮುದಾಯ ಸಮನ್ವಯ ಅಧಿಕಾರಿ ಸುಬ್ಬಣ್ಣ‌ ಎಂಬುವವರ ಮೇಲೆ ಖಾಸಗಿ ಲಾಡ್ಜ್ ನಲ್ಲಿ ಮೂವರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆಂದು  ಕೊಪ್ಪ ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದು, ಈ ಸಂಭಂದ ಎಫ್.ಐ.ಆರ್ ದಾಖಲಾಗಿದೆ.

ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ, ಪಟ್ಟಣ ಪಂಚಾಯತಿ ಸದಸ್ಯ ಶ್ರೀನಿವಾಸ್ ಶೆಟ್ಟಿ ಹಾಗೂ ಪ್ರಸನ್ನ ಶೆಟ್ಟಿ ಎಂಬುವವರ ಮೇಲೆ ದೂರು ದಾಖಲಾಗಿದೆ.

ಜೆ.ಎಂ.ಜೆ ಲಾಡ್ಜ್ ನ ಕೊಠಡಿಯೊಂದರಲ್ಲಿ ತನ್ನ ಮೇಲೆ ಹಲ್ಲೆ ನಡೆಯುವ ವೇಳೆಯಲ್ಲಿ ಪ.ಪಂ ಮುಖ್ಯಧಿಕಾರಿ ಬಸವರಾಜ್ ಹಾಗೂ ಸಿಬ್ಬಂದಿ ಕಿಶೋರ್ ಇದ್ದು, ಸುಮ್ಮನೆ ನಿಂತಿದ್ದರು ಎಂದು ಆರೋಪಿಸಿದ್ದಾರೆ . 

ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ನ್ಯಾಯ ದೊರಕಿಸ ಕೊಡಬೇಕೆಂದು ದೂರು ನೀಡಿದ್ದಾರೆ.ಜಿಲ್ಲಾಧಿಕಾರಿಗಳ ಒಪ್ಪಿಗೆ ಮೇರೆಗೆ ಈ ಪ್ರಕರಣ ದಾಖಲಾಗಿದೆ .


ಮಹಿಳಾ ಕ್ರಿಕೆಟ್ ತಂಡಕ್ಕೆಕಾಫಿನಾಡಿನ ಶಿಶಿರಗೌಡ ಆಯ್ಕೆ


 ಚಿಕ್ಕಮಗಳೂರು :ಅಂತರ ರಾಜ್ಯ ಮಹಿಳಾ ಏಕದಿನ ಪಂದ್ಯಾವಳಿಗೆ ಕರ್ನಾಟಕ  ತಂಡಕ್ಕೆ ನಗರದ ಶಿಶಿರ ಗೌಡ ಆಯ್ಕೆಯಾಗಿದ್ದಾರೆ .

ಎಡಗೈ ಬ್ಯಾಟಿಂಗ್ ಹಾಗೂ ಬಲಗೈ ವೇಗದ ಬೌಲರ್ ವಿಭಾಗದಲ್ಲಿ ಖ್ಯಾತಿ ಪಡೆದಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಇಂಜಿನಿಯರಿಂಗ್  ವ್ಯಾಸಂಗ ಮಾಡುತ್ತಿದ್ದಾರೆ .

೨೦೧೫ ರಿಂದ ವಿವಿಧ ವಿಭಾಗಗಳಲ್ಲಿ ಪ್ರತಿನಿಧಿಸಿರುವ ಶಿಶಿರಗೌಡ ಆರ್. ಪಿ .ಕ್ರಿಕೆಟ್ ಅಕಾಡಮಿಯ ರಾಮದಾಸ್ ಪ್ರಭು ಅವರಲ್ಲಿ ತರಬೇತಿ ಪಡೆದಿದ್ದಾರೆ .ಡಾಕ್ಟರ್ ಅಶ್ವತ್ ಬಾಬು ತ್ರಿವೇಣಿ ದಂಪತಿಗಳ ಪುತ್ರಿ ಈಕೆ . ಈಕೆಯ ಆಯ್ಕೆ ಕಾಫಿ ನಾಡಿನ ಕ್ರಿಕೆಟ್ ವಲಯದಲ್ಲಿ ಹರ್ಷವನ್ನು ಉಂಟುಮಾಡಿದೆ .


ಗುರುವಾರ, ಫೆಬ್ರವರಿ 11, 2021

200 ಎಕರೆ ಕಾಫಿ ತೋಟ ಸೀಝ್


 ಚಿಕ್ಕಮಗಳೂರು : ಕೊಟ್ಟ ಸಾಲ ಹಿಂದಿರುಗಿಸದ ಹಿನ್ನೆಲೆಯಲ್ಲಿ ಸುಮಾರು ೨೦೦ ಎಕರೆ ಕಾಫಿ ತೋಟವನ್ನು ಬ್ಯಾಂಕ್ ವಶಪಡಿಸಿಕೊಂಡ ಘಟನೆ ನಡೆದಿದೆ .

ಹಿರೇಕೊಳಲೆ ಸಮೀಪದ ವಾಟೇಕಾನ್ ತೋಟದ ಮಾಲಿಕರು 2005 ರಲ್ಲಿ ಯೂನಿಯನ್ ಬ್ಯಾಂಕಿನಿಂದ   ೨೨ ಕೋಟಿ ರೂ ಸಾಲವನ್ನು ಪಡೆದಿದ್ದರು ಎನ್ನಲಾಗಿದೆ .

ಸಾಲ ಮರುಪಾವತಿಸ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.

ನ್ಯಾಯಾಲಯ ಬ್ಯಾಂಕಿನ ಪರ ತೀರ್ಪು ನೀಡಿದ್ದು ,  ಪೊಲೀಸ್ ನೆರವಿನೊಂದಿಗೆ ತೋಟವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ .

ರಮೇಶ್ ರಾವ್ ,ದಿನಕರ ರಾವ್ ಎನ್ನುವವರಿಗೆ ಸೇರಿದ ತೋಟ ಇದು ಎನ್ನಲಾಗಿದೆ .ತೋಟ ಕಾರ್ಮಿಕರು ಹಾಗೂ ಸಾಕಷ್ಟು ಹಣ ಪಾವತಿ ಮಾಡಿಲ್ಲ ಎಂಬ ಆರೋಪವೂ ಇದೆ .

ತೋಟಕ್ಕೆ ಬೀಗ ಮುದ್ರೆ ಹಾಕಿದ್ದು ಕಾರ್ಮಿಕರನ್ನು  ಖಾಲಿ ಮಾಡುವಂತೆ ತಿಳಿಸಲಾಗಿದೆ. ಈ ಪ್ರಕರಣ ಬೆಳೆಗಾರರಲ್ಲಿ ಆತಂಕವನ್ನು ಉಂಟು ಮಾಡಿದೆ .